ಹೋಳಿಯ ಬಣ್ಣದಿಂದ ಅಡಚಣೆ ಇದ್ದರೆ ದೇಶ ಬಿಟ್ಟು ಹೋಗಬೇಕು ! – ಸಂಜಯ ನಿಷಾದ

ಉತ್ತರಪ್ರದೇಶ ಸರಕಾರದಲ್ಲಿನ ಸಚಿವ ಮತ್ತು ನಿಷಾದ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸಂಜಯ ನಿಷಾದರ ಹೇಳಿಕೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಹೋಳಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತದೆ. ಆದ್ದರಿಂದ ತನ್ನಿಂದ ತಾನೇ ಎಲ್ಲರ ಮನೆಯಲ್ಲಿ ಸುಖ ಮತ್ತು ಶಾಂತಿಯ ಆಗಮನವಾಗುತ್ತದೆ. ಹಬ್ಬ ಇದು ಆನಂದ ವ್ಯಕ್ತಪಡಿಸುವುದಕ್ಕಾಗಿ ಇರುತ್ತದೆ. ಹಬ್ಬದ ಪ್ರಯುಕ್ತ ಜನರು ಪರಸ್ಪರರಲ್ಲಿನ ಕಹಿಯನ್ನು ದೂರಗೊಳಿಸುವುದಕ್ಕಾಗಿ ನೇತೃತ್ವ ವಹಿಸಿಕೊಳ್ಳುತ್ತಾರೆ ಮತ್ತು ಪರಸ್ಪರರನ್ನು ಆಲಂಗಿಸುತ್ತಾರೆ. ಆದ್ದರಿಂದ ಯಾರಿಗೆ ಬಣ್ಣದ ಅಡಚಣೆ ಇದೆ ಅವರು ಕೇವಲ ಅವರ ಮನೆ ಅಷ್ಟೇ ಅಲ್ಲದೆ ಈ ದೇಶ ಬಿಟ್ಟು ಹೋಗಬೇಕೆಂದು ಉತ್ತರಪ್ರದೇಶದಲ್ಲಿನ ಸಚಿವ ಮತ್ತು ನಿಷಾದ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸಂಜಯ ನಿಷಾದ ಇವರು ಹೇಳಿದ್ದಾರೆ.