ಅಲೀಗಡ (ಉತ್ತರಪ್ರದೇಶ) – ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿನ ಸಂಭಲ, ಅಲಿಗಡ್ ಮುಂತಾದ ಜಿಲ್ಲೆಗಳಲ್ಲಿ ಮಸೀದಿಗಳನ್ನು ಟಾರ್ಪಾಲಿನ್ ನಿಂದ ಮುಚ್ಚಲಾಗಿದೆ. ಮಸೀದಿಯ ಮೇಲೆ ಬಣ್ಣ ಬೀಳಬಾರದು, ಇದೆ ಇದರ ಹಿಂದಿನ ಉದ್ದೇಶವಾಗಿದೆ. ಸಂಭಲ್, ಶಹಜಹಂಪುರ, ಅಲಿಗಡ್ ನಂತಹ ಸೂಕ್ಷ್ಮ ಜಿಲ್ಲೆಗಳಲ್ಲಿ ವಿಶೇಷ ದಕ್ಷತೆ ವಹಿಸಲಾಗಿದೆ. ಶಹಜಹಂಪುರದಲ್ಲಿ ಹೋಳಿಯ ದಿನದಂದು ಲಾಟ್ ಸಾಹೇಬರ ಮೆರವಣಿಗೆ ನಡೆಯುತ್ತದೆ. ಅದಕ್ಕಾಗಿ ನಗರದಲ್ಲಿನ ಸುಮಾರು ೬೭ ಮಸೀದಿಗಳು ಮತ್ತು ದರ್ಗಾಗಳನ್ನು ಟಾರ್ಪಾಲಿನ್ ನಿಂದ ಮುಚ್ಚಲಾಗಿದೆ.
ಲಾಟ್ ಸಾಹೇಬರ ಮೆರವಣಿಗೆ ಅಂದರೆ ಏನು ?
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಶಹಜಹಾಂಪುರದಲ್ಲಿ ಲಾಟ ಸಾಹೇಬರ ಮೆರವಣಿಗೆಯ ಪರಂಪರೆ ಆರಂಭವಾಯಿತು. ಇದರಲ್ಲಿ ಬ್ರಿಟಿಷರ ಪ್ರತಿಕ ಎಂದು ಓರ್ವ ವ್ಯಕ್ತಿಯನ್ನು ಲಾಟ್ ಸಾಹೇಬನಂತೆ ಅಲಂಕರಿಸುತ್ತಾರೆ ಮತ್ತು ಎಮ್ಮೆಗಾಡಿಯಲ್ಲಿ ತಿರುಗಾಡಿಸುತ್ತಾರೆ. ಆ ಸಮಯದಲ್ಲಿ ಅವರಿಗೆ ಪೊರಕೆಯಿಂದ ಹೊಡೆಯುತ್ತಾರೆ. ಜೊತೆಗೆ ಬೂಟು ಮತ್ತು ಚಪ್ಪಲಿಯ ಹಾರ ಹಾಕುತ್ತಾರೆ. ಯಾವ ವ್ಯಕ್ತಿಗೆ ಲಾಟ ಸಾಹೇಬ ಆಗುವನು ಅವನ ಒಪ್ಪಿಗೆಯ ಮೇರೆಗೆ ಮೆರವಣಿಗೆಯಲ್ಲಿ ಬರುತ್ತಾನೆ. ಅದಕ್ಕಾಗಿ ಅವನಿಗೆ ೫೦ ಸಾವಿರ ರೂಪಾಯಿ ನೀಡುತ್ತಾರೆ.
ಸಂಪಾದಕೀಯ ನಿಲುವು
|