
‘ನಮ್ಮ ಗುರುಗಳು ಹೇಗಿದ್ದಾರೆ ಎಂಬುದರ ಬಗ್ಗೆ, ಒಂದು ದೃಷ್ಟಾಂತವನ್ನು ಹೇಳಬೇಕೆಂದೆನಿಸುತ್ತದೆ. ಸಂತ ತುಕಾರಾಮ ಮಹಾರಾಜರು ಸದೇಹ ವೈಕುಂಠಕ್ಕೆ ಹೋದ ಏಕೈಕ ಸಂತಶ್ರೇಷ್ಠರಾಗಿದ್ದಾರೆ. ಅವರನ್ನು ಕರೆದೊಯ್ಯಲು ಪುಷ್ಪಕವಿಮಾನ ಬಂದಿತ್ತು. ಪ.ಪೂ. ಡಾಕ್ಟರರು ಹೇಳುತ್ತಾರೆ, ‘ಒಂದು ವೇಳೆ ನನ್ನನ್ನು ವೈಕುಂಠಕ್ಕೆ ಕರೆದೊಯ್ಯಲು ದೇವರು ಪುಷ್ಪಕವಿಮಾನವನ್ನು ಕಳುಹಿಸಿದರೆ, ನಾನು ದೇವರಿಗೆ, ‘ಸನಾತನದ ಎಲ್ಲ ಸಾಧಕರನ್ನು ನನ್ನೊಂದಿಗೆ ವೈಕುಂಠಕ್ಕೆ ಕರೆದುಕೊಂಡು ಹೋಗುವುದಿದೆ. ಅವರೆಲ್ಲರೂ ಮೊದಲು ಪುಷ್ಪಕವಿಮಾನದಲ್ಲಿ ಕುಳಿತುಕೊಳ್ಳುವರು ಮತ್ತು ಅವರೆಲ್ಲರೂ ಕುಳಿತಿದ್ದಾರೆ, ಯಾರೂ ಉಳಿದಿಲ್ಲವಲ್ಲ, ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನಾನು ವಿಮಾನದಲ್ಲಿ ಪ್ರವೇಶಿಸುವೆನು.
ಹೀಗಿದ್ದಾರೆ ನಮ್ಮ ಮಹಾನ ಪರಾತ್ಪರ ಗುರುಗಳು !
– ಪೂ. ವಿನಾಯಕ ಕರ್ವೆ, ಮಂಗಳೂರು.
ಧರ್ಮದ ಪುನರ್ಸ್ಥಾಪನೆಗಾಗಿ ಜನ್ಮಕ್ಕೆ ಬಂದಿರುವ ಮೂವರು ಗುರುಗಳು – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ !
ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ ಅಂಜಲಿ ಗಾಡಗೀಳ ಇವರಿಂದ ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !
ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಸತ್ಯ ಸನಾತನ ಧರ್ಮದ ಉತ್ಸವ !
ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !