‘ಪರಾತ್ಪರ ಗುರು ಡಾಕ್ಟರರು ಮೊದಲು ಬೇರೆ ಬೇರೆ ಜಿಲ್ಲೆಗಳಲ್ಲಿ ‘ಬಹಿರಂಗ ಸಭೆಗಳನ್ನು ತೆಗೆದುಕೊಳ್ಳುತ್ತಿದ್ದರು. ಜತ್ (ಸಾಂಗ್ಲಿ ಜಿಲ್ಲೆ) ನಲ್ಲಿನ ಸಭೆಯ ಒಂದು ಗಂಟೆ ಮೊದಲು ಬಿರುಗಾಳಿ ಮತ್ತು ಮಳೆ ಪ್ರಾರಂಭವಾದುದರಿಂದ ಮೈದಾನದ ಬದಲು ಶಾಲೆಯ ಸಭಾಗೃಹದಲ್ಲಿ ಸಭೆಯನ್ನು ತೆಗೆದುಕೊಳ್ಳುವುದೆಂದು ನಿಶ್ಚಯಿಸಲಾಯಿತು. ಆದುದರಿಂದ ವೇದಿಕೆ, ಬಟ್ಟೆಯ ಫಲಕಗಳು ಮತ್ತು ಕನಾತು ಇತ್ಯಾದಿಗಳನ್ನು ತೆಗೆಯುವಾಗ ನಾವು ೮-೧೦ ಸಾಧಕರು ಮಳೆಯಲ್ಲಿ ಸಂಪೂರ್ಣ ಒದ್ದೆಯಾದೆವು. ಶಾಲೆಯ ಸಭಾಗೃಹದಲ್ಲಿ ಸಭೆ ಪ್ರಾರಂಭವಾಗುವ ಮೊದಲು ಬಟ್ಟೆಗಳನ್ನು ಬದಲಾಯಿಸಲು ನಾವು ಶ್ರೀ. ಹೋಮಕರಕಾಕಾರವರ ಮನೆಗೆ ಹೋಗಿದ್ದೆವು. ಅವರ ಎತ್ತರ ನನಗಿಂತ ಕಡಿಮೆ ಇರುವುದರಿಂದ ಅವರು ಕೊಟ್ಟಿರುವ ಪ್ಯಾಂಟು ನನಗೆ ತುಂಬಾ ಗಿಡ್ಡವಾಗುತ್ತಿತ್ತು. ಅಲ್ಲಿ ಉಪಸ್ಥಿತರಿದ್ದ ಇತರ ಸಾಧಕರಿಗೆ ಅದು ಗಮನಕ್ಕೆ ಬರಲಿಲ್ಲ. ಆ ಪ್ಯಾಂಟನ್ನು ಹಾಕಿಕೊಂಡು ನಾನು ಪರಾತ್ಪರ ಗುರು ಡಾಕ್ಟರರ ಕೋಣೆಗೆ ಹೋದೆನು. ನನ್ನನ್ನು ನೋಡಿದ ಕೂಡಲೇ ಪರಾತ್ಪರ ಗುರು ಡಾಕ್ಟರರು ತಕ್ಷಣ ಎದ್ದರು ಮತ್ತು ನನ್ನ ಪಕ್ಕದಲ್ಲಿ ನಿಂತು ಕೈಯಿಂದ ಅವರ ಮತ್ತು ನನ್ನ ಎತ್ತರವನ್ನು ನೋಡುತ್ತಿದ್ದರು. ಅವರು ಏನು ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿಯುತ್ತಿರಲಿಲ್ಲ. ನಂತರ ಅವರು, “ಈ ಪ್ಯಾಂಟು ನಿಮಗೆ ತುಂಬಾ ಗಿಡ್ಡವಾಗುತ್ತಿದೆ. ನನ್ನ ಪ್ಯಾಂಟಿನ ಎತ್ತರ ನಿಮಗೆ ಸರಿಯಾಗಬಹುದು, ನಾನು ನಿಮಗೆ ಹಾಕಿಕೊಳ್ಳಲು ನನ್ನ ಪ್ಯಾಂಟನ್ನು ಕೊಡುತ್ತೇನೆ. ಇಂತಹ ಚಿಕ್ಕ ಪ್ಯಾಂಟು ಹಾಕಿಕೊಂಡು ಸಭೆಯ ಸ್ಥಳಕ್ಕೆ ಹೋಗ ಬೇಡಿ ಎಂದರು. ಆಗ ಅಲ್ಲಿ ಅವರ ವಾಹನವನ್ನು ನಡೆಸುವ ಸೇವೆ ಮಾಡುವ ಸಾಧಕ ಶ್ರೀ. ಪ್ರಮೋದ ಬೆಂದ್ರೆಯವರು ತಕ್ಷಣ, “ಬೇಡ, ಪರಾತ್ಪರ ಗುರು ಡಾಕ್ಟರರೇ ! ನಾನು ನನ್ನ ಪ್ಯಾಂಟನ್ನು ಕೊಡುತ್ತೇನೆ, ಅವರಿಗೆ ಸರಿಯಾಗಬಹುದು, ಎಂದರು. ಅದರಂತೆ ನಾನು ಶ್ರೀ. ಬೆಂದ್ರೆಯವರ ಪ್ಯಾಂಟನ್ನು ಹಾಕಿಕೊಂಡೆನು. ಈ ಚಿಕ್ಕ ಪ್ರಸಂಗದಿಂದ ‘ಪರಾತ್ಪರ ಗುರು ಡಾಕ್ಟರರು ಇತರರ ಬಗ್ಗೆ ಎಷ್ಟು ಆಳವಾಗಿ ವಿಚಾರ ಮಾಡುತ್ತಾರೆ, ಎಂಬುದು ಪ್ರತ್ಯಕ್ಷ ಅನುಭವಿಸಿದೆ. – ಡಾ. ಚಾರುದತ್ತ ಪಿಂಗಳೆ (ಈಗಿನ ಸದ್ಗುರು (ಡಾ.) ಚಾರುದತ್ತ ಪಿಂಗಳೆ), ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ (೫.೪.೨೦೧೭)