ಭಾಜಪ ಹಿರಿಯ ನೇತಾರರಾದ ಜಯ ಭಗವಾನ ಗೋಯಲರಿಂದ ದೆಹಲಿ ಸರಕಾರಕ್ಕೆ ಮನವಿ !
ನವದೆಹಲಿ – ಈಗ ರಸ್ತೆಗಳು, ಹಳ್ಳಿಗಳು ಮತ್ತು ನಗರಗಳಿಗಿರುವ ಮುಸ್ಲಿಂ ದಾಳಿಕೋರರ ಹೆಸರುಗಳನ್ನು ಬದಲಾಯಿಸುವ ಸಮಯ ಬಂದಿದೆ. ಇದುವೇ ಛತ್ರಪತಿ ಸಂಭಾಜಿ ಮಹಾರಾಜರಿಗೆ ಅವರ ಹುತಾತ್ಮ ದಿನದಂದು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಸಂಯುಕ್ತ ಹಿಂದೂ ಮೋರ್ಚಾದ ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರು ಹಾಗೂ ಭಾಜಪ ಹಿರಿಯ ನೇತಾರರಾದ ಜಯ ಭಗವಾನ ಗೋಯಲರವರು ಹೇಳಿದರು. ಅವರು ಛತ್ರಪತಿ ಸಂಭಾಜಿ ಮಹಾರಾಜರ 336 ನೇ ಹುತಾತ್ಮ ದಿನದ ನಿಮಿತ್ತ ಈಶಾನ್ಯ ದೆಹಲಿಯ ಬಾಬರಪುರ ವಿಧಾನಸಭಾ ಕ್ಷೇತ್ರದಲ್ಲಿನ ಬಾಬರಪುರ ಬಸ್ ಟರ್ಮಿನಲನಲ್ಲಿ ‘ಯುನೈಟೆಡ್ ಹಿಂದೂ ಫ್ರಂಟ್ ದಿಲ್ಲಿ’ ಸಂಘಟನೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ, ಗೋಯಲರವರು ಔರಂಗಜೇಬನ ಸಮಾಧಿಯನ್ನು ಛತ್ರಪತಿ ಸಂಭಾಜಿನಗರದಿಂದ ಶಾಶ್ವತವಾಗಿ ತೆಗೆದುಹಾಕಬೇಕು ಮತ್ತು ದೆಹಲಿಯ ಬಾಬರಪುರ ಬಸ್ ಟರ್ಮಿನಲ್ ಗೆ ಛತ್ರಪತಿ ಸಂಭಾಜಿ ಮಹಾರಾಜರ ಹೆಸರಣ್ಣು ಇಡಬೇಕೆಂದು ಒತ್ತಾಯಿಸಿದರು.
ಸಂಪಾದಕೀಯ ನಿಲುವುಈಗ ದೆಹಲಿಯಲ್ಲಿ ಭಾಜಪದ ಸರಕಾರವೇ ಬಂದಿರುವುದರಿಂದ, ಇಂತಹ ಬೇಡಿಕೆಯನ್ನಿಡುವ ಅಗತ್ಯವು ಬರಬಾರದು, ಸರಕಾರವೇ ಸ್ವಯಂಪ್ರೇರಣೆಯಿಂದ ಮುಸ್ಲಿಂ ದಾಳಿಕೋರರ ಕುರುಹುಗಳನ್ನು ನಾಶಗೊಳಿಸಬೇಕು ! |