ಅಡಖಳ್ (ರತ್ನಗಿರಿ ಜಿಲ್ಲೆ) ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮತಾಂಧ ಮುಸ್ಲಿಮರಿಂದ ಹಿಂದೂಗಳ ಮೇಲೆ ಕಲ್ಲು ತೂರಾಟ!

  • ಹಿಂದೂಗಳ ಪ್ರತ್ಯುತ್ತರ!

  • ಕಲ್ಲು ತೂರಾಟದಲ್ಲಿ ಒಟ್ಟು 14 ಮಂದಿ ಗಾಯಗೊಂಡಿದ್ದು, 8 ವಾಹನಗಳು ಧ್ವಂಸ!

ದಾಪೋಲಿ (ರತ್ನಗಿರಿ ಜಿಲ್ಲೆ) – ಹೋಳಿ ಹಬ್ಬದ ಮುನ್ನಾದಿನ ತಾಲೂಕಿನ ಅಡಖಳ್ ತರಿಬಂದರ್‌ನಲ್ಲಿ ಜೆಟ್ಟಿ ಮೇಲೆ ಕುಳಿತುಕೊಳ್ಳುವ ಸ್ಥಳ ಮತ್ತು ‘ಡಂಪರ್’ ನಿಲ್ಲಿಸಿದ್ದಕ್ಕೆ ಸ್ಥಳೀಯ ಮೊಹಲ್ಲಾದ ಮುಸ್ಲಿಮರು ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಂದೂಗಳು ಸ್ವಯಂರಕ್ಷಣೆಗಾಗಿ ಕಲ್ಲು ತೂರಾಟ ನಡೆಸಿ ಪ್ರತಿರೋಧ ಒಡ್ಡಿದ್ದಾರೆ. ಇದರಿಂದ ಇಲ್ಲಿ ಭಾರಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಈ ಘಟನೆ ಮಾರ್ಚ್ 12ರ ಸಂಜೆ 6.45ರ ಸುಮಾರಿಗೆ ನಡೆದಿದೆ. ಗಲಾಟೆಯಲ್ಲಿ 14 ಮಂದಿ ಗಾಯಗೊಂಡಿದ್ದು, 8 ವಾಹನಗಳು ಧ್ವಂಸಗೊಂಡಿವೆ. ಗಾಯಾಳುಗಳಿಗೆ ದಾಪೋಲಿಯ ಉಪಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಎರಡೂ ಗುಂಪುಗಳು ಪರಸ್ಪರ ವಿರುದ್ಧ ದೂರು ದಾಖಲಿಸಿವೆ. ಪಾಜಪಂಢರಿ ಮತ್ತು ಅಡಖಳ್ ಗ್ರಾಮಗಳಲ್ಲಿ ರಾತ್ರಿಯಿಡೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೊಲೀಸರು ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

1. ಲಭ್ಯವಿರುವ ಮಾಹಿತಿಯ ಪ್ರಕಾರ, ಅಡಖಳ್ ತರಿಬಂದರ್‌ನಲ್ಲಿ ಜೆಟ್ಟಿ ಮೇಲೆ ಕುಳಿತುಕೊಳ್ಳುವ ಸ್ಥಳ ಮತ್ತು ವಾಹನಗಳನ್ನು ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಎರಡೂ ಗುಂಪುಗಳ ನಡುವೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿರುತ್ತವೆ.

2. ಶಿಮ್ಗಾ ಹಬ್ಬದ ನಿಮಿತ್ತ ಹಿಂದೂ ಮೀನುಗಾರರು ತಮ್ಮ ದೋಣಿಗಳನ್ನು ಅಡಖಳ್ ಮೊಹಲ್ಲಾದ ಬಳಿಯ ಖಾಡಿಯಲ್ಲಿ ನಿಲ್ಲಿಸಿದ್ದರು. ‘ಈ ಸಮಯದಲ್ಲಿ ನಮ್ಮ ದೋಣಿಗೆ ಅಪಾಯವಾಗಬಹುದು’ ಎಂದು ಪಾಜಪಂಢರಿಯ ಹಿಂದೂ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದರು.

3. ಮಾರ್ಚ್ 12ರಂದು ಹಿಂದೂ ಯುವಕನು ಒಂದು ವಾಹನದ ಫೋಟೋ ತೆಗೆದ ನಂತರ ಮೊಹಲ್ಲಾದ ಮುಸ್ಲಿಂ ಯುವಕ ‘ವಾಹನದ ಫೋಟೋ ಏಕೆ ತೆಗೆದೆ?’ ಎಂದು ಪ್ರಶ್ನಿಸಿದ್ದಾನೆ.

4. ತಕ್ಷಣವೇ ಮೊಹಲ್ಲಾದ ಕೆಲವು ಮುಸ್ಲಿಂ ಯುವಕರು ಮತ್ತು ಮಹಿಳೆಯರು ಅಲ್ಲಿನ ಹಿಂದೂಗಳ ಮೇಲೆ ಭಾರಿ ಕಲ್ಲು ತೂರಾಟ ನಡೆಸಿದ್ದಾರೆ. (ಮುಸ್ಲಿಂ ಮಹಿಳೆಯರೂ ಹಿಂದೂದ್ವೇಷಿಗಳಾಗಿರುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ! – ಸಂಪಾದಕರು)

5. ನಂತರ ಪಾಜಪಂಢರಿ ಮತ್ತು ಅಡಖಳ್ ಮೊಹಲ್ಲಾದ ಗುಂಪುಗಳು ಮುಖಾಮುಖಿಯಾಗಿ ಕಲ್ಲು ತೂರಾಟ ನಡೆಸಿವೆ. ಇದರಿಂದ ಸುಮಾರು 14 ಮಂದಿ ಗಾಯಗೊಂಡಿದ್ದಾರೆ.

6. ಈ ಹಲ್ಲೆಯ ಮಾಹಿತಿ ದಾಪೋಲಿ ಪೊಲೀಸ್ ಠಾಣೆಗೆ ತಲುಪಿದ ನಂತರ ಅಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ವಿವೇಕ್ ಅಹಿರೆ ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಅವರು ಗುಂಪನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಲಕರ್ಣಿ ಕೂಡ ಅಡಖಳ್‌ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

7. ಪ್ರಸ್ತುತ ಇಲ್ಲಿ ಉದ್ವಿಗ್ನ ಶಾಂತತೆ ನೆಲೆಸಿದ್ದು, ರಾತ್ರಿ ಶಾಂತಿ ಸಮಿತಿ ಸಭೆಯನ್ನೂ ನಡೆಸಲಾಗಿದೆ. ವರಿಷ್ಠಾಧಿಕಾರಿ ಕುಲಕರ್ಣಿ ಎರಡೂ ಗುಂಪುಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದಾರೆ. ಹಾಗೆಯೇ ಜನರು ಶಾಂತಿ ಕಾಪಾಡಲು ಮತ್ತು ಕಾನೂನು ಕೈಗೆತ್ತಿಕೊಳ್ಳದಂತೆ ಮನವಿ ಮಾಡಿದ್ದಾರೆ.

ಪೊಲೀಸರ ಪಾತ್ರ ಸಂದೇಹಾಸ್ಪದ!

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಮೂಲಗಳು ‘ಸನಾತನ ಪ್ರಭಾತ’ಕ್ಕೆ ನೀಡಿದ ಮಾಹಿತಿಯ ಪ್ರಕಾರ, ಪೊಲೀಸರು ಮೊದಲು ಎರಡೂ ಗುಂಪುಗಳ 10-10 ಜನರನ್ನು ದಾಪೋಲಿ ಪೊಲೀಸ್ ಠಾಣೆಗೆ ಕರೆದಿದ್ದರು. ಇದರಿಂದ ಕೆಲವು ಪ್ರಮುಖ ಹಿಂದೂ ಕಾರ್ಯಕರ್ತರು ದಾಪೋಲಿಗೆ ತೆರಳಿದ್ದರು; ಆದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಘಟನೆ ನಡೆದ ಸ್ಥಳವಾದ ಹರ್ಣೆ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅವರು ಹರ್ಣೆಯ ಇತರ ಕೆಲವು ಹಿಂದೂ ಕಾರ್ಯಕರ್ತರನ್ನು ಅಲ್ಲಿಗೆ ಕರೆದಿದ್ದರು. ‘ನೀವು ಮಾಹಿತಿ ನೀಡಿದಂತೆ ನಮ್ಮ ಮುಖ್ಯಸ್ಥರು ದಾಪೋಲಿಗೆ ಹೋಗಿದ್ದಾರೆ’ ಎಂದು ಕಾರ್ಯಕರ್ತರು ಹರ್ಣೆ ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ವಿಷಯವನ್ನು ಇತ್ಯರ್ಥಪಡಿಸಲು ಹೇಳಿ ಕಾರ್ಯಕರ್ತರನ್ನು ಮನೆಗೆ ಹೋಗಲು ತಿಳಿಸಿದ್ದಾರೆ.

ದಾಪೋಲಿ ಪೊಲೀಸ್ ಠಾಣೆಯಲ್ಲಿ ಎರಡೂ ಗುಂಪುಗಳ 7-7 ಜನರೊಂದಿಗೆ ಪೊಲೀಸರ ಎದುರು ಚರ್ಚೆ ನಡೆದಿದೆ. ಪೊಲೀಸರು, ‘ಹಬ್ಬ ನಡೆಯುತ್ತಿದೆ. ಶಾಂತಿ ಬೇಕು. ನಾವು ಬಂದೋಬಸ್ತ್ ಹೆಚ್ಚಿಸುತ್ತೇವೆ. ಅಲ್ಲಿ 10 ಪೊಲೀಸರನ್ನು ಇಡುತ್ತೇವೆ’’ಎಂದಿದ್ದಾರೆ. ಈ ವೇಳೆ ಪ್ರಮುಖ ಹಿಂದೂ ಕಾರ್ಯಕರ್ತರು, ‘ಶಿಮ್ಗಾ ಹಬ್ಬದಲ್ಲಿ ನಮ್ಮ ದೋಣಿಗಳು ಗೌರವಕ್ಕೆ ಹೋಗುವಾಗ ವಾದ್ಯಗಳೊಂದಿಗೆ ಕೆಳಗಿನಿಂದ ಹೋಗುತ್ತವೆ’ ಎಂದು ತಿಳಿಸಿದ್ದಾರೆ. ಪೊಲೀಸರು, ‘ಕೆಳಗಿನಿಂದ ವಾದ್ಯಗಳನ್ನು ನುಡಿಸುತ್ತಾ ಹೋಗಬಾರದು’ ಎಂದಿದ್ದಾರೆ. ಆದರೆ ಪೊಲೀಸರ ಈ ಮಾತನ್ನು ಹಿಂದೂಗಳು ವಿರೋಧಿಸಿದ್ದಾರೆ. ನಂತರ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸ್ ಬಂದೋಬಸ್ತಿನಲ್ಲಿ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಹಬ್ಬಗಳ ಸಮಯದಲ್ಲಿ ಏನಾದರೂ ಕಾರಣ ಒಡ್ಡಿ ಅವರ ಮೇಲೆ ದಾಳಿ ಮಾಡುವುದು ಮುಸ್ಲಿಮರ ಹಳೆಯ ಚಾಳಿ. ಇಂತಹವರನ್ನು ಹತೋಟಿಗೆ ತರಲು ಕಾನೂನಿನ ಕಠಿಣ ಕ್ರಮಗಳೊಂದಿಗೆ ಪರಿಣಾಮಕಾರಿ ಹಿಂದೂ ಸಂಘಟನೆ ಕಾಲದ ಅಗತ್ಯ!