ಭಾರತ ಸರಕಾರವು ಪಾಕಿಸ್ತಾನದ ಮಾನವೀ ಆಪ್ಸ್‌ಗಳನ್ನು ಯಾವಾಗ ನಿಷೇಧಿಸುವುದು ?

ಬರಖಾ ದತ್ತ
ಹಿರಿಯ ಪತ್ರಕರ್ತ ಶ್ರೀ. ಭಾವೂ ತೋರ್ಸೆಕರ್

ಲಡಾಖ್ ಮತ್ತು ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನ್ಯದೊಂದಿಗೆ ನಡೆದ ಸಂಘರ್ಷದ ನಂತರ ಭಾರತ ಸರಕಾರವು ಅನೇಕ ಚೀನಾ ಕಂಪನಿಗಳಿಗೆ ಮತ್ತು ಅವುಗಳ ವಿವಿಧ ಆಪ್ಸ್‌ಗಳಿಗೆ ನಿರ್ಬಂಧ ಹೇರಿ ಚೀನಾಗೆ ತಕ್ಕ ಶಾಸ್ತಿ ಮಾಡಿದೆ. ಒಂದು ಕಡೆಯಿಂದ ಸೈನಿಕರ ಮೂಲಕ ಗಡಿಯಲ್ಲಿ ದಿಗ್ಬಂಧನ ಮತ್ತು ಇನ್ನೊಂದು ಕಡೆಯಿಂದ ಆರ್ಥಿಕ ದಿಗ್ಭಂಧನ ಈ ರಣನೀತಿಯು ಒಳ್ಳೆಯ ಪ್ರಭಾವ ಬೀರಿರುವುದರಿಂದ ಈಗ ಚೀನಾ ಹೆದರಿದೆ; ಆದರೆ ಅದಕ್ಕಿಂತಲೂ ಭಯಂಕರವಾದ ಪಾಕಿಸ್ತಾನೀ ಆಪ್ಸ್‌ಗಳನ್ನು ಯಾರು ತಡೆಗಟ್ಟುವುದು, ಈ ಪ್ರಶ್ನೆಯನ್ನು ಕೇಳುವುದು ಸಹಜವಾಗಿದೆ. ಆಪ್ಸ್‌ಗಳನ್ನು ಸ್ಮಾರ್ಟ್‌ಫೋನ್ ಅಥವಾ ಗಣಕಯಂತ್ರಗಳಲ್ಲಿ ಅಳವಡಿಸಿಕೊಂಡು ಅವುಗಳನ್ನು ವಿವಿಧ ಕಾರ್ಯಕ್ಕಾಗಿ ಉಪಯೋಗಿಸಲಾಗುತ್ತದೆ; ಆದರೆ ನಮ್ಮ ಸ್ಮಾರ್ಟ್‌ಫೋನ್ ಅಥವಾ ಗಣಕಯಂತ್ರಗಳಲ್ಲಿ ಸೇರಿಕೊಂಡಿರುವ ಈ ಆಪ್ಸ್‌ಗಳು ವಿರುದ್ಧ ದಿಕ್ಕಿನಲ್ಲಿ ಖಾತೆದಾರರ ಮಾಹಿತಿ ಅಥವಾ ಮಹತ್ವದ ವಿಷಯಗಳನ್ನು ಹೊರಗೆ ಸಾಗಿಸುತ್ತವೆ, ಎನ್ನುವ ಆಕ್ಷೇಪ ಕೂಡ ಕೇಳಿಬರುತ್ತಿದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಹಿಂದಿನ ಕಾಲದಲ್ಲಿ ಶತ್ರುವಿನ ದೂತರು ಅಥವಾ ಗುಪ್ತಚರರು ಹೇಗೆ ನಮ್ಮ ಸಮಾಜದಲ್ಲಿ ನುಸುಳಿ ನಮಗೆ ಮೋಸ ಮಾಡುತ್ತಿದ್ದರೋ, ಹಾಗೆಯೇ ಕೆಲವು ಘಟನೆಗಳು ಆಪ್ಸ್‌ಗಳ ಮೂಲಕ ನಡೆಯುತ್ತಿವೆ ಎಂಬ ಆರೋಪವಿದೆ. ಪಾಕಿಸ್ತಾನ ತಂತ್ರಜ್ಞಾನದಲ್ಲಿ ಅಷ್ಟೇನೂ ಮುಂದುವರಿದಿಲ್ಲ, ಆದರೂ ಭಾರತದ ಅನೇಕ ಪ್ರಖ್ಯಾತ ಮತ್ತು ಪ್ರತಿಷ್ಠಿತ ವ್ಯಕ್ತಿಗಳನ್ನೇ ತನ್ನ ಆಪ್ಸ್‌ಗಳನ್ನಾಗಿ ಮಾಡಿಕೊಂಡಿದೆ.

ಪಾಕಿಸ್ತಾನ ಕಳೆದ ಎರಡು ದಶಕಗಳಲ್ಲಿ ಇಂತಹ ಮಾನವೀ ಆಪ್ಸ್‌ಗಳ ಮೂಲಕ ಭಾರತದಲ್ಲಿ ಅನೇಕ ಕಿತಾಪತಿಗಳನ್ನು ಮಾಡುತ್ತಿದೆ ಹಾಗೆ ನೋಡಿದರೆ ಇಂತಹ ಜನರು ಮೇಲ್ನೋಟಕ್ಕೆ ವಿದೇಶದ ದಲಾಲರು ಅಥವಾ ಗುಪ್ತಚರರು ಎಂದು ಅನಿಸುವುದಿಲ್ಲ; ಏಕೆಂದರೆ ಅವರು ಯಾವಾಗಲೂ ಸಾಮಾಜಿಕ ನ್ಯಾಯದ ವಿಷಯದಲ್ಲಿ ಮತ್ತು ವೈಚಾರಿಕತೆ ಬಗ್ಗೆ ಮಾತನಾಡುತ್ತಿರುತ್ತಾರೆ; ಆದರೆ ವಾಸ್ತವದಲ್ಲಿ ದೇಶವನ್ನು ಟೊಳ್ಳು ಮಾಡುವುದೇ ಅವರ ಕಾರ್ಯವಾಗಿರುತ್ತದೆ; ಪರಕೀಯರ ಆಕ್ರಮಣವಾದಾಗ ಅವರು ಬಹಳ ಜಾಗರೂಕತೆಯಿಂದ ಮಾತೃಭೂಮಿಗೆ ದ್ರೋಹ ಬಗೆಯುತ್ತಾರೆ. ಬರಖಾ ದತ್ತ ಇದು ಅಂತಹವರ ಪೈಕಿ ಒಂದು ಹೆಸರಾಗಿದ್ದು ಅವರ ಪಾಕಿಸ್ತಾನ ಪ್ರೇಮವು ಎಲ್ಲಿಯೂ ಮರೆಮಾಚಿಲ್ಲ; ಆದರೆ ಇಲ್ಲಿ ಅವರು ಪತ್ರಕರ್ತೆಯೆಂದು ಮೆರೆಯುತ್ತಿದ್ದರೂ, ವ್ಯವಹಾರದಲ್ಲಿ ಅವರು ನಿರಂತರವಾಗಿ ಪಾಕಿಸ್ತಾನದ ಹಿತ ಸಂಬಂಧವನ್ನು ಕಾಪಾಡುತ್ತಿರುತ್ತಾಳೆ. ಅದರ ವಿವಿಧ ದಾಖಲೆಗಳು ಕೂಡ ಉಪಲಬ್ಧವಾಗಿವೆ. ಈಗ ಪಾಕಿಸ್ತಾನದ ಈ ಮಾನವೀ ಆಪ್ಸ್‌ಗಳಿಗೆ ಭಾರತ ಸರಕಾರ ಯಾವಾಗ ಮತ್ತು ಹೇಗೆ ನಿರ್ಬಂಧ ಹೇರುವುದು ?

ಪಾಕಿಸ್ತಾನದ ಅಂದಿನ ಪ್ರಧಾನಮಂತ್ರಿಗಳು ಭಾರತದ ಪ್ರಧಾನಮಂತ್ರಿಗಳನ್ನು ಟೀಕಿಸಿದ ಸಮಯದಲ್ಲಿ ಬರಖಾ ದತ್ತ ಅಲ್ಲಿಯೇ ಇದ್ದರು ಮತ್ತು ಆ ಬಗ್ಗೆ ಬರಖಾ ದತ್ತಳ ಮೇಲೆ ಟೀಕೆಯಾದಾಗ ಸ್ವತಃ ಎದ್ದುಬಿದ್ದು ಸ್ಪಷ್ಟೀಕರಣ ನೀಡುವುದು

೨೦೧೪ ರ ಲೋಕಸಭೆಯ ಚುನಾವಣೆಯ ಮೊದಲು ನರೇಂದ್ರ ಮೋದಿಯವರು ಪ್ರಚಾರದ ರಣಕಹಳೆಯನ್ನು ಊದುತ್ತಿದ್ದರು, ಆಗ ಅವರು ಬರಖಾ ದತ್ತಳ ಒಂದು ಪಾಪಕರ್ಮದ ಬಗ್ಗೆ ಅವಳ ಹೆಸರು ಉಚ್ಚರಿಸದೇ ಬಹಿರಂಗವಾಗಿ ಉಲ್ಲೇಖಿಸಿದ್ದರು. ಆಗ ಅವರ ಅಸೂಯೆ ಮತ್ತು ಕೋಪವನ್ನು ಜಗತ್ತು ನೋಡಿದೆ. ಮನಮೋಹನ ಸಿಂಗ ಇವರ ಆಡಳಿತವಧಿಯ ಕೊನೆಯ ವರ್ಷದಲ್ಲಿ ಅವರು ವಿಶ್ವ ಸಂಸ್ಥೆಯ ಬೈಠಕ್‌ಗೆ ಅಮೇರಿಕಾಗೆ ಹೋಗಿದ್ದರು ಮತ್ತು ಪಾಕ್‌ನ ಅಂದಿನ ಪ್ರಧಾನಮಂತ್ರಿ ನವಾಜ ಶರಿಫರು ಕೂಡ ಅಲ್ಲಿದ್ದರು. ಶರೀಫರು ಪಾಕಿಸ್ತಾನಿ ಪತ್ರಕರ್ತರನ್ನು ಚಹಾತಿಂಡಿಗಾಗಿ ಕರೆದಿದ್ದರು ಮತ್ತು ಅದರಲ್ಲಿ ಬರಖಾ ಕೂಡ ಇದ್ದಳು. ಭಾರತದ ಇತರ ಯಾವುದೇ ಪತ್ರಕರ್ತರು ಅದರಲ್ಲಿರಲಿಲ್ಲ. ಆಗ ನಡೆದ ಮಾತುಕತೆಗಳಲ್ಲಿ ನವಾಜ ಶರೀಫರು ಮನಮೋಹನ ಸಿಂಗ್ ಎಂದರೆ ಹಳ್ಳಿಯ ಮಹಿಳೆಯಂತೆ ಇದ್ದಾರೆ ಎಂದು ಹೀಯಾಳಿಸಿದ್ದರು.

ಮೋದಿಯವರು ಈ ವಿಷಯ ಉಲ್ಲೇಖಿಸಿ,  ಈ ರೀತಿ  ಅಪಹಾಸ್ಯ ಮಾಡಿದಾಗ ಭಾರತೀಯ ಪತ್ರಕರ್ತರು ಅದನ್ನು ಖಂಡಿಸಿ ಅಲ್ಲಿಂದ ಹೊರಟು ಬರಬೇಕಾಗಿತ್ತು, ಎಂದು ಹೇಳಿದ್ದರು. ಇಲ್ಲಿ ಅವರು ಬರಖಾಳ ಹೆಸರನ್ನು ಉಚ್ಚರಿಸಿರಲಿಲ್ಲ; ಆದರೆ ‘ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ’ ಎಂಬಂತೆ ಬರಖಾ ತನ್ನ ಎನ್.ಡಿ.ಟಿ.ವಿ.ಯಲ್ಲಿ ಬಂದು ‘ನಾನು ಅಲ್ಲಿ ಇರಲೇ ಇಲ್ಲ’, ಎಂದು ಸ್ಪಷ್ಟೀಕರಣ ನೀಡಿದಳು, ಹೀಗೆ ಸ್ಪಷ್ಟೀಕರಣ ನೀಡುವ ಅವಶ್ಯಕತೆಯೇನಿತ್ತು ? ಆದರೆ ಅವಳಿಗೆ ಜನರ ಎದುರಿಗೆ ಬರಲೇ ಬೇಕಾಯಿತು. ಇಲ್ಲಿ ಮೋಜಿನ ವಿಷಯವೆಂದರೆ, ಬರಖಾಳ ಆ ಸ್ಪಷ್ಟೀಕರಣವನ್ನು ಬೆಂಬಲಿಸಲು ಪಾಕಿಸ್ತಾನಿ ಸಂಪಾದಕ ಹಮೀದ ಮೀರ ಮುಂದೆ ಬಂದನು. ಇನ್ನೂ ಮೋಜಿನ ವಿಷಯವೆಂದರೆ, ಈ ಮೀರನೆ ಅವರ ಪಾಕಿಸ್ತಾನಿ ವಾರ್ತಾವಾಹಿನಿಯಲ್ಲಿ ಅದೇ ವಿಷಯವನ್ನು ತೆಗೆದುಕೊಂಡು ಸಿಂಗ ಇವರನ್ನು ಅಪಹಾಸ್ಯ ಮಾಡುವ ಕಾರ್ಯಕ್ರಮವನ್ನು ಸಹ ನಿರೂಪಿಸಿದ್ದನು. ಇದು ಬರಖಾಳ ಖ್ಯಾತಿಯಾಗಿದೆ.

ವಾರ್ತಾವಾಹಿನಿಯ ಚರ್ಚೆಯಲ್ಲಿ ಬರಖಾ ದತ್ತಳು ಪಾಕಿಸ್ತಾನಕ್ಕೆ ಸಂಕೇತವನ್ನು ನೀಡುವುದು

ಈ ವಿಷಯವು ಇಲ್ಲಿಯೇ ಮುಗಿಯುವುದಿಲ್ಲ. ‘ಪಠಾಣಕೋಟ್ ಉಗ್ರವಾದಿ ದಾಳಿಯ ನಂತರ ಭಾರತವು ಪಾಕಿಸ್ತಾನಕ್ಕೆ ಯಾವ ರೀತಿ ಪ್ರತಿಕಾರ ತೀರಿಸುವುದು ?’, ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಬರಖಾ ಪಾಕಿಸ್ತಾನಕ್ಕೆ ಹೇಗೆ ಸಹಾಯ ಮಾಡುತ್ತಿದ್ದಳು, ಎಂಬುದನ್ನು ಕೂಡ ತಿಳಿದುಕೊಳ್ಳಬೇಕು. ತಮ್ಮ ವಾರ್ತಾವಾಹಿನಿಯಲ್ಲಿ ಭಾರತದ ವಿವಿಧ ನಿವೃತ್ತ ಸೈನ್ಯಾಧಿಕಾರಿಗಳನ್ನು ಆಮಂತ್ರಿಸಿ ಮಾತನಾಡುವಾಗ ಅವಳು ಒಂದು ಪ್ರಶ್ನೆಯನ್ನು ತಪ್ಪದೇ ಕೇಳುತ್ತಿದ್ದಳು, “ಭಾರತ ಪಾಕಿಸ್ತಾನಕ್ಕೆ ಶಸ್ತ್ರಗಳಿಂದಲೇ ಉತ್ತರ ಕೊಡುವುದೇ ? ಪ್ರತಿ ದಾಳಿ ಅಥವಾ ಸೇನಾ ಕಾರ್ಯಾಚರಣೆ ಮಾಡುವುದೇ ?” ಅದಕ್ಕೆ ನಕಾರಾರ್ಥಿ ಉತ್ತರಗಳು ಬಂದಾಗ ಪಾಕಿಸ್ತಾನಕ್ಕೆ ಭರವಸೆಯನ್ನು ನೀಡಿ ಅವಳು ಪುನಃ ಒಂದು ವಾಕ್ಯವನ್ನು ಪದೇ ಪದೇ ಉಲ್ಲೇಖಿಸುತ್ತಿದ್ದಳು. “ಅಂದರೆ ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆಯ ಸಾಧ್ಯತೆಗಳಿಲ್ಲ.” ಒಂದು ರೀತಿಯಲ್ಲಿ ಇದು ಪಾಕಿಸ್ತಾನದ ಸೈನ್ಯಾಧಿಕಾರಿಗಳು ಮತ್ತು ಸರಕಾರಕ್ಕೆ ನೀಡಿದ ಎಚ್ಚರಿಕೆ ಅಥವಾ ಸಂಕೇತವೇ ಆಗಿತ್ತು. ಸಂಕ್ಷಿಪ್ತದಲ್ಲಿ ಇಲ್ಲಿನ ವಾರ್ತಾವಾಹಿನಿಯಲ್ಲಿ ಚರ್ಚೆಯನ್ನು ಬಣ್ಣಿಸುವಾಗ ಬರಖಾ ಅವರಿಗೆ, “ನಿಶ್ಚಿಂತರಾಗಿರಿ. ಭಾರತವು ಪಾಕಿಸ್ತಾನದ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆ ಮಾಡುವ ಸಾಧ್ಯತೆಯಿಲ್ಲ. ಸ್ವತಃ ಮಾಜಿ ಸೇನಾಧಿಕಾರಿಗಳೇ ಅದನ್ನು ಹೇಳುತ್ತಿದ್ದಾರೆ”, ಎಂದು ಹೇಳುತ್ತಿದ್ದಳು. ಇದು ಸಂಕೇತವಾಗಿತ್ತು ಎಂದು ಏಕೆ ತಿಳಿಯಬೇಕು ?, ಏಕೆಂದರೆ ಬರಖಾಳ ಹೊರತು ಇತರ ಯಾವುದೇ ವಾರ್ತಾವಾಹಿನಿಯ ಚರ್ಚೆಯಲ್ಲಿ ಇಂತಹ ಪ್ರಶ್ನೆಗಳನ್ನು ಯಾರೂ ಕೇಳುತ್ತಿರಲಿಲ್ಲ ಅಥವಾ ಪುನಃ ಪುನಃ ಹೇಳಿಸಿಕೊಳ್ಳುತ್ತಿರಲಿಲ್ಲ. ಭಾರತೀಯ ಸೈನ್ಯವು ಬರಖಾ ದತ್ತ ಮತ್ತು ಪಾಕಿಸ್ತಾನಕ್ಕೆ ನೀಡಿದ ಆಘಾತ ನಿಜ ನೋಡಿದರೆ ಆ ಸಂಕೇತದಿಂದಲೇ ಪಾಕಿಸ್ತಾನಕ್ಕೆ ಮೋಸವಾಯಿತು; ಏಕೆಂದರೆ ಬರಖಾಳ ಮೇಲೆ ವಿಶ್ವಾಸವನ್ನಿಟ್ಟು ಪಾಕಿಸ್ತಾನಿ ಸೈನಿಕರು ನಿಶ್ಚಿಂತರಾಗಿದ್ದರು ಮತ್ತು ‘ಸರ್ಜಿಕಲ್ ಸ್ಟ್ರೈಕ್’ ನಡೆದ ನಂತರ ಅವರಿಗೆ ಎಚ್ಚರವಾಯಿತು. ಇದರಿಂದಲೇ ಬರಖಾ ದತ್ತ ಅಥವಾ ಅವಳಂತೆ ತಾವು ಸಾಕಿದ ಭಾರತದಲ್ಲಿರುವ ಪಾಕಿಸ್ತಾನಿ ಸಹಾಯಕರು ಈಗ ಹೇಗೆ ನಿರುಪಯುಕ್ತರಾಗಿದ್ದಾರೆ ಎಂಬುದು ಅವರಿಗೂ ಅರಿವಾಗತೊಡಗಿದೆ; ಏಕೆಂದರೆ, ಭಾರತೀಯ ಗುಪ್ತಚರ ಇಲಾಖೆಯು ಬರಖಾಳ ಪಾಕ್ ಪ್ರೇಮವನ್ನು ಯೋಗ್ಯ ರೀತಿಯಲ್ಲಿ ಮತ್ತು ಕೌಶಲ್ಯದಿಂದ ಉಪಯೋಗಿಸಿಕೊಂಡಿತು ಮತ್ತು ಅವಳ ಮೂಲಕವೇ ಪಾಕ್‌ಗೆ ಬುದ್ಧಿಯನ್ನು ಕಲಿಸಿತು. ಬರಖಾ ದತ್ತ ಇವಳು ಪಾಕಿಸ್ತಾನಕ್ಕೆ ಭಾರತದಲ್ಲಿ ಪುಲ್ವಾಮಾದಂತಹ ದಾಳಿ ಮಾಡಲು ಸಲಹೆ ನೀಡುವುದು ಈ ಮೇಲಿನ ಘಟನೆಯಿಂದ ಈಗ ಬರಖಾಳ ಸ್ಥಾನಮಾನ ಅಲ್ಲಿಯೂ ಕುಸಿದಿದೆ ಮತ್ತು ಭಾರತದಲ್ಲಿ ಅವಳ ವಿಶ್ವಾಸಾರ್ಹತೆಯು ಈ ಹಿಂದೆಯೇ ಕೊನೆಗೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ ರೀತಿಯಲ್ಲಿ ಅನಾಥರಾದ ಪಾಕಿಸ್ತಾನದ ಸಹಾಯಕರು ಕ್ರಮೇಣ ನಿರುಪಯೋಗಿ ಆಪ್ಸ್ ಆಗುತ್ತಿದ್ದಾರೆ, ಆದರೆ ಈಗ ಇನ್ನೂ ತಮ್ಮಿಂದ ಉಪಯೋಗವಿದೆ, ಎಂಬುದನ್ನು ಸಿದ್ಧಪಡಿಸಲು ಕನಿಕರವನ್ನು ಹುಟ್ಟಿಸುವಂತಹ ಆಟವನ್ನು ಅವರು ಆಡುತ್ತಿದ್ದಾರೆ ಮತ್ತು ಅದರ ತಾಜಾ ಉದಾಹರಣೆಯು ಬೆಳಕಿಗೆ ಬಂದಿದೆ.

ಕೆಲವು ದಿನಗಳ ಹಿಂದೆ ಬರಖಾ ದತ್ತ ಒಂದು ವಿಡಿಯೋದ ಮೂಲಕ ಪಾಕಿಸ್ತಾನಕ್ಕೆ ಪಾಕ್ ಆಕ್ರಮಿತ ಕಾಶ್ಮೀರ ಕೈತಪ್ಪಿ ಹೋಗಬಾರದೆಂದಿದ್ದರೆ, ಏನು ಮಾಡಬೇಕು ? ಎಂಬುದರ ಸಲಹೆಯನ್ನು ನೀಡಿದ್ದಾಳೆ. ಅವಳ ಹೇಳಿಕೆಗನುಸಾರ ಪಾಕ್ ಆಕ್ರಮಿತ ಕಾಶ್ಮೀರವನ್ನು ಉಳಿಸಿಕೊಳ್ಳಲಿಕ್ಕಿದ್ದರೆ, ಪಾಕಿಸ್ತಾನವು ಭಾರತದ ಕಾಶ್ಮೀರದಲ್ಲಿ ಪುಲ್ವಾಮಾದಂತಹ ದೊಡ್ಡ ಉಗ್ರವಾದಿ ಆಕ್ರಮಣ ಮಾಡಬೇಕು, ಹಾಗೆ ಮಾಡಿದರೆ ಮಾತ್ರ ಜಗತ್ತಿನ ಗಮನವು ಅದರ ಕಡೆಗೆ ಸೆಳೆಯಲ್ಪಡುವುದು ಮತ್ತು ಜಗತ್ತಿಗೆ ಹೊಸತಾಗಿ ಕಾಶ್ಮೀರದ ಕಡೆಗೆ ಹೊರಳಬೇಕಾಗುವುದು. ಭಾರತೀಯ ಕಾಶ್ಮೀರದಲ್ಲಿ ಇಂತಹ ಭಯಂಕರ ಆಕ್ರಮಣ ಮಾಡಲು ಸಾಧ್ಯವಿಲ್ಲದಿದ್ದರೆ, ಪಾಕಿಸ್ತಾನವು ಭಾರತದ ಇತರ ಪ್ರದೇಶಗಳಲ್ಲಿ ಎಲ್ಲಿಯೂ ದೊಡ್ಡ ಆಕ್ರಮಣವನ್ನು ಮಾಡಿ ಜಗತ್ತಿನ ಗಮನವನ್ನು ಸೆಳೆಯಬೇಕಾಗುವುದು. ಇಲ್ಲದಿದ್ದರೆ, ಕಾಶ್ಮೀರದ ವಿಷಯವು ಪಾಕಿಸ್ತಾನದ ಕೈತಪ್ಪಿ ಹೋಗುವುದು. ಬರಖಾ ದತ್ತಳು ಪಾಕಿಸ್ತಾನಕ್ಕೆ ನೀಡಿದ ಈ ಸಲಹೆಯು ಪತ್ರಿಕೋದ್ಯಮವೇ ಅಥವಾ ಉಗ್ರವಾದವನ್ನು ಉಳಿಸಿಕೊಳ್ಳಲು ಸೂಚಿಸಿದ ರಣನೀತಿಯೇ ?

ಪಾಕಿಸ್ತಾನದ ಸಹಾಯಕರ ಮತ್ತು ದಲಾಲರಿಗೆ ಸರಿಯಾದ ವ್ಯವಸ್ಥೆ ಮಾಡುವುದು ಆವಶ್ಯಕ !

ಎರಡು ದೇಶಗಳಲ್ಲಿ ಗೆಳೆತನವಿರಬೇಕೇ ಅಥವಾ ಎರಡೂ ದೇಶಗಳ ಜನಸಾಮಾನ್ಯರು ಸುಖವಾಗಿ ಜೀವಿಸಲು ಪ್ರಾಧಾನ್ಯತೆ ಇರಬೇಕೇ, ಎನ್ನುವಷ್ಟು ಕರ್ತವ್ಯದ ಅರಿವು ಕೂಡ ಈ ಪತ್ರಕರ್ತೆಯ ತಲೆಯಲ್ಲಿಲ್ಲವೇ ಅಥವಾ ತಾನು ಪಾಕಿಸ್ತಾನದ ದೂತಳು ಅಥವಾ ಪಾಕಿಸ್ತಾನದ ಆಪ್ಸ್ ಆಗಿದ್ದೇನೆ ಎಂಬುದನ್ನು ತೋರಿಸಿ ಕೊಡದೇ ಮಾತನಾಡಬೇಕು, ಎನ್ನುವಷ್ಟು ಅರಿವನ್ನು ಸಹ ಅವಳು ಕಳೆದುಕೊಂಡಿದ್ದಾಳೆಯೇ ? ಪಾಕಿಸ್ತಾನದ ಇಂತಹ ಅನೇಕ ದಲಾಲರ ಹೆಡೆಮುರಿ ಕಟ್ಟಲೇಬೇಕು. ಇಲ್ಲದಿದ್ದರೆ ಭಾರತವು ಸುಭದ್ರವಾಗಿರಲು ಖಂಡಿತವಾಗಿಯೂ ಸಾಧ್ಯವಿಲ್ಲ. ಅವರಿಗೆ ಕಾನೂನುಮಾರ್ಗದಿಂದ ನಿರ್ಬಂಧ ಹೇರಲು ಸಾಧ್ಯವಿಲ್ಲದಿದ್ದರೆ, ಸಮಾಜದಲ್ಲಿ ಅವರಿಗೆ ಛೀ ಥೂ ಮಾಡುವುದಷ್ಟೇ ಮಾರ್ಗ ಉಳಿಯುವುದು. ಏಕೆಂದರೆ, ಅಪರಾಧ ಸಂಹಿತೆ ಅಥವಾ ದಂಡಸಂಹಿತೆಯ ಕಲಮ್‌ಗಳಲ್ಲಿ ಇಂತಹ ವರ್ತನೆಗೆ ಶಿಕ್ಷೆಯನ್ನು ನೀಡುವ ಕಲಮ್ ಅಥವಾ ವ್ಯವಸ್ಥೆ ಇಲ್ಲವಲ್ಲ ?

– ಹಿರಿಯ ಪತ್ರಕರ್ತ ಶ್ರೀ. ಭಾವೂ ತೋರ್ಸೆಕರ್, ಮುಂಬಯಿ