Airfare kumbha mela : ವಿಮಾನ ದರ 5 ಸಾವಿರದಿಂದ 22 ಸಾವಿರ ರೂಪಾಯಿಗೆ ಏರಿಕೆ !

ಪ್ರಯಾಗರಾಜ ಮಹಾಕುಂಭ ಮೇಳ 2025

ಪ್ರಯಾಗರಾಜ್ – ಪ್ರಯಾಗರಾಜನಲ್ಲಿ ಮಹಾ ಕುಂಭ ಮೇಳಕ್ಕೆ ವಿಮಾನದಿಂದ ಪ್ರಯಾಣಿಸುವುದು ಭಕ್ತರಿಗೆ ದುಸ್ತರವಾಗಿದೆ. ವಿಮಾನಯಾನ ಸಂಸ್ಥೆಗಳು ದರವನ್ನು 5 ಸಾವಿರ ರೂಪಾಯಿಯಿಂದ 22 ಸಾವಿರ ರೂಪಾಯಿಗೆ ಹೆಚ್ಚಿಸಿವೆ. ಪ್ರಯಾಗರಾಜ ತಲುಪಲು ವಿಮಾನಯಾನ ಸಂಸ್ಥೆಗಳು ಜನವರಿ 10 ರಿಂದ ವಿಶೇಷ ವಿಮಾನ ಸೇವೆಗಳನ್ನು ಪ್ರಾರಂಭಿಸಲಿವೆ. ಜನವರಿ 10 ರಿಂದ ಪುಣೆಯಿಂದ ಪ್ರಯಾಗರಾಜ್‌ಗೆ 27 ಸಾವಿರ ರೂಪಾಯಿ, ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ 19 ಸಾವಿರ ರೂಪಾಯಿ, ಮುಂಬಯಿಯಿಂದ 18 ರೂಪಾಯಿಗಳಷ್ಟು ದರ ನಿಗದಿ ಪಡಿಸಲಾಗಿದೆ. ಒಂದು ಕುಟುಂಬದ 4-5 ಸದಸ್ಯರು ಪ್ರಯಾಗರಾಜಗೆ ಹೋಗಲು ನಿರ್ಧರಿಸಿದರೂ, ಬಾಡಿಗೆಗೆ ಕೇವಲ 1 ಲಕ್ಷ ರೂಪಾಯಿ ಹೆಚ್ಚು ಕಡಿಮೆ ವೆಚ್ಚವಾಗುತ್ತದೆ.  ವಿಮಾನಯಾನ ಸಂಸ್ಥೆಗಳ ಈ ಮನಸೋ ಇಚ್ಛೆ ನಿಗದಿ ಪಡಿಸಿದ ದರಗಳ ಬಗ್ಗೆ ಭಕ್ತರಲ್ಲಿ ಅಸಮಾಧಾನವಿದೆ.

ಈ ನಗರಗಳಿಂದ ಜನವರಿ 10 ರಿಂದ ಪ್ರಯಾಗರಾಜ್‌ಗೆ ವಿಶೇಷ ವಿಮಾನ ಸೇವೆ ಲಭ್ಯವಿದೆ !

ನವದೆಹಲಿ, ಜಯಪುರ, ಚಂಡೀಗಢ, ಭುವನೇಶ್ವರ, ಅಮೃತಸರ, ಡೆಹ್ರಾಡೂನ್, ಲಕ್ಷ್ಮಣಪುರಿ, ಗೌಹಾಟಿ, ಕೋಲಕಾತಾ, ವಿಲಾಸಪುರ, ರಾಯಪುರ, ಇಂದೋರ, ಜಬಲ್ಪುರ, ಭೋಪಾಲ, ಬೆಂಗಳೂರು, ಚೆನ್ನೈ, ಭಾಗ್ಯನಗರ, ಪುಣೆ, ನಾಗ್ಪುರ ಮತ್ತು ಕರ್ಣಾವತಿ.

ಸಂಪಾದಕೀಯ ನಿಲುವು

ವಿಮಾನಯಾನ ಸಂಸ್ಥೆಗಳಿಂದ ಭಕ್ತರ ಲೂಟಿ