ಸಾಧಕಿಯ ಪ್ರಾಣವನ್ನು ರಕ್ಷಿಸಲು ತಮ್ಮ ಆಯುಷ್ಯವನ್ನು ಅವಳಿಗೆ ಕೊಡುವ ಇಚ್ಛೆಯನ್ನು ವ್ಯಕ್ತಪಡಿಸುವುದು

ಪರಾತ್ಪರ ಗುರು ಡಾ. ಆಠವಲೆ

ಸನಾತನದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕಿ ಕು. ದೀಪಾಲಿ ಮತಕರ ಇವರ ಆರೋಗ್ಯವು ಅಕ್ಟೋಬರ್ ೨೦೧೬ ರಲ್ಲಿ ಬಹಳ ಗಂಭೀರವಾಗಿತ್ತು. ಅವರ ಮೇಲಿನ ಈ ಮಾರಣಾಂತಿಕ ಸಂಕಟ ದೂರವಾಗಬೇಕೆಂದು ಪರಾತ್ಪರ ಗುರು ಡಾಕ್ಟರರು ಸಂತರಿಗೆ ನಾಮಜಪ ಮಾಡಲು ಹೇಳಿದ್ದರು. ಮಹರ್ಷಿಗಳಲ್ಲಿಯೂ ಕು.  ದೀಪಾಲಿಯವರ ಆರೋಗ್ಯಕ್ಕಾಗಿ ಪರಿಹಾರವನ್ನು ಕೇಳಿ ಯಜ್ಞವನ್ನು ಮಾಡಲಾಯಿತು. ಕು. ದೀಪಾಲಿ ಮತಕರ ಇವರ ಆರೋಗ್ಯ ಸುಧಾರಿಸಿದ ನಂತರ ಯಾವಾಗ ಅವರು ಪರಾತ್ಪರ ಗುರು ಡಾಕ್ಟರರನ್ನು ಭೇಟಿಯಾಗಲು ಬಂದರೋ, ಆಗ ನಡೆದ ಅತ್ಯಂತ ಹೃದಯಸ್ಪರ್ಶಿ ಸಂಭಾಷಣೆಯನ್ನು ಇಲ್ಲಿ ನೀಡುತ್ತಿದ್ದೇವೆ –

ಪರಾತ್ಪರ ಗುರು ಡಾಕ್ಟರ್ : ನನಗೆ ನನ್ನ ಒಂದು ತಪ್ಪು ಗಮನಕ್ಕೆ ಬಂದಿತು. ನಿನ್ನ ಸ್ಥಿತಿ ಗಂಭೀರವಾಗಿರುವುದು ತಿಳಿದಾಗ ನನಗೆ, ‘ನನ್ನ ಆಯುಷ್ಯವನ್ನು ನಿನಗೆ ಕೊಡಬೇಕು, ಎಂದೆನಿಸಿತು. ಆದರೆ ನಂತರ, ‘ಸಂತರ ಹೇಳಿಕೆಯಂತೆ ಈಗ ನನ್ನ ಆಯುಷ್ಯವು ಹೆಚ್ಚೆಂದರೆ ೨ – ೩ ವರ್ಷಗಳಷ್ಟೇ ಇದೆ. ಅಷ್ಟೇ ಆಯುಷ್ಯವನ್ನು ನಿನಗೆ ಕೊಟ್ಟು ಏನು ಉಪಯೋಗ ? ನಿನಗೆ ಇನ್ನೂ ೫೦-೬೦ ವರ್ಷಗಳ ಕಾಲ ಕಾರ್ಯ ಮಾಡಲಿಕ್ಕಿದೆ, ಎಂಬುದು ಗಮನಕ್ಕೆ ಬಂದಿತು.

ಕು. ದೀಪಾಲಿ ಮತಕರ : ನಿಮ್ಮಿಂದಾಗಿಯೇ ನಾನು ಜೀವಂತವಾಗಿದ್ದೇನೆ. ನಿಮ್ಮ ಕೃಪೆಯಿಂದಾಗಿಯೇ ಮಹರ್ಷಿಗಳು, ಸಂತರು ಹಾಗೂ ಸಾಧಕರು ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದರು. ‘ಪರಮ ಪೂಜ್ಯ ಗುರುಗಳೇ (ಪ.ಪೂ. ಡಾಕ್ಟರರೇ) ರಕ್ಷಣೆ ಮಾಡಬಹುದು, ಎಂದು ಮಹರ್ಷಿಗಳು ಹೇಳಿದ ಬಗ್ಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಕಾಕೂರವರು ನನಗೆ ಹೇಳಿದರು, ಅಂದರೆ ನಿಮ್ಮಿಂದಲೇ ನಾನು ಇಂದಿಗೂ ಜೀವಂತ ಇದ್ದೇನೆ. (‘ಆಗ ನನಗೆ ಬಹಳ ಕೃತಜ್ಞತೆ ಅನಿಸುತ್ತಿತ್ತು. ನಾನೇ ಅಲ್ಲ, ಈ ಘೋರ ಕಲಿಯುಗದಲ್ಲಿ ಎಲ್ಲ ಸಾಧಕರು ಗುರುದೇವರಿಂದಲೇ ಸುರಕ್ಷಿತರಾಗಿದ್ದಾರೆ. ಅವರ ಕೃಪೆಯಿಂದಲೇ ಉಸಿರಾಡುತ್ತಿದ್ದಾರೆ. ಸಾಧಕರ ಎಲ್ಲ ತೊಂದರೆಗಳನ್ನು ಅವರು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ. – ಕು. ದೀಪಾಲಿ ಮತಕರ)