ಪ್ರಯಾಗರಾಜ ಮಹಾಕುಂಭಪರ್ವ ೨೦೨೫
ಪ್ರಯಾಗರಾಜ – ಮಹಾಕಂಭಪರ್ವಕ್ಕಾಗಿ ಭಕ್ತರ ಜೊತೆಗೆ ಚಿಕ್ಕ ಮಕ್ಕಳು ಕೂಡ ಬರುವರು ಎಂಬುದನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯು ಮಕ್ಕಳ ಸುರಕ್ಷಗಾಗಿ ರೈಲು ನಿಲ್ದಾಣದಲ್ಲಿ ಸ್ವತಂತ್ರ ಬಾಲ ಅಧಿಕಾರ ವಿಭಾಗವನ್ನು ಸ್ಥಾಪನೆ ಮಾಡಿದೆ. ಈ ವಿಭಾಗವು ಕೇವಲ ಬಾಲಕರ ಸುರಕ್ಷತೆಗಾಗಿ ಕೆಲಸ ಮಾಡಲಿದೆ. ಬಾಲ ಅಧಿಕಾರದ ಕುರಿತು ಸಂವೇದನೆ ಹೊಂದಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಈ ವಿಭಾಗದಲ್ಲಿ ನೇಮಕ ಮಾಡಲಾಗುವುದು. ಪೋಷಕರಿಂದ ತಪ್ಪಿಸಿಕೊಂಡಿರುವ, ಮನೆಯಿಂದ ಓಡಿ ಬಂದಿರುವ, ಹಾದಿ ತಪ್ಪಿರುವ ಅಥವಾ ಪೋಷಕರು ಬಲವಂತವಾಗಿ ಬಿಟ್ಟು ಹೋಗಿರುವ ಮಕ್ಕಳ ರಕ್ಷಣೆಗಾಗಿ ಈ ತಂಡ ಕಾರ್ಯನಿರತವಾಗಿರುವುದು. ಚಿಕ್ಕ ಮಕ್ಕಳ ಜೇಬಿನಲ್ಲಿ ಮಕ್ಕಳ ಹೆಸರು, ತಂದೆಯ ಹೆಸರು, ಸಂಪೂರ್ಣ ವಿಳಾಸ ಮತ್ತು ಮೊಬೈಲ್ ನಂಬರ್ ಮುಂತಾದ ಮಾಹಿತಿ ಇಡಬೇಕೆಂದು ರೈಲ್ವೆ ಇಲಾಖೆ ಪೋಷಕರಿಗೆ ಕರೆ ನೀಡಿದೆ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಮಕ್ಕಳಿಗೆ ಸಹಾಯ ಮಾಡುವುದು ಸುಲಭವಾಗುವುದು. ಮಹಿಳಾ ಮತ್ತು ಬಾಲವಿಕಾಸ ಇಲಾಖೆಯಿಂದಲೂ ಕೂಡ ಪ್ರಯಾಗರಾಜ ರೈಲ್ವೆ ನಿಲ್ದಾಣದಲ್ಲಿ ವಿಶೇಷ ವಿಭಾಗ ತೆರೆಯಲಾಗುವುದು.
ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗವು ಚಿಕ್ಕ ಮಕ್ಕಳ ಸುರಕ್ಷೆಗಾಗಿ ವಿಶೇಷ ಯೋಜನೆ ರೂಪಿಸಲು ಆದೇಶ ನೀಡಿರುವುದರಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.