‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವ’ವನ್ನು ನೋಡಲು ಅವಕಾಶ ಸಿಕ್ಕಿದ ಸಾಧಕರಿಗೆ ಸೂಚನೆ !
ರಥಾರೂಢ ಭಗವಾನ ಶ್ರೀವಿಷ್ಣುವಿನ ಸ್ತುತಿಯನ್ನು ನೃತ್ಯ, ಗಾಯನ ಮತ್ತು ವಾದನ ಇವುಗಳ ಮೂಲಕ ಮಾಡುವುದೆಂದರೆ ಬ್ರಹ್ಮೋತ್ಸವ !
ಸಾಧಕರನ್ನು ಭಾವಭಕ್ತಿಯಲ್ಲಿ ಮುಳುಗಿಸುವ ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವವನ್ನು ಫರ್ಮಾಗುಡಿ (ಗೋವಾ)ಯಲ್ಲಿ ಆಚರಿಸಲಾಯಿತು. ಭವ್ಯ ಸ್ವರೂಪ ದಲ್ಲಿ ಆಚರಿಸಲಾದ ಈ ಸಮಾರಂಭಕ್ಕೆ ಮಹಾರಾಷ್ಟ್ರ, ಕರ್ನಾಟಕ, ಗೋವಾ ಇತ್ಯಾದಿ ರಾಜ್ಯಗಳಲ್ಲಿನ ೧೦ ಸಾವಿರಗಳಿಗಿಂತ ಹೆಚ್ಚು ಸಾಧಕರು ಉಪಸ್ಥಿತರಿದ್ದರು. ಹಾಗೆಯೇ ಎಲ್ಲೆಡೆಯ ಇತರ ಸಾವಿರಾರು ಸಾಧಕರಿಗೆ ಈ ಸಮಾರಂಭದಲ್ಲಿ ‘ಆನ್‌ಲೈನ್’ ಪಾಲ್ಗೊಳ್ಳುವ ಅವಕಾಶ ಲಭಿಸಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದರ್ಶನ ವಾದುದರಿಂದ ಸಾವಿರಾರು ಸಾಧಕರಿಗೆ ಕೃತಾರ್ಥರಾದಂತಾಯಿತು. ಈ ಸಮಾರಂಭದ ಮಾಧ್ಯಮದಿಂದ ಗುರುಗಳು ಸಾಧಕರ ಮೇಲೆ ಮಾಡಿದ ಕೃಪೆಯ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಮಾಡುವ ಅವಕಾಶ ಎಲ್ಲ ಸಾಧಕರಿಗೆ ಮತ್ತೊಮ್ಮೆ ದೊರಕಿದೆ. ‘ಈ ಸಮಾರಂಭದ ಪ್ರತ್ಯಕ್ಷ ಅಥವಾ ‘ಆನ್‌ಲೈನ್’ ಪಾಲ್ಗೊಳ್ಳುವ ಬಗ್ಗೆ ತಿಳಿದಾಗ ಏನು ಅನಿಸಿತು ? ಸಮಾರಂಭವನ್ನು ನೋಡುವಾಗ ಏನು ಅರಿವಾಯಿತು ? ಮತ್ತು ಸಮಾರಂಭವು ಮುಕ್ತಾಯಗೊಂಡಾಗ ಏನು ಅನಿಸಿತು ?’, ಈ ಬಗೆಗಿನ ಅನುಭೂತಿಗಳನ್ನು ಸಾಧಕರು [email protected] ಈ ಗಣಕೀಯ ವಿಳಾಸಕ್ಕೆ ಕಳುಹಿಸಬೇಕು ಮತ್ತು ಆ ಮಾಧ್ಯಮದಿಂದ ಗುರುಗಳ ಚರಣಗಳಲ್ಲಿ ಅನುಭೂತಿರೂಪಿ ಕೃತಜ್ಞತಾಪುಷ್ಪವನ್ನು ಅರ್ಪಿಸಬೇಕು.