೧. ನಾಮಜಪಾದಿ ಉಪಾಯದ ಸಮಯದಲ್ಲಿ ನಿದ್ರೆ ಮಾಡದೆ ಪ್ರಯತ್ನಪಟ್ಟು ನಾಮಜಪ ಮಾಡಿರಿ !
‘ಕೆಲವು ಸಾಧಕರಿಗೆ ನಾಮಜಪಾದಿ ಉಪಾಯ ಮಾಡುವಾಗ ನಿದ್ರೆ ಬರುತ್ತದೆ. ನಾಮಜಪದಲ್ಲಿ ಅಡಚಣೆ ನಿರ್ಮಾಣ ಮಾಡಲು ಕೆಟ್ಟ ಶಕ್ತಿಗಳು ಕೆಲವೊಮ್ಮೆ ಕೆಟ್ಟ ಶಕ್ತಿಗಳ ತೊಂದರೆ ಇರುವ ಸಾಧಕರಿಗೆ ನಿದ್ರೆ ಬರುವಂತೆ ಮಾಡುತ್ತವೆ. ಕೆಲವು ಸಾಧಕರಿಗೆ ಆಯಾಸವಾಗಿರುವುದರಿಂದಲೂ ನಾಮಜಪದ ಸಮಯದಲ್ಲಿ ನಿದ್ರೆ ಬರುತ್ತದೆ. ನಿದ್ರೆ ಬರುತ್ತಿದ್ದರೂ ನಾಮಜಪ-ಉಪಾಯಗಳ ಲಾಭವಾಗಬೇಕಾದರೆ ಪ್ರಯತ್ನಪೂರ್ವಕ ನಾಮಜಪ ಮಾಡಬೇಕು. ಸಾಮಾನ್ಯವಾಗಿ ನಮಗೆ ನಿದ್ರೆ ಬರುವ ಸಮಯವನ್ನು ತಪ್ಪಿಸಿಯೇ ನಾಮಜಪಕ್ಕೆ ಕುಳಿತು ಕೊಳ್ಳಬೇಕು. ನಾಮಜಪ-ಉಪಾಯ ಮಾಡುವಾಗ ಸಾಧಕರಿಗೆ ನಿದ್ರೆ ಬರುತ್ತಿದ್ದರೆ ಅವರು ತಮ್ಮ ಕಣ್ಣುಗಳಿಗೆ ನೀರನ್ನು ಚಿಮುಕಿಸುವುದು, ಸಂತರ ಭಜನೆ ಕೇಳುತ್ತಾ ನಾಮಜಪ ಮಾಡುವುದು, ನಿಂತುಕೊಂಡು ನಾಮಜಪ ಮಾಡುವುದು, ಸಮೀಪದ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪ್ರದಕ್ಷಿಣೆಯನ್ನು ಹಾಕುತ್ತಾ ನಾಮಜಪ ಮಾಡುವುದು ಇತ್ಯಾದಿ ಉಪಾಯಗಳನ್ನು ಅವಲಂಬಿಸಬೇಕು.
೨. ಭಜನೆ ಕೇಳುತ್ತಾ ನಾಮಜಪ ಮಾಡುವುದಕ್ಕಿಂತ ಕೇವಲ ನಾಮಜಪವನ್ನು ಏಕಾಗ್ರತೆಯಿಂದ ಮಾಡಲು ಪ್ರಯತ್ನಿಸಿರಿ !
ಕೆಲವು ಸಾಧಕರು ನಾಮಜಪದಲ್ಲಿ ಮನಸ್ಸನ್ನು ಸ್ಥಿರಗೊಳಿಸಲು ಸಂತರ ಭಜನೆ ಕೇಳುತ್ತಾ ನಾಮಜಪ ಮಾಡುತ್ತಾರೆ. ಇದು ಸರಿಯಿದೆ; ಆದರೆ ಭಜನೆ ಕೇಳುತ್ತಾ ನಾಮಜಪ ಮಾಡುವಾಗ ಭಜನೆಯತ್ತ ಗಮನ ಹೋಗುವುದರಿಂದ ನಾಮಜಪ ಏಕಾಗ್ರತೆಯಿಂದ ಆಗುವುದಿಲ್ಲ, ಎಂಬುದನ್ನೂ ಗಮನದಲ್ಲಿಡಬೇಕು. ನಾಮಜಪ ಏಕಾಗ್ರತೆಯಿಂದಾದಲ್ಲಿ ಅದು ಅಂತಃಕರಣಪೂರ್ವಕವಾಗಿ ಆಗಿ ಅದರಿಂದ ಹೆಚ್ಚು ಲಾಭ ವಾಗುತ್ತದೆ. ಹಾಗಾಗಿ ಭಜನೆ ಕೇಳುತ್ತಾ ನಾಮಜಪಿಸುವುದಕ್ಕಿಂತ ನಾಮಜಪವನ್ನೇ ಏಕಾಗ್ರತೆಯಿಂದ ಮಾಡಲು ಪ್ರಯತ್ನಿಸಬೇಕು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |