ಆಧುನಿಕ ತಂತ್ರಜ್ಞಾನದ ಬಳಕೆ !
(ಸರ್ಚ್ ಎಂದರೆ ಹುಡುಕುವ ವ್ಯವಸ್ಥೆ)
ಮುಂಬಯಿ, ಡಿಸೆಂಬರ್ ೨೯ (ವಾರ್ತೆ) – ‘ಸನಾತನ ಪ್ರಭಾತ’ ಪ್ರಸಾರ ಮಾಧ್ಯಮದ ಆ್ಯಪ್ ನಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಲಾಗಿದ್ದು ಈಗ ಅದರಲ್ಲಿ ‘ಸರ್ಚ್’ ಸೌಲಭ್ಯ ಕೂಡ ಲಭ್ಯ ಮಾಡಿಕೊಡಲಾಗಿದೆ. ಇದರಿಂದ ಆ್ಯಪ್ ಮೂಲಕ ವಾಚಕರಿಗೆ ‘ಸನಾತನ ಪ್ರಭಾತ’ ದ Sanatan Prabhat.org ಈ ಜಾಲತಾಣದಲ್ಲಿ ಯಾವುದೇ ಹಳೆ ವಾರ್ತೆ ಅಥವಾ ಲೇಖನ ಹುಡುಕಬಹುದು. ವಾಚಕರು ಆ್ಯಪ್ ನಲ್ಲಿ ಈಗ ಕೇವಲ ಆ ದಿನದ ದೈನಿಕದಲ್ಲಿನ ವಿಷಯವಷ್ಟೇ ಅಲ್ಲ ಸಂಪೂರ್ಣ ಜಾಲತಾಣದಲ್ಲಿನ ವಿಷಯಗಳ ಲಾಭವನ್ನು ಪಡೆಯಬಹುದು. ಈಗ ಆ್ಯಪ್ ಹೆಚ್ಚು ಆಕರ್ಷಕವಾಗಿ ಮಾಡಲಾಗಿದೆ, ಎಂದು ‘ಸನಾತನ ಪ್ರಭಾತ್’ ಪ್ರಸಾರ ಮಾಧ್ಯಮದ ತಾಂತ್ರಿಕ ವಿಭಾಗವು ಮಾಹಿತಿ ನೀಡಿದೆ.
ಆ್ಯಪ್ ದಲ್ಲಿನ ಇತರ ಮಹತ್ವಪೂರ್ಣ ಸೌಲಭ್ಯ !
೧. ಆ್ಯಪ್ ನಲ್ಲಿ ‘ಸ್ವಾಯಿಪ್ ಲೆಫ್ಟ್-ರೈಟ್’ ಸೌಲಭ್ಯ ಕೂಡ ನೀಡಲಾಗಿದೆ. ಇದರಿಂದಾಗಿ ಬೆರಳಿನಿಂದಲೇ ಆ್ಯಪ್ ನಲ್ಲಿ ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ನಾವು ಸರಿಸಿ ಇತರ ವಾರ್ತೆ/ಲೇಖನ ಓದಬಹುದು.
೨. ಆ್ಯಪ್ ನಲ್ಲಿ ‘ಭಾಷೆ ಆಯ್ಕೆ’ ಈ ಪರ್ಯಾಯ ಕೂಡ ಕ್ಲಿಕ್ ಮಾಡಿದರೆ ನಾವು ಕನ್ನಡ, ಮರಾಠಿ, ಹಿಂದಿ, ಅಥವಾ ಇಂಗ್ಲೀಷ್ ಭಾಷೆ ಆಯ್ಕೆ ಮಾಡಬಹುದು. ಇದರಿಂದ ಪ್ರತಿ ದಿನ ಪ್ರಸಾರವಾಗುವ ಈ ನಾಲ್ಕು ಭಾಷೆಗಳಲ್ಲಿನ ವಾರ್ತೆಗಳು ಕೂಡ ನಾವು ಓದಬಹುದು. ಹಾಗೂ ಕನ್ನಡ ಮತ್ತು ಮರಾಠಿ ಸಾಪ್ತಾಹಿಕ, ಹಾಗೂ ಹಿಂದಿ ಮತ್ತು ಇಂಗ್ಲಿಷ್ ಪಾಕ್ಷಿಕ ಇದರಲ್ಲಿನ ವಿಷಯ ಕೂಡ ಓದಬಹುದು.
೩. ಆ್ಯಪ್ ನಿಂದ ‘ಸನಾತನ ಪ್ರಭಾತ್’ ದ ಈ ಪೇಪರ್ ಹಾಗೂ ಟೆಲಿಗ್ರಾಂ, ‘ಎಕ್ಸ’, ‘ಯೂಟ್ಯೂಬ್’, ಈ ಸಾಮಾಜಿಕ ಮಾಧ್ಯಮದಲ್ಲಿನ ‘ಸನಾತನ ಪ್ರಭಾತ’ದ ಅಧಿಕೃತ ಖಾತೆಗೆ ಭೇಟಿ ನೀಡಬಹುದು.
೪. ಆ್ಯಪ್ ನಲ್ಲಿ ಶೀರ್ಘದಲ್ಲೇ ‘ಪ್ರಯಾಗರಾಜ ಮಹಾಕುಂಭ ೨೦೨೫’ ರ ಒಂದು ಬೇರೆ ಟ್ಯಾಬ್ ಉಪಲಬ್ಧ ಮಾಡಿಕೊಡಲಾಗುವುದು.
‘ಸನಾತನ ಪ್ರಭಾತ್’ ಆ್ಯಪ್ ಹೇಗೆ ಹುಡುಕುವುದು ?ಮೊಬೈಲ್ ನಲ್ಲಿ ‘ಸನಾತನ ಪ್ರಭಾತ್ ಆ್ಯಪ್’ ಇನ್ಸ್ಟಾಲ್ಡ್ ಇದ್ದರೆ : ಆಂಡ್ರಾಯ್ಡ್ ಮೊಬೈಲ್ ಇರುವ ವಾಚಕರು ‘ಗೂಗಲ್ ಪ್ಲೇ ಸ್ಟೋರ್’ ಗೆ ಹೋಗಿ ಸನಾತನ ಪ್ರಭಾತ ಆ್ಯಪ್ ಅಪ್ಡೇಟ್ ಮಾಡಬೇಕು. ಆಪಲ್ ಐಫೋನ್ ಇರುವ ವಾಚಕರು ‘ಆಪಲ್ ಸ್ಟೋರ್’ ನಲ್ಲಿ ಸನಾತನ ಪ್ರಭಾತದ ಆ್ಯಪ್ ಅಪ್ಡೇಟ್ ಮಾಡಬೇಕು. |
ಮೊಬೈಲ್ ನಲ್ಲಿ ‘ಸನಾತನ ಪ್ರಭಾತ್ ಆ್ಯಪ್’ ಇನ್ಸ್ಟಾಲ್ ಹೇಗೆ ಮಾಡುವುದು ? : ಮೊಬೈಲ್ ನಲ್ಲಿ ಆ್ಯಪ್ ಇನ್ಸ್ಟಾಲ್ ಮಾಡುವುದಕ್ಕಾಗಿ ಮುಂದಿನ ಜಾಲತಾಣಕ್ಕೆ ಹೋಗಿ
ಆಂಡ್ರಾಯ್ಡ್ : Sanatan Prabhat.org/android
ಐಫೋನ್ : sanatanprabhat.org/ios