ಚೆನ್ನೈ (ತಮಿಳುನಾಡು) – ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ತ್ರಿಭಾಷಾ ನೀತಿಗಳ ಕುರಿತು ತಮಿಳುನಾಡು ಮತ್ತು ಕೇಂದ್ರ ಸರಕಾರದ ನಡುವೆ ವಿವಾದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ದ್ರಾವಿಡ ಪ್ರಗತಿ ಒಕ್ಕೂಟ) ಸರಕಾರವು ರಾಜ್ಯದ ಬಜೆಟ್‌ನಲ್ಲಿ ರೂಪಾಯಿಯ ‘₹’ ಚಿಹ್ನೆಯನ್ನು ತಮಿಳು ಭಾಷೆಗೆ ಬದಲಾಯಿಸಿದೆ. 2025-26ರ ಬಜೆಟ್‌ನಲ್ಲಿ ‘₹’ ಚಿಹ್ನೆಯ ಬದಲು ‘ரூ’ ಚಿಹ್ನೆಯನ್ನು ಸರಕಾರ ಬಳಸಿದೆ. ಇದು ತಮಿಳು ಲಿಪಿಯಲ್ಲಿ ‘ರೂ’ ಅಕ್ಷರವನ್ನು ಬಳಸಿದೆ. ತಮಿಳುನಾಡು ಸರಕಾರವು ಹಿಂದಿ ಭಾಷೆಯ ವಿರೋಧಿಯಾಗಿದೆ.