ಪ.ಪೂ. (ಶ್ರೀಮತಿ) ಸುಶೀಲಾ ಆಪಟೆಅಜ್ಜಿಯವರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ ಜನ್ಮೋತ್ಸವದ ನಿಮಿತ್ತ ಭಾವಪೂರ್ಣ ಆರತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಭಾವಪೂರ್ಣವಾಗಿ ಆರತಿ ಮಾಡುತ್ತಿರುವ  ಪ.ಪೂ. ಆಪಟೆಅಜ್ಜಿ, ಹಿಂದೆ ಅವರ ಸೊಸೆ ಸೌ. ಪ್ರಣಿತಾ

ರಾಮನಾಥಿ (ಗೋವಾ) – ಪ.ಪೂ. ಆಪಟೆಅಜ್ಜಿಯವರು ೮೫ ವರ್ಷದವರಾಗಿದ್ದು ಅವರಿಗೆ ಈಗ ಪ್ರವಾಸ ಮುಂತಾದವುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ; ಆದರೂ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ದರ್ಶನವನ್ನು ಪಡೆದು ಅವರಿಗೆ ಆರತಿ ಮಾಡಬೇಕು, ಎಂಬ ಸೆಳೆತದಿಂದ ಅವರು ಮ್ಹಾಪಸಾದಿಂದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಗಾಲಿಕುರ್ಚಿ (Wheelchair)ಯಲ್ಲಿ ಬಂದರು. ‘ದೇವರಿಗೆ ಭಾವದ ಹಸಿವಿರುತ್ತದೆ, ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಪ.ಪೂ. ಆಪಟೆಅಜ್ಜಿಯವರ ಭೇಟಿಯ ಸಮಯದಲ್ಲಿ ಅನುಭವಕ್ಕೆ ಬಂದಿತು. ಪ.ಪೂ. ಅಜ್ಜಿಯವರು ಪರಾತ್ಪರ ಗುರುದೇವರ ಆರತಿಯನ್ನು ಮಾಡಿ ಅವರ ಚರಣಗಳಲ್ಲಿ ಪುಷ್ಪಗಳನ್ನು ಅರ್ಪಿಸಿ ತಲೆಬಾಗಿ ಅವರ ಚರಣಗಳನ್ನು ಮುಟ್ಟಿ ನಮಸ್ಕರಿಸಿದರು. ಪ.ಪೂ. ಆಪಟೆಅಜ್ಜಿಯವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗಿಂತ ೪ ವರ್ಷ ಹಿರಿಯರಿದ್ದು ಅಕ್ಕ ಎಂಬ ಅಕ್ಕರೆಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಆರತಿ ಮಾಡಿದರು. ಪ.ಪೂ. ಆಪಟೆಅಜ್ಜಿಯವರ ಸೊಸೆ ಸೌ. ಪ್ರಣಿತಾ ಆಪಟೆಯವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರಿಗೆ ಹಾರ, ಶಾಲು, ಶ್ರೀಫಲ ಮತ್ತು ಧೋತರವನ್ನು ಅರ್ಪಿಸಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಉಡಿ ತುಂಬಿದರು.