ಅಮೇರಿಕಾದ ಮುಂದಿನ ರಾಷ್ಟ್ರಪತಿ ಆಯ್ಕೆಯ ಶಕ್ತಿ ಇಲ್ಲಿನ ಹಿಂದೂಗಳಲ್ಲಿದೆ ! – ಸಂಸದ ರಿಚರ್ಡ್ ಮ್ಯಾಕಕೊರ್ಮಿಕ

ಅಮೇರಿಕಾದ ಸಂಸತ್ತಿನಲ್ಲಿ ಇದೇ ಮೊಲದ ಬಾರಿ ವೈದಿಕ ಮಂತ್ರೊಚ್ಚಾರದಿಂದ ಹಿಂದೂ-ಅಮೆರಿಕ ಪರಿಷತ್ ಆರಂಭ

ಸಂಸದ ರಿಚರ್ಡ್ ಮ್ಯಾಕಕೊರ್ಮಿಕ

ವಾಷಿಂಗ್ಟನ್ (ಅಮೇರಿಕಾ) – ಮುಂದಿನ ರಾಷ್ಟ್ರಪತಿ ಆಯ್ಕೆಯ ಶಕ್ತಿ ಹಿಂದೂಗಳ ಬಳಿ ಇದೆ. ಇದನ್ನು ನಾನು ಕೇವಲ ಹೇಳುತ್ತಿಲ್ಲ, ನನಗೆ ಅನಿಸುತ್ತದೆ ನಿಮ್ಮಲ್ಲಿ ಆ ಕ್ಷಮತೆ ಇದೆ. ಒಂದು ಬಾರಿ ನೀವು ಯೋಗ್ಯ ನಾಯಕನ ಜೊತೆಗೆ ಜೋಡಿಸಿಕೊಂಡರೆ , ನಿಮಗೆ ನಿಮ್ಮಲ್ಲಿಯ ಶಕ್ತಿಯ ಕಲ್ಪನೆ ಬರುವುದು. ನೀವು ಅಮೇರಿಕಾಗಾಗಿ ಕಾನೂನು ರೂಪಿಸುವಿರಿ, ಅದು ನಮ್ಮ ದೇಶಕ್ಕೆ ಅನೇಕ ದಶಕಗಳ ಕಾಲ ಪ್ರಗತಿಯ ಮಾರ್ಗದಲ್ಲಿ ಕೊಂಡೊಯ್ಯುವುದು ಎಂಬ ಅಮೆರಿಕಾದ ಸಂಸದ ರಿಚರ್ಡ್ ಮ್ಯಾಕಕೊರ್ಮಿಕ ಇವರು ಇಲ್ಲಿ ಶ್ಲಾಘಿಸಿದ್ದಾರೆ. ಅಮೇರಿಕಾದ ಕ್ಯಾಪಿಟಲ್ ಹಿಲ್ ಈ ಸಂಸತ್ತಿನಲ್ಲಿ ಜೂನ್ ೧೪ ರಂದು ಇದೇ ಮೊದಲ ಬಾರಿ ಹಿಂದೂ-ಅಮೆರಿಕ ಪರಿಷತ್ತಿನ ಆಯೋಜನೆ ಮಾಡಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಪರಿಷತ್ತಿಗೆ ಅಮೆರಿಕನ್ಸ್ ಫಾರ್ ಹಿಂದೂ, ಹೀಗೆ ಹೆಸರು ನೀಡಲಾಗಿದೆ. ೧೩೦ ಭಾರತೀಯ ಅಮೆರಿಕ ನಾಯಕರು ಇದರಲ್ಲಿ ಸಹಭಾಗಿಯಾಗಿದ್ದರು. ಈ ಪರಿಷತ್ತು ವೈದಿಕ ಮಂತ್ರೋಚ್ಚಾರ ಮತ್ತು ಪ್ರಾರ್ಥನೆಯ ಮೂಲಕ ಪ್ರಾರಂಭಿಲಾಯಿತು. ೨೦ ಹಿಂದೂ ಸಂಘಟನೆಗಳ ಸಹಯೋಗದಿಂದ ಈ ಪರಿಷತ್ತಿನ ಆಯೋಜನೆ ಮಾಡಲಾಗಿತ್ತು. ಅಮೇರಿಕಾದಲ್ಲಿ ವಾಸಿಸುವ ಹಿಂದೂಗಳ ಸಮಸ್ಯೆಯ ಕಡೆಗೆ ಅಮೇರಿಕಾದಲ್ಲಿನ ಕಾನೂನು ರೂಪಿಸುವವರ ಗಮನ ಸೆಳೆಯುವುದು ಇದರ ಉದ್ದೇಶವಾಗಿತ್ತು.

ಈ ಪರಿಷತ್ತಿನ ಆಯೋಜಕರು ರೋಮೇಶ್ ಜಾಫ್ರಾ ಇವರು, ಹಿಂದೂ ಜನಾಂಗವು ಪ್ರತಿಯೊಂದು ಕ್ಷೇತ್ರದಲ್ಲಿ ಕೌಶಲ್ಯಪೂರ್ಣ ಕಾರ್ಯ ಮಾಡುತ್ತಿದೆ. ಆದರೂ ಕೂಡ ನಾವು ರಾಜಕೀಯ ದೃಷ್ಟಿಯಿಂದ ಹಿಂದುಳಿದಿದ್ದೇವೆ. ಅಮೇರಿಕಾದಲ್ಲಿ ಹಿಂದೂಗಳ ಜೊತೆಗೆ ತಾರತಮ್ಯ ಮಾಡಲಾಗುತ್ತದೆ , ಹೀಗೆ ನಮಗೆ ಅನಿಸುತ್ತದೆ. ಈ ಪರಿಷತ್ತಿನ ಮೂಲಕ ಎಲ್ಲಾ ಸಂಸ್ಥೆಗಳನ್ನು ಒಗ್ಗೂಡಿಸುವುದಿದೆ ಎಂದು ಹೇಳಿದರು.

ಅಮೇರಿಕಾದ ಸಂಸತ್ತಿನಲ್ಲಿ ಹಿಂದೂ ಸಂಸದರ ಗುಂಪು ಮಾಡಲಾಗುವುದು ! – ಸಂಸದ ಶ್ರೀನಿವಾಸ ಠಾಣೆದಾರ

ಈ ಪರಿಷತ್ತಿನಲ್ಲಿ ಭಾರತೀಯ ಮೂಲದ ಅಮೇರಿಕಾದಲ್ಲಿನ ಸಂಸದ ಶ್ರೀನಿವಾಸ ಠಾಣೆದಾರ ಇವರು ಅಮೆರಿಕಾದಲ್ಲಿನ ಸಂಸತ್ತಿನಲ್ಲಿ ಹಿಂದೂ ಕಾಕ್ಸ್ ರೂಪಿಸುವ ಘೋಷಣೆ ಮಾಡಿದ್ದರು. (ಕಾಕ್ಸ್ ಎಂದರೆ ಅಮೇರಿಕಾದ ಸಂಸತ್ತಿನಲ್ಲಿ ಸಮಾನ ಉದ್ದೇಶ ಇರುವ ಸಂಸದರ ಗುಂಪು, ಈ ಗುಂಪಿನ ಆಡಳಿತ ಸಂಸತ್ತಿನ ನಿಯಮಗಳ ಪ್ರಕಾರ ನಡೆಯುತ್ತದೆ.) ಅಮೇರಿಕಾದಲ್ಲಿ ಹಿಂದೂದ್ವೇಷ ಮತ್ತು ಅಲ್ಲಿಯ ಹಿಂದೂಗಳೊಂದಿಗಿನ ತಾರತಮ್ಯ ವರ್ತನೆಯನ್ನು ತಡೆಯುವುದೇ ಇದರ ಉದ್ದೇಶವಾಗಿದೆ. ಶ್ರೀನಿವಾಸ ಠಾಣೆದಾರ ಇವರು ಮೂಲತಃ ಬೆಳಗಾವಿಯವರು. ಅವರು ಸಂಸತ್ತಿನಲ್ಲಿ ‘ಸಾಮೋಸಾ ಕಾಕ್ಸ್’ ನ ಸದಸ್ಯರಾಗಿದ್ದಾರೆ. ಈ ಗುಂಪುನಲ್ಲಿ ಭಾರತೀಯ ಮೂಲದ ಸಂಸದರಿದ್ದಾರೆ. ಈ ಸಂಸದರು ಭಾರತಕ್ಕೆ ಸಂಬಂಧಿತ ಅಂಶಗಳನ್ನು ಸಂಸತ್ತಿನಲ್ಲಿ ಮಂಡಿಸುತ್ತಾರೆ.

ಶ್ರೀನಿವಾಸ ಠಾಣೆದಾರ ಇವರು ಮಾತನಾಡುತ್ತಾ, ಪ್ರತಿಯೊಬ್ಬ ವ್ಯಕ್ತಿಗೆ ಅವರ ಧರ್ಮ ಆಯ್ಕೆ ಮಾಡುವ ಅಧಿಕಾರ ಇರಬೇಕು. ಯಾವುದೇ ಭಯ ಅಥವಾ ಭೇದ ಭಾವ ಇಲ್ಲದೆ ದೇವರಿಗೆ ಪ್ರಾರ್ಥನೆ ಮಾಡುವುದು, ಇದು ವ್ಯಕ್ತಿಯ ಮೂಲಭೂತ ಅಧಿಕಾರವಾಗಿದೆ. ನಾವು ಯಾರ ವಿರುದ್ಧವೂ ಇಲ್ಲ, ಎಂದು ಹೇಳಿದರು.