ಆಧ್ಯಾತ್ಮಿಕ ತೊಂದರೆ ಆಗುತ್ತಿದ್ದರೂ ಮಹರ್ಷಿಗಳ ಆಜ್ಞೆಗನುಸಾರ ಹಂಪಿಯ ದೇವರ ದರ್ಶನ ಪೂರ್ಣಗೊಳಿಸಿದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಹಂಪಿಯ ಸಮೀಪ ನವವೃಂದಾವನದ ಮೂಲಸ್ಥಾನ ಆಗಿರುವ ಶ್ರೀ ಪ್ರಾಣದೇವ (ಶ್ರೀಮಾರುತಿರಾಯ)ರ ಮಂದಿರದಲ್ಲಿ ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳರು ಹಿಂದೂ ರಾಷ್ಟ್ರಕ್ಕಾಗಿ ಪ್ರಾರ್ಥನೆ ಮಾಡಿದರು.
ಹಂಪಿಗೆ ಹೋಗುವಾಗ ದೋಣಿಯಲ್ಲಿ ನದಿಯನ್ನು ದಾಟಿ ಹೋಗಬೇಕಾಗುತ್ತದೆ. ಪ್ರತ್ಯಕ್ಷ ಶ್ರೀರಾಮ, ಹನುಮಂತ, ಅಂಜನೀ ಮಾತೆಯನ್ನು ನೋಡಿದ ತುಂಗಭದ್ರಾ ನದಿಯನ್ನು ನೋಡಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಭಾವಜಾಗೃತಿಯಾಯಿತು.
 ಅವರು ನದಿಯ ನೀರನ್ನು ಮೈ ಮೇಲೆ ಸಿಂಪಡಿಸಿಕೊಂಡರು ಹಾಗೂ ಅದರ ತೀರದಲ್ಲಿ ಕುಳಿತು ಅವಳಿಗೆ ಭಾವಪೂರ್ಣ ನಮಸ್ಕಾರ ಮಾಡಿದರು. ಶಾರೀರಿಕ ಮತ್ತು ಆಧ್ಯಾತ್ಮಿಕ ಸ್ವರೂಪದ ತೊಂದರೆ ಆಗುತ್ತಿದ್ದರೂ ಹಂಪಿಗೆ ದೋಣಿಯಿಂದ ನದಿ ದಾಟಿ ಹೋಗಬೇಕಾದರೂ ಆನಂದಾವಸ್ಥೆಯಲ್ಲಿದ್ದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (ಎಲ್ಲ ಛಾಯಾಚಿತ್ರಗಳು ೨೦೨೧)

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಕಳೆದ ೧೨ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿನ ಕೆಲವು ಸ್ಥಳಗಳ ಪ್ರವಾಸ ಮಾಡುತ್ತಿದ್ದಾರೆ. ಈ ಪ್ರವಾಸದ ಅಂತರ್ಗತ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವುದು, ತೀರ್ಥಕ್ಷೇತ್ರಗಳಿಗೆ ಹೋಗುವುದು, ಕೆಲವು ಸ್ಥಳಗಳಲ್ಲಿ ಯಜ್ಞಯಾಗಗಳನ್ನು ಮಾಡುವುದು, ಇತ್ಯಾದಿ ಸೇವೆಗಳಿರುತ್ತವೆ. ಈ ಸೇವೆಗಳನ್ನು ಮಹರ್ಷಿಗಳ ಆಜ್ಞೆಗನುಸಾರ ಮಾಡಲಿಕ್ಕಿರುವುದರಿಂದ ಅವರು ಯಾವಾಗಲೂ ವರ್ತಮಾನಕಾಲದಲ್ಲಿರಬೇಕಾಗುತ್ತದೆ. ಅನೇಕ ದೇವಸ್ಥಾನಗಳಿಗೆ ಹೋಗುವ ರಸ್ತೆಗಳು ಸರಿ ಇರುವುದಿಲ್ಲ. ಅಂತಹ ಪ್ರಸಂಗದಲ್ಲಿ ಸಿಕ್ಕಿದ ಪರ್ಯಾಯವನ್ನು ಸ್ವೀಕರಿಸಿ ಪ್ರವಾಸ ಮಾಡಬೇಕಾಗುತ್ತದೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಶರೀರ ಕ್ಷಮತೆಗೆ ಮಿತಿ ಇದ್ದರೂ ಅತ್ಯಂತ ಕಠಿಣ ಸ್ಥಳಗಳಿಗೂ ಹೋಗಿ ಅವರು ಭಕ್ತಿಭಾವದಿಂದ ಪೂಜಾವಿಧಿಗಳನ್ನು ಮಾಡುತ್ತಾರೆ. ಸಾಧಕರ ರಕ್ಷಣೆಗಾಗಿ ಸಪ್ತರ್ಷಿಗಳು ಹೇಳಿದಲ್ಲಿಗೆ ಹೋಗಲು ಅವರು ಸದಾ ಸಿದ್ಧರಿರುತ್ತಾರೆ. ಓರ್ವ ಮಹಿಳೆಯಾಗಿದ್ದರೂ ಚಳಿ-ಗಾಳಿ, ಮಳೆ-ಬಿಸಿಲು ಇತ್ಯಾದಿ ಯಾವುದನ್ನೂ ಲೆಕ್ಕಿಸದೆ ಕೇವಲ ಸಮಷ್ಟಿಯ ಕಲ್ಯಾಣಕ್ಕಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ದೇಶ-ವಿದೇಶಗಳಿಗೆ ನಿರಂತರ ಪ್ರವಾಸ ಮಾಡುತ್ತಿರುತ್ತಾರೆ. ಇಲ್ಲಿ ಮಹರ್ಷಿಗಳ ಆಜ್ಞೆಗನುಸಾರ ಹಂಪಿಗೆ ಹೋಗುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಪ್ರವಾಸದಲ್ಲಿ ಆದಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು, ಆಗ ದೇವರ ದರ್ಶನ ಪಡೆಯುವಾಗ ಅವರಿಗೆ ಬಂದಿರುವ ಅನುಭೂತಿಯನ್ನು ನೋಡೋಣ.

೧. ಹಂಪಿಗೆ ಹೋಗುವಾಗ ಪ್ರವಾಸದಲ್ಲಾದ ಆಧ್ಯಾತ್ಮಿಕ ತೊಂದರೆ

‘೫.೧.೨೦೨೧ ರಂದು ಮಹರ್ಷಿಗಳು ಹೇಳಿದಂತರ ನಾವು ಶಿರಸಿಯಿಂದ ಹಂಪಿಗೆ ಹೊರಟೆವು. ಆಗ ನನಗೆ ಪ್ರವಾಸದಲ್ಲಿ ಅಸ್ವಸ್ಥವೆನಿಸಲು ಆರಂಭವಾಯಿತು. ನನಗೆ ಸಹಿಸಲಾರದಷ್ಟು ದಣಿವು ಮತ್ತು ತಲೆ ಭಾರವೆನಿಸುತ್ತಿತ್ತು ಹಾಗೂ ವಾಕರಿಕೆ ಬಂದಂತಾಗುತ್ತಿತ್ತು. ಆಗ ‘ಕೆಟ್ಟ ಶಕ್ತಿಗಳಿಂದ ಏನೋ ಹೊಸ ತರಹದ ಆಕ್ರಮಣದ ಆಯೋಜನೆ ಆಗುತ್ತಿದೆ’, ಎಂದು ನನಗನಿಸಿತು. ನಾವು ೬ ಗಂಟೆಗೆ ಹೊಸಪೇಟೆಗೆ ತಲುಪಿದೆವು.

೨. ದೇವರ ದರ್ಶನ ಪಡೆಯುವಾಗ ಬಂದ ಅಡಚಣೆ

ಅ. ನಾವು ‘ಹೊಟೇಲ್‌’ಗೆ ತಲುಪುವಾಗಲೇ ನನಗೆ ನೀರಿನಂತೆ ಭೇದಿ ಆರಂಭವಾಯಿತು. ನನಗೆ ಮರುದಿನವೂ ಭೇದಿ ಆಗುತ್ತಿತ್ತು. ಮಹರ್ಷಿಗಳು ಹೇಳಿದಂತೆ ದೇವರ ದರ್ಶನ ಸಾಧ್ಯವಾಗಲಿಲ್ಲ.

ಆ. ಮೂರನೇ ದಿನ ನನ್ನ ಭೇದಿ ನಿಂತಿತು. ನಾನು ಪ್ರಾರ್ಥನೆ ಮಾಡಿ ದೇವರ ದರ್ಶನಕ್ಕಾಗಿ ಹೊರಡುವಷ್ಟರಲ್ಲಿ ನನ್ನ ಋತುಸ್ರಾವ ಆರಂಭವಾಯಿತು. ಆದ್ದರಿಂದ ದೇವರ ದರ್ಶನ ಮುಂದೂಡ ಲಾಯಿತು. ಆಗ ‘ಭಗವಂತನ ಇಚ್ಛೆ’, ಎಂದು ತಿಳಿದು ಇನ್ನು ಋತುಸ್ರಾವ ನಿಂತ ಮೇಲೆ ದರ್ಶನಕ್ಕೆ ಹೋಗುವುದೆಂದಾಯಿತು.

೩. ಮಾಡಿದ ಉಪಾಯ

ಈ ಸಂದರ್ಭದಲ್ಲಿ ಬಗಲಾಮುಖಿ ಕವಚ ಮತ್ತು ಕಾಲಭೈರವ ಸ್ತೋತ್ರ ಕೇಳುವುದು, ನಾಮಜಪ ಮಾಡುವುದು, ಹೀಗೆ ಉಪಾಯ ನಡೆಯುತ್ತಿತ್ತು. ನನಗಾಗುವ ತೊಂದರೆಯನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಗೂ ತಿಳಿಸಿದ್ದೆ.

೪. ಮಹರ್ಷಿಗಳು ‘ಇತರರು ದರ್ಶನ ಪಡೆಯುವುದಕ್ಕಿಂತ ಮಾತಾಜಿಯವರೆ (ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳರೆ) ದರ್ಶನ ಪಡೆದರೆ ಆಧ್ಯಾತ್ಮಿಕ ಲಾಭವಾಗಲಿಕ್ಕಿದೆ’, ಎಂದು ಹೇಳುವುದು

ಶ್ರೀ. ವಿನಾಯಕ ಶಾನಭಾಗ್‌ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೭ ವಯಸ್ಸು ೪೦) ಇವರು ಪೂ. ಡಾ. ಉಲಗನಾಥನ್‌ ಇವರಲ್ಲಿ, ”ಶ್ರೀಚಿತ್‌ಶಕ್ತಿಯವರ ಆರೋಗ್ಯ ಸರಿಯಿಲ್ಲ, ಅವರ ಬದಲು ನಾವು ದರ್ಶನ ಪಡೆದು ಬಂದರೆ ಆಗಬಹುದೇ ?’’ ಎಂದು ಕೇಳಿದಾಗ ಪೂ. ಡಾ. ಉಲಗನಾಥನ್‌ ಇವರು ಹೇಳಿದರು, ”ವಿನಾಯಕಜೀ, ಹೇಗೆ ನಾನು ಸಪ್ತರ್ಷಿ ಆಗಲು ಸಾಧ್ಯವಿಲ್ಲ, ಕೇವಲ ಅವರ ಮಾಧ್ಯಮ ಆಗಬಲ್ಲೆ, ಇದು ಕೂಡ ಹಾಗೆಯೆ ಇದೆ. ಮಾತಾಜೀಯವರೆ (ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳರೆ) ದರ್ಶನ ಪಡೆಯಬೇಕು, ಆಗ ಮಾತ್ರ ನಮಗೆ ಆಧ್ಯಾತ್ಮಿಕ ಲಾಭವಾಗಬಹುದು.’’

 ೫. ಹಂಪಿಯ ಪವಿತ್ರ ಸ್ಥಾನಗಳು

ಇಲ್ಲಿನ ಅಂಜನಾದ್ರಿ ಪರ್ವತದಲ್ಲಿ ಹನುಮಂತನ ಜನ್ಮಸ್ಥಾನವಿದೆ ಹಾಗೂ ಇದು ಶ್ರೀರಾಮರ ಕಾಲದ ಸುಗ್ರೀವನ ರಾಜಧಾನಿ ಕಿಷ್ಕಿಂದಾ ನಗರವಾಗಿದೆ. ಶ್ರೀರಾಮರು ಇಲ್ಲಿಯೇ ವಾಲಿಯನ್ನು ವಧಿಸಿದ್ದರು. ಶಬರಿಯ ಗುರು ಮಾತಂಗಋಷಿಗಳ ಆಶ್ರಮವೂ ಇಲ್ಲಿಯೆ ಇತ್ತು. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ತುಂಗಭದ್ರಾ ನದಿಯ ಪವಿತ್ರ ಜಲವೂ ಇಲ್ಲಿದೆ. ಇಂತಹ ಪವಿತ್ರ ಸ್ಥಾನದಲ್ಲಿ ಮಹರ್ಷಿಗಳು ನನಗೆ ದರ್ಶನ ಪಡೆಯಲು ಹೇಳಿದ್ದಾರೆ.

೬. ಮಹರ್ಷಿಗಳಲ್ಲಿ ಮಾಡಿದ ಪ್ರಾರ್ಥನೆ

ನನಗೆ ‘ನಾನು ದರ್ಶನಕ್ಕೆ ಹೋದಾಗ ದಾರಿಯಲ್ಲಿ ಹೊಟ್ಟೆ ಕೆಟ್ಟು ಹೋದರೆ ಏನು ಮಾಡುವುದು ?’ ಎನ್ನುವ ವಿಚಾರ ಬಂತು. ಇದು ಗುಡ್ಡಗಾಡು ಪ್ರದೇಶವಾಗಿದೆ. ದಾರಿಯಲ್ಲಿ ಯಾವುದೇ ಸೌಲಭ್ಯವಿರಲಿಲ್ಲ. ಆಗ ‘ಮಹರ್ಷಿಗಳೇ ಈಗ ನನಗೆ ಶಕ್ತಿ ನೀಡುವರು’, ಎಂದು ನನಗೆ ಅನಿಸಿತು. ಆಗ ನಾನು ಮಹರ್ಷಿಗಳಲ್ಲಿ ಪ್ರಾರ್ಥನೆ ಮಾಡಿದೆ, ‘ಈಗ ನೀವೇ ನನಗೆ ದರ್ಶನಕ್ಕೆ ಹೋಗಲು ಶಕ್ತಿಯನ್ನು ನೀಡಿರಿ.’

ಈ ರೀತಿ ಧರ್ಮಕಾರ್ಯದಲ್ಲಿ ಕೆಟ್ಟ ಶಕ್ತಿಗಳು ಕೂಡ ಶಾರೀರಿಕ ತೊಂದರೆ ಕೊಡುತ್ತವೆ; ಆದರೆ ಭಗವಂತನಿಗೆ ಎಲ್ಲವೂ ಗೊತ್ತಿರುವುದರಿಂದ ಉಳಿದ ಸಮಯದಲ್ಲಿ ನಮ್ಮ ಬೆರಳಚ್ಚು ಸೇವೆ ನಡೆಯುತ್ತಾ ಇರುತ್ತದೆ. ಬೇರೆ ಸಂದರ್ಭಗಳಲ್ಲಿಯೂ ಪ್ರವಾಸದಲ್ಲಿರುವಾಗ ನನಗೆ ಅನೇಕ ಬಾರಿ ಇಂತಹ ಶಾರೀರಿಕ ತೊಂದರೆ ಆಗಿದ್ದರೂ ದೇವರು ನನ್ನ ಸೇವೆ ಭಂಗವಾಗಲು ಬಿಡಲಿಲ್ಲ. ಇದು ದೇವರ ಕೃಪೆಯಲ್ಲವೇ ?’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಹೊಸಪೇಟೆ, ಕರ್ನಾಟಕ. (೨೮.೧.೨೦೨೧)

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.