ಸರಕಾರದ ವತಿಯಿಂದ ಕಾರಿಡಾರ್‌ ನಿರ್ಮಾಣ

ಕಾಶಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಿರ್ಮಿಸಲಾದ ಕಾರಿಡಾರ್‌ ಇದರ ಪಕ್ಷಿನೋಟ ಭಾಜಪ ಸರಕಾರವು ಹಿಂದೂಗಳ ಪ್ರಾಚೀನ ತೀರ್ಥಕ್ಷೇತ್ರ ಕಾಶಿಯಲ್ಲಿ ‘ಕಾಶಿ ವಿಶ್ವನಾಥ ಕಾರಿಡಾರ್’ ಹಾಗೂ ಮಹಾಕಾಲ ಶಿವಲಿಂಗದ ಸ್ಥಳದಲ್ಲಿ ‘ಮಹಾಕಾಲ  ಕಾರಿಡಾರ್’ ನಿರ್ಮಾಣ ಮಾಡಿದೆ. ಮಹಾಕಾಲ ಕಾರಿಡಾರಿನ ಜಾಗದಲ್ಲಿ ಸರಕಾರದಿಂದ ಭಗವಾನ್‌ ಇವನಿಗೆ ಸಂಬಂಧಪಟ್ಟ ಪೌರಾಣಿಕ ಕಥೆಗಳ ಪ್ರತಿಕೃತಿಗಳನ್ನು ನಿರ್ಮಿಸಿದೆ. ಈ ಕಿರುಚಿತ್ರಗಳ ಸ್ಥಳದಲ್ಲಿ ಭಗವಂತ ಶಿವನ ಅವತಾರದ, ಭಕ್ತರಿಗೆ ವಿವಿಧ ಕಥೆಗಳ ಮೂಲಕ ಮಾಹಿತಿ ನೀಡಿದ್ದಾರೆ. ವೇದಗಳಲ್ಲಿನ ಮಂತ್ರಗಳು ನೀಡಿದ್ದಾರೆ. ಸಪ್ತಋಷಿಗಳ ಮೂರ್ತಿಗಳನ್ನು ನಿರ್ಮಿಸಿ ಅದರ ಮಾಹಿತಿ ನೀಡಿದ್ದಾರೆ. ಇದರ ಮೂಲಕ ಶಿವಭಕ್ತಿ ಜಾಗೃತಗೊಳಿಸಲು ಸರಕಾರದಿಂದ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಸರಕಾರವು ಹೆಚ್ಚೆಚ್ಚು ಹಿಂದೂಗಳು ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಬೇಕು, ಅವರಿಗೆ ಆಧ್ಯಾತ್ಮಿಕ ಲಾಭವಾಗಬೇಕು, ಈ ಉದ್ದೇಶದಿಂದ ಕಾರಿಡಾರ್‌ನ ವಿಚಾರ ಮಾಡಿದರೆ ಅದು ಹಿಂದೂಗಳಿಗೆ ಆಧ್ಯಾತ್ಮಿಕ ಆನಂದ ನೀಡಬಹುದು. ಕೇವಲ ತೀರ್ಥಕ್ಷೇತ್ರಗಳು ಪ್ರವಾಸಿತಾಣ ಎಂದು ವಿಕಸಿತವಾಗಬೇಕು

ಅಥವಾ ಹೆಚ್ಚೆಚ್ಚು ಜನರು ಭೇಟಿ ನೀಡಿ ಅದರಿಂದ ಆರ್ಥಿಕ ಲಾಭದ ದೃಷ್ಟಿಯಿಂದ ಕಾರಿಡಾರ್‌ದ ವಿಚಾರ ಮಾಡಿದರೆ ಹಿಂದೂಗಳು ಆಧ್ಯಾತ್ಮಿಕ ಲಾಭದಿಂದ ವಂಚಿತರಾಗುವವರು. ಭಕ್ತರಿಗೆ ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತೆ, ವ್ಯವಸ್ಥಿತ  ದರ್ಶನ ಮತ್ತು ನಿವಾಸದ ಸೌಲಭ್ಯ ಇರಬೇಕು, ಇಂತಹ ಪ್ರಾಥಮಿಕ ಅಪೇಕ್ಷೆಗಳು ಇರುತ್ತವೆ ಪ್ರವಾಸಿತಾಣದ ಸ್ವರೂಪ ಬಂದರೆ ಮೋಜು ಮಾಡುವುದು, ತಿನ್ನುವುದು ಉಣ್ಣುವುದು, ಫೋಟೋಗಳನ್ನು ತೆಗೆಯುವುದು, ಸುತ್ತಾಡುವುದು ಇದರ ಕಡೆಗೆ ಹೆಚ್ಚು ಗಮನ ಸೆಳೆಯುವುದು ಹಾಗೂ ಅದರಿಂದ ಸಂಬಂಧಿತ ತೀರ್ಥಕ್ಷೇತ್ರಗಳ ಪಾವಿತ್ರ್ಯ ಕಡಿಮೆ ಆಗಬಹುದು. ಅಲ್ಲಿಯ ಸಾತ್ವಿಕತೆಯ ಮೇಲೆ ಕೂಡ ಪರಿಣಾಮಬೀರಬಹುದು.

– ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ.