ಇತ್ತೀಚೆಗೆ ಬೇಕಾಬಿಟ್ಟಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾರೆ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಲೇಖನಗಳನ್ನು ಪ್ರಸಾರ ಮಾಡುತ್ತಾರೆ. ‘ಭಾರತಕ್ಕೆ ದೇವಸ್ಥಾನಗಳಲ್ಲ, ಕೇವಲ ಆಸ್ಪತ್ರೆಗಳ ಅವಶ್ಯಕತೆಯಿದೆ’ ಎಂದು ಹೇಳುತ್ತಿದ್ದಾರೆ. ಕೆಲವೊಂದು ಪ್ರಮಾಣದಲ್ಲಿ ಅದನ್ನು ಸತ್ಯವೆಂದು ಒಪ್ಪಿಕೊಂಡರೂ, ಮಾನವತೆಯ ದೃಷ್ಟಿಕೋನಕ್ಕಿಂತಲೂ, ದೇವಸ್ಥಾನ ಮತ್ತು ಅದಕ್ಕಿಂತ ಹೆಚ್ಚು ಹಿಂದೂ ಧರ್ಮದ ಬಗ್ಗೆ ಪೂರ್ವಗ್ರಹದೂಷಿತ ದೃಷ್ಟಿಕೋನವಿದೆ ಎಂದು ಅನಿಸುತ್ತದೆ. ದೇವಸ್ಥಾನಗಳು ಪ್ರಾರ್ಥನೆಯ ಸ್ಥಳಗಳಾಗಿವೆ. ಅಲ್ಲಿ ಎಲ್ಲರಿಗೂ ಶಾಂತಿ, ಆತ್ಮಿಕ ಸಮಾಧಾನ ಮತ್ತು ಸಕಾರಾತ್ಮಕ ಊರ್ಜೆ ಸಿಗುತ್ತದೆ. ದೇವಸ್ಥಾನದಿಂದ ಯಾವುದಾದರೂ ವ್ಯಕ್ತಿಗೆ ವೈಯಕ್ತಿಕ ಹಾನಿ ಆಯಿತು, ಎಂಬ ಒಂದು ಉದಾಹರಣೆಯೂ ಇಲ್ಲ.
೧. ಹಿಂದೂ ಧರ್ಮದೊಂದಿಗೆ ಪ್ರತಿಯೊಂದು ಧರ್ಮದ ವ್ಯಕ್ತಿಗೆ ಪ್ರಾರ್ಥನೆ ಮಾಡುವ ಸಂವಿಧನಾತ್ಮಕ ಅಧಿಕಾರವಿದೆ
ಯಾರು ದೇವಸ್ಥಾನಗಳಿಗೆ ವಿರೋಧಿಸುತ್ತಾರೆಯೋ ಮತ್ತು ಅವರು ದೇವಸ್ಥಾನಗಳಿಗೆ ಹೋಗುವುದಿಲ್ಲವೋ, ಅವರ ಬಗ್ಗೆ ನಮಗೇನು ಹೇಳುವುದಿಲ್ಲ; ಆದರೆ ಅವರು ಇತರರ ಧಾರ್ಮಿಕ ಭಾವನೆಯನ್ನು ನೋಯಿಸುತ್ತಾರೆ, ಇದು ಭಾರತೀಯ ಸಂವಿಧಾನದ ವಿರುದ್ಧವಾಗಿದೆ. ಸಂವಿಧಾನವು ಎಲ್ಲರಿಗೂ ಸ್ವಧರ್ಮದ ಭಾವನೆಗಳನ್ನು ಪಾಲಿಸುವ ಅಧಿಕಾರವನ್ನು ನೀಡಿದೆ. ಆದ್ದರಿಂದ ಯಾರು ದೇವಸ್ಥಾನಗಳ ಬದಲು ಆಸ್ಪತ್ರೆಗಳನ್ನು ನಿರ್ಮಿಸಲು ಇಚ್ಛಿಸುತ್ತಾರೆಯೋ, ಅವರು ಮುಂದಾಳತ್ವವನ್ನು ವಹಿಸಿ ಆಸ್ಪತ್ರೆಗಳನ್ನು ಅವಶ್ಯ ನಿರ್ಮಿಸಬೇಕು; ಆದರೆ ‘ದೇವಸ್ಥಾನ ನಿರ್ಮಿಸಬಾರದು’ ಎನ್ನುವುದು ತಪ್ಪಾಗಿದೆ. ಅವರಿಗೆ ನನ್ನ ವಿರೋಧವಿದೆ. ದೇವಸ್ಥಾನಗಳು ಹಿಂದೂಗಳ ಧಾರ್ಮಿಕ ಪ್ರಾರ್ಥನಾಸ್ಥಳಗಳಾಗಿವೆ. ಇಂತಹ ಪ್ರಾರ್ಥನಾಸ್ಥಳಗಳು ಮುಸಲ್ಮಾನರಿಗೆ ಮಸೀದಿ, ಕ್ರೈಸ್ತರಿಗೆ ಚರ್ಚ್, ಪಾರ್ಸಿ ಸಮಾಜಕ್ಕೆ ಗಿರಿಜಾಘರ್ ಮತ್ತು ಸಿಕ್ಖರಿಗೆ ಗುರುದ್ವಾರಗಳಿವೆ. ಆದರೆ ಟೀಕಾಕಾರರು ಕೇವಲ ಹಿಂದೂ ದೇವಸ್ಥಾನಗಳನ್ನು ಹೆಚ್ಚಾಗಿ ಟೀಕಿಸುತ್ತಾರೆ. ಪ್ರತಿಯೊಂದು ಧರ್ಮದ ವ್ಯಕ್ತಿಗೂ ಪ್ರಾರ್ಥನೆ ಮಾಡುವ ಸಂವಿಧಾನಾತ್ಮಕ ಅಧಿಕಾರವಿದೆ, ಹಾಗೆಯೇ ಅದು ಹಿಂದೂಗಳಿಗೂ ಇದೆ.
೨. ಸ್ವತಃ ಯಾವುದೇ ಸಾಮಾಜಿಕ ಕಾರ್ಯ ಮಾಡದಿರುವವರಿಗೆ ದೇವಸ್ಥಾನಗಳ ಮೇಲೆ ಟೀಕೆ ಮಾಡುವ ಅಧಿಕಾರವಿಲ್ಲ !
ಇಲ್ಲಿ ಒಂದು ವಿಷಯವನ್ನು ಒತ್ತಿ ಹೇಳಬೇಕೆನಿಸುತ್ತದೆ, ದೇವಸ್ಥಾನಗಳನ್ನು ಸರಕಾರದ ಹಣದಿಂದ ನಿರ್ಮಾಣ ಮಾಡಿಲ್ಲ, ಅಂದರೆ ತೆರಿಗೆಯ ಹಣದಿಂದ ನಿರ್ಮಾಣ ಮಾಡಿಲ್ಲ, ಅವುಗಳನ್ನು ಜನರಿಂದ ದಾನ ಪಡೆದು ಅಥವಾ ಜನರಿಂದ ಅರ್ಪಣೆ ಪಡೆದು ನಿರ್ಮಿಸಲಾಗಿದೆ. ದೇವಸ್ಥಾನಗಳಿಗೆ ಸರಕಾರ ಯಾವುದೇ ಅನುದಾನವನ್ನು ನೀಡುವುದಿಲ್ಲ. ಅನೇಕ ದೇವಸ್ಥಾನಗಳ ವತಿಯಿಂದ ಎಷ್ಟೂ ವರ್ಷಗಳಿಂದ ಆಸ್ಪತ್ರೆ ಮತ್ತು ಇತರ ಅನೇಕ ಸೌಲಭ್ಯ ಗಳನ್ನು ಉಚಿತ ಅಥವಾ ರಿಯಾಯಿತಿ ದರದಲ್ಲಿ ಒದಗಿಸಿ ಕೊಡ ಲಾಗುತ್ತದೆ. ಅದು ಕೂಡ ಯಾವುದೇ ಸರಕಾರಿ ಅನುದಾನವನ್ನು ತೆಗೆದುಕೊಳ್ಳದೆ. ದೇವಸ್ಥಾನಗಳು ಸರಕಾರಕ್ಕೆ ತೆರಿಗೆಯನ್ನೂ ಕೊಡುತ್ತವೆ. ದೇವಸ್ಥಾನಗಳು ಯಾರಿಗೂ ದಾನ ಮಾಡಬೇಕೆಂದು ಒತ್ತಾಯಿಸುವುದಿಲ್ಲ. ಅನೇಕ ಭಕ್ತರು ತಮ್ಮ ಕ್ಷಮತೆಗನುಸಾರ ದೇವಸ್ಥಾನಗಳಿಗೆ ದಾನ ಮಾಡುತ್ತಾರೆ. ಅದು ಅವರ ಶ್ರದ್ಧೆಯಾಗಿದೆ. ದೇವಸ್ಥಾನಗಳನ್ನು ಟೀಕಿಸುವವರು ಸ್ವತಃ ಯಾವುದೇ ದಾನ ಮಾಡುವುದಿಲ್ಲ; ಆದರೆ ಟೀಕಿಸುಲು ಮರೆಯುವುದಿಲ್ಲ.
೩. ಸರಕಾರ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಆವಶ್ಯಕ !
ಆಸ್ಪತ್ರೆಗಳು ಮತ್ತು ಆರೋಗ್ಯದ ಸೌಲಭ್ಯಗಳನ್ನು ಪೂರೈಸುವುದು ಸರಕಾರದ ಕಾರ್ಯವಾಗಿದೆ. ಸರಕಾರ ವೈದ್ಯಕೀಯ ಮಹಾವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಈಗಿರುವ ಮಹಾವಿದ್ಯಾಲಯಗಳ ಕ್ಷಮತೆ ಹೆಚ್ಚಿಸಬೇಕು. ಪ್ರತಿ ರಾಜ್ಯದಲ್ಲಿ ಒಂದು ‘ಎಮ್ಸ್’ ಆಸ್ಪತ್ರೆ ಮತ್ತು ಪ್ರತಿ ಜಿಲ್ಲೆಯಲ್ಲಿ ಒಂದಾದರೂ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಇರಬೇಕು. ವೈದ್ಯಕೀಯ ಮಹಾವಿದ್ಯಾಲಯಗಳ ಶೈಕ್ಷಣಿಕ ಶುಲ್ಕ ಕಡಿಮೆ ಇರಬೇಕು. ಅಲ್ಲಿ ಕಲಿತು ತಯಾರಾಗುವ ಡಾಕ್ಟರರು ಸರಕಾರಿ ಆಸ್ಪತ್ರೆಗಳಲ್ಲಿ ಕೆಲವು ವರ್ಷ ಕಡ್ಡಾಯವಾಗಿ ಸೇವೆಯನ್ನು ಮಾಡಬೇಕು. ಧಾರ್ಮಿಕ ಆಧಾರದಲ್ಲಿ ಯಾವುದೇ ಧರ್ಮಕ್ಕೆ, ಪಂಥಗಳಿಗೆ ಅನುದಾನ ನೀಡದೆ ಆ ಹಣವನ್ನು ಆರೋಗ್ಯಸೇವೆಗಾಗಿ ಉಪಯೋಗಿಸಬೇಕು.
೪. ಧಾರ್ಮಿಕಭಾವನೆ ನೋಯಿಸುವವರಿಗೆ ಎಚ್ಚರಿಕೆ !
ಯಾರಾದರೂ ದೇವಸ್ಥಾನ ಮತ್ತು ಹಿಂದೂ ಧರ್ಮದ ಮೇಲೆ ವಿನಾಕಾರಣ ಟೀಕೆಯನ್ನು ಮಾಡಿದರೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದರೆ, ಅವರ ವಿರುದ್ಧ ಕಾನೂನು ಕ್ರಮತೆಗೆದುಕೊಳ್ಳಲಾಗುವುದು.’
– ನ್ಯಾಯವಾದಿ ಕಿರಣ ಕ್ಷತ್ರೀಯ (ಆಧಾರ : ಸಾಮಾಜಿಕ ಮಾಧ್ಯಮ)