ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಪುನಃ ಕಟ್ಟಲೇ ಬೇಕು ! – ಡಾ. ಸುಬ್ರಮಣಿಯಮ್ ಸ್ವಾಮಿ, ಭಾಜಪ ಸಂಸದರು, ರಾಜ್ಯಸಭೆ

ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಈದ್ಗಾ ಮಸೀದಿ ಮತ್ತು ಅದರ ಪಕ್ಕದಲ್ಲಿ ಶ್ರೀಕೃಷ್ಣ ಮಂದಿರ

ಕಾಶಿ ವಿಶ್ವನಾಥ ಮಂದಿರವು ಭಗವಾನ ಶಿವನ ಒಂದು ಪ್ರಸಿದ್ಧ ಮಂದಿರವಾಗಿದೆ. ಈ ಮಂದಿರವು ಪವಿತ್ರ ಗಂಗಾ ನದಿಯ ಪಶ್ಚಿಮ ದಡದಲ್ಲಿದ್ದು, ಅದು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವುದರಿಂದ ಅದೊಂದು ಪವಿತ್ರ ಶ್ರದ್ಧಾಸ್ಥಾನ ವಾಗಿದೆ. ಭಾರತದ ಮೇಲಾದ ಅನೇಕ ಪರಕೀಯ ಇಸ್ಲಾಮೀ ಆಕ್ರಮಣಗಳ ಸಮಯದಲ್ಲಿ ಈ ಮಂದಿರವನ್ನು ಧ್ವಂಸ ಮಾಡಲಾಯಿತು ಮತ್ತು ಅನಂತರ ಪುನಃ ಕಟ್ಟಲಾಯಿತು. ಕೊನೆಯಲ್ಲಿ ೬ ನೆಯ ಮೊಗಲ ಸಾಮ್ರಾಟ ಔರಂಗಜೇಬನು ಕಾಶಿ ವಿಶ್ವನಾಥನ ಮಂದಿರವನ್ನು ಕೆಡವಿದನು ಮತ್ತು ನಂತರ ಹಿಂದೂವಿರೋಧಿ ಕೃತ್ಯಗಳನ್ನು ಮಾಡುವಾಗ ಅವನು ಮಂದಿರವಿದ್ದ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿದನು. ೧೯೮೩ ರಲ್ಲಿ ಈ ಮಂದಿರದ ವ್ಯವಸ್ಥಾಪನೆಯನ್ನು ಉತ್ತರಪ್ರದೇಶ ಸರಕಾರ ತನ್ನ ವಶಕ್ಕೆ ಪಡೆದುಕೊಂಡಿತು. ಅಂದಿನಿಂದ ಇಂದಿನವರೆಗೆ ಈ ಮಂದಿರ ಸರಕಾರದ ವ್ಯವಸ್ಥಾಪನೆಯಲ್ಲಿದೆ. ಶಿವರಾತ್ರಿಯ ಧಾರ್ಮಿಕ ಉತ್ಸವದ ಸಮಯದಲ್ಲಿ ಕಾಶಿ ರಾಜನ ಬಳಿ ಕಾರ್ಯಕಾರಿ ಪೌರೋಹಿತ್ಯದ ಯಜಮಾನ ಪದವಿ ಇರುತ್ತದೆ. ಸ್ಕಂದ ಪುರಾಣದ ಕಾಶಿ ಖಂಡಸಹಿತ ಪ್ರಾಚೀನ ಪುರಾಣಗಳಲ್ಲಿ ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರದ ಉಲ್ಲೇಖ ಕಂಡು ಬರುತ್ತದೆ.

೧. ಕಾಶಿ ವಿಶ್ವನಾಥ ಮಂದಿರದ ಮೇಲಾದ ಆಕ್ರಮಣಗಳು ಮತ್ತು ಅದರ ನಿರ್ಮಾಣಕ್ಕೆ ಸಂಬಂಧಿಸಿದ ಇತಿಹಾಸ

ಅ. ಸದ್ಯ ಅಸ್ತಿತ್ವದಲ್ಲಿರುವ ಕಾಶಿ ವಿಶ್ವನಾಥ ಮಂದಿರವನ್ನು ಇಂದೂರಿನ ಮಹಾರಾಣಿ ಅಹಿಲ್ಯಾಬಾಯಿ ಹೋಳ್ಕರ್ ಇವರು ೧೭೮೦ ರಲ್ಲಿ ಮಂದಿರದ ಮೂಲಸ್ಥಾನದ ಪಕ್ಕದ ಜಾಗದಲ್ಲಿ ನಿರ್ಮಿಸಿದ್ದರು. ಕಾಶಿ ವಿಶ್ವನಾಥ ಮಂದಿರದ ಮೂಲ ಸ್ಥಾನದಲ್ಲಿ ಸದ್ಯ ಮಸೀದಿ ಇದೆ. ಮಹಾರಾಜಾ ರಣಜಿತ್‌ಸಿಂಹ (ಪಂಜಾಬ್‌ನ ಸಿಕ್ಖರ ಮಹಾರಾಜರು) ಇವರು ಹೊಸ ಮಂದಿರದ ಕಳಸಕ್ಕಾಗಿ ೧ ಟನ್ (೧ ಸಾವಿರ ಕಿಲೋ) ಚಿನ್ನವನ್ನು ಅರ್ಪಣೆ ಮಾಡಿದ್ದರು.

ಆ. ಜ್ಞಾನವಾಪಿ ಕಾಶಿ ವಿಶ್ವನಾಥನ ಮೂಲ ಮಂದಿರವನ್ನು ಮಹಮ್ಮದ ಘೋರಿಯ ಸೈನಿಕರು ಕನೌಜ ರಾಜನನ್ನು ಸೋಲಿಸಿದ ನಂತರ ೧೧೯೪ ರಲ್ಲಿ ನಾಶ ಮಾಡಿದ್ದರು. ಪೃಥ್ವಿರಾಜ ಚೌಹಾಣನನ್ನು ಸೋಲಿಸಿದ ನಂತರ ೧೧೯೨ ರಲ್ಲಿ ಮಹಮ್ಮದ ಘೋರಿಯು ದೆಹಲಿಯ ಸಾಮ್ರಾಟನಾದನು.

ಇ. ದೆಹಲಿ ಸುಲ್ತಾನನ ಆಡಳಿತದಲ್ಲಿ (೧೨೧೧ ರಿಂದ ೧೨೬೬) ಓರ್ವ ಗುಜರಾತಿ ವ್ಯಾಪಾರಿಯು ಕಾಶಿ ವಿಶ್ವನಾಥನ ಮಂದಿರವನ್ನು ಪುನಃ ಕಟ್ಟಿದನು. ಅನಂತರ ಹುಸೇನ ಶಹಾ ಶರ್ಕೀ (೧೪೪೭ ರಿಂದ ೧೪೫೮) ಅಥವಾ ಸಿಕಂದರ ಲೋಧಿ (೧೪೮೯ – ೧೫೧೭) ಇವರ ಆಡಳಿತದಲ್ಲಿ ಈ ಮಂದಿರವನ್ನು ಪುನಃ  ಕೆಡವಲಾಯಿತು.

ಈ. ರಾಜಾ ಮಾನಸಿಂಗ್‌ನು ಅಕ್ಬರ ಬಾದಶಾಹನ ಆಡಳಿತದಲ್ಲಿ ಈ ಮಂದಿರವನ್ನು ಪುನಃ ಕಟ್ಟಿದನು ; ಆದರೆ ಕೆಲವು ಹಿಂದೂಗಳು ಅದಕ್ಕೆ ಬಹಿಷ್ಕಾರ ಹಾಕಿದರು. ರಾಜಾ ತೋಡರಮಲ್‌ನು ೧೫೮೫ ರಲ್ಲಿ ಅಕ್ಬರನಿಂದ ಸಿಕ್ಕಿದ ಆರ್ಥಿಕ ಸಹಾಯದಿಂದ ಈ ಮಂದಿರವನ್ನು ನವೀಕರಗೊಳಿಸಿದನು.

ಉ. ೧೬೬೯ ರಲ್ಲಿ ಔರಂಗಜೇಬನ ಆದೇಶದಂತೆ ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಪುನಃ ನಾಶ ಮಾಡಲಾಯಿತು ಮತ್ತು ಅದನ್ನು ಮೊದಲಿನಂತೆ ಕಟ್ಟಲು ಆಗಬಾರದೆಂದು ಆ ಸ್ಥಳದಲ್ಲಿ ಇಂದು ಇರುವ ‘ಜ್ಞಾನವಾಪಿ ಮಸೀದಿಯನ್ನು ಕಟ್ಟಲಾಯಿತು. ಸಯ್ಯದ ಶಹಾಬುದ್ದೀನನ ಅಭಿಪ್ರಾಯದಂತೆ ‘ಇತರರ ಧಾರ್ಮಿಕ ಸ್ಥಳಗಳನ್ನು ಬಲವಂತದಿಂದ ವಶಪಡಿಸಿಕೊಂಡು ಅಲ್ಲಿ ಮಸೀದಿಯನ್ನು ಕಟ್ಟುವುದು, ಹದೀಸ್‌ನಲ್ಲಿ ಹೇಳಿರುವ ಇಸ್ಲಾಮಿಕ್ ಕಾನೂನಿನ ಉಲ್ಲಂಘನೆಯಾಗಿದೆ. ಅದೇ ರೀತಿ ಈ ಕೃತ್ಯ ‘ಹರಾಮ್ ಆಗಿದೆ ಎಂದು ಅದರಲ್ಲಿ ಹೇಳಲಾಗಿದೆ. ಈ ಮಸೀದಿಯನ್ನು ಕಟ್ಟುವಾಗ ಮೊದಲಿನ ಮಂದಿರದ ಅವಶೇಷಗಳನ್ನು ಉಪಯೋಗಿಸಲಾಗಿದೆ. ಅವು ಇಂದಿಗೂ ಮಸೀದಿಯ ಅಡಿಪಾಯ, ಕಂಬ ಮತ್ತು ಸಭಾಮಂಟಪದಲ್ಲಿ ಕಾಣಿಸುತ್ತವೆ.

ಊ. ೧೭೪೨ ರಲ್ಲಿ ಮರಾಠಾ ರಾಜಾ ಮಲ್ಹಾರರಾವ್ ಹೋಳ್ಕರ್ ಇವರು ಆ ಮಸೀದಿಯನ್ನು ಕೆಡವಿ ಆ ಸ್ಥಳದಲ್ಲಿ ಪುನಃ ಮಂದಿರವನ್ನು ಕಟ್ಟುವ ಯೋಜನೆಯನ್ನು ಮಾಡಿದ್ದರು; ಆದರೆ ಅದೇ ವೇಳೆ ಅವಧದ ನವಾಬನು ಹಸ್ತಕ್ಷೇಪ ಮಾಡಿದ್ದರಿಂದ ಈ ಯೋಜನೆ ಫಲಿಸಲಿಲ್ಲ.

ಎ. ೧೭೫೦ ರಲ್ಲಿ ಜಯಪುರದ ಮಹಾರಾಜರು ಕಾಶಿ ವಿಶ್ವನಾಥ ಮಂದಿರವನ್ನು ಪುನಃ  ಕಟ್ಟಲು ಆ ಸಂಪೂರ್ಣ ಭೂಮಿಯನ್ನು ಖರೀದಿಸುವ ಉದ್ದೇಶದಿಂದ ಆ ಸ್ಥಳವನ್ನು ಸರ್ವೇ ಮಾಡಲು ಪ್ರಾರಂಭಿಸಿದ್ದರು ; ಆದರೆ ಅವರ ಈ ಯೋಜನೆ ಯಶಸ್ವಿಯಾಗಲಿಲ್ಲ.

ಐ. ೧೭೮೦ ರಲ್ಲಿ ರಾಜಾ ಮಲ್ಹಾರರಾವ್ ಹೋಳ್ಕರ್ ಇವರ ಸೊಸೆ ಅಹಿಲ್ಯಾಬಾಯಿ ಹೋಳ್ಕರ್ ಇವರು ತಾತ್ಕಾಲಿಕ ಉಪಾಯವೆಂದು ಮಸೀದಿಯ ಪಕ್ಕದಲ್ಲಿಯೇ ಈಗಿರುವ ಮಂದಿರವನ್ನು ಕಟ್ಟಿದರು. ಯಾವಾಗ ಹಿಂದೂಗಳು ವಾರಣಾಸಿಗೆ ದರ್ಶನಕ್ಕಾಗಿ ಹೋಗುತ್ತಾರೆಯೋ, ಆಗ ಅವರಿಗೆ ಈ ಮಂದಿರವು ಕಾಣಿಸುತ್ತದೆ.

೨. ಜ್ಯೋತಿರ್ಲಿಂಗದ ವಿಷಯದಲ್ಲಿ ಹಿಂದೂಗಳ ಶ್ರದ್ಧೆ

ಶಿವಪುರಾಣಕ್ಕನುಸಾರ ಒಮ್ಮೆ ಬ್ರಹ್ಮದೇವ (ಉತ್ಪತ್ತಿಯ ದೇವತೆ) ಮತ್ತು ಶ್ರೀವಿಷ್ಣು (ಸ್ಥಿತಿಯ ದೇವತೆ) ಇವರಲ್ಲಿ ಸರ್ವೋಚ್ಚ ಸ್ಥಾನದ ಬಗ್ಗೆ ಚರ್ಚೆ ಏರ್ಪಟ್ಟಿತು. ಅವರನ್ನು ಪರೀಕ್ಷಿಸುವ ಉದ್ದೇಶದಿಂದ ಭಗವಾನ ಶಿವನು ಯಾರು ಹೆಚ್ಚು ಸಾಮರ್ಥ್ಯಶಾಲಿಯಾಗಿದ್ದಾರೆ, ಎಂಬುದನ್ನು ನಿರ್ಧರಿಸಲು ಅಖಿಲ ಬ್ರಹ್ಮಾಂಡವನ್ನು ಒಟ್ಟುಮಾಡಿ ಪ್ರಕಾಶದ ಅಖಂಡ ಸ್ತಂಭವನ್ನು, ಅಂದರೆ ಜೋತಿರ್ಲಿಂಗವನ್ನು ನಿರ್ಮಾಣ ಮಾಡಿದನು. ಶ್ರೀವಿಷ್ಣು ವರಾಹನ ರೂಪ ಧರಿಸಿ ತಳವನ್ನು ತಲುಪಿದನು ಮತ್ತು ಬ್ರಹ್ಮದೇವನು ಸ್ತಂಭದ ಮೇಲ್ಭಾಗದ ಕಡೆಗೆ ಹಾರಲು ಹಂಸ ಪಕ್ಷಿಯ ರೂಪವನ್ನು ಧರಿಸಿದನು. ಆ ಜ್ಯೋತಿರ್ಲಿಂಗದಲ್ಲಿ ಭಗವಾನ ಶಿವನು ಪ್ರಕಾಶದ ಅಗ್ನಿಮಯ ಸ್ತಂಭದ ರೂಪದಲ್ಲಿ ಪ್ರಕಟನಾದನು. ಆದ್ದರಿಂದ ಅದು ಹಿಂದೂಗಳಿಗೆ ಶ್ರದ್ದಾಸ್ಥಾನವಾಗಿದೆ. ಯೇಸು ಕ್ರಿಸ್ತನ ಜನ್ಮವು ಇಸ್ರೇಲ್‌ನ ಬೆಥಲೆಹೆಮ್‌ನಲ್ಲಿ ಆಗಿದೆ ಎಂದು ಕ್ರೈಸ್ತರು ನಂಬುತ್ತಾರೆ ಮತ್ತು ಪ್ರವಾದಿ ಮಹಮ್ಮದರು ಬಂಡೆಗಲ್ಲುಗಳ ಮೇಲಿನಿಂದ ಕುದುರೆಯ ಮೇಲೆ ಕುಳಿತು ಸ್ವರ್ಗಕ್ಕೆ ಹೋದರು ಎಂದು ಮುಸಲ್ಮಾನರು ನಂಬುತ್ತಾರೆ, ಇವುಗಳಿಗೆ ಯಾರೂ ಆಕ್ಷೇಪವೆತ್ತುವ ಹಾಗಿಲ್ಲ. ಹಿಂದೂಗಳ ಅವರ ಈ ಶ್ರದ್ಧಾಸ್ಥಾನದ ವಿಷಯದಲ್ಲಿ ಅದೇ ರೀತಿ ನಂಬಿಕೆಯಿದೆ. ಈ ಶ್ರದ್ಧೆಗಳಿಗೆ ಶಾಸ್ತ್ರೀಯ ಆಧಾರ ಇಲ್ಲದಿದ್ದರೂ, ಅದು ಅವರವರ ಶ್ರದ್ಧೆಯ ವಿಷಯವಾಗಿದೆ.

೩. ಜ್ಞಾನವಾಪಿಯ ಜಾಗವನ್ನು ಹಿಂಪಡೆದು ಅಲ್ಲಿ ಮಂದಿರವನ್ನು ಕಟ್ಟಲು ಹಿಂದೂಗಳಿಗೆ ಸಂವಿಧಾನಿಕ ಅಧಿಕಾರವಿದೆ

ಧಾರ್ಮಿಕ ಶ್ರದ್ಧೆಯು ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವುದರಿಂದ ಅದಕ್ಕೆ ಅಕ್ಷಯತ್ವ ಪ್ರಾಪ್ತವಾಗಿದೆ. ‘ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿರುವ ಸ್ಥಳಗಳಲ್ಲಿ ಪೂಜೆ ಮಾಡುವುದು, ಹಿಂದೂಗಳ ಮೂಲಭೂತ ಅಧಿಕಾರವಾಗಿದೆ, ಎಂಬುದನ್ನು ಸಂವಿಧಾನದ ಕಲಮ್ ೨೫ ರಲ್ಲಿ ಸೇರಿಸಲಾಗಿದೆ. ಆದ್ದರಿಂದ ಎಷ್ಟೇ ವರ್ಷ ಕಳೆದರೂ, ಜ್ಞಾನ ವಾಪಿಯ ಸ್ಥಳವನ್ನು ಹಿಂಪಡೆಯುವ ಮತ್ತು ಆ ಸ್ಥಳದಲ್ಲಿ ಮಂದಿರ ಕಟ್ಟುವ ಅಧಿಕಾರ ಹಿಂದೂಗಳಿಗಿದೆ.

೪. ಜ್ಞಾನವಾಪಿ ವಿಶ್ವನಾಥ ಮಂದಿರದ ಸ್ಥಳವನ್ನು ಪಡೆಯುವ ಪರ್ಯಾಯಗಳು

ಸದ್ಯದ ಸಮಸ್ಯೆಯೆಂದರೆ, ಸಂವಿಧಾನಾತ್ಮಕ ಪ್ರಕ್ರಿಯೆಯ ಮೂಲಕ ಜ್ಞಾನವಾಪಿ ವಿಶ್ವನಾಥ ಮಂದಿರದ ಸ್ಥಳವನ್ನು ಹಿಂಪಡೆಯುವುದು ಮತ್ತು ಗತವೈಭವ ಪ್ರಾಪ್ತವಾಗಲು ಆ ಸ್ಥಳದಲ್ಲಿ ಭವ್ಯದಿವ್ಯ ಮಂದಿರವನ್ನು ಪುನಃ ನಿರ್ಮಿಸು ವುದು ಮತ್ತು ಮುಸಲ್ಮಾನರಿಗೆ ಮಸೀದಿಯನ್ನು ನಿರ್ಮಿಸಲು ವಾರಣಾಸಿಯಲ್ಲಿ ಬೇರೆ ಸ್ಥಳವನ್ನು ದೊರಕಿಸಿಕೊಡುವುದು. ಇದೇ ವಿಷಯವನ್ನು ನಾನು ಅಯೋಧ್ಯೆಯ ರಾಮಂದಿರದ ಖಟ್ಲೆಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಎತ್ತಿ ಹಿಡಿದಿದ್ದೆ  ಮತ್ತು ಕೊನೆಗೆ ಹಾಗೆಯೇ ನಿರ್ಣಯವು ಬಂದಿತು. ವಾರಾಣಾಸಿಯಲ್ಲಿ ಜ್ಞಾನವಾಪಿ ವಿಶ್ವನಾಥ ಮಂದಿರದ ಪ್ರಕರಣದಲ್ಲಿಯೂ ಇದೇ ವಿಷಯದ ಆಧಾರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಮತ್ತು ಸಮೀಪದಲ್ಲಿಯೇ ಇಟ್ಟಿರುವ ಮೂಲ ಲಿಂಗವನ್ನು ಮೂಲಸ್ಥಾನಕ್ಕೆ ತಂದು ಅಲ್ಲಿ ಪುನಃ ಮಂದಿರವನ್ನು ನಿರ್ಮಿಸಲಾಗುವುದು.

೫. ಕೇಂದ್ರ ಸರಕಾರವು ವಿಶೇಷಾಧಿಕಾರ ಬಳಸಿ ಜ್ಞಾನವಾಪಿ ಜಾಗವನ್ನು ವಶಪಡಿಸಿಕೊಳ್ಳಬಹುದು

ಪ್ರಸ್ತುತ ಸರಕಾರಕ್ಕೆ ಸಂವಿಧಾನಾತ್ಮಕ ಆದೇಶ ಲಭಿಸಿರುವುದರಿಂದ ಸಂವಿಧಾನದ ‘ಕಲಮ್ ೩೦೦ ಅಕ್ಕನುಸಾರ ಅದು ಸಂಪೂರ್ಣ ಜ್ಞಾನವಾಪಿ ಸ್ಥಳವನ್ನು ವಶಪಡಿಸಿಕೊಳ್ಳಬಹುದು. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಎಮ್. ಸಿದ್ದಿಕ್ಕಿ ಮತ್ತು ಮಹಂತ ಸುರೇಶ ದಾಸ ಪ್ರಕರಣದಲ್ಲಿ ನೀಡಿರುವ ಆದೇಶದ ಆಧಾರವನ್ನು ನೀಡಬಹುದು. ‘ರಾಜ್ಯದ ಪರಮಾಧಿಕಾರದಲ್ಲಿರುವ ಪ್ರದೇಶಗಳಲ್ಲಿ ಚರ್ಚ್, ಮಸೀದಿ, ಮಂದಿರ ಇತ್ಯಾದಿ ಧಾರ್ಮಿಕ ಸ್ಥಳಗಳು ಮತ್ತು ಅವುಗಳ ಸಂಪತ್ತನ್ನು ವಶಪಡಿಸಿಕೊಳ್ಳುವ ಸಾರ್ವಭೌಮ ಅಧಿಕಾರವು ಆಯಾ ರಾಜ್ಯಕ್ಕಿದೆ, ಎಂದು ಸಂವಿಧಾನಾತ್ಮಕ ವಿಭಾಗೀಯ ಪೀಠವು ಇಸ್ಮಾಯಿಲ್ ಫಾರೂಖಿ ವಿರುದ್ಧ ಕೇಂದ್ರ ಸರಕಾರದ ಖಟ್ಲೆಯಲ್ಲಿ ಆದೇಶ ನೀಡಿತ್ತು. ಈ ವಿಶೇಷ ಅಧಿಕಾರವನ್ನು ಉಪಯೋಗಿಸಿ ಸರಕಾರವು ಸಂವಿಧಾನದ ‘ಕಲಮ್ ೩೦೦ ಅದಕ್ಕನುಸಾರ ಯಾವುದೇ ಸ್ಥಳವನ್ನು ವಶಪಡಿಸಿಕೊಳ್ಳಬಹುದು; ಆದರೆ ಕೇಂದ್ರ ಸರಕಾರವು ಸಂಬಂಧಪಟ್ಟ ಪಕ್ಷ ಅಥವಾ ವ್ಯಕ್ತಿಗಳಿಗೆ ಯೋಗ್ಯ ನಷ್ಪಪರಿಹಾರವನ್ನು ಕಡ್ಡಾಯವಾಗಿ  ನೀಡ ಬೇಕಾಗುತ್ತದೆ.

೬. ಕಾಶಿ ವಿಶ್ವನಾಥ ಮಂದಿರದಲ್ಲಿ ಪೂಜೆಯನ್ನು ಮಾಡುವುದು ಹಿಂದೂಗಳ ಮೂಲಭೂತ ಅಧಿಕಾರವಾಗಿದೆ !

ಪೂಜಾವಿಧಿಯ ಅಥವಾ ಉಪಾಸನೆಯ ಮೂಲಭೂತ ಅಧಿಕಾರದ ಬಗ್ಗೆ ಸಂವಿಧಾನದ ಕಲಮ್ ೨೫ (೧) ರಲ್ಲಿ ಮಾಹಿತಿಯನ್ನು ನೀಡಲಾಗಿದೆ. ಸರ್ವೋಚ್ಚ ನ್ಯಾಯಾಲಯವು ಈ ಕಲಮಿನ ಅರ್ಥವನ್ನು ಸ್ಪಷ್ಟಪಡಿಸುವಾಗ, “ಯಾವುದೇ ಧರ್ಮದ ಪೂಜೆಯ ಸ್ಥಳಕ್ಕೆ ಆ ಧರ್ಮದಲ್ಲಿ ಒಂದು ವಿಶಿಷ್ಟ ಮಹತ್ವವಿರುವುದು ಆವಶ್ಯಕವಾಗಿದೆ ಎಂದು ಹೇಳಿದೆ. ಆದ್ದರಿಂದ ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಸ್ಥಾನವಾಗಿದೆ. ‘ಚರ್ಚ್, ಮಸೀದಿಗಳಂತಹ ಧಾರ್ಮಿಕ ಉಪಾಸನೆಯ ಸ್ಥಳಗಳನ್ನು ವಶಕ್ಕೆ ಪಡೆದರೆ ಸಂವಿಧಾನದ ೨೫ ಮತ್ತು ೨೬ ಈ ಕಲಮುಗಳ ಉಲ್ಲಂಘನೆಯಾಗುವುದಿಲ್ಲ, ಎಂದು ಈ ವಿಭಾಗೀಯ ಪೀಠವು ಹೇಳಿದೆ. ‘ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರದಲ್ಲಿ ಜ್ಯೋತಿರ್ಲಿಂಗವಿದೆ. ಆದ್ದರಿಂದ ಅಲ್ಲಿ ಪೂಜೆಯನ್ನು ಮಾಡುವುದು ಹಿಂದೂಗಳ ಮೂಲಭೂತ ಅಧಿಕಾರವಾಗಿದೆ, ಇದು ಸಂವಿಧಾನದ ೨೫ ಮತ್ತು ೨೬ ಕಲಮಿನ ಉಲ್ಲಂಘನೆಯಾಗುವುದಿಲ್ಲ, ಎಂದು ಈ ವಿಭಾಗೀಯ ಪೀಠವು ಹೇಳಿದೆ. ‘ಶ್ರದ್ಧೆಯೇ ಹಿಂದೂ ಧರ್ಮದ ಆವಶ್ಯಕ ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಸಂಪತ್ತುಗಳ ದಾವೆಯಂತಹ ಸಾಮಾನ್ಯ ಅಧಿಕಾರಕ್ಕಿಂತ ಪೂಜಾವಿಧಿಯ ದಾವೆಯು ಶ್ರೇಷ್ಠವಾಗಿದೆ. ಸರ್ವೋಚ್ಚ ನ್ಯಾಯಾಲಯವು ‘ಇಸ್ಮಾಯಿಲ್ ಫಾರೂಖೀ ವಿರುದ್ಧ ಕೇಂದ್ರ ಸರಕಾರ ಈ ಖಟ್ಲೆಯ ನಿರ್ಣಯವನ್ನು ನೀಡುವಾಗ ‘ಮಸೀದಿ ಒಂದು ಸಾಮಾನ್ಯ ವಾಸ್ತು ಆಗಿದ್ದು ಇಸ್ಲಾಮ್‌ನ ಧರ್ಮಕಾರ್ಯಕ್ಕೆ ಅದರ ಅವಶ್ಯಕತೆಯಿಲ್ಲ, ಏಕೆಂದರೆ ಮುಸಲ್ಮಾನರು ಎಲ್ಲಿಯೂ ನಮಾಜು ಪಠಣ ಮಾಡಬಹುದು, ಎಂದಿದೆ. ಸರ್ವೋಚ್ಚ ನ್ಯಾಯಾಲಯದ ೫ ಸದಸ್ಯರ ವಿಭಾಗೀಯ ಪೀಠವು ಮುಂದಿನಂತೆ ಹೇಳಿದೆ, ‘ಎಲ್ಲಿಯವರೆಗೆ ‘ಅಲ್ ಆಕ್ಸಾ ಮಸೀದಿಯ ಹಾಗೆಯೇ ಯಾವುದಾದರೊಂದು ಮಸೀದಿಗೆ ಇಸ್ಲಾಮ್ ಧರ್ಮದಲ್ಲಿ ವಿಶೇಷ ಮಹತ್ವವಿಲ್ಲವೋ ಅಲ್ಲಿ ಆ ಸ್ಥಳದಲ್ಲಿ ನಮಾಜು ಪಠಣ ಮಾಡುವುದು ಮುಸಲ್ಮಾನರ ಮೂಲಭೂತ ಅಧಿಕಾರವಾಗಿಲ್ಲ.

೭. ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಕಟ್ಟಲು ‘ಪ್ಲೇಸಸ್ ಆಫ್ ವರ್ಶಿಪ್ ಏಕ್ಟ್ನ ಅಡಚಣೆ

‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್, ೧೯೯೧ ಈ ಕಾನೂನನ್ನು ತಂದಿರುವುದರಿಂದ ಕೆಲವು ಗಂಭೀರ ಸಂವಿಧಾನಾತ್ಮಕ ವಿಷಯಗಳು ಉದ್ಭವಿಸಿದೆ. ಈ ಕಾನೂನಿಗನುಸಾರ ೧೫ ಆಗಸ್ಟ್ ೧೯೪೭ ರ ವರೆಗೆ ಯಾವುದಾದರೊಂದು ಧಾರ್ಮಿಕ ವಾಸ್ತು ಅಸ್ತಿತ್ವದಲ್ಲಿದ್ದರೆ ಅದು ಅಸಂವಿಧಾನಾತ್ಮಕವಾಗಿದ್ದರೂ, ಆ ವಾಸ್ತುವನ್ನು ಕೆಡವಿ ಆ ಸ್ಥಳದಲ್ಲಿ ಮೂಲ ಧಾರ್ಮಿಕ ವಾಸ್ತುವನ್ನು ನಿರ್ಮಾಣ ಮಾಡಲು ನ್ಯಾಯಾಲಯ ಆದೇಶವನ್ನು ನೀಡುವಂತಿಲ್ಲ. ಈ ಕಾನೂನಿಗನುಸಾರ ಜ್ಞಾನವಾಪಿ ಮಸೀದಿಗೆ ಸುರಕ್ಷೆ ಪ್ರಾಪ್ತವಾಗಿದೆ. ಯಾವುದೇ ಧಾರ್ಮಿಕ ಸ್ಥಳದ ಧಾರ್ಮಿಕತೆಯನ್ನು ನಿರ್ಧರಿಸಲು ೧೫ ಆಗಸ್ಟ್ ೧೯೪೭ ಈ ದಿನವನ್ನು ನಿಗದಿಪಡಿಸಿದ್ದರಿಂದ ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ೧೯೯೧ ಈ ಕಾಯದೆ ಮರುಪರಿಶೀಲನೆಯಾಗಬೇಕಿದೆ. ಈ ಕಾಯದೆಗನುಸಾರ ಧಾರ್ಮಿಕ ಸ್ಥಳಗಳ ಬಗ್ಗೆ ೧೫ ಆಗಸ್ಟ್ ೧೯೪೭ ರ ಸ್ಥಿತಿ ಶಾಶ್ವತವಾಗಿರುವುದು. ಆದ್ದರಿಂದ ಜ್ಞಾನವಾಪಿ ಮಸೀದಿಯನ್ನು ಕೆಡವಿ ಅಲ್ಲಿ ಜ್ಞಾನವಾಪಿ ಕಾಶಿವಿಶ್ವನಾಥ ಮಂದಿರವನ್ನು ಕಟ್ಟಲು ಅಡಚಣೆಯುಂಟಾಗಿದೆ.

೮. ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್, ರದ್ದುಪಡಿಸಿ ಅಥವಾ ಆ ಕಾನೂನಿನಿಂದ ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಅದರಲ್ಲಿ ಸೇರಿಸದಿರಿ !

‘ಪ್ಲೇಸಸ್ ಆಫ್ ವರ್ಶಿಪ್ ಏಕ್ಟ್, ೧೯೯೧ ಈ ಕಾನೂನು ಸಂವಿಧಾನ ವಿರೋಧಿಯಾಗಿದೆ. ಈ ಕಾನೂನಿನ ವಿರುದ್ಧ ನಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಯಾಚಿಕೆಯನ್ನು ದಾಖಲಿಸಿದ್ದೇನೆ. ‘ಈ ಕಾನೂನು ಸಂವಿಧಾನದ ವಿರುದ್ಧ ಆಗಿರುವುದರಿಂದ ಅದನ್ನು ರದ್ದುಪಡಿಸಬೇಕು ಅಥವಾ ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಈ ಕಾನೂನಿನಿಂದ ದೂರ ಇಡಬೇಕು, ಎಂದು ಈ ಅರ್ಜಿಯಲ್ಲಿ ವಿನಂತಿಸಲಾಗಿದೆ. ಈ ಕಾನೂನು ಅಯೋಧ್ಯೆಯ ರಾಮಜನ್ಮ ಭೂಮಿಯ ವಿವಾದಕ್ಕೆ ಅಪವಾದವೆಂದು ನಿರ್ಧರಿಸಲಾಗಿತ್ತು. ಆದ್ದರಿಂದ ಈ ಪ್ರಕರಣವು ಮತ್ತೊಮ್ಮೆ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಭಗವಾನ ಶಿವನ ಕೃಪಾಶೀರ್ವಾದದಿಂದ ಈ ಖಟ್ಲೆಯನ್ನು ಗೆಲ್ಲುವೆನೆಂದು ನನಗೆ ವಿಶ್ವಾಸವಿದೆ. ತದನಂತರ ಹಿಂದೂಗಳಿಗೆ ಇನ್ನೊಂದು ವಿಶೇಷ ಶ್ರದ್ಧಾಸ್ಥಾನವಾಗಿರುವ ಮಂದಿರವೆಂದರೆ ಮಥುರಾದ ಶ್ರೀಕೃಷ್ಣಜನ್ಮಭೂಮಿ ಮಂದಿರವನ್ನು ನಮಗೆ  ಕಟ್ಟಲಿಕ್ಕಿದೆ.

– ಡಾ. ಸುಬ್ರಮಣಿಯಮ್ ಸ್ವಾಮಿ, ರಾಜ್ಯಸಭೆಯ ಸಂಸದ, ಭಾಜಪ