ಪರಾತ್ಪರ ಗುರು ಡಾ. ಆಠವಲೆ ಹಾಗೂ ಸಾಧಕರಲ್ಲಿನ ಅನ್ಯೋನ್ಯ ಸಂಬಂಧ !

ಪರಾತ್ಪರ ಗುರು ಡಾ. ಆಠವಲೆ

* ಒಂದು ಪ್ರಸಂಗದಲ್ಲಿ ಓರ್ವ ಸಾಧಕಿಯು ತಾನು ಕಂಡ ಒಂದು ಕನಸಿನ ಬಗ್ಗೆ ಪರಾತ್ಪರ ಗುರು ಡಾಕ್ಟರರಿಗೆ ಹೇಳುತ್ತಿದ್ದಳು. ಆ ಕನಸಿನಲ್ಲಿ ಅವಳಿಗೆ ಪರಾತ್ಪರ ಗುರು ಡಾಕ್ಟರರು ಅವಳನ್ನು ಬಿಟ್ಟು ಹೋಗಿದ್ದು ಕಾಣಿಸಿತು. ಅವಳು ಆ ವಾಕ್ಯವನ್ನು ಪೂರ್ಣ ಹೇಳುವ ಮೊದಲೇ ಪರಾತ್ಪರ ಗುರು ಡಾಕ್ಟರರು, “ನಾನು ನನ್ನ ಸಾಧಕರನ್ನು ಎಂದಿಗೂ ಎಲ್ಲಿಯೂ ಬಿಟ್ಟು ಹೋಗುವುದಿಲ್ಲ, ಎಂದು ಹೇಳಿದರು. ನಂತರ ಸಂವಾದವು ಪೂರ್ಣಗೊಳ್ಳುವವರೆಗೆ ಅವರು ಇದೇ ವಾಕ್ಯವನ್ನು ೨-೩ ಬಾರಿ ಹೇಳಿದರು.

* ಒಂದು ಸಲ ಆಶ್ರಮಕ್ಕೆ ಬಂದ ಓರ್ವ ಸಂತರನ್ನು ಬೀಳ್ಕೊಟ್ಟು ಪರಾತ್ಪರ ಗುರು ಡಾಕ್ಟರರು ತಮ್ಮ ನಿವಾಸಕಕ್ಷೆಯ ಕಡೆಗೆ ಹೋಗುತ್ತಿದ್ದರು. ಆಗ ಮಾರ್ಗದಲ್ಲಿನ ಕೆಲವು ಸಾಧಕರು ಅವರಿಗೆ ಕೈ ಅಲುಗಾಡಿಸಿ ‘ಟಾಟಾ ಮಾಡಿದರು. ಆಗ ಪರಾತ್ಪರ ಗುರು ಡಾಕ್ಟರರು, “ನನ್ನನ್ನೇನು ಬೀಳ್ಕೊಡುತ್ತೀರಿ | ಎಲ್ಲಿ ಸಾಧಕರೋ ಅಲ್ಲಿ ನಾನು || ಎಂದರು.

* ಪರಾತ್ಪರ ಗುರುದೇವರಿಗಾಗಿ ಸಾಧಕರೇ ಎಲ್ಲವೂ ಆಗಿದ್ದಾರೆ. ‘ನನಗೆ ಎಲ್ಲ ಹೂವುಗಳಲ್ಲಿ ‘ಸಾಧಕ ಹೂವುಗಳು ಅತ್ಯಂತ ಪ್ರಿಯವಾಗಿವೆ, ಎಂದು ಅವರು ಒಂದು ಬಾರಿ ಹೇಳಿದ್ದರು.

* ನಿಮ್ಮೆಲ್ಲ ಸಾಧಕರ ಹಾಗೂ ನಿಮ್ಮ ಕುಟುಂಬದವರ ಜವಾಬ್ದಾರಿಯೂ ನನ್ನ ಮೇಲೆಯೇ ಇದೆ. – ಪರಾತ್ಪರ ಗುರು ಡಾ. ಆಠವಲೆ (ಮಹಾರಾಷ್ಟ್ರದ ಸಾವಂತವಾಡಿಯ ದೇವಸ್ಥಾನದಲ್ಲಿ ಸಾಧಕರಿಗೆ ಮಾಡಿದ ಮಾರ್ಗದರ್ಶನ)

ನಿಜವಾಗಿಯೂ ಅವರಿಗೆ, ‘ಸಾಧಕರಿಗಾಗಿ ಏನು ಮಾಡಲಿ, ಎಷ್ಟು ಮಾಡಲಿ, ಎಂದು ಅನಿಸುತ್ತಿರುತ್ತದೆ. ಅವರು ಸಾಧಕರ ಕೈಯನ್ನು ಬಿಡಲಿಕ್ಕಲ್ಲ, ಜನ್ಮಜನ್ಮಾಂತರಗಳಲ್ಲಿ ಜೊತೆ ನೀಡಲು, ಮೋಕ್ಷಪ್ರಾಪ್ತಿಯವರೆಗೆ ಅವರೊಂದಿಗೆ ಮಾರ್ಗಕ್ರಮಣ ಮಾಡಲೆಂದೇ ಹಿಡಿದಿದ್ದಾರೆ !