ISKCON Member Bail Denied : ಬಾಂಗ್ಲಾದೇಶದಲ್ಲಿ ‘ಇಸ್ಕಾನ್’ ಸದಸ್ಯ ಚಿನ್ಮಯ ಪ್ರಭು ಅವರ ಜಾಮೀನು ಅರ್ಜಿ ವಜಾ !

ಢಾಕಾ – ‘ಇಸ್ಕಾನ್’ ಸದಸ್ಯ ಚಿನ್ಮಯ ಪ್ರಭು ಅವರು ಒಂದು ತಿಂಗಳಿನಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದಾರೆ.  ಇತ್ತೀಚೆಗೆ ಚಿತ್ತಗಾಂಗ್ ಮಹಾನಗರ ಸತ್ರ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ಕುರಿತು 30 ನಿಮಿಷಗಳ ಕಾಲ ವಿಚಾರಣೆ ನಡೆಯಿತು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಚಿನ್ಮಯ ಪ್ರಭು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಇದಕ್ಕೂ ಮುನ್ನ ಡಿಸೆಂಬರ್ 11 ರಂದು ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಚಿನ್ಮಯ ಪ್ರಭು ಅವರ ಮೇಲೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಮತ್ತು ಹಿಂಸಾಚಾರವನ್ನು ಪ್ರೋತ್ಸಾಹಿಸಿರುವ ಇತ್ಯಾದಿ ಆರೋಪವನ್ನು ಹೊರಿಸಿದ್ದಾರೆ.

ಕೋಲಕಾತಾ ‘ಇಸ್ಕಾನ್’ನ ಉಪಾಧ್ಯಕ್ಷ ರಾಧಾ ರಮಣ ಮಾತನಾಡಿ, ಹೊಸ ವರ್ಷದಲ್ಲಿ ಚಿನ್ಮಯ ಪ್ರಭು ಅವರಿಗೆ ಸ್ವಾತಂತ್ರ್ಯ ಸಿಗುವುದು ಎಂದು ಎಲ್ಲರೂ ಆಶಿಸಿದ್ದರು. ಆದರೆ 42 ದಿನಗಳ ನಂತರವೂ ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ಬಾಂಗ್ಲಾದೇಶ ಸರಕಾರ ಚಿನ್ಮಯ ಪ್ರಭು ಅವರಿಗೆ ನ್ಯಾಯ ಸಿಗುವ ಬಗ್ಗೆ ಭರವಸೆ ನೀಡಬೇಕು. ಈ ವಿಚಾರಣೆಯ ನಂತರ ಚಿನ್ಮಯ ಪ್ರಭು ಪರ ವಕೀಲ ಅಪೂರ್ವ ಕುಮಾರ ಭಟ್ಟಾಚಾರ್ಯ ಅವರು, ಜಾಮೀನಿಗಾಗಿ ಉಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ.