ದ್ವಿಚಕ್ರ ವಾಹನಗಳು ಮತ್ತು ಇತರ ವಾಹನಗಳ ಸಂಚಾರಕ್ಕೆ ನಿಷೇಧ
ಭಾಗ್ಯನಗರ (ತೆಲಂಗಾಣ) – ಹೋಳಿ ಆಡುವುದಕ್ಕೆ ಸಂಬಂಧಿಸಿದಂತೆ ಭಾಗ್ಯನಗರದ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ಆದೇಶ ಹೊರಡಿಸಿದ್ದಾರೆ. ಇದರಲ್ಲಿ, ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹೋಳಿ ಆಡದ ವ್ಯಕ್ತಿಗಳು, ಸ್ಥಳಗಳು ಮತ್ತು ವಾಹನಗಳ ಮೇಲೆ ಗುಲಾಲ್ ಅಥವಾ ಬಣ್ಣದ ನೀರನ್ನು ಎಸೆದರೆ ಅವರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಇತರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾಗ್ಯನಗರ ನಗರ ಪೊಲೀಸರು ಕಾನೂನಿನ 76ನೇ ವಿಧಿಯಡಿ ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ 50 ರೂಪಾಯಿ ದಂಡ ಅಥವಾ 8 ದಿನಗಳವರೆಗೆ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು. ಕಾನೂನಿನಲ್ಲಿ ಒಂದು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 100 ರೂಪಾಯಿಗಳವರೆಗೆ ದಂಡ ಅಥವಾ ಎರಡೂ ಶಿಕ್ಷೆಗಳ ಅವಕಾಶವಿದೆ. ಈ ಸೂಚನೆಯ ನಂತರ ನಗರದಲ್ಲಿ ವಿವಾದ ಉಂಟಾಗಿದೆ. ಸೈಬರಾಬಾದ್‌ನ ಪೊಲೀಸ್ ಆಯುಕ್ತ ಅವಿನಾಶ್ ಮೊಹಂತಿ ಕೂಡ ಇದೇ ರೀತಿಯ ಆದೇಶವನ್ನು ಹೊರಡಿಸಿದ್ದಾರೆ.
ಈದ್ ಆಚರಿಸಲು ಯಾವುದೇ ನಿರ್ಬಂಧಗಳಿಲ್ಲ, ಹಾಗಾದರೆ ಈ ತಾರತಮ್ಯ ಏಕೆ? – ಭಾಜಪ
ಭಾಜಪ ಈ ಆದೇಶವನ್ನು ಟೀಕಿಸಿದೆ. ಭಾಜಪದ ತೆಲಂಗಾಣ ಘಟಕದ ಎಕ್ಸ್ ಖಾತೆಯಲ್ಲಿ, ಈದ್ ಆಚರಿಸಲು ಯಾವುದೇ ನಿರ್ಬಂಧಗಳಿಲ್ಲ. ಇಂತಹ ತಾರತಮ್ಯ ಏಕೆ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ 9ನೇ ನಿಜಾಮ! – ಶಾಸಕ ಟಿ. ರಾಜಸಿಂಗ್ ಟೀಕೆ
ಭಾಗ್ಯನಗರದ ಗೋಶಾಮಹಲ್‌ನ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಗ್ ಈ ಆದೇಶದ ಬಗ್ಗೆ ಮಾತನಾಡಿ, ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದ್ದು, ಹಿಂದೂ ಹಬ್ಬಗಳನ್ನು ನಿಷೇಧಿಸಲು ಪ್ರಯತ್ನಿಸಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರಕಾರ ಭಾಗ್ಯನಗರದ ಕೆರೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ನಿಷೇಧ ಹೇರಿತ್ತು ಮತ್ತು ದೀಪಾವಳಿ ಆಚರಣೆಗೆ ನಿರ್ಬಂಧಗಳನ್ನು ವಿಧಿಸುವ ಮಾರ್ಗಸೂಚಿಗಳನ್ನು ಸಹ ಹೊರಡಿಸಿತ್ತು. ರಂಜಾನ್‌ನಲ್ಲಿ ಜನರ ದೊಡ್ಡ ಸಮಾವೇಶಗಳು ಮತ್ತು ತಡರಾತ್ರಿಯ ಕಾರ್ಯಕ್ರಮಗಳು ನಡೆದರೂ ಇಂತಹ ಯಾವುದೇ ನಿರ್ಬಂಧಗಳನ್ನು ಹೇರಲಾಗಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ‘ನಾನು 8ನೇ ನಿಜಾಮ ಅಲ್ಲ 9ನೇ ನಿಜಾಮ’ ಎನ್ನುತ್ತಾರೆ; ಏಕೆಂದರೆ 8ನೇ ನಿಜಾಮ ಕೆ.ಸಿ.ಆರ್ (ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್) ಆಗಿದ್ದರು. ನಿಜಾಮರ ಸ್ವಭಾವ ಹಿಂದೂಗಳ ಮೇಲೆ ದೌರ್ಜನ್ಯ ಮಾಡುವುದು, ಅವರ ಕೆಲಸ ಹಿಂದೂ ಹಬ್ಬಗಳನ್ನು ನಿಷೇಧಿಸುವುದು, ಎಂದು ಹೇಳಿದರು.
ಸಂಪಾದಕೀಯ ನಿಲುವುಈ ಆದೇಶದ ನಂತರ ಮುಸ್ಲಿಮರು ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸುತ್ತಾರೆ, ಈ ರೀತಿ ಕಾಂಗ್ರೆಸ್ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು! |