ಹರಿದ್ವಾರವನ್ನು ಹಿಂದೂಯೇತರರಿಂದ ರಕ್ಷಿಸುವುದು ಅವಶ್ಯಕ ! – ಸ್ವಾಮಿ ಅವಧೇಶಾನಂದ, ಜುನಾ ಅಖಾಡ

ಸಮಿತಿಯ ಕಾರ್ಯವನ್ನು ಸ್ವಾಮಿ ಅವಧೇಶಾನಂದರಿಗೆ ಪರಿಚಯಿಸುವಾಗ, ಶ್ರೀ.ಆನಂದ್ ಜಖೋಟಿಯಾ

ಹರಿದ್ವಾರ (ಉತ್ತರಾಖಂಡ) – ಉತ್ತರಾಖಂಡವನ್ನು ಉತ್ತರ ಪ್ರದೇಶದಿಂದ ಬೇರ್ಪಡಿಸಿದ ನಂತರ, ಹರಿದ್ವಾರದ ‘ಹರಕಿ ಪೌಡಿ’ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಮುಸಲ್ಮಾನರು ಭೂಮಿಯನ್ನು ಖರೀದಿಸಲು ಅಥವಾ ಬಾಡಿಗೆಗೆ ನೀಡಲು ಸಾಧ್ಯವಿಲ್ಲ ಎಂಬ ಕಾನೂನು ಜಾರಿಗೆ ಬಂದಿತ್ತು; ಆದರೆ ಪ್ರಸ್ತುತ, ಮುಸಲ್ಮಾನರು ಈ ಪ್ರದೇಶವನ್ನು ಅಕ್ರಮವಾಗಿ ಅತಿಕ್ರಮಿಸಿದ್ದಾರೆ. ಸಾಧು ಸಂತರ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕಾಗಿಯೇ ಒಂದು ಗುಂಪು ಕಾರ್ಯನಿರತವಾಗಿದೆ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುವುದು ಅವಶ್ಯಕ ಎಂದು ಜುನಾ ಅಖಾಡದ ಸ್ವಾಮಿ ಅವಧೇಶಾನಂದರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯ ಸಂಮನ್ವಯಕ ಶ್ರೀ. ಆನಂದ್ ಜಖೋಟಿಯಾ ಮತ್ತು ಶ್ರೀ. ರಾಜೇಶ್ ಉಮರಾಣಿಯವರು ‘ಹಿಂದೂ ರಾಷ್ಟ್ರ ಸಂಪರ್ಕ ಅಭಿಯಾನ’ದ ನಿಮಿತ್ತ ಸ್ವಾಮೀಜಿಯನ್ನು ಭೇಟಿಯಾದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು, ‘ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ನಾವು ಖಂಡಿತವಾಗಿಯೂ ನಿಮ್ಮ ಕೇಂದ್ರಕ್ಕೆ ಭೇಟಿ ನೀಡುತ್ತೇವೆ’ ಎಂದು ಹೇಳಿದರು.

ಸ್ವಾಮೀಜಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಪಾಲಘರನಲ್ಲಸಗಿದ್ದ ಸಾಧುಗಳ ಹತ್ಯೆಯ ಬಗ್ಗೆ ಇಡೀ ಸಾಧು ಸಮುದಾಯವು ಇಂದು ಒಗ್ಗೂಡಿದ್ದರೆ, ಪಿತೂರಿಗಾರರಿಗೆ ಸರಿಯಾದ ಉತ್ತರ ಸಿಗುತ್ತಿತ್ತು ಆದರೆ ಅಂತಹ ವಿಷಯಗಳಲ್ಲಿ ಸಾಧುಗಳು ಅಥವಾ ಸಾಮಾನ್ಯ ಹಿಂದೂಗಳ ಸಹಾಯ ಸಿಗುವುದಿಲ್ಲ ! ಸಾಧುಗಳಿಗೆ ಸಾಧುಗಳಾಗಿ ಬದುಕುವುದು ಕಷ್ಟಕರವಾಗಿದೆ ಎಂದು ಸ್ವಾಮೀಜಿ ಹೇಳಿದರು.