ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೈವೀ ಗುಣವೈಶಿಷ್ಟ್ಯಗಳ ವಿಶ್ಲೇಷಣೆ !

ಅಧ್ಯಾತ್ಮದಲ್ಲಿ ತಾತ್ತ್ವಿಕ ಜ್ಞಾನಕ್ಕೆ ಕೇವಲ ಶೇ. ೨ ರಷ್ಟು, ಮತ್ತು ಪ್ರತ್ಯಕ್ಷ ಕೃತಿಗೆ ಶೇ. ೯೮ ರಷ್ಟು ಮಹತ್ವವಿದೆ. – ಪರಾತ್ಪರ ಗುರು ಡಾ. ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸನಾತನ ಸಂಸ್ಥೆ ಮತ್ತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಇವುಗಳ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಪೂರ್ಣ ಮನುಕುಲದ ಆಧ್ಯಾತ್ಮಿಕ ಉತ್ಕರ್ಷಕ್ಕಾಗಿ (ಏಳಿಗೆಗಾಗಿ) ಕಾರ್ಯನಿರತರಾಗಿದ್ದಾರೆ. ಅವರ ಜನ್ಮಕುಂಡಲಿ ಆಧ್ಯಾತ್ಮಿಕ ದೃಷ್ಟಿ ಯಿಂದ ವೈಶಿಷ್ಟ್ಯಪೂರ್ಣವಾಗಿದೆ. ಮುಂದಿನ ಲೇಖನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೈವೀ ಗುಣವೈಶಿಷ್ಟ್ಯಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆಯನ್ನು ನೀಡಲಾಗಿದೆ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಜನ್ಮದಿಂದಲೇ ಲಭಿಸಿದ ದೈವೀ ಗುಣಗಳ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ

ಶ್ರೀ. ಯಶವಂತ ಕಣಗಲೆಕರ

೧ ಅ. ನಮ್ರತೆ ಮತ್ತು ಆಜ್ಞಾಪಾಲನೆ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ)ಯವರ ಜನ್ಮಕುಂಡಲಿಯಲ್ಲಿ ಗುರು ಮತ್ತು ಶುಕ್ರ ಈ ಶುಭಗ್ರಹಗಳ ‘ಅನ್ಯೋನ್ಯ ಯೋಗ (ಒಂದು ವಿಶೇಷ ಶುಭಯೋಗ) ಇದೆ. ಇದರಿಂದ ವ್ಯಕ್ತಿಯಲ್ಲಿ ವ್ಯಷ್ಟಿ ಸ್ತರದ ‘ನಮ್ರತೆ ಮತ್ತು ‘ಆಜ್ಞಾಪಾಲನೆ ಈ ಗುಣಗಳಿರುತ್ತವೆ. ಈ ಗುಣಗಳಿರುವ ವ್ಯಕ್ತಿಗಳಲ್ಲಿ ಅಹಂ ಕಡಿಮೆಯಿರುತ್ತದೆ. ಪರಾತ್ಪರ ಗುರು ಡಾಕ್ಟರರು ಪೂರ್ವಾಶ್ರಮದಲ್ಲಿ ಪ್ರಸಿದ್ಧ ಸಂಮ್ಮೋಹನ-ಉಪಚಾರತಜ್ಞರಾಗಿದ್ದರೂ ‘ನಮ್ರತೆ ಈ ಗುಣದಿಂದಾಗಿ ಅವರು ಯಾವಾಗಲೂ ಕಲಿಯುವ ಸ್ಥಿತಿಯಲ್ಲಿರುತ್ತಿದ್ದರು. ಅವರಿಗೆ ಗುರುಪ್ರಾಪ್ತಿಯಾದ ನಂತರ ‘ಆಜ್ಞಾಪಾಲನೆ ಈ ಗುಣದಿಂದಾಗಿ ಅವರು ಗುರುಗಳ ಪ್ರತಿಯೊಂದು ಆಜ್ಞೆಯನ್ನು ಪಾಲಿಸಿದರು. ಆದುದರಿಂದ ಅವರ ಮೇಲೆ ಗುರುಕೃಪೆಯಾಗಿ ಕೇವಲ ಒಂದೂವರೆ ವರ್ಷದಲ್ಲಿ ಅವರು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡರು.

೧ ಆ. ತತ್ಪರತೆ ಮತ್ತು ಗುಣಗ್ರಾಹಕತೆ : ಈ ಗುಣಗಳು ಸಮಷ್ಟಿ ಸಾಧನೆಗೆ ಆವಶ್ಯಕವಾಗಿರುತ್ತವೆ. ಪರಾತ್ಪರ ಗುರು ಡಾಕ್ಟರರ ಕುಂಡಲಿಯಲ್ಲಿ ರವಿ ಗ್ರಹ ‘ಮೇಷ ರಾಶಿಯಲ್ಲಿ ಮತ್ತು ಚಂದ್ರ ಗ್ರಹ ‘ಮಕರ ರಾಶಿಯಲ್ಲಿದೆ. ಮೇಷ ಮತ್ತು ಮಕರ ಇವು ‘ಚರ (ಗತಿಮಾನ) ಸ್ವಭಾವದ ರಾಶಿಗಳಾಗಿದ್ದು ಅವು ‘ತತ್ಪರತೆ ಈ ಗುಣವನ್ನು ತೋರಿಸುತ್ತವೆ. ‘ತತ್ಪರತೆಯಿಂದ ನಿರ್ಣಯವನ್ನು ತೆಗೆದುಕೊಳ್ಳುವುದು ಮತ್ತು ‘ಕಾರ್ಯವನ್ನು ಪ್ರಲಂಬಿತ (ಬಾಕಿ) ಇಡದಿರುವುದು ಇವುಗಳಿಂದಾಗಿ ಪರಾತ್ಪರ ಗುರು ಡಾಕ್ಟರರ ಸಮಷ್ಟಿ ಕಾರ್ಯದ ಫಲನಿಷ್ಪತ್ತಿಯ ಪ್ರಮಾಣ ಅಪಾರವಿದೆ. ಅವರಲ್ಲಿನ ‘ಗುಣಗ್ರಾಹಕತೆ ಈ ಗುಣದಿಂದ ಅವರು ಕೇವಲ ಸಾಧಕರಿಂದ ಮಾತ್ರವಲ್ಲ; ಅವರು ಪ್ರಾಣಿ, ವನಸ್ಪತಿ, ನಿಸರ್ಗ, ನಿರ್ಜೀವ ವಸ್ತು ಮುಂತಾದವುಗಳಿಂದಲೂ ಕಲಿಯಲು ಪ್ರಯತ್ನಿಸುತ್ತಾರೆ. ಅವರು ಸಾಧಕರ ಚಿಕ್ಕ-ಚಿಕ್ಕ ಕೃತಿಗಳನ್ನು ಪ್ರಶಂಸಿಸಿ ಅವರಿಗೆ ಸಾಧನೆಗಾಗಿ ಪ್ರೋತ್ಸಾಹಿಸುತ್ತಾರೆ.

೧ ಇ. ಮಾಯೆಯ ಆಸಕ್ತಿ ಕಡಿಮೆ ಇರುವುದು : ಪರಾತ್ಪರ ಗುರು ಡಾಕ್ಟರರ ಕುಂಡಲಿಯಲ್ಲಿ ಮೊದಲ ಸ್ಥಾನದಲ್ಲಿ ‘ಮಿಥುನ ಈ ವಾಯುತತ್ತ್ವದ ರಾಶಿ ಇರುವುದರಿಂದ ಅವರಲ್ಲಿ ಮಾಯೆಯ ಆಸಕ್ತಿ ಮೊದಲಿನಿಂದಲೇ ಕಡಿಮೆ ಇತ್ತು.

೧ ಈ. ಪ್ರಗಲ್ಭ ಆಧ್ಯಾತ್ಮಿಕ ಬುದ್ಧಿ : ಪರಾತ್ಪರ ಗುರು ಡಾಕ್ಟರರ ಕುಂಡಲಿಯಲ್ಲಿ ಪ್ರಥಮ ಸ್ಥಾನದ ಸ್ವಾಮಿ ಬುಧ, ಇದು ‘ಗುರು ಮತ್ತು ‘ಶನಿ ಈ ಆಧ್ಯಾತ್ಮಿಕ ಗ್ರಹಗಳ ಜೊತೆಗಿದೆ. ಈ ಯೋಗವು ಅವರಲ್ಲಿನ ‘ಪ್ರಗಲ್ಭ (ಪಾಂಡಿತ್ಯಪೂರ್ಣ) ಆಧ್ಯಾತ್ಮಿಕ ಬುದ್ಧಿಯ ದ್ಯೋತಕವಾಗಿದೆ. ಇದಕ್ಕೆ ಸಂಬಂಧಿಸಿದ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

೧ ಈ ೧. ಅಧ್ಯಾತ್ಮದ ಬಗ್ಗೆ ಬರೆದ ಮೊದಲ ಗ್ರಂಥ ‘ಅಧ್ಯಾತ್ಮಶಾಸ್ತ್ರ ! : ಪರಾತ್ಪರ ಗುರು ಡಾಕ್ಟರರು ವರ್ಷ ೧೯೮೭ ರಲ್ಲಿ ಅಧ್ಯಾತ್ಮಶಾಸ್ತ್ರದ ಬಗ್ಗೆ ಬರೆದ ಮೊದಲ ಗ್ರಂಥ ‘ಅಧ್ಯಾತ್ಮಶಾಸ್ತ್ರ. ಅದರಲ್ಲಿ ಅಧ್ಯಾತ್ಮದ ಸಾರವಿದೆ. ಪರಾತ್ಪರ ಗುರು ಡಾಕ್ಟರರು ಈ ಗ್ರಂಥವನ್ನು ಗುರುಪ್ರಾಪ್ತಿಯಾಗುವ ಮೊದಲೇ ಬರೆದಿದ್ದರು. ಆ ಗ್ರಂಥದಲ್ಲಿ ಪೃಥ್ವಿಯಲ್ಲಿ ಲಭ್ಯವಿಲ್ಲದ ಜ್ಞಾನದ ಅನೇಕ ವಿಷಯಗಳಿವೆ. ಪರಾತ್ಪರ ಗುರು ಡಾಕ್ಟರರ ಈ ಮೊದಲ ಗ್ರಂಥ ಸನಾತನದ ಗ್ರಂಥಗಳ ಮೂಲಾಧಾರ ಗ್ರಂಥವಾಗಿದೆ. ಈಗ ಸನಾತನದ ಅಧ್ಯಾತ್ಮ, ಸಾಧನೆ, ಧರ್ಮ, ಧರ್ಮಾಚರಣೆ ಮುಂತಾದ ವಿಷಯಗಳಲ್ಲಿ ೩೫೦ ಕ್ಕಿಂತ ಹೆಚ್ಚು ಗ್ರಂಥಗಳು ಪ್ರಕಾಶನಗೊಂಡಿವೆ.

೧ ಈ ೨. ಪ್ರಾಯೋಗಿಕ ಸ್ತರದಲ್ಲಿ ಅಧ್ಯಾತ್ಮದ ಶಿಕ್ಷಣವನ್ನು ನೀಡುವುದು : ‘ಅಧ್ಯಾತ್ಮದಲ್ಲಿ ತಾತ್ತ್ವಿಕ ಜ್ಞಾನಕ್ಕೆ ಕೇವಲ ಶೇ. ೨ ರಷ್ಟು, ಮತ್ತು ಪ್ರತ್ಯಕ್ಷ ಕೃತಿಗೆ ಶೇ. ೯೮ ರಷ್ಟು ಮಹತ್ವವಿದೆ, ಎಂದು ಪರಾತ್ಪರ ಗುರು ಡಾಕ್ಟರರು ಹೇಳಿದ್ದಾರೆ. ಅವರು ಪ್ರಾಯೋಗಿಕ ಸ್ತರದಲ್ಲಿ ಅಧ್ಯಾತ್ಮದ ಶಿಕ್ಷಣವನ್ನು ನೀಡಿದರು. ಆದುದರಿಂದ ಸನಾತನದ ಸಾಧಕರು ತಾತ್ತ್ವಿಕ ಜ್ಞಾನದಲ್ಲಿ ಸಿಲುಕದೇ ಸಾಧನೆಯಲ್ಲಿನ ಕೃತಿಗಳನ್ನು ಮಾಡುವುದಕ್ಕೆ ಹೆಚ್ಚು ಒತ್ತು ನೀಡುತ್ತಾರೆ; ಅಂದರೆ ಆಧ್ಯಾತ್ಮಿಕ ಜೀವನವನ್ನು ಪ್ರತ್ಯಕ್ಷ ಜೀವಿಸಲು ಪ್ರಯತ್ನಿಸುತ್ತಾರೆ.

೧ ಈ ೩. ಸ್ವಭಾವದೋಷಗಳ ನಿರ್ಮೂಲನೆಗಾಗಿ ‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆಯನ್ನು ವಿಕಾಸಗೊಳಿಸುವುದು : ‘ಚಿತ್ತದಲ್ಲಿ ರುವ ಸ್ವಭಾವದೋಷಗಳು ಈಶ್ವರಪ್ರಾಪ್ತಿಯಲ್ಲಿನ ಮುಖ್ಯ ಅಡಚಣೆ ಗಳಾಗಿವೆ, ಎಂದು ಅರಿತುಕೊಂಡು ಪರಾತ್ಪರ ಗುರು ಡಾಕ್ಟರರು ಸ್ವಭಾವದೋಷಗಳ ನಿರ್ಮೂಲನೆಗಾಗಿ ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯನ್ನು ವಿಕಾಸಗೊಳಿಸಿದರು. ನಾಮಜಪ, ಸತ್ಸಂಗ, ಸತ್ಸೇವೆ ಇವುಗಳ ಜೊತೆಗೆ ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸಿದರೆ ಸಾಧಕರ ಆಧ್ಯಾತ್ಮಿಕ ಉನ್ನತಿ ಶೀಘ್ರ ಗತಿಯಲ್ಲಾಗುತ್ತದೆ.

೧ ಉ. ಸಂಶೋಧಕವೃತ್ತಿ ಮತ್ತು ಸೂಕ್ಷ್ಮದ ವಿಷಯಗಳನ್ನು ತಿಳಿದು ಕೊಳ್ಳುವ ಕ್ಷಮತೆ : ಪರಾತ್ಪರ ಗುರು ಡಾಕ್ಟರರ ಕುಂಡಲಿಯಲ್ಲಿ ಹನ್ನೆರಡನೇ ಸ್ಥಾನದಲ್ಲಿ ಬುಧ ಮತ್ತು ಶನಿ ಈ ಗ್ರಹಗಳ ಜೊತೆಗೆ ‘ಹರ್ಷಲ ಎಂಬ ಗ್ರಹವಿದೆ. ಈ ಯೋಗವು ವ್ಯಕ್ತಿಯಲ್ಲಿ ‘ಸಂಶೋಧಕವೃತ್ತಿ ಮತ್ತು ‘ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಕ್ಷಮತೆಯನ್ನು ತೋರಿಸುತ್ತದೆ. ಪರಾತ್ಪರ ಗುರು ಡಾಕ್ಟರರು ಸಮಾಜಕ್ಕೆ ಸೂಕ್ಷ್ಮ-ಜಗತ್ತಿನ ಪರಿಚಯವನ್ನು ಮಾಡಿಕೊಟ್ಟರು. ಸೂಕ್ಷ್ಮದಲ್ಲಿರುವ ಕೆಟ್ಟ ಶಕ್ತಿಗಳಿಂದ ಸಾಧನೆಯಲ್ಲಿ ಅಡತಡೆಗಳು ಹೇಗೆ ಉದ್ಭವಿಸುತ್ತವೆ, ಎಂಬುದನ್ನು ಅವರು ತೋರಿಸಿದರು ಮತ್ತು ಅದರ ನಿವಾರಣೆಗಾಗಿ ನಾವೀನ್ಯಪೂರ್ಣ ಉಪಾಯಗಳನ್ನೂ ಕಂಡು ಹಿಡಿದರು. ‘ಸಾಧಕರ ಮನಸ್ಸಿನಲ್ಲಿ ಬರುವ ಅನಾವಶ್ಯಕ ವಿಚಾರಗಳು ಅವರನ್ನು ಸಾಧನೆಯಿಂದ ದೂರ ಕರೆದೊಯ್ಯುತ್ತವೆ, ಇದನ್ನು ಅರಿತು ಆ ವಿಚಾರಗಳನ್ನು ಹುಟ್ಟುಹಾಕುವ ಸಂಸ್ಕಾರಗಳು ಅಳಿಸಿ ಹೋಗಬೇಕು, ಎಂಬುದಕ್ಕಾಗಿ ಅವರು ಸಾಧಕರಿಗೆ ‘ನಿರ್ವಿಚಾರ ಈ ನಾಮಜಪವನ್ನು ಮಾಡಲು ಹೇಳಿದರು.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅವತಾರತ್ವವನ್ನು ದರ್ಶಿಸುವ ಅಲೌಕಿಕ ಆಧ್ಯಾತ್ಮಿಕ ವೈಶಿಷ್ಟ್ಯಗಳು

೨ ಅ. ಮೃತ್ಯುಂಜಯ : ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಅಷ್ಟಮ (ಮೃತ್ಯು) ಸ್ಥಾನದಲ್ಲಿ ‘ಚಂದ್ರ ಮತ್ತು ಮೊದಲ (ದೇಹ)ಸ್ಥಾನದಲ್ಲಿ ‘ಮಂಗಲ ಈ ಗ್ರಹಗಳಿವೆ. ಇದು ಪ್ರಬಲ ಮೃತ್ಯುಯೋಗ ವನ್ನು ತೋರಿಸುತ್ತದೆ. ಪರಾತ್ಪರ ಗುರು ಡಾಕ್ಟರರ ಮೇಲೆ ಈ ಮೊದಲು ಕೂಡ ಅನೇಕ ಬಾರಿ ಮೃತ್ಯುಯೋಗದ ಸಂಕಟಗಳು ಬಂದರೂ ಅವರಿಗೆ ಸಂತರು ಮಾಡಿದ ಸಹಾಯ ಮತ್ತು ತಮ್ಮ ಸ್ವಂತದ ಉಚ್ಚ ಆಧ್ಯಾತ್ಮಿಕ ಸ್ಥಿತಿ ಇವುಗಳಿಂದಾಗಿ ಅವರು ‘ಮಹಾಮೃತ್ಯುಯೋಗವನ್ನು ಜಯಿಸಿದ್ದಾರೆ. ಪರಾತ್ಪರ ಗುರು ಡಾಕ್ಟರರ ಹಿರಿಯ ಸಹೋದರ ಮತ್ತು ಸನಾತನದ ೧೧ ನೇ ಸದ್ಗುರು (ದಿ.) ಡಾ. ವಸಂತ ಆಠವಲೆಯವರು ಪರಾತ್ಪರ ಗುರು ಡಾಕ್ಟರರ ಈ ವೈಶಿಷ್ಟ್ಯಗಳಿಂದಾಗಿ ಅವರನ್ನು ‘ಮೃತ್ಯುಂಜಯ ಎಂದು ಹೇಳಿದ್ದಾರೆ.

೨ ಆ. ಪ್ರೀತಿ : ‘ಜನನೀಪರೀ ತ್ವಾಂ ಪಾಳಿಲೆ | ಪಿತ್ಯಾಪರೀ ತ್ವಾಂ ಸಾಂಭಾಳಿಲೆ |
ಸಕಳ ಸಂಕಟಾಪಾಸುನಿ ರಕ್ಷಿಲೆ | ಪೂರ್ಣ ದಿಧಲೇ ಪ್ರೇಮಸುಖ ||
– ಶ್ರೀ ವೆಂಕಟೇಶ ಸ್ತೋತ್ರ, ಶ್ಲೋಕ ೭

ಅರ್ಥ – ‘ಹೇ ದೇವಾ, ನೀವು ತಾಯಿಯಂತೆ ನನ್ನ ಪಾಲನೆಯನ್ನು ಮಾಡಿದಿರಿ, ತಂದೆಯಂತೆ ನನ್ನನ್ನು ಕಾಪಾಡಿದಿರಿ, ಎಲ್ಲ ಸಂಕಟಗಳಿಂದ ನನ್ನನ್ನು ರಕ್ಷಿಸಿದಿರಿ ಮತ್ತು ನನ್ನ ಮೇಲೆ ಸಂಪೂರ್ಣ ಪ್ರೇಮ ಮಾಡಿದಿರಿ.

ಮೇಲಿನ ಶ್ಲೋಕದಲ್ಲಿ ಹೇಳಿದಂತೆ ಅನುಭವವಾಗದಂತಹ ಒಬ್ಬನೇಒಬ್ಬ ಸಾಧಕನೂ ಸನಾತನದಲ್ಲಿ ಸಿಗಲಾರನು. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಗುರು ಮತ್ತು ಶುಕ್ರ ಇವುಗಳ ‘ಅನ್ಯೋನ್ಯಯೋಗ (ಒಂದು ವಿಶೇಷ ಯೋಗ)ಇದೆ. – ಶ್ರೀ. ಯಶವಂತ ಕಣಗಲೆಕರ

ಈ ಯೋಗವು ‘ಪ್ರೀತಿಯನ್ನು ತೋರಿಸುತ್ತದೆ. ಪ್ರೀತಿಯು ಸಾಧನೆಯ ಕೊನೆಯ ಹಂತವಾಗಿದೆ. ಪ್ರತಿಯೊಬ್ಬ ಪ್ರಾಣಿಮಾತ್ರರಲ್ಲಿ ಈಶ್ವರನ ಅಸ್ತಿತ್ವ ಅರಿವಾಗುವುದು ಎಂದರೆ ಪ್ರೀತಿ. ಸಂತ ಏಕನಾಥ ಮಹಾರಾಜರಿಗೆ ಅವರ ಮನೆಗೆ ಸೇವೆಗಾಗಿ ಬಂದ ‘ಶ್ರೀಖಂಡ್ಯಾ ‘ಸಾಕ್ಷಾತ್ ಶ್ರೀಕೃಷ್ಣನಾಗಿದ್ದಾನೆ, ಎಂಬುದು ೧೨ ವರ್ಷಗಳ ವರೆಗೆ ತಿಳಿಯಲಿಲ್ಲ; ಏಕೆಂದರೆ ಸಂತ ಏಕನಾಥರಿಗೆ ಪ್ರತಿಯೊಂದು ಪ್ರಾಣಿಮಾತ್ರರಲ್ಲಿ ಕೃಷ್ಣನೇ ಕಾಣಿಸುತ್ತಿದ್ದನು. ಪರಾತ್ಪರ ಗುರು ಡಾಕ್ಟರರದ್ದೂ ಹಾಗೇ ಇದೆ !

೨ ಇ. ‘ಗುರುಕೃಪಾಯೋಗ ಈ ಸಾಧನೆಯ ಮಾರ್ಗದ ಜನಕ : ‘ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಮನುಷ್ಯಜನ್ಮದ ಉದ್ದೇಶವಾಗಿದೆ, ಎಂದು ಹಿಂದು ಧರ್ಮ ಹೇಳುತ್ತದೆ. ‘ಈಶ್ವರಪ್ರಾಪ್ತಿ ಯನ್ನು ಹೇಗೆ ಮಾಡಿಕೊಳ್ಳುವುದು ?, ಎಂಬುದನ್ನು ಅಧ್ಯಾತ್ಮಶಾಸ್ತ್ರ ಕಲಿಸುತ್ತದೆ. ಪರಾತ್ಪರ ಗುರು ಡಾಕ್ಟರರು, ಗುರುಗಳ ಕೃಪೆಯಿಂದಲೇ ಶಿಷ್ಯನ ನಿಜವಾದ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ ಎಂದು ಹೇಳಿದ್ದಾರೆ. ‘ಗುರುಕೃಪೆಯನ್ನು ಪ್ರಾಪ್ತಮಾಡಿಕೊಳ್ಳಲು ‘ಗುರುಗಳಿಗೆ ಏನು ಅಪೇಕ್ಷಿತವಿದೆ ?, ಎಂಬುದನ್ನು ಅರಿತುಕೊಂಡು ಪ್ರಯತ್ನಿಸಿದರೆ, ಪ್ರಗತಿಯು ನಿಶ್ಚಿತವಾಗಿಯೂ ಆಗುತ್ತದೆ, ಈ ಸಿದ್ಧಾಂತವನ್ನು ಪರಾತ್ಪರ ಗುರು ಡಾಕ್ಟರರು ಮಂಡಿಸಿದ್ದಾರೆ; ಇದಕ್ಕೇ ‘ಗುರುಕೃಪಾಯೋಗ ಎನ್ನುತ್ತಾರೆ. ಗುರುಕೃಪಾಯೋಗದಲ್ಲಿ ವ್ಯಷ್ಟಿ (ವೈಯಕ್ತಿಕ) ಸಾಧನೆಯೊಂದಿಗೆ ಸಮಷ್ಟಿ ಸಾಧನೆಗೆ (ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳಿಗೆ) ಮಹತ್ವವಿರುವುದರಿಂದ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಪರಾತ್ಪರ ಗುರು ಡಾಕ್ಟರರು ಹೇಳಿದ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ ಇಲ್ಲಿಯ ವರೆಗೆ ೧೨೩ ಜನ ಸಾಧಕರು ‘ಸಂತರಾದರು ಮತ್ತು ಸಾವಿರಾರು ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ.

೨ ಈ. ಆಧ್ಯಾತ್ಮಿಕ ಸ್ತರದಲ್ಲಿ ಪರಿವರ್ತನೆಯನ್ನು ಮಾಡುವ ಅವತಾರಿ ಕಾರ್ಯ : ಪರಾತ್ಪರ ಗುರು ಡಾಕ್ಟರರನ್ನು ಕೆಲವರು ಶ್ರೀರಾಮನ ಮತ್ತು ಕೆಲವರು ಶ್ರೀಕೃಷ್ಣನ ಅವತಾರವೆಂದು ತಿಳಿಯುತ್ತಾರೆ; ಆದರೆ ಪರಾತ್ಪರ ಗುರು ಡಾಕ್ಟರರು ನಾನು ಅವತಾರವಾಗಿದ್ದೇನೆ ಎಂದು ಯಾವತ್ತೂ ಹೇಳುವುದಿಲ್ಲ. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಹನ್ನೆರಡನೇ ಸ್ಥಾನದಲ್ಲಿ ಬುಧ, ಗುರು, ಶನಿ ಮತ್ತು ಹರ್ಷಲ ಎಂಬ ಗ್ರಹಗಳ ಸಂಗಮವಿದೆ. ಹನ್ನೆರಡನೇ ಸ್ಥಾನ ‘ಅಧ್ಯಾತ್ಮ ಮತ್ತು ‘ಮೋಕ್ಷ ಇವುಗಳ ಸ್ಥಾನವಾಗಿದೆ. ಈ ಯೋಗವು ಆಧ್ಯಾತ್ಮಿಕ ಸ್ತರದಲ್ಲಿ ಪರಿವರ್ತನೆಯನ್ನು ಮಾಡುವ ಕ್ಷಮತೆಯನ್ನು ತೋರಿಸುತ್ತದೆ. ಈ ಯೋಗವು ‘ಅವತಾರತ್ವ ಮತ್ತು ‘ಯುಗಪುರುಷತ್ವವನ್ನು ತೋರಿಸುತ್ತದೆ. ಪರಾತ್ಪರ ಗುರು ಡಾಕ್ಟರರು ‘ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪವನ್ನು ಮಾಡಿದ್ದಾರೆ. ಹಿಂದೂ ರಾಷ್ಟ್ರವೆಂದರೆ ಸತ್ತ್ವಗುಣಿ ಜನರ ಧರ್ಮಾಧಿಷ್ಠಿತ ರಾಷ್ಟ್ರ. ಹಿಂದೂ ರಾಷ್ಟ್ರದ ಜನರು ಧರ್ಮಾಚರಣಿಗಳಾಗಿರುವುದರಿಂದ ಅವರಿಗೆ ಐಹಿಕ ಮತ್ತು ಆಧ್ಯಾತ್ಮಿಕ ಉನ್ನತಿ ಸಾಧ್ಯವಾಗುವುದು. ಕೇವಲ ಅವತಾರಿ ವಿಭೂತಿಯೇ ಧರ್ಮಾಧಿಷ್ಠಿತ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಮಾಡಬಲ್ಲರು ! ‘ಪರಾತ್ಪರ ಗುರು ಡಾ. ಆಠವಲೆಯವರು ಅವತಾರಿ ಕಾರ್ಯವನ್ನು ಮಾಡಲು ಪೃಥ್ವಿಯ ಮೇಲೆ ಅವತರಿಸಿದ್ದಾರೆ, ಎಂದು ಮಹರ್ಷಿಗಳು ‘ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಹೇಳಿದ್ದಾರೆ.

೨ ಈ ೧. ಸಂತರು, ಗುರುಗಳು ಮತ್ತು ಅವತಾರ ಇವರಲ್ಲಿನ ವ್ಯತ್ಯಾಸ : ಮುಂದಿನಂತಿದೆ.

ಅ. ಸಂತರು : ಸಂತರು ಸಮಾಜಕ್ಕೆ ಸಾಧನೆಯನ್ನು ಕಲಿಸುತ್ತಾರೆ; ಅವರಿಗೆ ಶಿಷ್ಯರಿರುವುದಿಲ್ಲ.

ಆ. ಗುರುಗಳು : ಗುರುಗಳು ಶಿಷ್ಯರನ್ನು ಸಿದ್ಧಪಡಿಸುತ್ತಾರೆ. ಗುರುಗಳಿಗೆ ಒಬ್ಬರು ಅಥವಾ ಇಬ್ಬರು ಶಿಷ್ಯರಿರುತ್ತಾರೆ. ಅವರು ಗುರುಗಳ ಕಾರ್ಯವನ್ನು ಮುಂದುವರಿಸುತ್ತಾರೆ.

ಇ. ಅವತಾರ : ಅವತಾರವು ಪ್ರತ್ಯಕ್ಷ ಶ್ರೀವಿಷ್ಣುವಿನ ಅಂಶವಾಗಿರುತ್ತದೆ. ಅವತಾರಕ್ಕೆ ಸಾವಿರಾರು ಶಿಷ್ಯರಿರುತ್ತಾರೆ. ‘ಧರ್ಮಸಂಸ್ಥಾಪನೆಯು ಅವತಾರದ ಮುಖ್ಯ ಕಾರ್ಯವಾಗಿರುತ್ತದೆ. ಅವತಾರಗಳ ಕಾರ್ಯದ ಪರಿಣಾಮ ಪೃಥ್ವಿಯ ಮೇಲೆ ಸಾವಿರಾರು ವರ್ಷಗಳ ಕಾಲ ಉಳಿಯುತ್ತದೆ, ಹಾಗೆಯೇ ಅವರ ಕಾರ್ಯದಲ್ಲಿ ಪಾಲ್ಗೊಂಡ ಜೀವಗಳ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.
ಕೃತಜ್ಞತೆ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜಾತಕದ ವಿಶ್ಲೇಷಣೆ ಮಾಡುವ ಅವಕಾಶ ಲಭಿಸಿತು, ಈ ಬಗ್ಗೆ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಶ್ರೀ. ಯಶವಂತ ಕಣಗಲೆಕರ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೩.೨೦೨೩)