ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳು ಮತ್ತು ಅಸಹಾಯಕ ಕಾನೂನು !
ಮಹಾರಾಷ್ಟ್ರದಲ್ಲಿ ಮುಂಬಯಿಯ ಒಂದು ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಔಷಧಗಳ ವ್ಯವಹಾರದಲ್ಲಿ ಹಗರಣವಾಯಿತು. ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ಮತ್ತು ಸರಕಾರ, ನ್ಯಾಯಾಧೀಶ ಲೆಂಟಿನ್ ಆಯೋಗವನ್ನು ನೇಮಕ ಮಾಡಿತು. ಈ ಆಯೋಗದ ಮುಂದೆ ಖಟ್ಲೆಯ ಆಲಿಕೆ ನಡೆಯುತ್ತಿರುವಾಗಲೇ ಅಂದಿನ ಆರೋಗ್ಯಮಂತ್ರಿಗಳು ಹೃದಯಾಘಾತದಿಂದ ನಿಧನರಾದರು. ಅಪರಾಧ ಮತ್ತು ಭ್ರಷ್ಟಾಚಾರದಂತಹ ಉದಾಹರಣೆಗಳು ಆ ಸಮಯದಲ್ಲಿ ಬೆರಳೆಣಿಕೆಯಷ್ಟೇ ಇದ್ದವು.