ಸಾಧಕರೇ, ನಾಮಜಪಾದಿ ಉಪಾಯಗಳ ವಿಷಯದಲ್ಲಿ ಇದನ್ನು ಗಮನಿಸಿರಿ !

ಕೆಲವು ಸಾಧಕರು ನಾಮಜಪದಲ್ಲಿ ಮನಸ್ಸನ್ನು ಸ್ಥಿರಗೊಳಿಸಲು ಸಂತರ ಭಜನೆ ಕೇಳುತ್ತಾ ನಾಮಜಪ ಮಾಡುತ್ತಾರೆ. ಇದು ಸರಿಯಿದೆ; ಆದರೆ ಭಜನೆ ಕೇಳುತ್ತಾ ನಾಮಜಪ ಮಾಡುವಾಗ ಭಜನೆಯತ್ತ ಗಮನ ಹೋಗುವುದರಿಂದ ನಾಮಜಪ ಏಕಾಗ್ರತೆಯಿಂದ ಆಗುವುದಿಲ್ಲ, ಎಂಬುದನ್ನೂ ಗಮನದಲ್ಲಿಡಬೇಕು.

ಮಳೆಯಲ್ಲಿ ತೊಯ್ದ ಸಾಧಕನಿಗೆ ಸಭಾಸ್ಥಳಕ್ಕೆ ಹೋಗಲು ತಮ್ಮ ಪ್ಯಾಂಟು ಕೊಡಲು ಬರುವುದು

ನನ್ನನ್ನು ನೋಡಿದ ಕೂಡಲೇ ಪರಾತ್ಪರ ಗುರು ಡಾಕ್ಟರರು ತಕ್ಷಣ ಎದ್ದರು ಮತ್ತು ನನ್ನ ಪಕ್ಕದಲ್ಲಿ ನಿಂತು ಕೈಯಿಂದ ಅವರ ಮತ್ತು ನನ್ನ ಎತ್ತರವನ್ನು ನೋಡುತ್ತಿದ್ದರು. ಅವರು ಏನು ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿಯುತ್ತಿರಲಿಲ್ಲ. ನಂತರ ಅವರು, “ಈ ಪ್ಯಾಂಟು ನಿಮಗೆ ತುಂಬಾ ಗಿಡ್ಡವಾಗುತ್ತಿದೆ. ನನ್ನ ಪ್ಯಾಂಟಿನ ಎತ್ತರ ನಿಮಗೆ ಸರಿಯಾಗಬಹುದು, ನಾನು ನಿಮಗೆ ಹಾಕಿಕೊಳ್ಳಲು ನನ್ನ ಪ್ಯಾಂಟನ್ನು ಕೊಡುತ್ತೇನೆ. 

ಗುರುದೇವರು ಸಾಧಕರ ದಾರಿ ಕಾಯುತ್ತ ರಾತ್ರಿ ಎರಡೂವರೆ ಗಂಟೆಯವರೆಗೆ ಎಚ್ಚರವಿದ್ದು ಹೊರಗಿನಿಂದ ಬಂದ ಸಾಧಕರಿಗೆ ತಾವೇ ಊಟ ಬಡಿಸುವುದು

ರಾತ್ರಿ ಟ್ಯಾಕ್ಸಿಯಿಂದ ಇಳಿದ ನಂತರ ನಾವು ನೋಡಿದರೆ, ಗುರುದೇವರ ಕೋಣೆಯಲ್ಲಿ ದೀಪ ‘ಆನ್ ಇತ್ತು ಮತ್ತು ಗುರುದೇವರು ನಮ್ಮ ದಾರಿಯನ್ನು ಕಾಯುತ್ತಾ ಎಚ್ಚರವಿದ್ದರು. ನಾವು ಲಿಫ್ಟ್‌ನಿಂದ ಮೇಲೆ ಬಂದಾಗ, ಅವರು ಲಿಫ್ಟ್‌ನ ಬಳಿ ಬಂದು ನಿಂತಿದ್ದರು. ಅವರು ನಮಗೆ, “ಕೈ-ಕಾಲುಗಳನ್ನು ತೊಳೆದುಕೊಂಡು ಊಟಕ್ಕೆ ಬನ್ನಿರಿ, ಎಂದು ಹೇಳಿದರು.

ಸಾಧಕರ ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಪರಾತ್ಪರ ಗುರು ಡಾ. ಆಠವಲೆಯವರು ಹಗಲುರಾತ್ರಿ ಮಾಡಿದ ದಣಿವರಿಯದ ಪರಿಶ್ರಮ !

ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುವ ಕೆಲವು ಸಾಧಕರಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿದೆ. ಸಾಧಕರಿಗಾಗುವ ಕೆಟ್ಟ ಶಕ್ತಿಗಳ ತೊಂದರೆಗಳು ಸೂಕ್ಷ್ಮದಲ್ಲಿ ನಡೆಯುವ ದೇವಾಸುರ ಯುದ್ಧದ ಲಕ್ಷಣವಾಗಿದೆ.

ಕಾಯಿಲೆಯಿಂದ ಬಳಲುವ ಸಾಧಕರ ಬಗ್ಗೆ ಎಲ್ಲ ರೀತಿಯಿಂದ ಕಾಳಜಿ ವಹಿಸುವ ಭಕ್ತವತ್ಸಲ !

‘ತಮಗೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಿಲ್ಲದಿದ್ದರೂ, ಕಾಯಿಲೆಯಿಂದ ಬಳಲುತ್ತಿರುವ ಓರ್ವ ಸಾಧಕನನ್ನು ಭೇಟಿಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಮೆಟ್ಟಿಲುಗಳನ್ನು ಹತ್ತಿ ಅವನನ್ನು ಭೇಟಿಯಾಗಲು ಮೇಲೆ ಹೋಗುತ್ತಾರೆ.

ಸಾಧಕಿಯ ಪ್ರಾಣವನ್ನು ರಕ್ಷಿಸಲು ತಮ್ಮ ಆಯುಷ್ಯವನ್ನು ಅವಳಿಗೆ ಕೊಡುವ ಇಚ್ಛೆಯನ್ನು ವ್ಯಕ್ತಪಡಿಸುವುದು

ಸನಾತನದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕಿ ಕು. ದೀಪಾಲಿ ಮತಕರ ಇವರ ಆರೋಗ್ಯವು ಅಕ್ಟೋಬರ್ ೨೦೧೬ ರಲ್ಲಿ ಬಹಳ ಗಂಭೀರವಾಗಿತ್ತು. ಅವರ ಮೇಲಿನ ಈ ಮಾರಣಾಂತಿಕ ಸಂಕಟ ದೂರವಾಗಬೇಕೆಂದು ಪರಾತ್ಪರ ಗುರು ಡಾಕ್ಟರರು ಸಂತರಿಗೆ ನಾಮಜಪ ಮಾಡಲು ಹೇಳಿದ್ದರು.

ಪರಾತ್ಪರ ಗುರು ಡಾ. ಆಠವಲೆ ಹಾಗೂ ಸಾಧಕರಲ್ಲಿನ ಅನ್ಯೋನ್ಯ ಸಂಬಂಧ !

ಒಂದು ಪ್ರಸಂಗದಲ್ಲಿ ಓರ್ವ ಸಾಧಕಿಯು ತಾನು ಕಂಡ ಒಂದು ಕನಸಿನ ಬಗ್ಗೆ ಪರಾತ್ಪರ ಗುರು ಡಾಕ್ಟರರಿಗೆ ಹೇಳುತ್ತಿದ್ದಳು. ಆ ಕನಸಿನಲ್ಲಿ ಅವಳಿಗೆ ಪರಾತ್ಪರ ಗುರು ಡಾಕ್ಟರರು ಅವಳನ್ನು ಬಿಟ್ಟು ಹೋಗಿದ್ದು ಕಾಣಿಸಿತು. ಅವಳು ಆ ವಾಕ್ಯವನ್ನು ಪೂರ್ಣ ಹೇಳುವ ಮೊದಲೇ ಪರಾತ್ಪರ ಗುರು ಡಾಕ್ಟರರು, “ನಾನು ನನ್ನ ಸಾಧಕರನ್ನು ಎಂದಿಗೂ ಎಲ್ಲಿಯೂ ಬಿಟ್ಟು ಹೋಗುವುದಿಲ್ಲ, ಎಂದು ಹೇಳಿದರು.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿಸಲಾಗುವ ವಿಶೇಷಾಂಕದ ನಿರ್ವಹಣೆ ಮತ್ತು ಒಳ್ಳೆಯ ರೀತಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ !

ಈ ವಿಶೇಷಾಂಕದಲ್ಲಿ ಸಾಧಕರಿಗೆ ಸಹಜವಾಗಿ ಭಾವಜಾಗೃತಿ ಆಗುವ ಪರಾತ್ಪರ ಗುರುದೇವರ ಹಾಗೂ ಸಂತರ ವಿಶೇಷ ಛಾಯಾಚಿತ್ರಗಳು ಇರುವುದರಿಂದ ಅದನ್ನು ಆವರಣ ತೆಗೆಯುವುದು ಇತ್ಯಾದಿಗಳಿಗಾಗಿ ಉಪಯೋಗಿಸಬೇಡಿ.

ಸಾಧಕರನ್ನು ವೈಕುಂಠಕ್ಕೆ ಕರೆದೊಯ್ಯಲು ಇಚ್ಛಿಸುವ ಪ.ಪೂ. ಡಾಕ್ಟರ್ !

ಸಂತ ತುಕಾರಾಮ ಮಹಾರಾಜರು ಸದೇಹ ವೈಕುಂಠಕ್ಕೆ ಹೋದ ಏಕೈಕ ಸಂತಶ್ರೇಷ್ಠರಾಗಿದ್ದಾರೆ. ಅವರನ್ನು ಕರೆದೊಯ್ಯಲು ಪುಷ್ಪಕವಿಮಾನ ಬಂದಿತ್ತು. ಪ.ಪೂ. ಡಾಕ್ಟರರು ಹೇಳುತ್ತಾರೆ, ‘ಒಂದು ವೇಳೆ ನನ್ನನ್ನು ವೈಕುಂಠಕ್ಕೆ ಕರೆದೊಯ್ಯಲು ದೇವರು ಪುಷ್ಪಕವಿಮಾನವನ್ನು ಕಳುಹಿಸಿದರೆ, ನಾನು ದೇವರಿಗೆ, ‘ಸನಾತನದ ಎಲ್ಲ ಸಾಧಕರನ್ನು ನನ್ನೊಂದಿಗೆ ವೈಕುಂಠಕ್ಕೆ ಕರೆದುಕೊಂಡು ಹೋಗುವುದಿದೆ.