ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರ ಚರಣ ಸ್ಪರ್ಶ ಮಾಡುತ್ತಿರುವ ಸಮುದ್ರ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು  ಅವತಾರಿ ಆಗಿದ್ದಾರೆಂದು ತೋರಿಸಿದ ಪಂಚಮಹಾಭೂತಗಳು

ಡಿಸೆಂಬರ್‌ ೨೦೨೨ ರಲ್ಲಿ ನಾವು ಮಹರ್ಷಿಯ ಆಜ್ಞೆಯಂತೆ ಗಣಪತಿ ಪುಳೆ (ಜಿಲ್ಲಾ ರತ್ನಾಗಿರಿ) ಇಲ್ಲಿ ಗಣಪತಿಯ ದರ್ಶನ ಪಡೆದು ಜಲಾಭಿಷೇಕ ಮಾಡಿ ಸಂಜೆ ಸಮುದ್ರ ತೀರಕ್ಕೆ ಹೋಗಿದ್ದೆವು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಸಮುದ್ರ ತೀರದಲ್ಲಿ ಒಂದು ಚಿಕ್ಕ ಸ್ಟೂಲ್‌ನಲ್ಲಿ ಕುಳಿತು ನಾಮಜಪಿಸುತ್ತಿದ್ದರು. ನಾಮಜಪವಾದ ನಂತರ ಸಮುದ್ರದೇವತೆಗೆ ಪ್ರಾರ್ಥನೆ ಮಾಡುತ್ತಾ ಸಮುದ್ರ ನೋಡುತ್ತಿದ್ದರು. ಆಗ ಸಮುದ್ರದ ನೀರು ಅವರ ಹತ್ತಿರ  ೨-೩ ಅಡಿಯಷ್ಟು ಬಂದು ಹೋಗುತ್ತಿತ್ತು, ಅವರು ಎಷ್ಟು ಹೊತ್ತು ಕುಳಿತಿದ್ದರೋ ಅಷ್ಟು ಹೊತ್ತು ಇದು ಹೀಗೆ ನಡೆಯುತ್ತಿತ್ತು. ಆಶ್ಚರ್ಯ ಎಂದರೆ ಅವರು ಎದ್ದು ನಿಂತ ತಕ್ಷಣ ಸಮುದ್ರದ ನೀರು ಅವರ ಚರಣ ಸ್ಪರ್ಶಿಸಿತು. ಅದರ ನಂತರ ಆ ನೀರು ಅವರಿಂದ ಸುಮಾರು ೫ – ೬ ಅಡಿ ಹಿಂದಕ್ಕೆ ಸರಿಯಿತು. ನಾವೆಲ್ಲರೂ ಈ ದೈವಿ ದೃಶ್ಯ ನೋಡುತ್ತಿದ್ದೆವು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಕುಳಿತಿದ್ದಾಗ ಏನಾದರೂ ನೀರು ಅವರ ಹತ್ತಿರಕ್ಕೆ ಬಂದಿದ್ದರೆ, ಆಗ ಸೀರೆ ಒದ್ದೆ ಆಗಿ ಅದಕ್ಕೆ ಮರಳು ಅಂಟಿ ಸೀರೆ ಹಾಳಾಗುತ್ತಿತ್ತು. ಇದು ಸಮುದ್ರ ನಾರಾಯಣನ ಗಮನಕ್ಕೆ ಬಂದು ಅವರು ಮುಂದೆ ಬರುತ್ತಿರಲಿಲ್ಲ. ಸಾಕ್ಷಾತ ಸಮುದ್ರ ನಾರಾಯಣರು ಮಹಾಲಕ್ಷ್ಮಿ ಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಎದ್ದು ನಿಲ್ಲುವ ದಾರಿ ಕಾಯುತ್ತಿದ್ದರು. ‘ಅವರು ಎದ್ದು ನಿಂತೊಡನೆ ಚರಣ ಸ್ಪರ್ಶ ಮಾಡಬೇಕು ? ಎಂದು ಅವರಿಗೆ ಅನಿಸಿರಬಹುದೆಂದು ನನಗನಿಸಿತು. ಹಾಗೂ ‘ತನ್ನ ಸ್ಪರ್ಶದಿಂದ ತೊಂದರೆ ಆಗಬಾರದು,’ ಎಂಬ ಕಾಳಜಿಯನ್ನು ಸಮುದ್ರ ನಾರಾಯಣರು ವಹಿಸಿದ್ದರು.’

– ಶ್ರೀ ವಾಲ್ಮೀಕ ಭೂಕನ, ಚೆನ್ನೈ (೩೦.೬.೨೦೨೩)