ಉಡುಪುಗಳು ಹಿಂದೂ ಕುಶಲ ಕಾರ್ಮಿಕರೆ ಸಿದ್ಧಗೊಳಿಸ ಬೇಕೆಂದು ಆಗ್ರಹಿಸಿರುವ ಹಿಂದೂ ನಾಯಕ ದಿನೇಶ್ ಶರ್ಮಾ ಫಲಹಾರಿ
ಮಥುರಾ (ಉತ್ತರಪ್ರದೇಶ) – ಬೃಂದಾವನದಲ್ಲಿನ ಪ್ರಸಿದ್ಧ ಠಾಕೂರ್ ಬಾಂಕೇ ಬಿಹಾರಿ (ಭಗವಂತ ಶ್ರೀಕೃಷ್ಣ) ಧರಿಸುವ ಉಡುಪುಗಳು ಮುಸಲ್ಮಾನರು ತಯಾರಿಸುತ್ತಾರೆ. ಇದರ ವಿರುದ್ಧ ಈಗ ಹಿಂದೂಗಳು ಧ್ವನಿಯತ್ತುತ್ತಿದ್ದಾರೆ. ಠಾಕೂರ್ ಬಾಂಕೇ ಬಿಹಾರಿಯ ಉಡುಪು ಹಿಂದೂಗಳೇ ತಯಾರಿಸಬೇಕೆಂದು ಮಥುರಾ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿನ ಅರ್ಜಿದಾರರು ಮತ್ತು ಹಿಂದೂ ನಾಯಕ ದಿನೇಶ ಶರ್ಮ ಫಲಹಾರಿ ಇವರು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಆಗ್ರಹಿಸಿದರು.
೧. ದಿನೇಶ ಶರ್ಮಾ ಇವರು, ದೇವಸ್ಥಾನ ಆಡಳಿತದಿಂದ ಭಗವಾನ್ ಶ್ರೀ ಕೃಷ್ಣನಿಗೆ ಮುಸಲ್ಮಾನರು ತಯಾರಿಸಿರುವ ಬಟ್ಟೆಗಳು ಹಾಕಬಾರದು.
೨. ದಿನೇಶ್ ಶರ್ಮ ಇವರು ಬೃಂದಾವನದ ಠಾಕೂರ ಬಾಂಕೇ ಬಿಹಾರಿ ದೇವಸ್ಥಾನದ ಅರ್ಚಕರಿಗೆ ಮತ್ತು ಸಿಬ್ಬಂದಿಗಳನ್ನು ಭೇಟಿ ಮಾಡಿ ಅವರಿಗೆ ಒಂದು ಮನವಿ ನೀಡಿದರು. ಅವರು ದೇವಸ್ಥಾನದ ಆಡಳಿತಕ್ಕೆ ಭಗವಾನ್ ಶ್ರೀ ಕೃಷ್ಣನಿಗಾಗಿ ಹಿಂದೂ ಕುಶಲ ಕಾರ್ಮಿಕರು ತಯಾರಿಸಿರುವ ಉಡುಪುಗಳು ಮತ್ತು ಬಣ್ಣಗಳು ಉಪಯೋಗಿಸಲು ವಿನಂತಿಸಿದರು.
೩. ದಿನೇಶ ಶರ್ಮಾ ಇವರು, ಮುಸಲ್ಮಾನರು ಗೋ ಹತ್ಯೆ ಮಾಡುತ್ತಾರೆ ಮತ್ತು ಹಿಂದೂ ಧರ್ಮದ ವಿರುದ್ಧ ಕೆಲಸ ಮಾಡುತ್ತಾರೆ. ಅಂತಹ ಜನರಿಂದ ನಾವು ಠಾಕೂರಜಿಯ (ಭಗವಂತ ಶ್ರೀ ಕೃಷ್ಣನ) ಅಲಂಕಾರದ ವಸ್ತುಗಳು ಖರೀದಿಸುವುದು ಕೂಡ ಯೋಗ್ಯವಲ್ಲ.
೪. ಮಥುರೆಯಲ್ಲಿನ ಬೃಂದಾವನದಲ್ಲಿ ಸಾವಿರಾರು ಮುಸಲ್ಮಾನ ಕುಟುಂಬಗಳು ಠಾಕೂರಜಿಯ ಉಡುಪುಗಳನ್ನು ಮತ್ತು ಆಭರಣಗಳನ್ನು ತಯಾರಿಸುವ ಕೆಲಸ ಮಾಡುತ್ತಾರೆ. ಬೃಂದಾವನದಲ್ಲಿನ ಮುಸಲ್ಮಾನ ಜನಾಂಗ ಸಿದ್ಧಗೊಳಿಸಿರುವ ಉಡುಪುಗಳು ದೇಶಾದ್ಯಂತ ಹಾಗೂ ವಿದೇಶದಲ್ಲಿ ಕೂಡ ಬೃಹತ್ ಪ್ರಮಾಣದಲ್ಲಿ ಮಾರಾಟವಾಗುತ್ತವೆ.
ಸಂಪಾದಕೀಯ ನಿಲುವುಮನಸ್ಸಿನಲ್ಲಿ ಹಿಂದೂ ದೇವತೆಗಳ ಬಗ್ಗೆ ಶ್ರದ್ಧೆ ಇರುವವರೇ ದೇವರ ಉಡುಪುಗಳನ್ನು ಸಿದ್ಧಪಡಿಸಬೇಕು. ಮುಸಲ್ಮಾನರ ಮನಸ್ಸಿನಲ್ಲಿ ಭಗವಂತ ಶ್ರೀ ಕೃಷ್ಣನ ಬಗ್ಗೆ ಸ್ವಲ್ಪವಾದರೂ ಶ್ರದ್ದೆ ಇದೆಯೇ ? ಮತ್ತು ಅದು ಇದ್ದರೆ ಅವರು, ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಪ್ರಯತ್ನ ಮಾಡುತ್ತಿದ್ದಾರೆಯೇ? |