‘ಮತಾಂತರಗಂಡರೆ ಮಾತ್ರ ನಿಮ್ಮೊಂದಿಗೆ ಇರುತ್ತೇನೆ !’

ಮುಸಲ್ಮಾನ ಪತ್ನಿಯ ಹಿಂದೂ ಪತಿಗೆ ಬೆದರಿಕೆ

ಅಲಿಗಡ(ಉತ್ತರ ಪ್ರದೇಶ) – ಉತ್ತರ ಪ್ರದೇಶದ ಅಲಿಗಡದಲ್ಲಿ ಹಿಂದೂ ಪತಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಮುಸ್ಲಿಂ ಪತ್ನಿ ಸೇರಿದಂತೆ ೫ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲಿಘರ್‌ನ ಫರೀದ್‌ಪುರ ಗ್ರಾಮದ ಅಜಯ್ ಎಂಬ ಯುವಕ ಪಕ್ಕದ ಹಳ್ಳಿಯ ಮುಸ್ಲಿಂ ಹುಡುಗಿ ಮುಸ್ಕಾನ್ ಉರ್ಫ್ ಖುಶಬೂ ಯುವತಿಯ ಜೊತೆಗೆ ಪ್ರೇಮ ವಿವಾಹ ಮಾಡಿಕೊಂಡಿದ್ದ. ಈ ಪ್ರೇಮ ವಿವಾಹಕ್ಕೆ ಮುಸ್ಲಿಂ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. (ಗಮನಿಸಿ, ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ವಂಚಿಸಿ ಬಲವಂತವಾಗಿ ಮತಾಂತರಿಸಿದ ನಂತರ ಮೌನವಾಗಿರುವ ಮುಸ್ಲಿಂ ಸಮುದಾಯ, ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾಗುವುದನ್ನು ತೀವ್ರವಾಗಿ ವಿರೋಧಿಸುತ್ತದೆ ! – ಸಂಪಾದಕ) ಯುವತಿಯ ತಂದೆಯ ದೂರಿನ ಮೇರೆಗೆ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ‘ನಾನು ಪ್ರಜ್ಞೆ ಹೊಂದಿದ್ದೇನೆ ಮತ್ತು ನನ್ನ ಸ್ವಂತ ಇಚ್ಛೆಯಂತೆ ಮದುವೆಯಾಗಿದ್ದೇನೆ’ ಎಂದು ಪೊಲೀಸ್ ತನಿಖೆಯಲ್ಲಿ ಮುಸ್ಕಾನ್ ಹೇಳಿದ್ದಳು, ನಂತರ ಇಬ್ಬರೂ ಪತಿ-ಪತ್ನಿಯಾಗಿ ಗ್ರಾಮದಲ್ಲಿ ವಾಸಿಸಲು ಪ್ರಾರಂಭಿಸಿದರು.

೩ ತಿಂಗಳ ನಂತರ ಮುಸ್ಕಾನ್ ತನ್ನ ಪತಿ ಅಜಯ್ ಮೇಲೆ ಮತಾಂತರಗೊಳ್ಳುವಂತೆ ಒತ್ತಡ ಹೇರಲು ಆರಂಭಿಸಿದಳು. ‘ನೀನು ಮತಾಂತರವಾದರೆ ಮಾತ್ರ ನಿನ್ನ ಜೊತೆ ಇರುತ್ತೇನೆ’ ಎಂದು ಅಜಯ್ ಗೆ ಎಚ್ಚರಿಸಿದಳು. ಈ ಮಾಹಿತಿ ಕರ್ಣಿ ಸೇನೆಯ ರಾಷ್ಟ್ರೀಯ ಉಪಾಧ್ಯಕ್ಷ ಠಾಕೂರ್ ಜ್ಞಾನೇಂದ್ರ ಸಿಂಗ್ ಚೌಹಾಣ್ ಅವರಿಗೆ ಸಿಕ್ಕ ತಕ್ಷಣ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಅಧಿಕಾರಿ ಬರ್ಲಾ ಅವರನ್ನು ಸಂಪರ್ಕಿಸಿದರು. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

(ಸೌಜನ್ಯ : ಲೈವ್ ಹಿಂದೂಸ್ತಾನ್)

ಸಂಪಾದಕರ ನಿಲುವು

ಮುಸ್ಲಿಂ ಯುವಕರಷ್ಟೇ ಅಲ್ಲ, ಮುಸ್ಲಿಂ ಯುವತಿಯರು ಲವ್ ಜಿಹಾದ್ ಮಾಡಿ ಹಿಂದೂ ಯುವಕರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಾರೆ, ಎಂಬುದಕ್ಕೆ ಇದೊಂದು ಉದಾಹರಣೆ !