ಸಾಧಕರ ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಪರಾತ್ಪರ ಗುರು ಡಾ. ಆಠವಲೆಯವರು ಹಗಲುರಾತ್ರಿ ಮಾಡಿದ ದಣಿವರಿಯದ ಪರಿಶ್ರಮ !

ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುವ ಕೆಲವು ಸಾಧಕರಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿದೆ. ಸಾಧಕರಿಗಾಗುವ ಕೆಟ್ಟ ಶಕ್ತಿಗಳ ತೊಂದರೆಗಳು ಸೂಕ್ಷ್ಮದಲ್ಲಿ ನಡೆಯುವ ದೇವಾಸುರ ಯುದ್ಧದ ಲಕ್ಷಣವಾಗಿದೆ. ಭಗವಾನ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಹೇಳುವಾಗ ‘ನಾನು ಕೌರವರನ್ನು ಸೂಕ್ಷ್ಮದಿಂದ ಮೊದಲೇ ಕೊಂದಿದ್ದೇನೆ. ನೀನು ಕೇವಲ ನಿಮಿತ್ತ ಮಾತ್ರನಾಗು, ಎಂದು ಹೇಳಿದ್ದನು. ಸಾಧನೆಯ ಬಲದಲ್ಲಿ ಸೂಕ್ಷ್ಮದ ಯುದ್ಧವನ್ನು ಗೆಲ್ಲುವುದೆಂದರೆ ಕೆಟ್ಟ ಶಕ್ತಿಗಳನ್ನು ನಿಶಕ್ತಗೊಳಿಸುವುದು ಆವಶ್ಯಕವಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರು ನಿರ್ದಿಷ್ಟವಾಗಿ ಈ ಕಾರ್ಯವನ್ನೇ ಮಾಡುತ್ತಿದ್ದಾರೆ. ತೊಂದರೆಯಿರುವ ಸಾಧಕರ ತೊಂದರೆಗಳು ದೂರವಾಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಅವರಿಗಾಗಿ ಎಷ್ಟು ಕಷ್ಟವನ್ನು ತೆಗೆದುಕೊಂಡಿದ್ದಾರೆ, ಎಂಬುದರ ಕೆಲವು ಉದಾಹರಣೆಗಳನ್ನು ನೀಡಿ ಅವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತಿದ್ದೇವೆ.

ಸದ್ಗುರು (ಡಾ.) ಮುಕುಲ ಗಾಡಗೀಳ

‘ಇಂದಲ್ಲ-ನಾಳೆ ಈ ದೇಹವನ್ನು ಬಿಡುವುದೇ ಇದೆ ಎಂಬ ವಿಚಾರದಿಂದ ಕೆಟ್ಟ ಶಕ್ತಿಗಳ ತೊಂದರೆಗಳಿಂದಲೂ ಕಲಿಯುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆಯವರು ಒಂದು ಬಾರಿ ಮಾರ್ಗದರ್ಶನದಲ್ಲಿ ನನಗೆ, “ಕೆಟ್ಟ ಶಕ್ತಿಗಳ ತೊಂದರೆಗಳ ಪ್ರಮಾಣವು ದಿನೇದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಈ ತೊಂದರೆಗಳಿಂದಲೂ ನಾವು ಏನಾದರೂ ಕಲಿಯೋಣ. ನಾವು ಕಲಿತರೆ ಅದರಿಂದ ಮನುಕುಲಕ್ಕೆ ಉಪಯೋಗವಾಗಬಹುದು. ಮನುಕುಲವು ಕಲಿತರೆ ಒಳ್ಳೆಯದು. ನಮಗೇನು, ಇಂದಲ್ಲ ನಾಳೆ ದೇಹ ಬಿಡಲೇ ಬೇಕು, ಎಂದು ಹೇಳಿದರು. ಆಗ ನಾನು ಅವರಿಗೆ, “ನಾನು ಸಹ ತೊಂದರೆಯಾಗುತ್ತಿರುವಾಗ ಸಾಧಕರಿಗಾಗಿ ನಮ್ಮ ಪ್ರಾಣ ಹೋದರೂ, ತೊಂದರೆ ಇಲ್ಲ, ಆದರೆ ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಪ್ರಯೋಗ ನಿಲ್ಲಿಸುವುದು ಬೇಡ ಎಂದೆನು. – (ಪೂ.) ಡಾ. ಮುಕುಲ ಗಾಡಗೀಳ (೧.೮.೨೦೧೮)

ಸ್ವತಃ ಅನಾರೋಗ್ಯದಲ್ಲಿದ್ದರೂ ಸಾಧಕರ ಚಿಕಿತ್ಸೆಗಾಗಿ ಆದ್ಯತೆ ನೀಡುವುದು

‘ಕುಡಾಳದ ವೈದ್ಯರಾದ ಸುವಿನಯ ದಾಮಲೆ ಇವರು ಉಪಚಾರ ಮಾಡಲು ಗೋವಾದ ರಾಮನಾಥಿ ಆಶ್ರಮಕ್ಕೆ ಬಂದಿದ್ದರು. ಆಗ ನನಗೆ ಅನೇಕ ವ್ಯಾಧಿಗಳಿದ್ದುದರಿಂದ ವೈದ್ಯ ಮೇಘರಾಜ ಪರಾಡಕರವರು, “ನಿಮ್ಮ ಮೇಲೆ ಉಪಚಾರವನ್ನು ಮಾಡಲು ವೈದ್ಯರಿಗೆ ಹೇಳಲೇನು ? ಎಂದು ಕೇಳಿದರು. ಆಗ ನನ್ನ ಬಾಯಿಯಿಂದ ಸಹಜವಾಗಿಯೇ, ಈಗ “ನನ್ನ ಆಯುಷ್ಯವು ಮುಗಿಯುತ್ತಾ ಬಂದಿದೆ, ವೈದ್ಯ ದಾಮಲೆಯವರು ಸಾಧಕರ ಮೇಲೆ ಉಪಚಾರವನ್ನು ಮಾಡಲಿ. ಸಾಧಕರ ಆಯುಷ್ಯವು ಇನ್ನು ತುಂಬಾ ಇದೆ. ಅವರಿಗೆ ಉಪಚಾರದಿಂದ ಬಹಳಷ್ಟು ವರ್ಷಗಳವರೆಗೆ ಲಾಭವಾಗುವುದು ಎಂದು ಹೇಳಲ್ಪಟ್ಟಿರು.  – (ಪರಾತ್ಪರ ಗುರು) ಡಾ. ಆಠವಲೆ

೧. ರಾತ್ರಿ-ಅಪರಾತ್ರಿಯಲ್ಲಿಯೂ ಎದ್ದು ಬಂದು ತೊಂದರೆಯಿರುವ ಸಾಧಕರಿಗೆ ಆಧಾರ ನೀಡುವುದು

‘ವರ್ಷ ೨೦೦೨ – ೨೦೦೩ ರಲ್ಲಿ ಮಿರಜ ಆಶ್ರಮದಲ್ಲಿನ ಕೆಲವು ಸಾಧಕರಿಗೆ ಆಧ್ಯಾತ್ಮಿಕ ತೊಂದರೆಯಿಂದ ಮಾನಸಿಕ ತೊಂದರೆಗಳಾಗುತ್ತಿದ್ದವು, ಇದರಿಂದ ಅವರು ಅಸ್ವಸ್ಥರಾಗುತ್ತಿದ್ದರು. ಇಂತಹ ಸಾಧಕರಿಗೆ ರಾತ್ರಿ-ಅಪರಾತ್ರಿಯ ಸಮಯದಲ್ಲಿ ಏನಾದರೂ ತೊಂದರೆಗಳಾದರೆ ಪರಾತ್ಪರ ಗುರು ಡಾಕ್ಟರರು ರಾತ್ರಿ ಎದ್ದು ಬಂದು ಅವರಿಗೆ ಆಧಾರ ನೀಡುತ್ತಿದ್ದರು. ಅವರ ಸಮಸ್ಯೆಗಳನ್ನು ಅರಿತುಕೊಂಡು ಅವರಿಗೆ ಉಪಾಯಯೋಜನೆಗಳನ್ನು ಹೇಳುತ್ತಿ ದ್ದರು. ಅವರು ಸ್ವತಃ ತಾವೇ ಅವರಿಗಾಗಿ ನಾಮಜಪವನ್ನೂ ಮಾಡುತ್ತಿದ್ದರು. ಕೆಲವು ಜನರಿಗೆ ತೀವ್ರ ತಲೆನೋವು, ಮೈಕೈನೋವು, ಶ್ವಾಸ ತೆಗೆದುಕೊಳ್ಳಲು ಬಾರದಿರುವುದು ಮುಂತಾದ ತೊಂದರೆಗಳಾಗುತ್ತಿದ್ದವು. ಆ ಸಮಯದಲ್ಲಿ ಅವರು ಆ ಸಾಧಕರೊಂದಿಗೆ ಕುಳಿತು ಸಂಪೂರ್ಣ ರಾತ್ರಿ ನಾಮಜಪ ಮಾಡುತ್ತಿದ್ದರು. ಅವರು ಜೊತೆಗಿರುವುದರಿಂದ ಸಾಧಕರಿಗೆ ನಾಮಜಪ ಮಾಡಲು ಉತ್ಸಾಹ ದೊರಕಿ ಅವರ ನಾಮಜಪವೂ ಚೆನ್ನಾಗಿ ಆಗುತ್ತಿತ್ತು ಮತ್ತು ಇದರಿಂದ ಅವರ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುತ್ತಿದ್ದವು.

– ಯೋಗೇಶ ಜಲತಾರೆ, ವಕೀಲರು, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೫.೨೦೧೬)

೨. ಸಾಧಕರಿಗಾಗಿ ನಾಮಜಪ ಮಾಡುವಾಗ ಹಸಿವು-ನೀರಡಿಕೆಯನ್ನು ಮರೆಯುವುದು

‘ಸಾಧಕರಿಗೆ ತೊಂದರೆಯಾಗಲು ಆರಂಭವಾದರೆ, ಅವರು ಸತತವಾಗಿ ಒಂದೇ ಸ್ಥಳದಲ್ಲಿ ತುಂಬಾ ಸಮಯ ಕುಳಿತು ಮತ್ತು ಕೆಲವೊಮ್ಮೆ ಎದ್ದು ನಿಂತು ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದರು. ಅವರು ಬೆಳಗಿನ ಅಲ್ಪಾಹಾರವಾದ ನಂತರ ರಾತ್ರಿ ಮಲಗುವ ಸಮಯದವರೆಗೆ ಸತತವಾಗಿ ನಾಮಜಪವನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ತಮ್ಮ ಊಟ-ತಿಂಡಿ, ವಿಶ್ರಾಂತಿ ಇತ್ಯಾದಿಗಳ ಕಡೆಗೆ ಅವರ ಗಮನವೇ ಇರುತ್ತಿರಲಿಲ್ಲ. ರಾತ್ರಿಯ ಸಮಯದಲ್ಲಿಯೂ ಯಾರಿಗಾದರೂ ತೊಂದರೆಗಳಾದರೆ, ಈ ಸಾಧಕರ ತೊಂದರೆಗಳು ಕಡಿಮೆಯಾಗಿ ಅವರು ಬೇಗನೆ ಚೇತರಿಸಿಕೊಳ್ಳಬೇಕೆಂದು ಆಗಲೂ, ಅವರು ನಾಮಜಪ ಮಾಡಲು ಬರುತ್ತಿದ್ದರು.

ಇತರರಿಗಾಗಿ ನಾಮಜಪ ಮಾಡುವುದರಿಂದ ಪರಾತ್ಪರ ಗುರು ಡಾಕ್ಟರರ ಮೇಲೆಯೂ ಕೆಟ್ಟ ಶಕ್ತಿಗಳ ಆಕ್ರಮಣಗಳಾಗುತ್ತಿದ್ದವು. ಅವರಿಗೂ ತೊಂದರೆಗಳಾಗುತ್ತಿದ್ದವು; ಆದರೆ ಅವರು ಆ ಬಗ್ಗೆ ನಮಗೆ ಗೊತ್ತಾಗಲು ಬಿಡುತ್ತಿರಲಿಲ್ಲ. ಸಾಧಕರ ಮೇಲಿನ ಪ್ರೀತಿಯಿಂದ, ಅವರು ಇಷ್ಟೊಂದು ತೊಂದರೆಗಳನ್ನು ಸಹಿಸಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದರು.

– ಕು. ಗೀತಾ ಚೌಧರಿ, ಸನಾತನ ಆಶ್ರಮ, ರಾಮನಾಥಿ, ಗೋವಾ.

೩. ತೊಂದರೆಗಳನ್ನು ನೀಡುವ ಕೆಟ್ಟ ಶಕ್ತಿಗಳ ಅಸಹ್ಯ ವೇದನೆಗಳ ವಿಚಾರವನ್ನು ಮಾಡುವ ಕರುಣಾಮಯ ಪ.ಪೂ. ಡಾಕ್ಟರರು !

‘೨೦೦೨ ನೇ ಇಸವಿಯಲ್ಲಿ ಪರಾತ್ಪರ ಗುರು ಡಾಕ್ಟರರು ಧ್ಯಾನ ತಗಲಿಸಿ ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರಿಗಾಗಿ ಉಪಾಯವನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಓರ್ವ ಸಾಧಕಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಯು ‘ನನ್ನ ಮೇಲೆ ರಾಮಬಾಣ ಬಿಡಿ ‘ನನ್ನ ಮೇಲೆ ರಾಮಬಾಣ ಬಿಡಿ ಎಂದು ಮೇಲಿಂದ ಮೇಲೆ ಸೂಕ್ಷ್ಮದಿಂದ ಹೇಳತೊಡಗಿತು. ಇದನ್ನು ಕೇಳಿ ಪರಾತ್ಪರ ಗುರು ಡಾಕ್ಟರರು ಕಣ್ಣುಗಳನ್ನು ತೆರೆದರು ಹಾಗೂ ಆ ಶಕ್ತಿಯನ್ನು ಉದ್ದೇಶಿಸಿ, ‘ಸೂಕ್ಷ್ಮದಿಂದ ರಾಮಬಾಣವನ್ನು ಬಿಟ್ಟರೆ, ನಿನಗೆ ಅದು ಜೋರಾಗಿ ತಾಗುವುದು ಮತ್ತು ನಿನಗೆ ಅಸಹ್ಯ ವೇದನೆಗಳಾಗುವವು. ಅದಕ್ಕಿಂತಲೂ ನೀನು ಪ್ರಭು ಶ್ರೀರಾಮನ ನಾಮಜಪ ಮಾಡು ಮತ್ತು ಸಾಧಕಿಗೆ ತೊಂದರೆಗಳನ್ನು ಕೊಡಬೇಡ, ರಾಮನು ನಿನ್ನ ಕಲ್ಯಾಣ ಮಾಡುವನು, ಎಂದು ಹೇಳಿದರು. ಇದರಿಂದ ಅವರ ಅಂತಃಕರಣದಲ್ಲಿ ಕೆಟ್ಟ ಶಕ್ತಿಗಳ ಕುರಿತಾಗಿರುವ ಪ್ರೀತಿಯನ್ನು ನೋಡಿ ನನ್ನ ಕಣ್ಣುಗಳು ತುಂಬಿ ಬಂದವು.

– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೧.೨೦೧೩)

ಪರಾತ್ಪರ ಗುರು ಡಾ. ಆಠವಲೆಯವರ ಪ್ರೀತಿಯ ಪ್ರಸಂಗಗಳನ್ನು ವ್ಯಕ್ತಪಡಿಸಲು ಮಾತುಗಳೂ ಅಸಮರ್ಥವಾಗಿವೆ. ಕೇವಲ ಆ ವಾತ್ಸಲ್ಯಮಯ ಪ್ರೀತಿಯನ್ನು ಅನುಭವಿಸಿ ಅವರ ಪ್ರೀತಿಸಾಗರದಲ್ಲಿನ ಕ್ಷಣಮುತ್ತನ್ನು ಮನಮಂದಿರದಲ್ಲಿ ಸಂಗ್ರಹಿಸಿಡುವುದು, ಇಷ್ಟನ್ನೇ ನಾವು ಮಾಡಬಹುದು. ಹೇ ಗುರುದೇವರೇ, ನಮ್ಮನ್ನು ತಮ್ಮ ಪ್ರೀತಿಯ ಬಂಧನದಲ್ಲಿಟ್ಟುಕೊಳ್ಳಿರಿ, ತಮ್ಮ ಚರಣಗಳಲ್ಲಿ ಸ್ಥಾನವನ್ನು ನೀಡಿರಿ, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ !