ಸಂವಿಧಾನದ ಮುನ್ನುಡಿಯಿಂದ ‘ಜಾತ್ಯತೀತ’ ಪದವನ್ನು ತೆಗೆದುಹಾಕಿ ಮತ್ತು ಅಲ್ಲಿ ‘ಹಿಂದೂ ರಾಷ್ಟ್ರ’ ಎಂದು ಬರೆಯಿರಿ ! – ಪ.ಪೂ. ಸ್ವಾಮಿ ಆನಂದ ಸ್ವರೂಪ ಮಹಾರಾಜರು

ಬೇಡಿಕೆ ಈಡೇರದಿದ್ದರೆ, ಎಲ್ಲಾ ಸಂತರು ದೆಹಲಿಯ ರಸ್ತೆಗಿಳಿಯುತ್ತಾರೆ !

ಶಂಕರಾಚಾರ್ಯ ಪರಿಷತ್ ನಿಂದ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಮಹಾ ಅಭಿಯಾನ ಪ್ರಾರಂಭ

ದೇಶಾದ್ಯಂತದ ೧೦೦೦ ಸಂತರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿಯನ್ನು ಕಳುಹಿಸಲಿದ್ದಾರೆ !

ಪ.ಪೂ. ಸ್ವಾಮಿ ಆನಂದ ಸ್ವರೂಪ ಮಹಾರಾಜ

ಹರಿದ್ವಾರ (ಉತ್ತರಾಖಂಡ) – ಅನಾದಿ ಕಾಲದಿಂದಲೂ ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಆಗಿರಲಿದೆ; ಆದರೆ ತಥಾಕಥಿತ ಜನರಿಂದ ಅದನ್ನು ‘ಜಾತ್ಯತೀತ’ ಪದವನ್ನು ಸೇರಿಸುವ ಮೂಲಕ ಅದನ್ನು ಬದಲಾಯಿಸಲು ಪಿತೂರಿ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ, ನಾವು ರಾಷ್ಟ್ರಪತಿಗೆ ಪತ್ರ ಬರೆದಿದ್ದೇವೆ, ಅದರಲ್ಲಿ ‘ಭಾರತೀಯ ಸಂವಿಧಾನದ ಮುನ್ನುಡಿಯನ್ನು ನ್ಯಾಯಯುತವಾಗಿ ಬದಲಾಯಿಸಬೇಕು ಮತ್ತು ‘ಜಾತ್ಯತೀತ’ ಪದವನ್ನು ತೆಗೆದುಹಾಕಬೇಕು ಮತ್ತು ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಸೇರಿಸಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಎಂದು ಶಂಕರಾಚಾರ್ಯ ಪರಿಷತ್ತಿನ ಅಧ್ಯಕ್ಷ ಪ.ಪೂ. ಸ್ವಾಮಿ ಆನಂದ ಸ್ವರೂಪ ಮಹಾರಾಜರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಈ ಬೇಡಿಕೆಗಾಗಿ ಪರಿಷತ್ತು ಹರಿದ್ವಾರದಿಂದ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತು. ‘ಈ ಅಭಿಯಾನದ ನಂತರವೂ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಅಂಗೀಕರಿಸದಿದ್ದರೆ, ಸಂತರು ದೆಹಲಿಯಲ್ಲಿ ರಸ್ತೆಗಿಳಿಯಬೇಕಾಗುತ್ತದೆ’, ಎಂದು ಸ್ವಾಮಿ ಆನಂದ ಸ್ವರೂಪ ಮಹಾರಾಜರು ಈ ಸಮಯದಲ್ಲಿ ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಉತ್ತರಾಖಂಡ, ಉತ್ತರಪ್ರದೇಶ, ದೆಹಲಿ, ಬಂಗಾಲ ಮತ್ತು ಇತರ ರಾಜ್ಯಗಳಲ್ಲಿ ಅನೇಕ ಸ್ಥಳಗಳಲ್ಲಿ ಪಂಚಾಯಿತಿಗಳನ್ನು ಕರೆಯಲಾಗಿತ್ತು ಎಂದು ಮಾಹಿತಿಯನ್ನು ನೀಡಿದರು.

 

ಪ.ಪೂ. ಸ್ವಾಮಿ ಆನಂದ ಸ್ವರೂಪ ಮಹಾರಾಜರು ತಮ್ಮ ಮಾತನ್ನು ಮುಂದುವರೆಸುತ್ತ, ಪರಿಷತ್ತಿನ ಭವ್ಯ ಅಭಿಯಾನದಲ್ಲಿ ದೇಶದಾದ್ಯಂತದ ಸಾಧುಗಳು, ಸಂತರು, ಮಹಂತರು, ಆಖಾಡಾಗಳು, ಮಠಗಳು, ಧರ್ಮಗುರುಗಳು ಮತ್ತು ಎಲ್ಲಾ ಶಂಕರಾಚಾರ್ಯರಿಂದ ಹಿಂದೂ ರಾಷ್ಟ್ರಕ್ಕಾಗಿ ಬೆಂಬಲವನ್ನು ಕೋರಲಾಗುವುದು ಎಂದು ಸ್ವಾಮಿ ಆನಂದ ಸ್ವರೂಪ ಮಹಾರಾಜರು ಹೇಳಿದರು. ೧೦೦೦೦ ಸಂತರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿಯನ್ನು ಕಳುಹಿಸಲಿದ್ದಾರೆ. ಅಖಿಲ ಭಾರತೀಯ ಆಖಾಡಾ ಪರಿಷತ್‌ನ ಬೆಂಬಲಿಸಿದರೆ ಈ ಅಭಿಯಾನವು ಹೆಚ್ಚಿನ ವೇಗವನ್ನು ಪಡೆಯಲಿದೆ ಎಂದು ಹೇಳಿದರು.