ವಸ್ತ್ರಸಂಹಿತೆಯ ಅಭಿಯಾನವನ್ನು ಹಮ್ಮಿಕೊಳ್ಳುವಾಗ ಸಮಾಜದಲ್ಲಿ ಈ ವಿಷಯದಲ್ಲಿ ಕೆಲವು ತಪ್ಪು ‘ನೆರೇಟಿವ್’ಗಳನ್ನು ಹರಡಿರುವುದು ತಿಳಿಯಿತು.
ಅ. ಯಾವ ವಸ್ತ್ರ ಧರಿಸಬೇಕೆನ್ನುವುದು ಆ ವ್ಯಕ್ತಿಯ ನಿರ್ಣಯ : ‘ನಾವು ಯಾವ ವಸ್ತ್ರ ಧರಿಸಬೇಕು ಎಂಬುದು ನಮ್ಮ ಇಚ್ಛೆ. ಆ ವಿಷಯದಲ್ಲಿ ಯಾರು ಕೂಡ ಕೇಳಬಾರದು’, ಎಂದು ಕೆಲವರು ಹೇಳುತ್ತಾರೆ; ಆದರೆ ಅವರು ಮಸೀದಿಗೆ ಹೋಗುವವರಿಗೆ ‘ಟೊಪ್ಪಿ ಏಕೆ ಹಾಕುತ್ತೀರಿ ?’, ಎಂದು ಕೇಳುವುದಿಲ್ಲ. ‘ನಿಜವಾಗಿ ನೋಡಿದರೆ, ವಸ್ತ್ರಸಂಹಿತೆ ಇದೇನೂ ಸಮಾಜದ ದೃಷ್ಟಿಯಲ್ಲಿ ಹೊಸ ಸಂಕಲ್ಪನೆಯಲ್ಲ. ಪೊಲೀಸರಿಗೆ, ನ್ಯಾಯವಾದಿಗಳಿಗೆ, ವಿದ್ಯಾರ್ಥಿಗಳಿಗೆ ಅವರ ಸಮವಸ್ತ್ರವಿರುತ್ತದೆ. ‘ಆಪರೇಶನ್ ಥಿಯೇಟರ್‌ನಲ್ಲಿ (ಶಸ್ತ್ರಚಿಕಿತ್ಸಾಗೃಹದಲ್ಲಿ) ಹೋಗುವಾಗ ಡಾಕ್ಟರರು ವಿಶಿಷ್ಟ ಪ್ರಕಾರದ ಉಡುಪನ್ನು ಧರಿಸುತ್ತಾರೆ. ಇಷ್ಟು ಮಾತ್ರವಲ್ಲ, ಸೆರೆಮನೆಯಲ್ಲಿ ಅಪರಾಧಿಗಳಿಗೂ ವಸ್ತ್ರಸಂಹಿತೆ ಇದೆ, ಹೀಗಿರುವಾಗ ದೇವಸ್ಥಾನಗಳಲ್ಲಿ ಏಕೆ ಇರಬಾರದು’, ಎಂದು ನಾವು ಪ್ರಶ್ನಿಸಬೇಕು.
ಆ. ವಸ್ತ್ರಸಂಹಿತೆಯೆಂದರೆ ಯಾವುದೊ ಹಳೆಯ ಪರಂಪರೆಯಾಗಿದೆ ! : ಎಂದು ಕೆಲವರು ಹೇಳುತ್ತಾರೆ; ಆದರೆ ವಸ್ತ್ರಸಂಹಿತೆ ಯಾವುದೇ ಹಳೆಯ ಪರಂಪರೆಯಲ್ಲ, ಅದು ದೇವರ ದರ್ಶನದ ಆಧ್ಯಾತ್ಮಿಕ ಲಾಭವನ್ನುಗಳಿಸಿಕೊಡುವ ವಿಷಯವಾಗಿದೆ. ಹೇಗೆ ಯಾವ ಬ್ಯಾಂಕ್‌ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೋ, ಅದರಲ್ಲಿ ಹಣ ಹೂಡಲಾಗುತ್ತದೆ. ಹಾಗೆಯೇ ಯಾವ ಉಡುಪಿನಿಂದ ಆಧ್ಯಾತ್ಮಿಕ ಸ್ತರದಲ್ಲಿ ದೇವರ ದರ್ಶನದ ಲಾಭ ಹೆಚ್ಚಾಗುತ್ತದೋ, ಅಲ್ಲಿ ಅಂತಹ ವಸ್ತ್ರಗಳನ್ನು ಧರಿಸಲು ವಿರೋಧವೇಕೆ ? ಇಂದು ವಿದೇಶಿಯರು ಭಾರತೀಯತ್ವದ ಕಡೆಗೆ, ಹಿಂದೂ ಧರ್ಮದ ಕಡೆಗೆ ಆಕರ್ಷಿಸಲ್ಪಡುತ್ತಿದ್ದಾರೆ. ಹೀಗಿರುವಾಗ ನಮ್ಮ ಪಾರಂಪರಿಕ ವಸ್ತ್ರಗಳನ್ನು ತಿರಸ್ಕರಿಸುವುದೆಂದರೆ ನಮ್ಮಲ್ಲಿರುವ ರತ್ನವನ್ನು ಇದ್ದಿಲು ಎಂದು ಹೇಳಿದಂತಾಗುತ್ತದೆ.
ಇ. ವಸ್ತ್ರಗಳಿಗಿಂತ ಭಕ್ತಿ ಮಹತ್ವದ್ದಾಗಿದೆ ! : ಕೆಲವರು ಹೇಳುತ್ತಾರೆ, ‘ವಸ್ತ್ರಗಳಿಗಿಂತ ಭಕ್ತಿ ಮಹತ್ವದ್ದಾಗಿದೆ ! ಇಂತಹ ಹೇಳಿಕೆಗಳನ್ನು ನೀಡುವವರು ಶ್ರದ್ಧಾಳು ಅಥವಾ ಭಕ್ತರಲ್ಲ, ಅವರು ನಾಸ್ತಿಕವಾದಿಗಳಾಗಿದ್ದಾರೆ. ಅವರು ಹಿಂದೂಗಳಿಗೆ ವಸ್ತ್ರಕ್ಕಿಂತ ಭಕ್ತಿ ಮಹತ್ವದ್ದಾಗಿದೆ, ಎಂದು ಭಕ್ತಿಯ ಬೋಧನೆ ಮಾಡುತ್ತಿದ್ದಾರೆ. ಭಕ್ತಿಯು ಭಕ್ತಿಯ ಸ್ಥಾನದಲ್ಲಿದೆ; ಆದರೆ ದೇವರದರ್ಶನ ಕರ್ಮವೂ ಆಗಿರುವುದರಿಂದ ಕರ್ಮಯೋಗಕ್ಕನುಸಾರ ಅದನ್ನು ಯೋಗ್ಯ ಪದ್ಧತಿಯಿಂದ ಮಾಡುವುದೂ ಮಹತ್ವದ್ದಾಗಿದೆ. ಅದನ್ನು ಧರ್ಮಕ್ಕನುಸಾರವೇ ಮಾಡಬೇಕು.
ಈ. ವಸ್ತ್ರಸಂಹಿತೆ ಇದ್ದರೆ, ಯುವವರ್ಗ ದೇವಸ್ಥಾನಗಳಿಗೆ ಬರಲಿಕ್ಕಿಲ್ಲ : ಕೆಲವರು ಹೀಗೆ ವಿಚಾರ ಮಾಡುತ್ತಾರೆ; ಆದರೆ ನಿಜವಾಗಿ ನೋಡಿದರೆ ವಾಸ್ತವಿಕತೆ ಬೇರೆಯೆ ಇದೆ. ವಸ್ತ್ರಸಂಹಿತೆಯ ಅಂಶವನ್ನು ಯುವವರ್ಗದವರು ದೊಡ್ಡ ಪ್ರಮಾಣದಲ್ಲಿ ಎತ್ತಿ ಹಿಡಿದರು.
ಆದ್ದರಿಂದ ವಸ್ತ್ರಸಂಹಿತೆಯ ಅಭಿಯಾನವನ್ನು ಹಮ್ಮಿಕೊಳ್ಳುವಾಗ ಈ ವಿಷಯದಲ್ಲಿ ಹರಡಿಸಲ್ಪಡುವ ಅಯೋಗ್ಯ ವಿಚಾರಶೈಲಿಯ ವಿರುದ್ಧವೂ ನಾವು ಹೋರಾಡಬೇಕಾಗುತ್ತದೆ. ಈ ಹೋರಾಟದಲ್ಲಿನ ಒಂದೇ ಪ್ರಭಾವಪೂರ್ಣ ಮಾರ್ಗವೆಂದರೆ ಪ್ರತಿಯೊಂದು ದೇವಸ್ಥಾನದಲ್ಲಿ ವಸ್ತ್ರಸಂಹಿತೆಯನ್ನು ಅನ್ವಯ ಗೊಳಿಸುವುದು ! ಹಾಗೆ ಮಾಡಿದರೆ ಮಾತ್ರ ವಿರೋಧಿಗಳ ಬಾಯಿ ಮುಚ್ಚಬಹುದು ! ಅದಕ್ಕಾಗಿ ಸಿದ್ಧರಾಗಿರಬೇಕು !
– ಶ್ರೀ. ಗುರುಪ್ರಸಾದ ಗೌಡ