೧೯೯೯ ರಲ್ಲಿ ಗುರುಪೂರ್ಣಿಮೆಯಾದ ನಂತರ ನಾವು ಮುಂಬೈಗೆ ಮುಂದಿನ ಸೇವೆಯನ್ನು ಕಲಿಯಲು ಹೋಗಿದ್ದೆವು. ಒಮ್ಮೆ ನಮಗೆ ಓರ್ವ ಸಾಧಕನ ಮನೆಯಿಂದ ಸೇವೆಯನ್ನು ಮುಗಿಸಿ ಸೇವಾಕೇಂದ್ರಕ್ಕೆ ಮರಳಿ ಬರಲು ರಾತ್ರಿ ೨.೩೦ ಗಂಟೆಯಾಗಿತ್ತು. ನಾವು ಸಾಯಂಕಾಲ ಚಹಾ ಮತ್ತು ಅಲ್ಪಹಾರವನ್ನು ತೆಗೆದು ಕೊಂಡಿದ್ದೆವು ಮತ್ತು ಆ ಸಾಧಕನ ಮನೆಯಲ್ಲಿ ಸ್ವಲ್ಪ ತಿಂಡಿಯನ್ನು ತಿಂದಿದ್ದೆವು. ರಾತ್ರಿ ಟ್ಯಾಕ್ಸಿಯಿಂದ ಇಳಿದ ನಂತರ ನಾವು ನೋಡಿದರೆ, ಗುರುದೇವರ ಕೋಣೆಯಲ್ಲಿ ದೀಪ ‘ಆನ್ ಇತ್ತು ಮತ್ತು ಗುರುದೇವರು ನಮ್ಮ ದಾರಿಯನ್ನು ಕಾಯುತ್ತಾ ಎಚ್ಚರವಿದ್ದರು. ನಾವು ಲಿಫ್ಟ್‌ನಿಂದ ಮೇಲೆ ಬಂದಾಗ, ಅವರು ಲಿಫ್ಟ್‌ನ ಬಳಿ ಬಂದು ನಿಂತಿದ್ದರು. ಅವರು ನಮಗೆ, “ಕೈ-ಕಾಲುಗಳನ್ನು ತೊಳೆದುಕೊಂಡು ಊಟಕ್ಕೆ ಬನ್ನಿರಿ, ಎಂದು ಹೇಳಿದರು. ಆಗ ನಾವಿಬ್ಬರೂ ‘ನಮ್ಮ ಊಟ ಆಗಿದೆ, ಎಂದು ಸುಳ್ಳು ಹೇಳಿದೆವು. ಆಗ ಅವರು ನಾವು ಹೇಳುವುದನ್ನು ಕೇಳದೇ ನಮ್ಮನ್ನು ಅಡುಗೆಮನೆಗೆ ಕರೆದುಕೊಂಡು ಹೋದರು. ಅಲ್ಲಿ ಮೇಜಿನ ಮೇಲೆ ಎರಡು ತಟ್ಟೆಗಳನ್ನು ಇಟ್ಟಿದ್ದರು. ಗುರುದೇವರು ನಮಗೆ ಕುಳಿತುಕೊಳ್ಳಲು ಹೇಳಿ ಸ್ವತಃ ಊಟವನ್ನು ಬಡಿಸಿದರು. “ನಾವು ಬಡಿಸಿಕೊಳ್ಳುತ್ತೇವೆ. ನೀವು ಮಲಗಿ, ಎಂದು ಹೇಳಿದಾಗ ಅವರು, “ನೀವು ಪ್ರತಿದಿನ ಜಾಗರಣೆ ಮಾಡುತ್ತೀರಿ. ನಾನು ಒಂದು ದಿನ ಜಾಗರಣೆ ಮಾಡಿದರೆ, ಏನಾಗುತ್ತದೆ ? ಎಂದು ಕೇಳಿದರು.
ಅಡುಗೆಮನೆಯಲ್ಲಿ ಸೇವೆ ಮಾಡುವ ಸಾಧಕಿಯರಿಗೆ ಬೆಳಗ್ಗೆ ಬೇಗ ಎದ್ದು ಇಲ್ಲಿಂದ ನೌಕರಿಗಾಗಿ ಹೋಗುವ ಸಾಧಕರಿಗಾಗಿ ಊಟದ ಡಬ್ಬಿಗಳನ್ನು ಮತ್ತು ಅಲ್ಪಾಹಾರವನ್ನು ತಯಾರಿಸಬೇಕಾಗುತ್ತದೆ. ಸಾಯಂಕಾಲದವರೆಗೆ ಅವರು ದಣಿದಿರುತ್ತಾರೆ. ಆದುದರಿಂದ ನಾನು ಅವರಿಗೆ ಮಲಗಲು ಹೇಳಿದೆ ಮತ್ತು ನಾನು ಎಚ್ಚರವಾಗಿರುತ್ತೇನೆಂದು ಹೇಳಿದೆನು. ಈಗ ನಾಳೆಯಿಂದ ಸಾಯಂಕಾಲ ಹೋಗುವಾಗ ನಿಮ್ಮೊಂದಿಗೆ ಊಟದ ಡಬ್ಬಿಯನ್ನು ಸಹ ತೆಗೆದುಕೊಂಡು ಹೋಗಿರಿ; ಅಂದರೆ ನಿಮಗೆ ಹೀಗೆ ಸುಳ್ಳು ಹೇಳ ಬೇಕಾಗುವುದಿಲ್ಲ, ಎಂದರು. ಆಗ ನಮ್ಮ ಕಣ್ಣಲ್ಲಿ ನೀರು ಬಂತು. ಇಷ್ಟೊಂದು ಪ್ರೀತಿ ಮತ್ತು ಕಾಳಜಿಯನ್ನು ಮನೆಯಲ್ಲಿರುವವರು ಸಹ ಮಾಡಲಾರರು.
– ಕು. ಶಶಿಕಲಾ ಕೃ. ಆಚಾರ್ಯ, ಸನಾತನ ಆಶ್ರಮ, ದೇವದ, ಪನವೇಲ. (೨೮.೧೧.೨೦೧೬)