ಪಾಕಿಸ್ತಾನದ ಮುಸ್ಲಿಂ ಆಟಗಾರರು ನನ್ನ ಮೇಲೆ ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಿದ್ದರು! – ದಾನಿಶ್ ಕನೇರಿಯ

ಹಿಂದೂ ಪಾಕಿಸ್ತಾನಿ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರಿಂದ ಮರು ಉಚ್ಚಾರಣೆ !

ವಾಷಿಂಗ್ಟನ್ (ಅಮೆರಿಕ) – ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ನನ್ನ ಮೇಲೆ ಧರ್ಮ ಬದಲಾಯಿಸುವಂತೆ ಪದೇಪದೇ ಒತ್ತಡ ಹೇರಿದ್ದರು. ಶಾಹಿದ್ ಅಫ್ರಿದಿ ಸೇರಿದಂತೆ ಅನೇಕ ಆಟಗಾರರು ನನ್ನ ಮುಂದೆ ಅನೇಕ ಅಡಚನೆಗಳನ್ನು ಮಾಡಿದ್ದರು. ಇದರಿಂದಾಗಿ ನಾನು ಅವರೊಂದಿಗೆ ಊಟ ಮಾಡುವುದನ್ನು ಸಹ ತಪ್ಪಿಸುತ್ತಿದ್ದೆ ಎಂದು ಹಿಂದೂ ಆಗಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಮತ್ತೊಮ್ಮೆ ಹೇಳಿದ್ದಾರೆ. ಅವರು ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡುತ್ತಿದ್ದರು. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ದಾನಿಶ್ ಕನೇರಿಯಾ ಧ್ವನಿ ಎತ್ತಿದ್ದಾರೆ. ಪಾಕಿಸ್ತಾನದಲ್ಲಿ ತನಗೆ ಸಿಗಬೇಕಾದ ಗೌರವ ಮತ್ತು ಗುರುತು ಸಿಗಲಿಲ್ಲ ಎಂದು ದಾನಿಶ್ ಕನೇರಿಯಾ ಹೇಳಿದ್ದಾರೆ. ನಾವು ಎಷ್ಟು ಸಹಿಸಿಕೊಂಡಿದ್ದೇವೆ ಎಂಬುದನ್ನು ಅರಿತುಕೊಳ್ಳಲು ಮತ್ತು ಅದರ ಮೇಲೆ ಕ್ರಮ ಕೈಗೊಳ್ಳಲು ಜಾಗೃತಿ ಮೂಡಿಸಲು ಮತ್ತು ಅಮೆರಿಕಕ್ಕೆ ತಿಳಿಸಲು ನಾವು ಮುಂದೆ ಬಂದಿದ್ದೇವೆ.

ಸಂಪಾದಕೀಯ ನಿಲುವು

ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಹಿಂದೂಗಳ ಸ್ಥಿತಿ ಹೇಗಿದೆ? ಎಂಬುದನ್ನು ಗಮನಿಸಿದರೆ, ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದಾಗ ಹಿಂದೂಗಳ ಗತಿ ಏನಾಗಬಹುದು? ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಇಂತಹ ಪರಿಸ್ಥಿತಿ ಬರದಂತೆ ತಡೆಯಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅಗತ್ಯವಾಗಿದೆ!