ಕಾಯಿಲೆಯಿಂದ ಬಳಲುವ ಸಾಧಕರ ಬಗ್ಗೆ ಎಲ್ಲ ರೀತಿಯಿಂದ ಕಾಳಜಿ ವಹಿಸುವ ಭಕ್ತವತ್ಸಲ !

ಪರಾತ್ಪರ ಗುರು ಡಾ. ಆಠವಲೆ

ಅ. ಕಾಯಿಲೆಯಿಂದ ಬಳಲುತ್ತಿರುವ ಸಾಧಕನಿಗೆ ಏನೂ ಕಡಿಮೆ ಬೀಳಬಾರದೆಂದು, ಸತತವಾಗಿ ಅವನ ಬಗ್ಗೆ ಕೇಳುವುದು : ‘ತಮಗೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಿಲ್ಲದಿದ್ದರೂ, ಕಾಯಿಲೆಯಿಂದ ಬಳಲುತ್ತಿರುವ ಓರ್ವ ಸಾಧಕನನ್ನು ಭೇಟಿಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಮೆಟ್ಟಿಲುಗಳನ್ನು ಹತ್ತಿ ಅವನನ್ನು ಭೇಟಿಯಾಗಲು ಮೇಲೆ ಹೋಗುತ್ತಾರೆ. ಅವನನ್ನು ಭೇಟಿಯಾಗಿ ಅವರು ‘ಅವನಿಗೆ ಏನಾದರೂ ಅಡಚಣೆ ಇದೆಯೇ ? ಎಂದು ಕೇಳುತ್ತಾರೆ. ಅವನಿಗೆ ಇಷ್ಟವಾದ ತಿಂಡಿಯನ್ನು ಮಾಡಿಕೊಡಲು ಹೇಳುತ್ತಾರೆ. ಆ ಸಾಧಕನಿಗೆ ಏನೂ ಕಡಿಮೆ ಬೀಳಬಾರದೆಂದು ಅವರು ಕಾಳಜಿ ವಹಿಸುತ್ತಾರೆ. ಹಾಗೆಯೇ ವಿವಿಧ ಉಪಾಯ ಪದ್ಧತಿಗಳನ್ನೂ ಹುಡುಕಿ ಆ ಸಾಧಕನನ್ನು ಬೇಗನೆ ಗುಣಪಡಿಸಿದರು. – ಕು. ತೃಪ್ತಿ ಗಾವಡೆ, ರಾಮನಾಥಿ, ಗೋವಾ. (೧೦.೫.೨೦೧೮)

ಆ.  ಸಾಧಕಿಗೆ ಮರಣದ ಯಾತನೆಯಾಗಬಾರದೆಂದು ಸ್ವತಃ ನಾಮಜಪಾದಿ ಉಪಾಯಗಳನ್ನು ಮಾಡಿ ಸಾಧಕಿಯ ಪ್ರಾಣವನ್ನು ಮೇಲೆಮೇಲೆ ಸರಿಸುವುದು : ತೀವ್ರ ಅನಾರೋಗ್ಯವಿದ್ದ ಓರ್ವ ಸಾಧಕಿಯ ಮೃತ್ಯುವಿನ ಸಮಯದಲ್ಲಿ ಅವಳ ವೇದನೆಗಳು ಸಹನೀಯವಾಗಬೇಕೆಂದು ಪ.ಪೂ. ಡಾಕ್ಟರರು ಸ್ವತಃ ತಾವೇ ನಾಮಜಪ ಮಾಡಿದರು. ಇದರಿಂದ ಮೃತ್ಯುವಿನ ಸಮಯದಲ್ಲಿ ಯಾವುದೇ ರೀತಿಯ ಯಾತನೆಗಳಾಗದೇ ಅವಳಿಗೆ ಆನಂದದಿಂದ ಮೃತ್ಯುವನ್ನು ಹೊಂದಲು ಸಾಧ್ಯವಾಯಿತು. ಪ.ಪೂ ಡಾಕ್ಟರರ ಪ್ರೀತಿಯಿಂದ ಅನೇಕ ಸಾಧಕರ ಜೀವನ ಹಾಗೂ ಮರಣವೂ ಸುಸಹ್ಯವಾಗಿದೆ. – ಕು. ಮಧುರಾ ಭೋಸಲೆ, ರಾಮನಾಥಿ, ಗೋವಾ. (೮.೧.೨೦೧೩)

ಇ. ಚರ್ಮರೋಗದಿಂದ ಪೀಡಿತನಾದ ವಿದೇಶದ ಓರ್ವ ಸಾಧಕನು ತನ್ನ ಕಾಯಿಲೆಯಿಂದ ಇತರರಿಗೆ ಹೇಸಿಗೆ ಅನಿಸಬಾರದೆಂದು, ತನ್ನ ಸಂಪೂರ್ಣ ಶರೀರವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳುತ್ತಿದ್ದನು. ಅವನಿಗೆ ಪ.ಪೂ. ಡಾಕ್ಟರರೆದುರು ಹೋಗಲು ಬಹಳ ಸಂಕೋಚ ವೆನಿಸುತ್ತಿತ್ತು, ಆದರೆ ಅವನು ಪ.ಪೂ. ಡಾಕ್ಟರರನ್ನು ಭೇಟಿಯಾಗಲು ಹೋದಾಗ ಅವರು ಅವನ ಬೆನ್ನ ಮೇಲೆ ಕೈಯಾಡಿಸಿದರು, ಅವನಿಗೆ ಕಾಲುಗಳಲ್ಲಿ ಹಾಕಿದ ಕಾಲುಚೀಲಗಳನ್ನು ತೆಗೆಯಲು ಹೇಳಿ ಅವನ ಕಾಯಿಲೆಯ ಸ್ವರೂಪವನ್ನು ನೋಡಿದರು. ಅವರ ಈ ಪ್ರೀತಿಯಿಂದ ಆ ಸಾಧಕನಲ್ಲಿ ಹೊಸ ಜೀವನೋತ್ಸಾಹ ಮೂಡಿತು. – ಶ್ರೀ. ಯೋಗೇಶ ಜಲತಾರೆ, ಸನಾತನ ಆಶ್ರಮ, ರಾಮನಾಥಿ.

ತುಮ್ಹಿ ಹೋ ಮಾತಾ, ಪಿತಾ ತುಮ್ಹಿ ಹೋ |

ತುಮ್ಹಿ ಹೋ ಬಂಧು, ಸಖಾ ತುಮ್ಹಿ ಹೋ || ತುಮ್ಹಿ ಹೋ ಸಾಥಿ, ತುಮ್ಹಿ ಸಹಾರೆ | ಕೋಯಿ ನ ಅಪನಾ ಸಿವಾ ತುಮ್ಹಾರೆ ||