‘ದೇಶದಲ್ಲಿ ಮಸೀದಿ ಮತ್ತು ದರ್ಗಾಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸುವುದು ತಪ್ಪಂತೆ’!’

ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನರಿಮನ ಅವರ ಹಿಂದು ದ್ವೇಷಿ ಹೇಳಿಕೆ !

ನವ ದೆಹಲಿ – ದೇಶಾದ್ಯಾಂತ ಮಸೀದ ಮತ್ತು ದರ್ಗಾಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿರುವುದು ಇಂದು ನಾವು ನೋಡುತ್ತಿದ್ದೇವೆ. ನನ್ನ ಅಭಿಪ್ರಾಯದಲ್ಲಿ, ಇದನ್ನು ಪ್ರತಿಬಂಧಿಸುವ ಏಕೈಕ ಮಾರ್ಗವೆಂದರೆ ಬಾಬ್ರಿಯ ತೀರ್ಪು ಆಗಿದೆ. ಇದರಲ್ಲಿ ಪೂಜಾ ಸ್ಥಳ ಕಾಯ್ದೆಯ (ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್) ಬೆಂಬಲವಿತ್ತು. ಆದ್ದರಿಂದ ಬಾಬ್ರಿ ಪ್ರಕರಣದ ತೀರ್ಪು ಪ್ರತಿ ಜಿಲ್ಲೆ ಮತ್ತು ಉನ್ನತ ನ್ಯಾಯಾಲಯಗಳಲ್ಲಿ ಓದಬೇಕು; ಏಕೆಂದರೆ ಆ ತೀರ್ಪಿನಲ್ಲಿ ೫ ಪುಟಗಳು ಸರ್ವೋಚ್ಚ ನ್ಯಾಯಾಲಯದ ಕಾನೂನು ಘೋಷಣೆಯಿದೆ. ಇದು ಎಲ್ಲರಿಗೂ ಬಂಧನಕಾರಕ ಆಗಿದೆ. ಈ ತೀರ್ಪಿನಲ್ಲಿ ಹೇಳಿದಂತೆ, ಪೂಜಾ ಸ್ಥಳ ಕಾಯ್ದೆ ಜಾರಿಗೊಂಡರೆ, ಇವು ಸುಲಭವಾಗಿ ನಿಲ್ಲಬಹುದು ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ಹೇಳಿದ್ದಾರೆ. ಅವರು ಅಹಮದಿ ಫೌಂಡೇಶನ್ ಆಯೋಜಿಸಿದ ‘ಜಾತ್ಯಾತೀತ ಮತ್ತು ಭಾರತೀಯ ಸಂವಿಧಾನ’ ವಿಷಯದ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

ಭಾರತೀಯ ಸಂವಿಧಾನದ ಮೂಲಕ ನೀಡಲಾದ ಹಕ್ಕುಗಳಡಿಯಲ್ಲಿ ಹಿಂದೂಗಳಿಂದ ಇಂತಹ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ಆದರೂ, ಈ ಬಗ್ಗೆ ಮಾಜಿ ನ್ಯಾಯಮೂರ್ತಿಯೊಬ್ಬರು ಹೇಳಿಕೆಯನ್ನು ನೀಡುವುದು ಹಿಂದೂಗಳನ್ನು ಆಶ್ಚರ್ಯಚಕಿತಗೊಳಿಸುವಂತಾಗಿದೆ !