ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ನೆರವೇರಿದ ಚಂಡಿಯಾಗ !

ಚಂಡಿಯಾಗದ ಜೊತೆಗೆ ಸಂಪನ್ನಗೊಂಡ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ‘ಬ್ರಹ್ಮೋತ್ಸವ !

ಯಜ್ಞಸ್ಥಳದಲ್ಲಿ ಮಂಡಿಸಲಾದ ಪೂಜೆಯ ಸಾಮಗ್ರಿಗಳು
ಆರತಿ ಮಾಡುವಾಗ ಎಡಗಡೆಯಿಂದ ಶ್ರೀಚಿತ್‌ಶಕ್ತಿ (ಸೌ) ಅಂಜಲಿ ಮುಕುಲ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಆರತಿ ಹಾಡುವಾಗ ಎಡದಿಂದ ಕು. ಮಯೂರಿ ಆಗವಣೆ, ಸೌ. ಭಕ್ತಿ ಕುಲಕರ್ಣಿ, ಅವರಿಗೆ ತಾಳದೊಂದಿಗೆ ಜೊತೆ ನೀಡುವ ಶ್ರೀ. ಮನೋಜ ಸಹಸ್ರಬುದ್ಧೆ

ರಾಮನಾಥಿ (ಫೋಂಡಾ), ಗೋವಾ – ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ಮೇ ೧೪ ಮತ್ತು ೧೫ ರಂದು ನಡೆದ ಚಂಡಿಯಾಗದ ಜೊತೆಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವ ಸಂಪನ್ನವಾಯಿತು. ಮೇ ೧೧ ರಂದು ಗೋವಾದ ಫೋಂಡಾದ ಫಾರ್ಮಾಗುಡಿಯಲ್ಲಿ ನಡೆದ ದಿವ್ಯ ಬ್ರಹ್ಮೋತ್ಸವದಿಂದ ಈ ಸಮಾರಂಭ ಪ್ರಾರಂಭವಾಗಿತ್ತು.

ಯಾಗದಲ್ಲಿನ ಆಹುತಿ !

ಯಾಗದಲ್ಲಿ ಪಾಯಸದ (ಹಾಲಿನಲ್ಲಿ ಬೇಯಿಸಿದ ಅನ್ನ, ಹಾಗೆಯೇ ರಕ್ತಚಂದನ, ಮುತ್ತುಗದ ಪುಷ್ಪ (ಯಜ್ಞವೃಕ್ಷದ ಪುಷ್ಪ) ಮುಂತಾದ ೧೦ ಘಟಕಗಳನ್ನು ಸೇರಿಸಿ ಪಾಯಸವನ್ನು ತಯಾರಿಸಲಾಗುತ್ತದೆ) ಆಹುತಿಯನ್ನು ನೀಡಲಾಯಿತು. ಇದರೊಂದಿಗೆ ನಿರ್ದಿಷ್ಟ ಸಮಯದಲ್ಲಿ ಎಲೆ, ಅಡಿಕೆ ಮತ್ತು ಬಾಳೆಹಣ್ಣು, ಹಾಗೆಯೇ ಬೂದುಗುಂಬಳಕಾಯಿ, ಬೇಲದಹಣ್ಣು ಮುಂತಾದ ಹಣ್ಣುಗಳನ್ನು ಯಾಗದಲ್ಲಿ ಅರ್ಪಿಸಲಾಯಿತು

ಹೀಗೆ ನಡೆಯಿತು ಚಂಡಿಯಾಗ !

ಸಪ್ತರ್ಷಿಗಳ ಆಜ್ಞೆಗನುಸಾರ ಬ್ರಹ್ಮೋತ್ಸವ ಸಮಾರಂಭದ ಬಳಿಕ ಮೇ ೧೪ ಮತ್ತು ೧೫ ರಂದು ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡೆತಡೆಗಳು ದೂರವಾಗಬೇಕೆಂದು ಚಂಡಿಯಾಗವನ್ನು ಮಾಡಲಾಯಿತು. ಈ ಯಾಗದಲ್ಲಿ ಸಪ್ತಶತಿ ಪಠಣವನ್ನು ಮಾಡುತ್ತಾ ಆಹುತಿಯನ್ನು ಕೊಡಲಾಯಿತು. ಸನಾತನದ ಪುರೋಹಿತ ಸಾಧಕ ಶ್ರೀ. ಅಮರ ಜೋಶಿ, ಶ್ರೀ. ಸಿದ್ದೇಶ ಕರಂದೀಕರ ಮತ್ತು ಶ್ರೀ. ಈಶಾನ ಜೋಶಿ ಇವರು ಈ ಯಾಗದ ಪೌರೋಹಿತ್ಯವನ್ನು ಮಾಡಿದರು. ಈ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ(ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಉಪಸ್ಥಿತರಿದ್ದರು.

ಪೂಜೆಯ ಮಂಡಣೆ !

ಬ್ರಹ್ಮಾದಿ ಮಂಡಲ ದೇವತೆಗಳು, ವರುಣ ಕಲಶ ಮತ್ತು ಸ್ಫಟಿಕದ ಶ್ರೀಯಂತ್ರ ಹೀಗೆ ಪೂಜೆಯ ಮಂಡನೆಯನ್ನು ಮಾಡಲಾಗಿತ್ತು.

ತೀ. ಡಾ. (ಸೌ.) ಕುಂದಾ ಜಯಂತ ಆಠವಲೆಯವರ ವಂದನೀಯ ಉಪಸ್ಥಿತಿ !

ತೀ. ಡಾ. (ಸೌ.) ಕುಂದಾ ಜಯಂತ ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವ ಸಮಾರಂಭದಲ್ಲಿ ವಂದನೀಯ ಡಾ. (ಸೌ.) ಕುಂದಾ ಜಯಂತ ಆಠವಲೆ ಇವರೂ ಉಪಸ್ಥಿತರಿದ್ದರು. ‘ಪ.ಪೂ. ಭಕ್ತರಾಜ ಮಹಾರಾಜರಿಂದ ಅನುಗ್ರಹಿತ ಮತ್ತು ಪ.ಪೂ. ರಮಾನಂದ ಮಹಾರಾಜರ ಕೃಪೆಗೆ ಪಾತ್ರರಾಗಿರುವ ಡಾ. (ಸೌ.) ಕುಂದಾ ಆಠವಲೆಯವರು ಪ.ಪೂ. ಭಕ್ತರಾಜ ಮಹಾರಾಜರ ಮತ್ತು ಅವರ ನಂತರ ಅವರ ಉತ್ತರಾಧಿಕಾರಿಗಳಾದ ಪ.ಪೂ. ರಾಮಾನಂದ ಮಹಾರಾಜರ ಸೇವೆಯನ್ನೂ ಸುಮಾರು ೧೦-೧೨ ವರ್ಷಗಳ ವರೆಗೆ ಮಾಡಿದ್ದಾರೆ. ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜೊತೆಗೆ ಸಂಮ್ಮೋಹನ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡುವುದು, ವಿವಿಧ ಸಂತರ ಬಳಿ ಹೋಗಿ ಅಧ್ಯಾತ್ಮವನ್ನು ಕಲಿಯುವುದು ಮುಂತಾದವುಗಳನ್ನು ಮಾಡಿದ್ದಾರೆ. ನಂತರ ಅವರು ಪ.ಪೂ. ಭಕ್ತರಾಜ ಮಹಾರಾಜರ ಸೇವೆಯನ್ನು ಪೂರ್ಣವೇಳೆ ಮಾಡಿದ್ದಾರೆ. ಅವರ ಈ ಸಹಾಯದಿಂದಲೇ ಸಂಸ್ಥೆಯ ಕಾರ್ಯದ ಅಡಿಪಾಯ ವನ್ನು ರಚಿಸಲಾಯಿತು. ಈ ರೀತಿ ಅವರ ಪರಿಚಯ ಮಾಡಿಕೊಟ್ಟು ಅವರ ಬಗ್ಗೆ ಎಲ್ಲ ಸಾಧಕರ ವತಿಯಿಂದ ಕೃತಜ್ಞತೆಯನ್ನು ವ್ಯಕ್ತಪಡಿಸಲಾಯಿತು.