ತಮಿಳುನಾಡಿನಲ್ಲಿ ಸರಕಾರಿಕರಣವಾದ ಶ್ರೀ ಪಳನಿ ದೇವಸ್ಥಾನದ ನ್ಯಾಯಾಂಗ ಹೋರಾಟ : ಹಿಂದೂಗಳಿಗೆ ಆಶಾಕಿರಣ !

ಶ್ರೀ ಮುರುಗನ (ಕಾರ್ತಿಕೆಯ)

‘ತಮಿಳುನಾಡಿನ ಪಳನಿಯಲ್ಲಿ ಪ್ರಸಿದ್ಧ ಶ್ರೀ ಮುರುಗನ್‌ನ (ಕಾರ್ತಿಕೇಯನ) ದೇವಸ್ಥಾನವಿದೆ. ಅದನ್ನು ‘ಶ್ರೀ ದಂಡಾಯುಧಪಾಣಿ ಸ್ವಾಮೀ ಮಂದಿರ’ ಎಂದೂ ಕರೆಯಲಾಗುತ್ತದೆ. ಈ ದೇವಸ್ಥಾನದ ದೈನಂದಿನ ಸ್ವಚ್ಛತೆಯ ಕಾರ್ಯದ (ಹೌಸ್ ಕಿಪಿಂಗ್‌ನ) ಗುತ್ತಿಗೆಗಾಗಿ  ಅರ್ಜಿಗಳನ್ನು (ಟೆಂಡರ್) ಕರೆಯಲಾಗಿತ್ತು. ಈ ವಿಷಯದ ಬಗ್ಗೆ ವಿವಾದವಾಗಿ ಆ ಬಗೆಗಿನ ಯಾಚಿಕೆಯನ್ನು ದೇವಸ್ಥಾನದ ಭಕ್ತರು ಮತ್ತು ನ್ಯಾಯವಾದಿ ಟಿ. ಆರ್. ರಮೇಶ ಇವರು ಚೆನ್ನೈ ಉಚ್ಚ ನ್ಯಾಯಾಲಯದ ಮದುರೈ ವಿಭಾಗೀಯಪೀಠದ ಮುಂದೆ ಮಂಡಿಸಿದರು. ಮಾನ್ಯ ನ್ಯಾಯಾಲಯವು ಶ್ರೀ. ರಮೇಶ ಇವರ ಪಕ್ಷದಲ್ಲಿ ತೀರ್ಪು ನೀಡಿ ತಮಿಳುನಾಡು ಸರಕಾರದ ಮತ್ತು ಕಾರ್ಯಕಾರಿ ಅಧಿಕಾರಿಗಳ ೨೦.೮.೨೦೨೦ ರ ಆದೇಶವನ್ನು ರದ್ದುಪಡಿಸಿತು. ಈ ಸಮಯದಲ್ಲಿ ‘ಕಾರ್ಯಕಾರಿ ಅಧಿಕಾರಿಗಳು, ಪದಾಧಿಕಾರಿಗಳು, ವಿಶ್ವಸ್ಥರು ವರ್ಷಗಟ್ಟಲೇ ಕೆಲಸ ಮಾಡುವುದು, ‘ಹಿಂದೂ ರಿಲಿಜಿಯಸ್ ಆಂಡ್ ಚ್ಯಾರಿಟೆಬಲ್ ಎಂಡೋನಮೆಂಟ್ ಆಕ್ಟ್ ೧೯೫೧’ರ ಉಲ್ಲಂಘನೆಯಾಗಿದೆ, ಇದು ‘ವಂಚನೆ’ (ಫ್ರಾಡ್)ಯಾಗಿದೆ’, ಎಂಬ ಅಭಿಪ್ರಾಯವನ್ನು ನ್ಯಾಯಾಲಯವು ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಶ್ರೀ ಪಳನಿ ದೇವಸ್ಥಾನದ ಇತಿಹಾಸ ಮತ್ತು ನ್ಯಾಯಾಲಯದ ಘಟನಾವಳಿಗಳನ್ನು ಇಲ್ಲಿ ನೀಡುತ್ತಿದ್ದೇವೆ. ಕಾರ್ತಿಕೇಯ ದೇವಸ್ಥಾನದ ವಿಜಯದ ನಂತರ ಟಿ.ಆರ್. ರಮೇಶ ಇವರು ಇತ್ತೀಚೆಗಷ್ಟೇ ಇತರ ೬ ದೇವಸ್ಥಾನಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಖಟ್ಲೆಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ‘ಕಾರಣ ನೀಡಿ’ ಎಂಬ ನೋಟಿಸ್‌ನ್ನು ನೀಡಲಾಗಿದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಶ್ರೀ ಪಳನಿ ದೇವಸ್ಥಾನದ ಸ್ಥಾನಮಹಾತ್ಮೆ

ಭಗವಾನ ಶಂಕರನು ಮಾತೆ ಪಾರ್ವತಿಯೊಂದಿಗೆ ಕೈಲಾಸ ಪರ್ವತದ ಮೇಲೆ ವಿರಾಜಮಾನನಾಗಿದ್ದನು. ಅವನೊಂದಿಗೆ ಅವನ ಇಬ್ಬರೂ ಮಕ್ಕಳು ಶ್ರೀ ಮುರುಗನ್ (ಕಾರ್ತಿಕೇಯ) ಮತ್ತು ಗಣಪತಿ ಇವರೂ ಉಪಸ್ಥಿತರಿದ್ದರು. ಒಂದು ಬಾರಿ ನಾರದಮುನಿಗಳು ಕೈಲಾಸ ಪರ್ವತದ ಮೇಲೆ ಹೋದರು. ಅವರು ಕಾರ್ತಿಕೇಯ ಮತ್ತು ಗಣಪತಿಗೆ, ‘ಈ ಪೃಥ್ವಿಗೆ ೩ ಪ್ರದಕ್ಷಿಣೆಗಳನ್ನು ಯಾರು ಮೊದಲು ಹಾಕುವಿರಿ ?’, ಎಂದು ಪ್ರಶ್ನೆಯನ್ನು ಕೇಳಿದರು. ಆಗ ಕಾರ್ತಿಕೇಯನು ತಕ್ಷಣ ಪೃಥ್ವಿಯ ಪ್ರದಕ್ಷಿಣೆಗಾಗಿ ಹೋದನು. ಗಣಪತಿಯು, ‘ಮಾತಾ ಪಾರ್ವತಿ ಮತ್ತು ತಂದೆ ಮಹಾದೇವನೇ ನನಗಾಗಿ ಈಶ್ವರ, ಬ್ರಹ್ಮಾಂಡ ಮತ್ತು ಪೃಥ್ವಿ ಇವೆಲ್ಲವೂ ಆಗಿದ್ದಾರೆ; ಆದ್ದರಿಂದ ಇವರಿಗೆ ಪ್ರದಕ್ಷಿಣೆ ಹಾಕಿದರೆ, ಅದು ಪೃಥ್ವಿಗೆ ಪ್ರದಕ್ಷಿಣೆ ಹಾಕಿದಂತಾಗುತ್ತದೆ’, ಎಂದು ವಿಚಾರ ಮಾಡಿದನು. ಅದರಂತೆ ಗಣಪತಿಯು ಶಿವ-ಪಾರ್ವತಿಯರಿಗೆ ೩ ಪ್ರದಕ್ಷಿಣೆಗಳನ್ನು ಹಾಕಿದನು. ಗಣಪತಿಯು ಮೊದಲು ಪೃಥ್ವಿಗೆ ಪ್ರದಕ್ಷಿಣೆಯನ್ನು ಹಾಕಿದನು ಎಂದು ಘೊಷಣೆಯನ್ನು ಮಾಡಲಾಯಿತು. ಕೆಲವು ಸಮಯದ ನಂತರ ಮುರುಗನ್ (ಅಂದರೆ ಕಾರ್ತಿಕೇಯ) ಪೃಥ್ವಿಗೆ ಪ್ರದಕ್ಷಿಣೆಗಳನ್ನು ಹಾಕಿ ಬಂದನು. ಅವನಿಗೆ, ಗಣಪತಿಯು ಬುದ್ಧಿಯನ್ನು ಉಪಯೋಗಿಸಿ ಸ್ಪರ್ಧೆಯನ್ನು ಗೆದ್ದಿದ್ದಾನೆ ಮತ್ತು ಎಲ್ಲರೂ ಅವನನ್ನೇ ವಿಜಯಿಯೆಂದು ಘೋಷಿಸಿದ್ದಾರೆ’, ಎಂಬುದು ತಿಳಿಯುತ್ತದೆ. ಹೀಗಾದುದರಿಂದ ಕಾರ್ತಿಕೇಯನಿಗೆ ಬಹಳ ಸಿಟ್ಟು ಬರುತ್ತದೆ. ತದನಂತರ ಅವನು ಕೈಲಾಸ ಬಿಟ್ಟು ನೇರವಾಗಿ ದಕ್ಷಿಣದ ಪಳನಿ ಗುಡ್ಡದ ಮೇಲೆ ಹೋಗುತ್ತಾನೆ. ಈ ಸ್ಥಳದಲ್ಲಿ ಕಾರ್ತಿಕೇಯನು ತಪಶ್ಚರ್ಯ ಮಾಡಿದನು. ಆದ್ದರಿಂದ ಈ ಸ್ಥಾನಕ್ಕೆ ಬಹಳ ಮಹತ್ವವಿದೆ.

೨. ಶ್ರೀ ಪಳನಿ ಮಂದಿರವು ತಮಿಳುನಾಡಿನ ಅತ್ಯಂತ ಶ್ರೀಮಂತ ಮಂದಿರವಾಗಿದೆ !

ದೇಶದಾದ್ಯಂತ ಶ್ರೀ ಮುರುಗನ್ (ಕಾರ್ತಿಕೇಯನ) ದೇವರ ೬ ದೇವಸ್ಥಾನಗಳಿವೆ. ಅವುಗಳ ಪೈಕಿ ಪಳನಿಯ ದೇವಸ್ಥಾನವು ಎಲ್ಲಕ್ಕಿಂತ ಶ್ರೇಷ್ಠವೆನಿಸಿಕೊಂಡಿದೆ. ಕಾಲಕಾಲಕ್ಕೆ ಆಗಿನ ರಾಜರು ಕಟ್ಟಡ ನಿರ್ಮಾಣದ ಕಾರ್ಯವನ್ನು ಮಾಡಿ ಪಳನಿ ದೇವಸ್ಥಾನಕ್ಕೆ ತಮ್ಮ ಯೋಗದಾನವನ್ನು ನೀಡಿದ್ದಾರೆ. ೯ ನೇ ಶತಮಾನದಲ್ಲಿ ಚೆರಮ್ ರಾಜಾ ಚೆರಮನ್ ಪೆರುಮನ್ ಇವರು ಈ ದೇವಸ್ಥಾನದ ಕಟ್ಟಡದ ನಿರ್ಮಾಣ ಕಾರ್ಯವನ್ನು ಮಾಡಿದರು. ಪಳನಿಯ ಈ ದೇವಸ್ಥಾನವು ತಮಿಳುನಾಡಿನ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ. ಅದರ ಕೇವಲ ೨೦೧೫-೨೦೧೬ ಈ ಒಂದು ವರ್ಷದ ಆದಾಯ ೩೦ ಕೋಟಿ ರೂಪಾಯಿಗಳಷ್ಟಿತ್ತು. ಆದಾಯದ ವಿಷಯದಲ್ಲಿ ದೇಶದಲ್ಲಿ ತಿರುಪತಿ ಬಾಲಾಜಿ ದೇವಸ್ಥಾನ ಮತ್ತು ಗುರುವಾಯೂರ ದೇವಸ್ಥಾನ ಇವುಗಳ ನಂತರ ಪಳನಿಯ ದೇವಸ್ಥಾನದ ಸ್ಥಾನವಿದೆ.

೩. ಪಳನಿ ದೇವಸ್ಥಾನದ ವೈಶಿಷ್ಟ್ಯಗಳು

ಅ. ಸಂಪೂರ್ಣ ಭಾರತದಲ್ಲಿ ಪಳನಿಯಲ್ಲಿ ಭಕ್ತರ ಸೌಲಭ್ಯಕ್ಕಾಗಿ ಮೊತ್ತ ಮೊದಲಬಾರಿ ವಿದ್ಯುತ್ ರೋಪ-ವೇಯನ್ನು ಅಳವಡಿಸಲಾಗಿದೆ.

ಆ. ದೇವಸ್ಥಾನದ ವತಿಯಿಂದ ಅನೇಕ ಶಾಲೆ, ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಇತರ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು ಅವುಗಳ ಖರ್ಚನ್ನು ದೇವಸ್ಥಾನದ ಅರ್ಪಣೆಯಿಂದ ಮಾಡಲಾಗುತ್ತದೆ. ಈ ದೇವಸ್ಥಾನದ ಅಂತರ್ಗತ ಇತರ ೩೭ ದೇವಸ್ಥಾನಗಳಿವೆ.

ಇ. ಇಲ್ಲಿ ಅನೇಕ ವಾರ್ಷಿಕ ಉತ್ಸವಗಳನ್ನು ಆಚರಿಸಲಾಗುತ್ತದೆ. ಈ ದೇವಸ್ಥಾನವು ಭಕ್ತರಿಗಾಗಿ ಪ್ರಾತಃಕಾಲ ೪.೩೦ ರಿಂದ ರಾತ್ರಿ ೮.೩೦ ರವರೆಗೆ ತೆರೆದಿರುತ್ತದೆ.

೪. ಸಂಪತ್ತನ್ನು ದೋಚಲು ಬ್ರಿಟಿಷರು ಶ್ರೀ ಪಳನಿ ಸಹಿತ ಇತರ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದು

೧೮೦೦ ರಲ್ಲಿ ಪಳನಿ ದೇವಸ್ಥಾನದ ಸಂಪತ್ತನ್ನು ಲಪಟಾಯಿಸಲು ಬ್ರಿಟಿಷರ ವಕ್ರದೃಷ್ಟಿ ಅದರ ಮೇಲೆ ಬಿದ್ದಿತು. ಈಸ್ಟ್ ಇಂಡಿಯಾ ಕಂಪನಿಯು ವಿವಿಧ ಕಾಯದೆಗಳನ್ನು ಮಾಡಿ ಪಳನಿ ದೇವಸ್ಥಾನದೊಂದಿಗೆ ಇತರ ದೇವಸ್ಥಾನಗಳನ್ನು ವಶಪಡಿಸಿಕೊಂಡಿತು. ಈ ದೇವಸ್ಥಾನದ ಸಂಪತ್ತನ್ನು ಹಿಂದೂ ಧರ್ಮೀಯರ ಮತಾಂತರಕ್ಕಾಗಿ ಬಳಸಲಾಯಿತು. ‘ಮದ್ರಾಸ್ ರೆಗ್ಯುಲೇಶನ್ ಆಕ್ಟ್ ೭/೧೮೧೭ ಈ ಕಾಯದೆಗನುಸಾರ ಮೊದಲು ದೇವಸ್ಥಾನವನ್ನು ವಶಕ್ಕೆ ಪಡೆಯಲಾಯಿತು. ಮುಂದೆ ವರ್ಷ ೧೮೪೦, ೧೯೨೫, ೧೯೩೫ ಮತ್ತು ೧೯೫೧ ಈ ವರ್ಷಗಳಲ್ಲಿ ಕಾಯದೆಯಲ್ಲಿ ಬದಲಾವಣೆಗಳನ್ನು ಮಾಡಿದರೂ ದೇವಸ್ಥಾನಗಳ ಆಡಳಿತದ ಚುಕ್ಕಾಣಿ ಬ್ರಿಟಿಷರಲ್ಲಿಯೇ ಇತ್ತು. ಕೆಲವು ದಿನಗಳ ನಂತರ ‘ಕ್ರೈಸ್ತರು ಹಿಂದೂ ದೇವಸ್ಥಾನಗಳನ್ನು ನಡೆಸುವುದು ತಪ್ಪಾಗಿದೆ’, ಎಂದು ಬ್ರಿಟಿಷರಿಗೆ ಅನಿಸಿ ಅವರು ಹಿಂದೂಗಳ ಮಠಗಳ ಮತ್ತು ದೇವಸ್ಥಾನಗಳ ಆಡಳಿತವನ್ನು ಪುನಃ ದೇವಸ್ಥಾನದ ವಿಶ್ವಸ್ಥರಿಗೆ ಕೊಟ್ಟರು. ಬ್ರಿಟಿಷರ ಈ ನಿರ್ಣಯವು ಮತಾಂಧ ಮುಸಲ್ಮಾನ ಮತ್ತು ಕ್ರೈಸ್ತರಿಗೆ ಒಪ್ಪಿಗೆಯಾಗಲಿಲ್ಲ. ಆದ್ದರಿಂದ ಬ್ರಿಟಿಷರು ಪುನಃ ಕಾಯದೆಯಲ್ಲಿ ತಿದ್ದುಪಡಿ ಮಾಡಿ ಹಿಂದೂಗಳ ಎಲ್ಲ ದೇವಸ್ಥಾನಗಳನ್ನು ಪುನಃ ವಶಕ್ಕೆ ತೆಗೆದುಕೊಂಡರು. ವರ್ಷ ೧೮೧೭ ರಲ್ಲಿ ದೇವಸ್ಥಾನಗಳನ್ನು ವಶಕ್ಕೆ ತೆಗೆದುಕೊಳ್ಳುವಾಗ ಬ್ರಿಟಿಷರು ‘ಈ ಕಾನೂನು ಕ್ರೈಸ್ತ ಮತ್ತು ಮುಸಲ್ಮಾನರಿಗೆ ಅನ್ವಯವಾಗುವುದಿಲ್ಲ’, ಎಂದು ಸ್ಪಷ್ಟವಾಗಿ ನಮೂದಿಸಿದ್ದರು.

೫. ಸ್ವತಂತ್ರ ಭಾರತದಲ್ಲಿ ಸರಕಾರಗಳು ಬ್ರಿಟಿಷರ ವಂಶಾಧಿಕಾರವನ್ನು ಮುಂದುವಸುವುದು

ಅ. ‘ಹಿಂದೂ ರಿಲಿಜಿಯಸ್ ಮತ್ತು ಚ್ಯಾರಿಟೆಬಲ್ ಎಂಡೋಮೆಂಟ್ ಆಕ್ಟ್’ ಈ ಕಾಯದೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಒಂದರ ಹಿಂದೆ ಒಂದರಂತೆ ಅನೇಕ ಮಠಗಳನ್ನು ಮತ್ತು ದೇವಸ್ಥಾನಗಳನ್ನು ಮೊದಲು ಬ್ರಿಟಿಷರು ಮತ್ತು ನಂತರ ಭಾರತ ಸರಕಾರವು ವಶಕ್ಕೆ ಪಡೆಯಿತು. ಅಂದಿನಿಂದ ದೇವಸ್ಥಾನಗಳ ಧನಸಂಪತ್ತು ಮತ್ತು ಆಭರಣಗಳನ್ನು ದೋಚುವ ಕಾರ್ಯವು ಇಂದಿನವರೆಗೆ ನಡೆದಿದೆ.

ಆ. ೧೯೫೧ ರಲ್ಲಿ ಯಾವ ಕಾಯದೆಗಳನ್ನು ಮಾಡಲಾಯಿತು, ಅವುಗಳಿಗೆ ಎಲ್ಲಕ್ಕಿಂತ ಮೊದಲು ಶಿರೂರು ಮಠವು ಉಚ್ಚ ನ್ಯಾಯಾಲಯದಲ್ಲಿ ಮತ್ತು ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲೆ ಸಗಿದರು. ನಂತರ ಸರ್ವೋಚ್ಚ ನ್ಯಾಯಾಲಯವು ೧೯೫೧ ರ ಆ ಕಾಯದೆಯಲ್ಲಿ ಅನೇಕ ಕಲಮ್‌ಗಳನ್ನು ರದ್ದು ಮಾಡಿತು.

ಇ. ೧೯೬೦ ರಲ್ಲಿ ಸರ್ವೋಚ್ಚ ನ್ಯಾಯಾಲಯದ ನಿಂದನೆಯ ನಂತರ ತಮಿಳುನಾಡು ಸರಕಾರವು ಒಂದು ಆಯೋಗವನ್ನು ನೇಮಿಸಿತು. ಈ ಆಯೋಗವು ಇವೆಲ್ಲವೂ ಸಾರ್ವಜನಿಕ ದೇವಸ್ಥಾನಗಳಿರುವುದರಿಂದ ಸರಕಾರಕ್ಕೆ ಅವುಗಳ ಹಣವನ್ನು ಪಡೆಯುವ, ದೇವಸ್ಥಾನಗಳನ್ನು ನಡೆಸುವ ಮತ್ತು ವಶಕ್ಕೆ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ಹೇಳಿತು. ಸರಕಾರವು ವಿವಿಧ ಪಿತೂರಿಗಳನ್ನು ಮಾಡಿ ಹಿಂದೂಗಳ ದೇವಸ್ಥಾನಗಳನ್ನು ಪುನಃ ಹಿಂದಿರುಗಿ ಪಡೆಯಿತು. ಈಗ ೪೪ ಸಾವಿರ ದೇವಸ್ಥಾನಗಳು ತಮಿಳುನಾಡು ಸರಕಾರದ ವಶದಲ್ಲಿದ್ದು ಈ ದೇವಸ್ಥಾನಗಳ ಹಣ, ಆಭರಣ ಮತ್ತು ದಾನದ ಭೂಮಿ ಇವುಗಳ ನಿಯಂತ್ರಣವು ಸರಕಾರದ ಬಳಿ ಇದೆ.

ಈ. ಇದರಲ್ಲಿ ೩೦೦ ದೇವಸ್ಥಾನಗಳ ಪ್ರತಿಯೊಂದು ದೇವಸ್ಥಾನದ ವಾರ್ಷಿಕ ಆದಾಯ ೧೦ ಲಕ್ಷರೂಪಾಯಿಗಳಷ್ಟಿದೆ. ೬೫೦ ದೇವಸ್ಥಾನಗಳ ಪ್ರತಿಯೊಂದು ದೇವಸ್ಥಾನದ ವಾರ್ಷಿಕ ಆದಾಯ ೨ ರಿಂದ ೧೦ ಲಕ್ಷ ರೂಪಾಯಿಗಳಷ್ಟಿದೆ. ನಾವು ಈ ದೇವಸ್ಥಾನಗಳಿಂದ ತಮಿಳುನಾಡು ಸರಕಾರಕ್ಕೆ ಎಷ್ಟು ಸಂಪತ್ತು ಸಿಗುತ್ತದೆ, ಎಂಬುದರ ಕಲ್ಪನೆಯನ್ನು ಮಾಡಬಹುದು.

ಉ. ತಮಿಳುನಾಡು ಸರಕಾರವು ಈ ದೇವಸ್ಥಾನಗಳಿಗಾಗಿ ‘ಎಂಡೋಮೆಂಟ್ ಡಿಪಾರ್ಟ್‌ಮೆಂಟ್’ ಎಂಬ ಸ್ವತಂತ್ರ ಖಾತೆಯನ್ನು ನಿರ್ಮಿಸಿ ಅದಕ್ಕೆ ಪ್ರತ್ಯೇಕ ಸಚಿವರನ್ನೂ ನೇಮಿಸಿದೆ. ಈ ಸರಕಾರವು ಹಿಂದೂ ದೇವಸ್ಥಾನಗಳ ಕೋಟ್ಯವಧಿ ರೂಪಾಯಿಗಳ ಸಂಪತ್ತನ್ನು ತೆಗೆದುಕೊಳ್ಳುತ್ತದೆ, ಆದರೆ ಆ ಹಣದಿಂದ ಭಕ್ತರಿಗೆ ಯಾವ ಸೌಲಭ್ಯಗಳೂ ದೊರಕುವುದಿಲ್ಲ. ಈ ಅನಾನುಕೂಲತೆಯ ಬಗ್ಗೆ ದೇಶ-ವಿದೇಶಗಳ ಅನೇಕ ಭಕ್ತರು ‘ಅಂತರ್ಜಾಲ’ದಲ್ಲಿ ತಕರಾರನ್ನು ನೋಂದಾಯಿಸಿದ್ದಾರೆ.

೬. ನ್ಯಾಯಾಲಯದಿಂದ ಹಿಂದೂಗಳಿಗೆ ದೊರಕಿದ ನ್ಯಾಯ

ಅ. ಇತ್ತೀಚೆಗಷ್ಟೇ ಆಗಸ್ಟ್ ೨೦೨೦ ರಲ್ಲಿ ಪಳನಿ ದೇವಸ್ಥಾನದ ‘ಹೌಸಕಿಪಿಂಗ್’ನ ಗುತ್ತಿಗೆಯನ್ನು ನೀಡಲು ಟೆಂಡರ್‌ಅನ್ನು ಕರೆಯಲಾಯಿತು. ರಮೇಶ ಇವರು ಇದಕ್ಕೆ ಸವಾಲು ಹಾಕಿದರು. ಈ ಅರ್ಜಿಗೆ ವಿಶ್ವಸ್ಥ ಮಂಡಳಿ ಮತ್ತು ಸರಕಾರದಿಂದ ವಿರೋಧವಾಯಿತು, ವಿವಿಧ ಕಾರಣಗಳನ್ನು ಹೇಳಲಾಯಿತು. ಅರ್ಹತೆಯ ಬಗ್ಗೆ, ಕಾರ್ಯಕಾರಿ ಅಧಿಕಾರಿ ಮತ್ತು ಇತರ ಪದಾಧಿಕಾರಿಗಳನ್ನು ಕಾಯದೆಗಳ ಅಂತರ್ಗತ ನೇಮಿಸುವ ಅಧಿಕಾರ ಆಯುಕ್ತರಿಗೆ ಇದೆ ಎಂದು ಹೇಳಿದರು. ಆಯುಕ್ತರು ೧ ಅಥವಾ ೩ ವರ್ಷಗಳಿಗಾಗಿ ವ್ಯಕ್ತಿಯನ್ನು ನೇಮಿಸಿದ್ದಲ್ಲಿ ಮತ್ತು ಆ ವ್ಯಕ್ತಿಯು ಆರೋಗ್ಯವಂತನಾಗಿದ್ದರೆ, ಅದೇ ವ್ಯಕ್ತಿಗೆ ಮುಂದಿನ ಕೆಲಸಗಳನ್ನು ಕೊಡಬಹುದು, ಎಂದೂ ಹೇಳಿದರು.

ಆ. ನ್ಯಾಯಾಲಯವು ಸರಕಾರ ಮತ್ತು ವಿಶ್ವಸ್ಥ ಮಂಡಳಿಯ ವಿರೋಧವನ್ನು ಒಪ್ಪಿಕೊಳ್ಳದೇ ರಮೇಶ ಇವರ ಅರ್ಜಿಯನ್ನು ಸ್ವೀಕರಿಸಿತು ಮತ್ತು ಕಾರ್ಯಕಾರಿ ಅಧಿಕಾರಿಗಳು ೨೦ ಆಗಸ್ಟ್ ರಂದು ಹೊರಡಿಸಿದ ‘ಹೌಸಕೀಪಿಂಗ್’ನ ಗುತ್ತಿಗೆಯನ್ನು ರದ್ದು ಮಾಡಿತು. ಅರ್ಜಿಯ ಸಮಯದಲ್ಲಿ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ಕೆಲವು ಉದಾಹರಣೆಗಳ ಸಂದರ್ಭಗಳನ್ನು ನೀಡಿ, ‘What cannot done directly, can not be allowed to be done indirectly’. ಇದಕ್ಕನುಸಾರ ನೇಮಿಸಲಾದ ಸದಸ್ಯರ ಕಾರ್ಯಕಾಲವು ಅನಿಶ್ಚಿತ ಸಮಯದವರೆಗೆ ಇರಲು ಸಾಧ್ಯವಿಲ್ಲ; ಆದ್ದರಿಂದ ೨೦೧೧ ರಲ್ಲಿ ನೇಮಿಸಲಾದ ಸದಸ್ಯರು ೯ ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಯನಿರತರಾಗಿರು ವುದು, ೧೯೫೧ ರ ಕಾಯದೆಯ ಉಲ್ಲಂಘನೆಯಾಗಿದೆ.’ ಆದ್ದರಿಂದ ನ್ಯಾಯಾಲಯವು ಕಟುವಾಗಿ ಛೀಮಾರಿ ಹಾಕಿತು.

೭. ಉಚ್ಚ ನ್ಯಾಯಾಲಯದ ನಿರ್ಣಯದಿಂದ ಹಿಂದೂಗಳು ಏನು ಪಾಠ ಕಲಿಯಬೇಕು ?

ಇಲ್ಲಿ ಗಮನದಲ್ಲಿಡುವ ಮಹತ್ವದ ವಿಷಯವೆಂದರೆ, ಹಿಂದೂಗಳಿಗೆ ತಮ್ಮ ದೇವಸ್ಥಾನಗಳು ಮತ್ತು ದೇವತೆಗಳ ಬಗ್ಗೆ ಆತ್ಮೀಯತೆ ಇಲ್ಲ. ಅವರು ಇದರ ಬಗ್ಗೆ ಉದಾಸೀನರಾಗಿರುತ್ತಾರೆ. ಆದ್ದರಿಂದ ದಶಕಾನುದಶಕಗಳಿಂದಲ್ಲ, ಅನೇಕ ಶತಕಗಳಿಂದ ಭಾರತದ ಹಿಂದೂಗಳ ದೇವಸ್ಥಾನಗಳನ್ನು ಆಯಾ ಆಡಳಿತಗಾರರು ವಶಕ್ಕೆ ತೆಗೆದುಕೊಳ್ಳುತ್ತಾ ಹೋದರು ಮತ್ತು ಅವುಗಳಲ್ಲಿ ಎಲ್ಲ ಹಣವನ್ನು ಹಿಂದೂಹಿತದ ಹೊರತು ಇತರ ಕಾರ್ಯಗಳಿಗಾಗಿ ಉಪಯೋಗಿಸಲಾಯಿತು. ಮತಾಂಧ ಮುಸಲ್ಮಾನರು, ಧೂರ್ತ ಕ್ರೈಸ್ತರು ತಮ್ಮ ಹಕ್ಕುಗಳ ಮೇಲೆ ಸಂಕಟ ಬರುವ ಮೊದಲೇ ಯಾವಾಗಲೂ ಸರಕಾರದ ವಿರುದ್ಧ ಮತ್ತು ತಮ್ಮ ಮೇಲಾಗುವ ತಥಾಕಥಿತ ಅನ್ಯಾಯದ ವಿರುದ್ಧ ಸಾರಿ ಸಾರಿ ಹೇಳುತ್ತಿರುತ್ತಾರೆ ಮತ್ತು ಸರಕಾರವನ್ನು ವಿವಿಧ ಕಾರಣಗಳಿಂದ ಅಡಚಣೆಯಲ್ಲಿ ಸಿಲುಕಿಸಿ ತಮ್ಮ ದುಷ್ಟ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಿಂದೂಗಳಿಗೆ ಸ್ವಲ್ಪವಾದರೂ ಆಶಾಕಿರಣವು ಸಿಕ್ಕಿತು. ಇತ್ತೀಚೆಗಷ್ಟೇ ನ್ಯಾಯಮೂರ್ತಿ ಸ್ವಾಮಿನಾಥನ್ ಇವರು ನೀಡಿದ ಈ ತೀರ್ಪನ್ನು ಮತ್ತು ಇತರ ತೀರ್ಪುಗಳನ್ನು ನೋಡಿದರೆ ‘ಪ್ರಯತ್ನ ಮಾಡಿದರೆ ಯಶಸ್ಸು ಸಿಗುತ್ತದೆ’, ಎಂದು ಗಮನಕ್ಕೆ ಬರುತ್ತದೆ. ‘ಈ ತೀರ್ಪು ಹಿಂದೂಗಳಿಗಾಗಿ ಮಾರ್ಗದರ್ಶಕವಾಗುವುದು ಮತ್ತು ಎಲ್ಲ ದೇವಸ್ಥಾನಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ಹಿಂದೂಗಳು ಸಂಘಟಿತರಾಗಿ ಕಾನೂನು ಮಾರ್ಗದಿಂದ ಪ್ರಯತ್ನ ಮಾಡುವರು’, ಎಂಬ ಆಸೆಯನ್ನು ಇಟ್ಟುಕೊಳ್ಳೋಣ.

|| ಶ್ರೀಕೃಷ್ಣಾರ್ಪಣಮಸ್ತು ||

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ. (ಸೆಪ್ಟೆಂಬರ್ ೨೦೨೦) – (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ. (ಸೆಪ್ಟೆಂಬರ್ ೨೦೨೦)