ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ !

ಶ್ರೀ. ಚೇತನ ರಾಜಹಂಸ

೧. ಭಾರತ ಸ್ವಯಂಭೂ ಹಿಂದೂ ರಾಷ್ಟ್ರವೇ ಆಗಿದೆ; ಆದರೆ ಸಂವಿಧಾನದ ಮೂಲಕ ಅದು ಘೋಷಣೆಯಾಗಬೇಕಾಗಿದೆ !

ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಬಂಧಿಸಿ ಎಲ್ಲ ಕಡೆ ಪ್ರವಾಸ ಮಾಡುತ್ತಿರುವಾಗ ಕೆಲವರಲ್ಲಿ ಒಂದು ಪ್ರಶ್ನೆ ಇರುತ್ತದೆ, ‘ಭಾರತ ಹಿಂದೂ ರಾಷ್ಟ್ರವೇ ಆಗಿದೆ, ಹೀಗಿರುವಾಗ ಅದನ್ನು ಪುನಃ ಘೋಷಣೆ ಮಾಡುವ ಆವಶ್ಯಕತೆಯೇನಿದೆ ?’ ವಾಸ್ತವದಲ್ಲಿ ಸ್ವಯಂಭೂ ಹಿಂದೂ ರಾಷ್ಟ್ರವೆಂಬುದು ತ್ರಿಕಾಲಾಬಾಧಿತ ಸತ್ಯವಾಗಿದೆ, ಇಂದಿನ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಅದಕ್ಕೆ ‘ಹಿಂದೂ ರಾಷ್ಟ್ರ’ವೆಂಬ ಸ್ಥಾನವೆಲ್ಲಿದೆ ? ಒಬ್ಬ ವ್ಯಕ್ತಿಯು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ ಅವನು ಸ್ವಾಭಾವಿಕವಾಗಿ ಡಾಕ್ಟರ್‌ ಆಗಿರುತ್ತಾನೆ; ಆದರೆ ಪ್ರಮಾಣಪತ್ರ ಪಡೆಯದೆ ಅವನು ಡಾಕ್ಟರ್’ ಎಂದು ನೌಕರಿ ಮಾಡುವ ಹಾಗಿಲ್ಲ. ಅದೇ ರೀತಿ ಸಂವಿಧಾನದ ಮೂಲಕ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸದೆ ಇಂದಿನ ಸ್ಥಿತಿಯಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಭಾವನಾತ್ಮಕ ವಿಚಾರ ಮಾಡುವ ಬದಲು ಸಂವಿಧಾನಾತ್ಮಕ ಹಿಂದೂ ರಾಷ್ಟ್ರವೆಂದು ಘೋಷಿಸÀಬೇಕೆಂದು ಪ್ರಯತ್ನಿಸುವುದು ಮಹತ್ವದ್ದಾಗಿದೆ.

೨. ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ ಅದಕ್ಕಾಗಿ ನಾವು ಮೊಟ್ಟಮೊದಲು ಕೆಲವು ಸಂಜ್ಞೆಗಳನ್ನು ತಿಳಿದುಕೊಳ್ಳೋಣ.

ಸಂವಿಧಾನಾತ್ಮಕ ಶಬ್ದವೆಂದರೇನು ? ಇದನ್ನು ಮೊದಲು ತಿಳಿದುಕೊಳ್ಳೋಣ. ಭಾರತೀಯ ಸಂವಿಧಾನದಲ್ಲಿ ಬರೆದಿರುವ ಶಬ್ದವನ್ನು ‘ಸಂವಿಧಾನಾತ್ಮಕ ಶಬ್ದ’ ಎನ್ನುತ್ತಾರೆ. ಈ ನಿಯಮಕ್ಕನುಸಾರ ಈ ಮುಂದಿನ ಶಬ್ದ ಸಂವಿಧಾನಾತ್ಮಕವಾಗಿದೆ.

೨ ಅ. ‘ಕಾಸ್ಟ್‌’ (ಜಾತಿ) : ಸಂವಿಧಾನದಲ್ಲಿ ‘ಶೆಡ್ಯುಲ್‌ ಕಾಸ್ಟ್‌’ (ಪರಿಶಿಷ್ಟ ಜಾತಿ) ಎಂಬ ಶಬ್ದವಿದೆ. ಆದ್ದರಿಂದ ಜಾತಿ ಶಬ್ದವನ್ನು ವಿರೋಧಿಸುವುದು, ಸಂವಿಧಾನವನ್ನು ವಿರೋಧಿಸಿದಂತೆ.

೨ ಆ. ಹಿಂದೂ : ಇತ್ತೀಚೆಗಷ್ಟೆ ಕರ್ನಾಟಕದ ಚುನಾವಣೆಯ ಮೊದಲು ಕಾಂಗ್ರೆಸ್ಸಿನ ಕರ್ನಾಟಕದ ಪ್ರದೇಶಾಧ್ಯಕ್ಷ ಸತೀಶ ಜಾರಕಿಹೊಳಿ ಇವರು ‘ಹಿಂದೂ’ ಶಬ್ದದ ಅರ್ಥ ಅಶ್ಲೀಲ ಎಂದಾಗಿದ್ದು ಅದು ಪರಕೀಯವಾಗಿದೆ’, ಎಂದು ಹೇಳಿಕೆ ನೀಡಿ ದ್ದರು. ನಿಜವಾಗಿಯೂ ಅವರ ಹೇಳಿಕೆಯು ಅಜ್ಞಾನದಿಂದ ಕೂಡಿದೆ. ಸಿಂಧೂ ನದಿಯಿಂದ ‘ಹಿಂದೂ’ ಶಬ್ದ ತಯಾರಾಗಿದೆ. ಪಾಣಿನೀಯ ವ್ಯಾಕರಣಕ್ಕನುಸಾರ ‘ಸ’ವನ್ನು ‘ಹ’ ಎಂದು ಉಚ್ಚರಿಸಲಾಗುತ್ತದೆ. ಉದಾ. ‘ಸಪ್ತಾಹ’ ಶಬ್ದವನ್ನು ‘ಹಫ್ತಾಹ’ ಎಂದು ಹೇಳಲಾಗುತ್ತದೆ. ಸಂವಿಧಾನದ ಭಾಷೆಯಲ್ಲಿ ಹೇಳುವುದಾದರೆ ‘ಹಿಂದೂ’ ಶಬ್ದವು ಸಂವಿಧಾನಾತ್ಮಕವಾಗಿದೆ. ಸಂವಿಧಾನದ ಪರಿಚ್ಛೇದ ‘೨೫ ಬ’ದಲ್ಲಿ ಈ ಶಬ್ದವಿದೆ. ಅದರಲ್ಲಿ ‘ಸಿಕ್ಖ್‌, ಜೈನ, ಬೌದ್ಧ, ಲಿಂಗಾಯತ ಮುಂತಾದ ಶಬ್ದಗಳಿವೆ’, ಎಂದು ಸ್ಪಷ್ಟೀಕರಣ ನೀಡಲಾಗಿದೆ. ಸಂವಿಧಾನದ ವ್ಯಾಪ್ತಿಗನುಸಾರ ಈ ಶಬ್ದದ ಬಗ್ಗೆ ಜಾರಕೀಹೊಳಿಯವರ ಆಕ್ಷೇಪಾರ್ಹ ಹೇಳಿಕೆಯೆಂದರೆ, ಸಮಸ್ತ ಹಿಂದೂ ಸಮಾಜಕ್ಕಾದ ಅಪಮಾನವಾಗಿದೆ. ನಿಜವಾಗಿಯೂ ಇದಕ್ಕಾಗಿ ಅವರ ವಿರುದ್ಧ ‘ಸಂವಿಧಾನದ್ರೋಹಿ’ಯೆಂದು ಖಟ್ಲೆಯನ್ನು ದಾಖಲಿಸಬೇಕು !

೨ ಇ. ಧರ್ಮ : ಈ ಶಬ್ದ ಸಂವಿಧಾನದಲ್ಲಿಲ್ಲ. ಸಂವಿಧಾನ ರಚಿಸುವವರು ‘ಧರ್ಮ’ ಮತ್ತು ‘ರಿಲಿಜನ್’ ಈ ಶಬ್ದಗಳು ಒಂದೇ ಎಂದು ತಿಳಿದಿದ್ದಾರೆ. ಆದರೆ ‘ಆಕ್ಸ್‌ಫರ್ಡ್ ಶಬ್ದಕೋಶ’ವು ಇವೆರಡೂ ಶಬ್ದಗಳ ಅರ್ಥ ಬೇರೆ ಬೇರೆಯಾಗಿವೆಯೆಂದು ಸ್ಪಷ್ಟಪಡಿಸಿದೆ.

೨ ಇ ೧. ಧರ್ಮ : ‘ಯುನಿವರ್ಸಲ್‌ ಲಾಸ್‌ ಆಫ್‌ ಕರೆಕ್ಟ್ ಸೋಶಲ್‌ ಕಂಡಕ್ಟ್ ಇನ್‌ ಹಿಂದೂಯಿಸಮ್’ (ಹಿಂದೂ ಧರ್ಮದಲ್ಲಿನ ಸಾಮಾಜಿಕ ಸದಾಚಾರದ ವೈಶ್ವಿಕ ನಿಯಮ)

೨ ಇ ೨. ರಿಲಿಜನ್‌ : ‘ಪರ್ಟಿಕ್ಯುಲರ್‌ ಸಿಸ್ಟಮ್‌ ಆಫ್‌ ಫೈಥ್‌ ಎಂಡ್‌ ವರ್ಶಿಪ್‌’, ಅಂದರೆ ‘ವಿಶ್ವಾಸ ಇಡುವ ಹಾಗೂ ಉಪಾಸನೆಯ ವಿಶಿಷ್ಟ ಪದ್ಧತಿ !’

೨ ಈ. ಸೆಕ್ಯುಲರ್‌ (ಜಾತ್ಯತೀತ) : ಈ ಶಬ್ದವು ೧೯ ನೇ ಶತಮಾನದ ಕ್ರೈಸ್ತ ಸಂಕಲ್ಪನೆಯಾಗಿದೆ. ಈ ಶಬ್ದ ಸಂವಿಧಾನದಲ್ಲಿ ಇರಬಾರದು’, ಎಂದು ಅಂದಿನ ಕಾಂಗ್ರೆಸ್ಸಿನ ಮುಖಂಡ ನೆಹರು, ವಲ್ಲಭಭಾಯಿ ಪಟೇಲ ಹಾಗೂ ಸಂವಿಧಾನದ ನಿರ್ಮಾಪಕ ಡಾ. ಅಂಬೇಡ್ಕರ್‌ ಇವರೆಲ್ಲರ ಅಭಿಪ್ರಾಯವಿದ್ದ ಕಾರಣ ೨೬ ಜನವರಿ ೧೯೫೦ ರಂದು ತಯಾರಿಸಿದ ಸಂವಿಧಾನದಲ್ಲಿ ಅದನ್ನು ಅಳವಡಿಸಲಿಲ್ಲ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಆಗ ‘ಸೆಕ್ಯುಲರ್’ ಎಂಬುದು ಒಂದು ಅಸಂವಿಧಾನಾತ್ಮಕ ಶಬ್ದವಾಗಿತ್ತು. ೧೯೭೬ ರಲ್ಲಿ ‘ಸೆಕ್ಯುಲರ್’ ಶಬ್ದವನ್ನು ಭಾರತೀಯ ಸಂವಿಧಾನದಲ್ಲಿ ೪೨ ನೇ ತಿದ್ದುಪಡಿಯೊಂದಿಗೆ ಜೋಡಿಸಲಾಯಿತು. ಆ ಸಮಯದಲ್ಲಿ ತುರ್ತು ಪರಿಸ್ಥಿತಿ ಇತ್ತು. ವಿರೋಧಿ ಪಕ್ಷಗಳ ಸಂಸದರು ಸೆರೆಮನೆ ಯಲ್ಲಿದ್ದರು. ಆಗ ರಾಮಮನೋಹರ ಲೋಹಿಯಾ ಇವರ ನೇತೃತ್ವದಲ್ಲಿ ಅಂದಿನ ಸಮಾಜವಾದಿ ಹಾಗೂ ಜನಸಂಘವಾದಿ ಗಳು ತುರ್ತುಪರಿಸ್ಥಿತಿಯನ್ನು ವಿರೋಧಿಸುತ್ತಿದ್ದರು. ಈ ಕಾಂಗ್ರೆಸ್‌ ವಿರೋಧಿ ಮೈತ್ರಿಯನ್ನು ಮುರಿಯಲು ಹಾಗೂ ಸಮಾಜ ವಾದಿಗಳಿಗೆ ಹಾಗೂ ಜನಸಂಘದ ಮತಪೆಟ್ಟಿಗೆಯಾಗಿರದ ಹಿಂದೂಯೇತರರನ್ನು ಒಲೈಸಲು ಅಂದಿನ ಇಂದಿರಾ ಗಾಂಧಿ ಸರಕಾರವು ೪೨ ನೇ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ ‘ಸಮಾಜವಾದಿ’ ಹಾಗೂ ಸೆಕ್ಯುಲರ್’ ಶಬ್ದಗಳನ್ನು ತುರುಕಿಸಿತ. ಆಗ ‘ಸೆಕ್ಯುಲರ್’ ಶಬ್ದದ ವ್ಯಾಖ್ಯೆ ಮಾಡಿರಲಿಲ್ಲ. ಸಂವಿಧಾನದಲ್ಲಿ ಯಾವುದೇ ಶಬ್ದವನ್ನು ಹಾಕುವಾಗ ಆ ಶಬ್ದದ ವ್ಯಾಖ್ಯೆ ಮಾಡುವುದು ಅಥವಾ ವ್ಯಾಪ್ತಿಯನ್ನು ಹೇಳುವುದು ಆವಶ್ಯಕವಾಗಿರುತ್ತದೆ; ಏಕೆಂದರೆ, ಅದಕ್ಕನುಸಾರ ನ್ಯಾಯಾಲಯಗಳು ತೀರ್ಪು ನೀಡುತ್ತವೆ. ವಿಧಿಮಂಡಳ ಕಾನೂನು ತಯಾರಿಸುತ್ತದೆ ಹಾಗೂ ಆಡಳಿತ ಅವುಗಳ ಅನುಷ್ಠಾನ ಮಾಡುತ್ತದೆ. ದುರದೃಷ್ಠವಶಾತ್, ಇಂದಿನ ವರೆಗೆ ಸಂವಿಧಾನದಲ್ಲಿನ ‘ಸೆಕ್ಯುಲರ್’ ಶಬ್ದಕ್ಕೆ ಯಾವುದೇ ವ್ಯಾಖ್ಯೆಯನ್ನು ಮಾಡಿಲ್ಲ. ಮೊರಾರ್ಜಿ ದೇಸಾಯಿ ಸರಕಾರವು ‘ಸೆಕ್ಯುಲರ್’ ಶಬ್ದದ ಅರ್ಥ ‘ಸರ್ವಧರ್ಮ ಸಮಭಾವ’ ಎಂದು ಹೇಳುವ ಮಸೂದೆಯನ್ನು ಮಂಡಿಸಿತು, ಆದರೆ ಆಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿದ್ದರು. ಆವರು ಅದನ್ನು ವಿರೋಧಿಸಿದರು ಹಾಗೂ ‘ಸೆಕ್ಯುಲರ್’ ಶಬ್ದ ಪುನಃ ವ್ಯಾಖ್ಯಾರಹಿತವಾಗಿ ಉಳಿಯಿತು.

೩. ‘ಸೆಕ್ಯುಲರ್’ ಶಬ್ದಕ್ಕೆ ಅರ್ಥವಿಲ್ಲದ ಕಾರಣ ಆಗುತ್ತಿರುವ ಅನರ್ಥ !

‘ಸೆಕ್ಯುಲರ್’ ಶಬ್ದಕ್ಕೆ ಸಂವಿಧಾನದಲ್ಲಿ ಅಧಿಕೃತ ಅರ್ಥವಿಲ್ಲದ ಕಾರಣ ಪ್ರಜಾಪ್ರಭುತ್ವದ ನಾಲ್ಕೂ ಸ್ತಂಭಗಳು ಮನಬಂದಂತೆ ಅದರ ವ್ಯಾಖ್ಯೆಯನ್ನು (ಇಂಟರಪ್ರಿಟೇಶನ್) ಮಾಡುತ್ತವೆ ಹಾಗೂ ಒಂದು ರೀತಿಯಲ್ಲಿ ಹಿಂದೂ ಧರ್ಮದವರನ್ನೇ ಗುರಿ ಮಾಡುತ್ತಿವೆ.

೩ ಅ. ಸರಕಾರ : ಸರಕಾರ ಅಲ್ಪಸಂಖ್ಯಾತರ ಮತಕ್ಕಾಗಿ ಅವರ ಹಿತದ್ದೇ ವಿಚಾರ ಮಾಡುತ್ತದೆ. ‘ಸೆಕ್ಯುಲರಿಸಮ್‌’ನ ಹೆಸರಿನಲ್ಲಿ ‘ಸಚ್ಚರ ಆಯೋಗ’, ‘ಅಲ್ಪಸಂಖ್ಯಾತ ಆಯೋಗ’, ಹಾಗೂ ‘ವಕ್ಫ್ ಯಾಕ್ಟ್‌’, ‘ಪ್ಲೇಸಸ್‌ ಆಫ್‌ ವರ್ಶಿಪ್‌ ಯಾಕ್ಟ್‌’ ಮೊದಲಾದ ಹಿಂದೂವಿರೋಧಿ ಕಾನೂನುಗಳನ್ನು ಮಾಡಲಾಯಿತು. – ಶ್ರೀ. ಚೇತನ ರಾಜಹಂಸ

೩ ಆ. ಆಡಳಿತ : ದಂಗೆಯಲ್ಲಿ ಅಲ್ಪಸಂಖ್ಯಾತರು ದಂಗೆ ಎಬ್ಬಿಸಿದರೂ ‘ಬ್ಯಾಲೆನ್ಸ್‌’ ಮಾಡಲು ಹಿಂದೂ ಮುಖಂಡರನ್ನು ಬಂಧಿಸಲಾಗುತ್ತದೆ. ಇದು ಎಲ್ಲ ಕಡೆಗಳಲ್ಲಿನ ಆಡಳಿತದ ಅನುಭವವಾಗಿದೆ. ಈ ವಿಷಯದಲ್ಲಿ ನಾನು ವಿಸ್ತಾರವಾಗಿ ಹೇಳಲು ಹೋಗುವುದಿಲ್ಲ.

೩ ಇ. ಮಾಧ್ಯಮಗಳು (ಮೀಡಿಯಾ) : ಪ್ರಸಾರಮಾಧ್ಯಮಗಳು ದಂಗೆಯಲ್ಲಿ ದಂಗೆಕೋರ ಅಲ್ಪಸಂಖ್ಯಾತರ ಹೆಸರುಗಳನ್ನು ಮುಚ್ಚಿಟ್ಟು ‘ಒಂದು ಸಮೂಹ ಅಥವಾ ಗುಂಪು’ ಎಂದು ಸಂಬೋಧಿಸುತ್ತವೆ. ಅಲ್ಪಸಂಖ್ಯಾತರಿಂದಾಗುವ ಪ್ರಚೋದನಕಾರಿ ಭಾಷಣದ ವಿಷಯದಲ್ಲಿ ಚರ್ಚೆ ಮಾಡುವುದಿಲ್ಲ. ಭಯೋತ್ಪಾದಕ ರನ್ನು ಬಂಧಿಸಿದಾಗ ‘ಕಾರ್ಯಕರ್ತರನ್ನು ವಶಕ್ಕೆ ಪಡೆದರು’, ಎಂದು ಬರೆಯುತ್ತಾರೆ ಹಾಗೂ ಯಾವಾಗಲೂ ಹಿಂದೂಗಳನ್ನು ಅಪರಾಧಿಗಳನ್ನಾಗಿ ಮಾಡುತ್ತಾರೆ. ಈ ವಿಷಯದಲ್ಲಿ ನಮಗೆ ಎಲ್ಲರಿಗೂ ಒಳ್ಳೆಯ ಅನುಭವವಿದೆ. ಆದ್ದರಿಂದ ಆ ವಿಷಯದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ.

೩ ಈ. ನ್ಯಾಯಾಂಗ (ಜ್ಯುಡಿಶಿಯರಿ) : ‘ಸೆಕ್ಯುಲರ್’ (ಜಾತ್ಯತೀತ) ಶಬ್ದದ ವ್ಯಾಖ್ಯೆಯ ವಿಷಯದಲ್ಲಿ ನ್ಯಾಯಪಾಲಿಕೆಯಲ್ಲಿ ಬಹಳ ಗೊಂದಲವಿದೆ. ಇದರ ಒಂದು ಉದಾಹರಣೆಯೆಂದರೆ, ಕೇಂದ್ರ ಸರಕಾರದ ಮೂಲಕ ಸಂಚಾಲಿತ ವಿದ್ಯಾಲಯಗಳಿಗೆ ‘ಕೇಂದ್ರೀಯ ವಿದ್ಯಾಲಯ’ಗಳೆಂದು ಹೇಳುತ್ತಾರೆ. ಈ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರತಿದಿನ ‘ಅಸತೋ ಮಾ ಸದ್ಗಮಯ | ತಮಸೋಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂಗಮಯ ||’ (ಪವಮಾನ ಮಂತ್ರ, ಬೃಹದಾಕಾರಣ್ಯ ಉಪನಿಷತ್ತು) (ಅರ್ಥ : ಹೇ ಈಶ್ವರಾ, ನನ್ನನ್ನು ಅಸತ್ಯ ದಿಂದ ಸತ್ಯದ ಕಡೆಗೆ, ಅಂಧಕಾರದಿಂದ ಪ್ರಕಾಶದ ಕಡೆಗೆ ಮತ್ತು ಮೃತ್ಯುವಿನಿಂದ ಅಮರತ್ವದ ಕಡೆಗೆ ಕರೆದುಕೊಂಡು ಹೋಗು.) ಎಂಬ ಪ್ರಾರ್ಥನೆ ಹೇಳಲಾಗುತ್ತದೆ. ೨೦೧೮ ರಲ್ಲಿ ಈ ಪ್ರಾರ್ಥನೆಯ ವಿರುದ್ಧ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಸರ್ವಜನಿಕಹಿತಸಕ್ತಿ ಅರ್ಜಿಯನ್ನು ದಾಖಲಿಸಲಾಯಿತು. ಯಾಚಕನ ಹೇಳಿಕೆಯೇನೆಂದರೆ, ಈ ಪ್ರಾರ್ಥನೆ ಹಿಂದೂ ಭಾಷೆಯಲ್ಲಿದ್ದು ಅದು ಹಿಂದೂಗಳ ಶ್ರದ್ಧೆಗೆ ಸಂಬಂಧಿಸಿದೆ. ಆದ್ದರಿಂದ ಅದು ‘ಸೆಕ್ಯುಲರಿಸಮ್‌’ನ ವಿರುದ್ಧ ಇದೆ. ನಿಜವಾಗಿ ನೋಡಿದರೆ ಇದರಲ್ಲಿ ಹಿಂದೂ ದೇವತೆಯ ಯಾವುದೇ ಪ್ರಾರ್ಥನೆ ಇಲ್ಲದ ಕಾರಣ ಸರ್ವೋಚ್ಚ ನ್ಯಾಯಾಲಯ ಈ ಅರ್ಜಿಯನ್ನು ತಳ್ಳಿಹಾಕಬೇಕಿತ್ತು. ಆದರೆ ದುರದೃಷ್ಟವಶಾತ್‌ ಅದನ್ನು ಸ್ವೀಕರಿಸಲಾಯಿತು, ಅಂದರೆ ಒಂದು ರೀತಿಯಲ್ಲಿ ಈ ‘ನ್ಯರೇಟಿವ್’ (ಕಪೋಲಕಲ್ಪಿತ ಲೇಖನ) ಒಪ್ಪಿಕೊಳ್ಳಲಾಯಿತು.

೩ ಈ ೧. ಭಾಷೆ ಯಾವತ್ತೂ ‘ಸೆಕ್ಯುಲರ್’ ಇರುತ್ತದೆಯೆ ?

ಅರ್ಜಿದಾರನು ಸಂಸ್ಕೃತವನ್ನು ಹಿಂದೂ ಶ್ರದ್ಧೆಗೆ ಸಂಬಂಧಿತ ಭಾಷೆಯೆಂದು ಹೇಳಿ ಅದು ‘ಸೆಕ್ಯುಲರಿಸಮ್‌’ನ ವಿರುದ್ಧ ವಿದೆಯೆಂದು ಹೇಳಿದನು. ನ್ಯಾಯಾಲಯ ಇದನ್ನು ಒಪ್ಪಿಕೊಂಡಿತು, ಅಂದರೆ ಸಂಸ್ಕೃತ ಭಾಷೆ ಮಾತನಾಡುವುದೇ ‘ಸೆಕ್ಯುಲರಿಝಮ್‌’ನ ವಿರುದ್ಧವೆಂದು ಒಪ್ಪಿಕೊಂಡಿತು.

೩ ಈ ೨. ‘ಅಸತೋ ಮಾ ಸದ್ಗಮಯ…’ ಈ ಮೂರು ಸಾಲಿನ ಪ್ರಾರ್ಥನೆಯಲ್ಲಿ ಹಿಂದೂ ಶ್ರದ್ಧೆ ಎಲ್ಲಿದೆ ?

‘ಅಸತ್ಯದಿಂದ ಸತ್ಯದ ಕಡೆಗೆ ಹೋಗು’, ‘ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗು’, ‘ಮೃತ್ಯುವಿನಿಂದ ಅಮರತ್ವದ ಕಡೆಗೆ ಹೋಗು’, ಎಂದು ಹೇಳುವುದೆಂದರೆ ಇದು ವಿಶ್ವಕಲ್ಯಾಣದ ಬೋಧನೆಯಾಗಿದೆ. ಅದರಲ್ಲಿ ಎಲ್ಲಿಯೂ ಧರ್ಮ, ದೇವತೆ, ತತ್ತ್ವಜ್ಞಾನ, ಶ್ರದ್ಧೆ ಇತ್ಯಾದಿ ಇಲ್ಲ. ಇನ್ನೊಂದು ವಿಷಯವೆಂದರೆ, ಈ ದೇಶದಲ್ಲಿ ಹಿಂದೂ ಶ್ರದ್ಧೆಗೆ ಸಂಬಂಧಿಸಿ ಪ್ರಾರ್ಥನೆ ಮಾಡುವುದು, ‘ಸೆಕ್ಯುಲರಿಸಮ್‌’ನ ವಿರುದ್ಧವಾಗಿದೆ ಎನ್ನುವ ವಿಚಾರವನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.

೩ ಈ ೩. ಇಷ್ಟು ಮಾತ್ರವಲ್ಲ, ಭವಿಷ್ಯದಲ್ಲಿ ಈ ವಿಷಯದಲ್ಲಿ ಭಿನ್ನ ಅರ್ಥವೂ ಬರಬಹುದು. ಉದಾಹರಣೆಗೆ,

– ‘ಸೆಕ್ಯುಲರಿಸಮ್‌’ಎಂದರೆ ಸಂಸ್ಕೃತ ಭಾಷೆಗೆ ವಿರೋಧ ಹಾಗೂ ಆಂಗ್ಲ ಭಾಷೆಯ ಸ್ವೀಕಾರ

– ‘ಸೆಕ್ಯುಲರಿಸಮ್’ ಎಂದರೆ ಹಿಂದೂ ಪ್ರಾರ್ಥನೆಗಳಿಗೆ ವಿರೋಧ ಹಾಗೂ ಕ್ರೈಸ್ತ ‘ಪ್ರೆಯರ್‌’ನ ಸ್ವೀಕಾರ

– ‘ಸೆಕ್ಯುಲರಿಸಮ್’ ಎಂದರೆ ಭಾರತೀಯ ದರ್ಶನಶಾಸ್ತ್ರಕ್ಕೆ ವಿರೋಧ

– ‘ಸೆಕ್ಯುಲರಿಸಮ್’ ಎಂದರೆ ಸತ್ಯದ ಕಡೆಗೆ ಹೋಗುವುದಕ್ಕೆ ವಿರೋಧ

– ‘ಸೆಕ್ಯುಲರಿಸಮ್’ ಎಂದರೆ ಜ್ಞಾನಪ್ರಕಾಶದ ಕಡೆಗೆ ಹೋಗಲು ಮತ್ತು ಅಮರತ್ವದ ಕಡೆಗೆ ಹೋಗುವ ದರ್ಶನಶಾಸ್ತ್ರಕ್ಕೆ ವಿರೋಧ. ಇಂತಹ ಹೊಸ ಅರ್ಥವನ್ನು ಈ ಅರ್ಜಿಯ ಆಧಾರದಲ್ಲಿ ಹುಟ್ಟುಹಾಕಬಹುದು !

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೨೫.೫.೨೦೨೩)