೧. ‘ನವಗ್ರಹಗಳು ಮಾನವನ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಭಾರತದ ಋಷಿಮುನಿಗಳು ಪ್ರಾಚೀನ ಕಾಲದಲ್ಲಿ ಗುರುತಿಸಿ ಜ್ಯೋತಿಷ್ಯಶಾಸ್ತ್ರವನ್ನು ವಿಕಸಿತಗೊಳಿಸಿದ್ದರು
‘ಆಕಾಶದಲ್ಲಿ ಸೂರ್ಯನ ಸುತ್ತಲೂ ತಿರುಗುವ ಗ್ರಹಗಳು ಮಾನವನ ಜೀವನದ ಮೇಲೆ ಪರಿಣಾಮವನ್ನು ಮಾಡುತ್ತವೆ, ಎಂಬುದನ್ನು ಭಾರತದಲ್ಲಿನ ಋಷಿಮುನಿಗಳು ಪ್ರಾಚೀನ ಕಾಲದಲ್ಲಿ ಗುರುತಿಸಿದ್ದರು. ಯೋಗಸಾಧನೆ ಮತ್ತು ತಪಶ್ಚರ್ಯೆಯಿಂದ ಋಷಿಮುನಿಗಳಿಗೆ ಅನುಕ್ರಮವಾಗಿ ಯೋಗಬಲ ಮತ್ತು ತಪೋ ಬಲ ಪ್ರಾಪ್ತವಾಗುತ್ತಿತ್ತು. ಋಷಿಮುನಿಗಳು ಉಚ್ಚ ಆಧ್ಯಾತ್ಮಿಕ ಸ್ತರದವರಾಗಿರುವುದರಿಂದ ಅವರಿಗೆ ಈಶ್ವರನಿಂದ ಜ್ಞಾನ ಪ್ರಾಪ್ತವಾಗುತ್ತಿತ್ತು. ಈ ಜ್ಞಾನವನ್ನು ಅವರು ವೇದಗಳಲ್ಲಿನ ಸೂಕ್ತಗಳಲ್ಲಿ ಬರೆದಿಟ್ಟಿದ್ದಾರೆ. ಜ್ಯೋತಿಷ್ಯಶಾಸ್ತ್ರದ ಬಗ್ಗೆ ಋಗ್ವೇದದಲ್ಲಿ ೩೬, ಯಜುರ್ವೇದದಲ್ಲಿ ೪೪ ಹಾಗೂ ಅಥರ್ವವೇದದಲ್ಲಿ ೧೩೨ ಶ್ಲೋಕಗಳಿವೆ. ಜ್ಯೋತಿಷ್ಯಶಾಸ್ತ್ರದಲ್ಲಿನ ನಿಯಮಗಳು ಭಾರತದ ದರ್ಶನಶಾಸ್ತ್ರಗಳ ಮೇಲಾಧಾರಿತವಾಗಿವೆ.
೨. ನವಗ್ರಹಗಳಿಂದ ಮನುಷ್ಯನ ಜೀವನದ ಮೇಲಾಗುವ ಪರಿಣಾಮಗಳನ್ನು ಈಗ ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ
೨ ಅ. ಜಗತ್ತಿನಲ್ಲಿ ಭೂಕಂಪ, ಜ್ವಾಲಾಮುಖಿ, ತೀವ್ರ ಚಂಡಮಾರುತ ಅಥವಾ ದೊಡ್ಡ ಅಪಘಾತಗಳಂತಹ ಘಟನೆಗಳು ಹೆಚ್ಚಾಗಿ ಹುಣ್ಣಿಮೆ ಅಥವಾ ಅಮವಾಸ್ಯೆಯ ತಿಥಿಯಂದು ಆಗಿರುವುದಾಗಿ ವಿಜ್ಞಾನಿಗಳಿಗೆ ಕಂಡುಬರುವುದು : ಭೂಕಂಪ ಮತ್ತು ಜ್ವಾಲಾಮುಖಿಗಳ ಅಧ್ಯಯನ ಮಾಡುವ ವಿಜ್ಞಾನಿಗಳಿಗೆ ‘ಜಗತ್ತಿನಲ್ಲಿನ ಭೂಕಂಪ, ಜ್ವಾಲಾಮುಖಿ, ತೀವ್ರ ಚಂಡಮಾರುತ ಅಥವಾ ದೊಡ್ಡ ದುರ್ಘಟನೆ ಮುಂತಾದ ಘಟನೆಗಳು ಹುಣ್ಣಿಮೆ ಅಥವಾ ಅಮವಾಸ್ಯೆಯ ತಿಥಿಗಳ ಸಮಯದಲ್ಲಿ ಆಗಿವೆ, ಎಂಬುದು ಕಂಡುಬಂದಿದೆ, ಉದಾ. ೪.೪.೧೯೦೫ ರಲ್ಲಿ ಕಾಂಗಡಾದಲ್ಲಾದ ಮತ್ತು ೩೧.೫.೧೯೩೫ ರಂದು ಕ್ವೇಟಾದಲ್ಲಾದ ಪ್ರಸಿದ್ಧ ಭೂಕಂಪಗಳು ಅಮವಾಸ್ಯೆಯ ತಿಥಿಯಂದೆ ಆಗಿವೆ. ಕೆಲವು ಭೂಕಂಪಗಳು ಶನಿ, ಚಂದ್ರ, ರವಿ ಮತ್ತು ಮಂಗಳ ಇವುಗಳ ಕೇಂದ್ರಯೋಗದ ಮೇಲೆ (ಅಶುಭ ಯೋಗದ ಮೇಲೆ) ಘಟಿಸಿವೆ.
(ಸೌಜನ್ಯ : ‘ಪ್ರಜ್ಞಾಲೋಕ, ಜುಲೈ ೧೯೮೧)
೩. ಗ್ರಹದೋಷ ಎಂದರೇನು ?
ಗ್ರಹದೋಷಗಳೆಂದರೆ ಜಾತಕದಲ್ಲಿನ ಗ್ರಹಗಳ ಅಶುಭ ಸ್ಥಿತಿ. ಜಾತಕದಲ್ಲಿನ ಯಾವುದಾದರೊಂದು ಗ್ರಹವು ದೂಷಿತವಾಗಿದ್ದರೆ, ಆ ಗ್ರಹದ ಅಶುಭ ಫಲಗಳು ವ್ಯಕ್ತಿಗೆ ಪ್ರಾಪ್ತವಾಗುತ್ತವೆ, ಉದಾ. ಜಾತಕದಲ್ಲಿ ಶನಿ ಗ್ರಹವು ದೂಷಿತವಾಗಿದ್ದರೆ ಸಾಮಾನ್ಯವಾಗಿ ಗಂಭೀರ ಪ್ರಾರಬ್ಧ, ದೀರ್ಘಕಾಲದ ಕಾಯಿಲೆಗಳು, ಕೌಟುಂಬಿಕ ಅಥವಾ ಆರ್ಥಿಕ ಅಡಚಣೆಗಳು ಇತ್ಯಾದಿ ಅಶುಭ ಫಲಗಳು ಸಿಗುತ್ತವೆ. (ಈ ಫಲಗಳು ಸ್ಥಾನ, ರಾಶಿ ಇತ್ಯಾದಿ ಘಟಕಗಳಿಗನುಸಾರ ಭಿನ್ನವಾಗಿರುತ್ತವೆ.) ಇದಕ್ಕೆ ‘ಜಾತಕದಲ್ಲಿ ಶನಿ ಗ್ರಹ ದೂಷಿತವಾಗಿದೆ ಅಥವಾ ‘ವ್ಯಕ್ತಿಗೆ ಶನಿ ಗ್ರಹದ ತೊಂದರೆ ಇದೆ, ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರಕ್ಕನುಸಾರ ವ್ಯಕ್ತಿಗಿರುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ಹಿಂದೆ ಜಾತಕದಲ್ಲಿನ ಗ್ರಹದೋಷಗಳು ಕಾರಣವಾಗಿರುತ್ತವೆ.
೪. ‘ವ್ಯಕ್ತಿಯ ಪ್ರಾರಬ್ಧ ಎಷ್ಟು ಗಂಭೀರ ಅಥವಾ ಎಷ್ಟು ಸಹನೀಯವಾಗಿದೆ ?, ಎಂಬುದು ಜಾತಕದಿಂದ ತಿಳಿಯುತ್ತದೆ
ಜ್ಯೋತಿಷ್ಯಶಾಸ್ತ್ರಕ್ಕನುಸಾರ ವ್ಯಕ್ತಿಯ ಜಾತಕದಲ್ಲಿನ ಗ್ರಹದೋಷಗಳಂತೆ ಅವಳಿಗೆ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ತೊಂದರೆಗಳಾಗುತ್ತವೆ. ಹೀಗಿದ್ದರು ಸಹ ‘ವ್ಯಕ್ತಿಯ ಪ್ರಾರಬ್ಧವೇ ಅದರ ಹಿಂದಿನ ಮೂಲ ಕಾರಣವಾಗಿರುತ್ತದೆ. ಹಿಂದಿನ ಜನ್ಮಗಳಲ್ಲಿ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳ ಫಲಗಳನ್ನು ಮನುಷ್ಯನು ಮುಂದಿನ ಜನ್ಮಗಳಲ್ಲಿ ಪ್ರಾರಬ್ಧದ ರೂಪದಲ್ಲಿ ಭೋಗಿಸುತ್ತಿರುತ್ತಾನೆ. ಜ್ಯೋತಿಷ್ಯಶಾಸ್ತ್ರವು ಇದೇ ಕರ್ಮ ಸಿದ್ಧಾಂತದ ಮೇಲಾಧಾರಿತವಾಗಿದೆ. ವ್ಯಕ್ತಿಯ ಜನ್ಮದ ಸಮಯಕ್ಕನುಸಾರ ಮಂಡಿಸಲಾಗುವ ಜಾತಕವು ಅವರ ಈ ಜನ್ಮದಲ್ಲಿನ ಪ್ರಾರಬ್ಧವನ್ನು ತೋರಿಸುತ್ತದೆ. ಅನುಕೂಲ ಗ್ರಹಸ್ಥಿತಿಯಲ್ಲಿ ಪುಣ್ಯದ ಫಲವನ್ನು ಹಣ, ಸುಖ, ಮಾನ-ಸನ್ಮಾನ, ಪ್ರಸಿದ್ಧಿ ಇತ್ಯಾದಿಗಳ ಸ್ವರೂಪದಲ್ಲಿ ಅನುಭವಿಸಲು ಬರುತ್ತದೆ. ಪ್ರತಿಕೂಲ ಗ್ರಹಸ್ಥಿತಿಯಲ್ಲಿ ಪಾಪದ ಫಲವನ್ನು ದುಃಖ, ಅಪಮಾನ, ರೋಗ, ಆರ್ಥಿಕ ಹಾನಿ ಇತ್ಯಾದಿಗಳ ರೂಪಗಳಲ್ಲಿ ಅನುಭವಿಸಲು ಬರುತ್ತದೆ.
೫. ಕಲಿಯುಗದಲ್ಲಿ ಎಲ್ಲ ಸ್ತರಗಳಲ್ಲಿನ ತೊಂದರೆಗಳ ಪ್ರಮಾಣ ಬಹಳ ಹೆಚ್ಚು
ಸದ್ಯ ರಜ-ತಮಗಳ ಪ್ರಾಬಲ್ಯವಿರುವ ಕಲಿಯುಗ ನಡೆಯುತ್ತಿದೆ. ಈಗಿನ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯ ಒಟ್ಟು ಕರ್ಮಗಳ ಶೇ. ೬೫ ರಷ್ಟು ಕರ್ಮಗಳು ಪ್ರಾರಬ್ಧದಿಂದ ಘಟಿಸುತ್ತವೆ. ಆದ್ದರಿಂದ ಕಲಿಯುಗದಲ್ಲಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿನ ತೊಂದರೆಗಳ ಪ್ರಮಾಣ ತುಂಬಾ ಹೆಚ್ಚಿದೆ.
೬. ಗ್ರಹದೋಷಗಳಿಂದಾಗುವ ದುಷ್ಪರಿಣಾಮಗಳ ನಿವಾರಣೆಗಾಗಿ ‘ಸಾಧನೆಯನ್ನು ಮಾಡುವುದೇ ಸರ್ವೋತ್ತಮ ಉಪಾಯವಾಗಿದೆ !
ಗ್ರಹದೋಷಗಳಿಂದಾಗುವ ದುಷ್ಪರಿಣಾಮಗಳ ನಿವಾರಣೆಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಜಪ, ದಾನ, ಶಾಂತಿವಿಧಿ, ಪೂರಕ ರತ್ನಗಳನ್ನು ಧರಿಸುವುದು ಇತ್ಯಾದಿ ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಮಾಡಿದರೆ ದುಷ್ಪರಿಣಾಮಗಳ ತೀವ್ರತೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲು ಸಹಾಯವಾಗುತ್ತದೆ; ಆದರೆ ಈ ಉಪಾಯಗಳಿಂದ ತಾತ್ಕಾಲಿಕ ಪರಿಣಾಮಗಳಾಗುತ್ತವೆ. ಕಾಲಾಂತರದಲ್ಲಿ ಪುನಃ ತೊಂದರೆಗಳ ಪ್ರಮಾಣ ಹೆಚ್ಚಾಗುತ್ತದೆ. ಮನುಷ್ಯನಿಗೆ ತನ್ನ ಪ್ರಾರಬ್ಧದಲ್ಲಿನ ಭೋಗಗಳನ್ನು ಭೋಗಿಸಿಯೇ ತೀರಿಸಬೇಕಾಗುತ್ತದೆ. ಆದ್ದರಿಂದ ಜನ್ಮ-ಮೃತ್ಯುವಿನ ಚಕ್ರದಿಂದ ಶಾಶ್ವತವಾಗಿ ಮುಕ್ತರಾಗಲು ‘ಸಾಧನೆ ಮಾಡುವುದೊಂದೇ ಸರ್ವೋತ್ತಮ ಉಪಾಯವಾಗಿದೆ.
೬ ಅ. ಸಾಧನೆ ಎಂದರೇನು ? : ಸಾಧನೆ ಎಂದರೆ ಈಶ್ವರಪ್ರಾಪ್ತಿಗಾಗಿ ಪ್ರತಿದಿನ ಮಾಡುವ ಪ್ರಯತ್ನ. ಈಶ್ವರನ ಪ್ರಾಪ್ತಿಯಾಗುವುದು, ಅಂದರೆ ‘ಸತ್-ಚಿತ್-ಆನಂದ ಈ ಅವಸ್ಥೆಯನ್ನು ನಿರಂತರವಾಗಿ ಅನುಭವಿಸುವುದು. ಜೀವನದಲ್ಲಿನ ದುಃಖಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿ ಮತ್ತು ಸರ್ವೋಚ್ಚ ಹಾಗೂ ಸತತವಾಗಿ ಉಳಿಯುವ ಆನಂದವು ಕೇವಲ ಸಾಧನೆಯಿಂದಲೇ ಸಿಗುತ್ತದೆ. ಸಾಧನೆಯನ್ನು ಜ್ಞಾನಯೋಗ, ಧ್ಯಾನಯೋಗ, ಭಕ್ತಿಯೋಗ, ಕರ್ಮಯೋಗ ಇತ್ಯಾದಿ ಯೋಗಮಾರ್ಗಗಳಿಗನುಸಾರ ಮಾಡಲಾಗುತ್ತದೆ. ‘ಕಲಿಯುಗದಲ್ಲಿ ನಾಮಜಪವು ಸರ್ವೋತ್ತಮ ಸಾಧನೆಯಾಗಿದೆ, ಎಂದು ಅನೇಕ ಸಂತರು ಹೇಳಿದ್ದಾರೆ.
೬ ಆ. ಯೋಗ್ಯ ಸಾಧನೆಗಾಗಿ ಗುರುಗಳ ಆವಶ್ಯಕತೆಯಿರುತ್ತದೆ: ಒಬ್ಬಂಟಿಯಾಗಿ ಸಾಧನೆಯನ್ನು ಮಾಡಿ ತನ್ನ ಬಲದಿಂದ ಈಶ್ವರ ಪ್ರಾಪ್ತಿಯನ್ನು ಮಾಡಿಕೊಳ್ಳುವುದು ತುಂಬಾ ಕಠಿಣವಾಗಿದೆ. ಬದಲಾಗಿ ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಯ, ಅಂದರೆ ಗುರುಗಳ ಅಥವಾ ಸಂತರ ಕೃಪೆಯನ್ನು ಸಂಪಾದಿಸಿದರೆ, ಈಶ್ವರಪ್ರಾಪ್ತಿಯ ಧ್ಯೇಯವು ಬೇಗನೇ ಸಾಧ್ಯವಾಗುತ್ತದೆ. ಇದಕ್ಕಾಗಿ ಗುರುಪ್ರಾಪ್ತಿ ಆಗುವುದು ಆವಶ್ಯಕವಾಗಿರುತ್ತದೆ. ಗುರುಗಳು ಶಿಷ್ಯನ ಅಜ್ಞಾನವನ್ನು ದೂರಗೊಳಿಸಿ ‘ಅವನ ಆಧ್ಯಾತ್ಮಿಕ ಉನ್ನತಿಯಾಗಬೇಕು, ಎಂದು ಅವನಿಗೆ ಸಾಧನೆಯನ್ನು ಹೇಳುತ್ತಾರೆ, ಅದನ್ನು ಅವನಿಂದ ಮಾಡಿಸಿ ಕೊಳ್ಳುತ್ತಾರೆ ಮತ್ತು ಅವನಿಗೆ ಅನುಭೂತಿಗಳನ್ನೂ ಕೊಡುತ್ತಾರೆ.
೬ ಇ. ಗುರುಕೃಪೆಯಿಂದ ಕಠಿಣ ಪ್ರಸಂಗಗಳಲ್ಲಿ ಶಿಷ್ಯನ ರಕ್ಷಣೆಯಾಗುತ್ತದೆ : ಮಂದ ಪ್ರಾರಬ್ಧವನ್ನು ಭೋಗಿಸುವ ಕ್ಷಮತೆ ಮಧ್ಯಮ ಸಾಧನೆಯಿಂದ, ಮಧ್ಯಮ ಪ್ರಾರಬ್ಧವನ್ನು ಭೋಗಿಸುವ ಕ್ಷಮತೆ ತೀವ್ರ ಸಾಧನೆಯಿಂದ ಮತ್ತು ತೀವ್ರ ಪ್ರಾರಬ್ಧವನ್ನು ಭೋಗಿಸುವ ಕ್ಷಮತೆ ಕೇವಲ ಗುರುಕೃಪೆಯಿಂದಲೇ ಪ್ರಾಪ್ತವಾಗುತ್ತದೆ. ಇದರ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.
೬ ಇ ೧. ಸಾವಿನ ದವಡೆಯಲ್ಲಿದ್ದ ಸಾಧಕಿ ಕು. ದೀಪಾಲಿ ಮತಕರ ಇವರ ರಕ್ಷಣೆ ಗುರುಕೃಪೆಯಿಂದ ಆಯಿತು : ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವ ಸಾಧಕಿ ಕು. ದೀಪಾಲಿ ಮತಕರ ಇವರಿಗೆ ೨೨.೧೦.೨೦೧೬ ರಂದು ಡೆಂಗ್ಯೂ, ನ್ಯುಮೋನಿಯಾ ಮತ್ತು ಕಾಮಾಲೆ (ಜಾಂಡಿಸ್) ಗಂಭೀರ ರೋಗಗಳಾದವು. ಅವರ ಹೊಟ್ಟೆಯಲ್ಲಿನ ಯಕೃತ್ (ಲಿವರ್) ಮತ್ತು ಪ್ಲಿಹಾ (ಸ್ಪ್ಲೀನ್) ಇವುಗಳಿಗೆ ಬಾವು ಬಂದಿತ್ತು. ಅವಳ ಪುಪ್ಪುಸಗಳಲ್ಲಿ ನೀರು ತುಂಬಿತ್ತು ಮತ್ತು ಒಂದು ರೀತಿಯ ಗಂಭೀರ ‘ನ್ಯುಮೋನಿಯಾವಾಯಿತು. ಅವರ ರಕ್ತದಲ್ಲಿನ ‘ಪ್ಲೆಟಲೆಟ್ಸ್ಗಳ ಸಂಖ್ಯೆ ಬಹಳ ಕಡಿಮೆಯಾಗಿತ್ತು. ‘ಪ್ಲೆಟಲೆಟ್ಸ್ಗಳ ಸಂಖ್ಯೆ ಕಡಿಮೆ ಇರುವಾಗ ಯಾವುದೇ ಕಾರಣವಿಲ್ಲದೇ ಅಪಾರ ರಕ್ತಸ್ರಾವವಾಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಆಧುನಿಕ ವೈದ್ಯರು ಕು. ದೀಪಾಲಿಯವರು ಬದುಕುಳಿಯುವ ಆಸೆಯನ್ನು ಬಿಟ್ಟಿದ್ದರು.
೬ ಇ ೧ ಆ. ಜ್ಯೋತಿಷ್ಯಶಾಸ್ತ್ರಕ್ಕನುಸಾರ ಕು. ದೀಪಾಲಿಯವರ ಜಾತಕದಲ್ಲಿ ತತ್ಕಾಲೀನ ಗ್ರಹಸ್ಥಿತಿಯಲ್ಲಿ ಅವರಿಗೆ ‘ಅಪಮೃತ್ಯು ಯೋಗ ಇತ್ತು : ಕು. ದೀಪಾಲಿಯವರ ಗೋಚರ (ತತ್ಕಾಲೀನ) ಜಾತಕದಲ್ಲಿನ ಷಷ್ಠ ಸ್ಥಾನದಲ್ಲಿ, ಅಂದರೆ ರೋಗದ ಸ್ಥಾನದಲ್ಲಿ ರಾಹೂ ಈ ಪಾಪಗ್ರಹ ಇತ್ತು. ಷಷ್ಠ ಸ್ಥಾನದ ಸ್ವಾಮಿಯಾದ ರವಿ ಗ್ರಹವು ಅಷ್ಟಮ ಸ್ಥಾನದಲ್ಲಿ, ಅಂದರೆ ಮೃತ್ಯು ಸ್ಥಾನದಲ್ಲಿತ್ತು. ಗೋಚರ ಜಾತಕದಲ್ಲಿನ ಮಂಗಳ ಗ್ರಹದ ಭ್ರಮಣವು ಜಾತಕದಲ್ಲಿನ ಶನಿ ಗ್ರಹದ ಮೇಲಿನಿಂದ ನಡೆದಿತ್ತು. ಕು. ದೀಪಾಲಿಯವರ ಕೇತು ಗ್ರಹದ ಮಹಾದಶೆ ನಡೆದಿತ್ತು. ಈ ಯೋಗಗಳು ತೀವ್ರ ಶಾರೀರಿಕ ತೊಂದರೆ ಅಥವಾ ‘ಅಪಮೃತ್ಯುಯೋಗ ಇರುವುದನ್ನು ತೋರಿಸುತ್ತವೆ.
೬ ಇ ೧ ಇ. ಮಹರ್ಷಿಗಳು ಮತ್ತು ಸಂತರು ಮಾಡಿದ ಆಧ್ಯಾತ್ಮಿಕ ಉಪಾಯಗಳಿಂದ ಕು. ದೀಪಾಲಿಯವರಿಗೆ ಆಗಿರುವ ಎಲ್ಲ ಗಂಭೀರಕಾಯಿಲೆಗಳು ಕೇವಲ ೧೫ ದಿನಗಳಲ್ಲಿ ಗುಣವಾದವು : ಕು. ದೀಪಾಲಿಯವರು ಅಂತ್ಯಾವಸ್ಥೆಯಲ್ಲಿರುವಾಗ (ಮರಣೋನ್ಮುಖ ಅವಸ್ಥೆ) ಮಹರ್ಷಿಗಳು ಮತ್ತು ಸಂತರು ದೀಪಾಲಿಯವರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡಿದರು. ಭೃಗು ಮಹರ್ಷಿಗಳು ಮತ್ತು ಸಪ್ತರ್ಷಿಗಳು ನಾಡಿಪಟ್ಟಿಯ ಮಾಧ್ಯಮದಿಂದ ಅನೇಕ ಉಪಾಯಗಳನ್ನು ಮಾಡಲು ಹೇಳಿದರು. ಸಂತರು ದೀಪಾಲಿ ಯವರಿಗಾಗಿ ಅನೇಕ ಘಂಟೆಗಳವರೆಗೆ ನಾಮಜಪಾದಿ ಉಪಾಯ ಗಳನ್ನು ಮಾಡಿದರು. ಆದ್ದರಿಂದ ಕು. ದೀಪಾಲಿಯವರಿಗೆ ಆಗಿರುವ ಎಲ್ಲ ಗಂಭೀರ ಕಾಯಿಲೆಗಳು ದೂರವಾಗಿ ಅವರು ಕೇವಲ ೧೫ ದಿನಗಳಲ್ಲಿ ಗುಣಹೊಂದಿದರು.
೬ ಇ ೧ ಈ. ಕು. ದೀಪಾಲಿಯವರು ಸಾಧನೆಯನ್ನು ಮಾಡುತ್ತಿರುವುದರಿಂದ ಅಪಮೃತ್ಯುಯೋಗದಂತಹ ಸಂಕಟದಲ್ಲಿ ಗುರುಗಳು ಅವರ ರಕ್ಷಣೆಯನ್ನು ಮಾಡಿದರು : ಕು. ದೀಪಾಲಿಯವರು ತನು-ಮನ- ಧನವನ್ನು ಅರ್ಪಿಸಿ ಪೂರ್ಣವೇಳೆ ಗುರುಕಾರ್ಯ ಮತ್ತು ಸಾಧನೆಯನ್ನು ಮಾಡುತ್ತಾರೆ. ಅವರಲ್ಲಿ ಗುರುಗಳ ಬಗ್ಗೆ ಶ್ರದ್ಧೆ ಮತ್ತು ಈಶ್ವರ ಪ್ರಾಪ್ತಿಯ ತಳಮಳವಿದೆ. ಅವರ ವೈಶಿಷ್ಟ್ಯವೆಂದರೆ ಅವರಲ್ಲಿ ‘ಗೋಪಿಭಾವ ಇದೆ. ಆದ್ದರಿಂದ ಅವರು ಸತತವಾಗಿ ಶ್ರೀಕೃಷ್ಣನ ಅನುಸಂಧಾನದಲ್ಲಿರುತ್ತಾರೆ. ಕು. ದೀಪಾಲಿಯವರು ಸಾಧನೆಯನ್ನು ಮಾಡುತ್ತಿರುವುದರಿಂದ ಅವರ ಮೇಲೆ ಗುರುಕೃಪೆಯಾಗಿ ಅಪಮೃತ್ಯುಯೋಗದಂತಹ ಸಂಕಟದಲ್ಲಿ ಗುರುಗಳು ಅವರ ರಕ್ಷಣೆಯನ್ನು ಮಾಡಿದರು.
೬ ಇ ೨. ಗಂಭೀರ ಪ್ರಾರಬ್ಧವನ್ನು ಭೋಗಿಸುವಾಗ ಅದರತ್ತ ಸಾಕ್ಷೀಭಾವದಿಂದ ನೋಡಿ ಸಂತಪದವಿಯನ್ನು ಪ್ರಾಪ್ತಮಾಡಿಕೊಂಡ ಪೂ. (ಸೌ.) ಸಂಗೀತಾ ಪಾಟೀಲ !
೬ ಇ ೨ ಅ. ಪೂ. (ಸೌ.) ಸಂಗೀತಾ ಪಾಟೀಲ ಇವರ ಗಂಭೀರ ಪ್ರಾರಬ್ಧ : ಪೂ. (ಸೌ.) ಸಂಗೀತಾ ಪಾಟೀಲ ಇವರ ಜನ್ಮದ ನಂತರ ಅವರು ಚಿಕ್ಕವರಿರುವಾಗಲೇ ಅವರ ತಾಯಿ-ತಂದೆಯರ ನಿಧನವಾಯಿತು. ಮುಂದೆ ವಿವಾಹವಾಗಿ ಅವರಿಗೆ ಒಬ್ಬ ಮಗ ಹುಟ್ಟಿದನು; ಆದರೆ ಚಿಕ್ಕ ವಯಸ್ಸಿಯಲ್ಲಿಯೇ ಅವನೂ ಮರಣಹೊಂದಿದನು. ಪೂ. (ಸೌ.) ಸಂಗೀತಾ ಇವರಿಗೆ ವಿಷಮಜ್ವರ (ಟೈಫಾಯಿಡ್) ಆದಾಗ ಅವರಿಗೆ ಅಂಧತ್ವ (ಕುರುಡುತನ) ಬಂದಿತು. ಅವರ ಯಜಮಾನರ ನೌಕರಿಯ ಸ್ಥಳದಲ್ಲಿ ಅಪಘಾತವಾಗಿ ಯಜಮಾನರ ನೌಕರಿ ಹೋಯಿತು. ಮುಂದೆ ಯಜಮಾನರ ಒಂದು ಕಣ್ಣಿನ ದೃಷ್ಟಿಯೂ ಹೋಯಿತು. ಅವರ ಆರ್ಥಿಕ ಪರಿಸ್ಥಿತಿಯು ಅತ್ಯಂತ ಬಿಕ್ಕಟ್ಟಿನದ್ದಾಗಿತ್ತ್ತು.
೬ ಇ ೨ ಆ. ಪೂ. (ಸೌ.) ಸಂಗೀತಾ ಪಾಟೀಲ ಇವರ ಪ್ರಾರಬ್ಧ ಶೇ. ೭೫ ರಷ್ಟು ಇತ್ತು : ಸನಾತನದ ಸೂಕ್ಷ್ಮ ಜ್ಞಾನಪ್ರಾಪ್ತಕರ್ತ ಸಾಧಕ ಶ್ರೀ. ನಿಷಾದ ದೇಶಮುಖ ಇವರು ಪೂ. (ಸೌ.) ಸಂಗೀತಾ ಇವರ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಿ, “ಸೌ. ಸಂಗೀತಾ ಇವರ ಪ್ರಾರಬ್ಧವು ಶೇ. ೭೫ ರಷ್ಟಿದೆ; ಆದರೆ ಭಕ್ತಿಭಾವದ ಬಲದಿಂದ ಅವರು ಅದರ ಮೇಲೆ ಜಯಗಳಿಸಿದ್ದಾರೆ. ಎಂದು ಹೇಳಿದರು. (ಕಲಿಯುಗದ ಸದ್ಯದ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯ ಪ್ರಾರಬ್ಧವು ಶೇ. ೬೫ ರಷ್ಟಿದೆ ಮತ್ತು ಸಾಮಾನ್ಯ ವ್ಯಕ್ತಿಯು ಅಡಚಣೆಗಳಿಂದ ಹತಾಶನಾಗಿ ದುಃಖಿಯಾಗುತ್ತಾನೆ.)
೬ ಇ ೨ ಇ. ಗಂಭೀರ ಪ್ರಾರಬ್ಧ ಇರುವಾಗಲೂ ಪರಿಸ್ಥಿತಿಗೆ ದೋಷವನ್ನು ಕೊಡದಿರುವ ಪೂ. (ಸೌ.) ಸಂಗೀತಾ ಪಾಟೀಲ ಇವರು ಸಂತಪದವಿಯಲ್ಲಿ ವಿರಾಜಮಾನ ! : ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಪೂ. (ಸೌ.) ಸಂಗೀತಾ ಪಾಟೀಲ ಇವರು ಆನಂದದಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಗಂಭೀರ ಪ್ರಾರಬ್ಧ ಇರುವಾಗಲೂ ಅವರು ಎಂದಿಗೂ ಪರಿಸ್ಥಿತಿಯನ್ನು ದೂರಲಿಲ್ಲ. ತದ್ವಿರುದ್ಧ ಅವರು ಶ್ರಮಪಟ್ಟು ಗುರುಕಾರ್ಯ ಮತ್ತು ಸಾಧನೆಯನ್ನು ಮಾಡಿದರು. ಅವರು, “ನನ್ನ ಜೀವನದಲ್ಲಿ ಅನೇಕ ದುಃಖದ ಪ್ರಸಂಗಗಳು ಬಂದವು; ಆದರೆ ನಾನು ಗುರುಕೃಪೆಯಿಂದ ಪಾರಾದೆನು. ಎಂದು ಹೇಳುತ್ತಾರೆ. ಈಶ್ವರನ ಬಗೆಗಿನ ಭಾವದಿಂದ ಪೂ. (ಸೌ.) ಸಂಗೀತಾ ಪಾಟೀಲ ಇವರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.
೬ ಇ ೩. ಈಶ್ವರೀ ರಾಜ್ಯದ ಸ್ಥಾಪನೆಗಾಗಿ ನಿರಂತರವಾಗಿ ಶ್ರಮಪಡುವ ಪರಾತ್ಪರ ಗುರು ಡಾ. ಆಠವಲೆಯವರ ಮಹಾಮೃತ್ಯು ಯೋಗ ಸಂತರು ಮಾಡಿದ ಸಹಾಯದಿಂದ ತಪ್ಪುವುದು
೬ ಇ ೩ ಅ. ಎಲ್ಲ ಜ್ಯೋತಿಷ್ಯಾಚಾರ್ಯರು ಪರಾತ್ಪರ ಗುರು ಡಾ. ಆಠವಲೆ ಯವರ ಮಹಾಮೃತ್ಯುಯೋಗ ವರ್ಷ ೨೦೦೭ ರಲ್ಲಿ (ಮತ್ತು ಅನಂತರವೂ) ಇರುವುದೆಂದು ಹೇಳುವುದು : ‘ಈಶ್ವರೀ ರಾಜ್ಯದ ಸ್ಥಾಪನೆಗಾಗಿ ನಿರಂತರವಾಗಿ ಶ್ರಮಪಡುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಇದುವರೆಗೆ ಅನೇಕ ಬಾರಿ ಮಹಾಮೃತ್ಯುಯೋಗದ ಸಂಕಟಗಳು ಬಂದಿವೆ. ೨೦೦೧ ರಿಂದ ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಸೂಕ್ಷ್ಮದಲ್ಲಿನ ಅನಿಷ್ಟ ಶಕ್ತಿಗಳಿಂದಾಗುವ ಆಕ್ರಮಣಗಳು ಹೆಚ್ಚುತ್ತಾ ಹೋದವು. ೨೦೦೭ ರಿಂದ ಅವರ ಮೇಲೆ ಮಾರಣಾಂತಿಕ ಆಕ್ರಮಣಗಳಾಗಲು ಪ್ರಾರಂಭವಾಯಿತು. ಎಲ್ಲ ಜ್ಯೋತಿಷ್ಯಾಚಾರ್ಯರು ಪರಾತ್ಪರ ಗುರು ಡಾ. ಆಠವಲೆ ಯವರಿಗೆ ವರ್ಷ ೨೦೦೭ ರಲ್ಲಿ (ಮತ್ತು ನಂತರವೂ) ಮಹಾಮೃತ್ಯು ಯೋಗವು ಇರುವುದಾಗಿ ಹೇಳಿದ್ದರು. ಅಂದಿನಿಂದ ಅವರ ಪ್ರಾಣಶಕ್ತಿಯು ಹೆಚ್ಚುಕಡಿಮೆ ಶೇ. ೩೦ ರ ವರೆಗೆ ಸ್ಥಿರವಾಗಿದೆ. (ಪ್ರಾಣಶಕ್ತಿಯು ಶೇ. ೩೦ ರ ಕ್ಕಿಂತಲೂ ಕಡಿಮೆಯಾದರೆ ಮರಣ ಬರುತ್ತದೆ. ‘ಸಾಮಾನ್ಯ ವ್ಯಕ್ತಿಯ ಪ್ರಾಣಶಕ್ತಿ ಶೇ. ೧೦೦ ರಷ್ಟಿರುತ್ತದೆ, ಎಂದು ಇಲ್ಲಿ ಗ್ರಹಿಸಲಾಗಿದೆ.) ೨೦೦೭ ರಲ್ಲಿನ ಅನಾರೋಗ್ಯದ ನಂತರ ಅವರು ಆಶ್ರಮದ ಹೊರಗೆ ಹೋಗುವುದು ಸಂಪೂರ್ಣ ನಿಂತಿತು. ೨೦೦೭ ರ ಗುರುಪೂರ್ಣಿಮೆಯ ನಂತರ ಸುಮಾರು ೧ ವಾರ ಅವರು ಮರಣೋನ್ಮುಖ ಸ್ಥಿತಿಯಲ್ಲಿದ್ದರು.
೬ ಇ ೩ ಆ. ಪರಾತ್ಪರ ಗುರು ಡಾ. ಆಠವಲೆಯವರ ವರ್ಷ ೨೦೦೭ ರಲ್ಲಿನ ಮಹಾಮೃತ್ಯುಯೋಗದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ : ೩೦.೭.೨೦೦೭ ರಂದು ಗುರುಪೂರ್ಣಿಮೆಯ ನಂತರ ಮುಂದಿನ ಒಂದು ವಾರ ಪರಾತ್ಪರ ಗುರು ಡಾ. ಆಠವಲೆಯವರು ಮರಣೋನ್ಮುಖ ಸ್ಥಿತಿಯಲ್ಲಿದ್ದರು. ಆಗಷ್ಟ ೨೦೦೭ ರಲ್ಲಿ ಅವರು ಹಾಸಿಗೆಗೆ ಅಂಟಿಕೊಂಡಿದ್ದರು (ಅವರಿಗೆ ಹಾಸಿಗೆಯಿಂದ ಏಳಲು ಆಗುತ್ತಿರಲಿಲ್ಲ). ಆ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಗೋಚರ (ತತ್ಕಾಲೀನ) ಜಾತಕದಲ್ಲಿ ಮಂಗಳ ಗ್ರಹವು ಹನ್ನೆರಡನೇ ಸ್ಥಾನದಲ್ಲಿ, ಅಂದರೆ ಅಶುಭ ಸ್ಥಾನದಲ್ಲಿತ್ತು. ಆರೋಗ್ಯಕ್ಕೆ ಸಂಬಂಧಿಸಿದ ರವಿ ಈ ಗ್ರಹದ ಶನಿ ಮತ್ತು ಕೇತು ಈ ಪಾಪಗ್ರಹ ಗಳ ಸಂಯೋಗವಾಗಿತ್ತು. ಜನ್ಮ ಕುಂಡಲಿಗನುಸಾರ ಪರಾತ್ಪರ ಗುರು ಡಾ. ಆಠವಲೆಯವರ ಆ ಸಮಯದಲ್ಲಿ ಮೃತ್ಯು ಸ್ಥಾನದ ಸ್ವಾಮಿಯಾಗಿರುವ ಶನಿ ಗ್ರಹದ ಮಹಾದಶೆ ಮತ್ತು ಮೃತ್ಯು ಸ್ಥಾನದಲ್ಲಿರುವ ಚಂದ್ರ ಗ್ರಹದ ಅಂತರ್ದಶೆ ನಡೆದಿತ್ತು. ಈ ಗ್ರಹಸ್ಥಿತಿಯು ಪರಾತ್ಪರ ಗುರು ಡಾ. ಆಠವಲೆಯವರಿಗೆ ಮಹಾಮೃತ್ಯುಯೋಗ ಇರುವುದನ್ನು ತೋರಿಸುತ್ತದೆ.
೬ ಇ ೩ ಇ. ಸಂತರ ಕೃಪೆ ಇದ್ದರೆ ಯಾವುದೂ ಅಸಾಧ್ಯವಿಲ್ಲ ! : ಸಂತರು ಮಾಡಿದ ಸಹಾಯದಿಂದ ಪರಾತ್ಪರ ಗುರು ಡಾ. ಆಠವಲೆಯವರ ಮಹಾಮೃತ್ಯುಯೋಗವು ಅನೇಕ ಬಾರಿ ತಪ್ಪಿ ಹೋಗಿದೆ. ಈ ಕುರಿತು ಪರಾತ್ಪರ ಗುರು ಡಾ. ಆಠವಲೆಯವರು, “ಜನ್ಮ, ವಿವಾಹ ಮತ್ತು ಮೃತ್ಯು ಇವು ಪ್ರಾರಬ್ಧಕ್ಕನುಸಾರವೇ ಆಗುತ್ತವೆ, ಎಂದು ಕರ್ಮಯೋಗ ಹೇಳುತ್ತದೆ. ಹೀಗಿದ್ದರೂ, ‘ಕೇವಲ ಅಪಮೃತ್ಯುಯೋಗ ಮತ್ತು ಮೃತ್ಯುಯೋಗವೇ ಅಲ್ಲ, ಮಹಾ ಮೃತ್ಯುಯೋಗವನ್ನೂ ತಪ್ಪಿಸಬಹುದು, ಎಂಬುದನ್ನು ಯೋಗತಜ್ಞ ದಾದಾಜಿ ವೈಶಂಪಾಯನ, ಗುರುದೇವ ಡಾ. ಕಾಟೆಸ್ವಾಮೀಜಿ ಮತ್ತು ಇತರ ಕೆಲವು ಅಧಿಕಾರಿ ಸಂತರು ನನ್ನ ಸಂದರ್ಭದಲ್ಲಿ ೨೦೦೭ ರಿಂದ ಇದುವರೆಗೆ ಸಿದ್ಧಮಾಡಿ ತೋರಿಸಿದ್ದಾರೆ. ಇದರಿಂದ ‘ಸಂತರ ಕೃಪೆಯಿಂದ ಯಾವುದೂ ಅಸಾಧ್ಯವಿಲ್ಲ, ಎಂಬುದು ಗಮನಕ್ಕೆ ಬರುತ್ತದೆ ಎಂದು ಹೇಳಿದರು.
೭. ಪರಾತ್ಪರ ಗುರು ಡಾ. ಆಠವಲೆಯವರು ನಿರ್ಮಿಸಿದ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿದರೆ ವಿಹಂಗಮ ಆಧ್ಯಾತ್ಮಿಕ ಉನ್ನತಿ ಆಗುವುದು
ಕರ್ಮ, ಭಕ್ತಿ, ಧ್ಯಾನ ಇತ್ಯಾದಿ ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡಿದರೂ, ಅದರಿಂದ ಈಶ್ವರಪ್ರಾಪ್ತಿಯಾಗಲು ಗುರುಕೃಪೆಯ ಹೊರತು ಬೇರೆ ಮಾರ್ಗವಿಲ್ಲ; ಆದುದರಿಂದಲೇ, ‘ಗುರುಕೃಪಾ ಹಿ ಕೇವಲಂ ಶಿಷ್ಯಪರಮಮಂಗಲಮ್ |, ಅಂದರೆ ‘ಕೇವಲ ಗುರುಕೃಪೆಯು ಶಿಷ್ಯನ ಪರಮ ಕಲ್ಯಾಣವನ್ನು ಮಾಡುತ್ತದೆ.
‘ಗುರುಕೃಪೆಯ ಮಾಧ್ಯಮದಿಂದ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣವಾಗುವುದು, ಇದಕ್ಕೇ ‘ಗುರುಕೃಪಾಯೋಗ ಎನ್ನುತ್ತಾರೆ. ‘ವಿವಿಧ ಯೋಗಮಾರ್ಗಗಳಿಂದ ಸಾಧನೆಯನ್ನು ಮಾಡುವುದರಲ್ಲಿ ಅನೇಕ ವರ್ಷಗಳನ್ನು ಕಳೆಯದೇ ಗುರುಕೃಪೆಯನ್ನು ಬೇಗನೇ ಹೇಗೆ ಪ್ರಾಪ್ತಮಾಡಿಕೊಳ್ಳಬೇಕು?, ಎಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಆದ್ದರಿಂದ ಸಹಜವಾಗಿಯೇ ಈ ಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯು ಶೀಘ್ರ ಗತಿಯಲ್ಲಿ ಆಗುತ್ತದೆ. ಗುರುಕೃಪಾಯೋಗಾನುಸಾರ ಸಾಧನೆಯು ಪ್ರಸ್ತುತ ಕಾಲಕ್ಕನುಸಾರ ಹೇಳಿದ ಸಾಧನೆಯಾಗಿದೆ.
೭ ಅ. ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ ಇಲ್ಲಿಯವರೆಗೆ ೧೦೮ ಜನ ಸಾಧಕರು ಸಂತಪದವಿಯನ್ನು ಪ್ರಾಪ್ತಮಾಡಿಕೊಂಡಿದ್ದಾರೆ, ಹಾಗೆಯೇ ೧ ಸಾವಿರ ೧೦೬ ಜನ ಸಾಧಕರು ಸಂತತ್ವದ ದಿಶೆಯಲ್ಲಿ ಮಾರ್ಗಕ್ರಮಣ ಮಾಡುತ್ತಿದ್ದಾರೆ.
(ಟಿಪ್ಪಣಿ : ‘ನಿರ್ಜೀವ ವಸ್ತುಗಳೆಂದರೆ ಶೇ. ೧ ರಷ್ಟು ಮತ್ತು ಈಶ್ವರನೆಂದರೆ ಶೇ. ೧೦೦ ರಷ್ಟು ಆಧ್ಯಾತ್ಮಿಕ ಮಟ್ಟ, ಎಂದು ತಿಳಿದುಕೊಂಡು ಆ ತುಲನೆಯಲ್ಲಿ ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿಗನುಸಾರ ಅವಳ ವರ್ತಮಾನ ಆಧ್ಯಾತ್ಮಿಕ ಮಟ್ಟವನ್ನು ನಿರ್ಧರಿಸಲು ಬರುತ್ತದೆ. ಕಲಿಯುಗದಲ್ಲಿನ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೨೦ ಇರುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೭೦ ಕ್ಕಿಂತಲೂ ಹೆಚ್ಚು ಇರುವವರಿಗೆ ‘ಸಂತರು ಎನ್ನುತ್ತಾರೆ.)
೮. ತಾತ್ಪರ್ಯ
ಸಾಧನೆಯನ್ನು ಮಾಡುವುದರಿಂದ ವ್ಯಕಿಯ ಜೀವನದ ಕಡೆಗೆ ನೋಡುವ ದೃಷ್ಟಿಕೋನ ಬದಲಾಗುತ್ತದೆ. ವ್ಯಕ್ತಿಗೆ ಮನುಷ್ಯಜನ್ಮದ ಉದ್ದೇಶ ಗಮನಕ್ಕೆ ಬರುವುದರಿಂದ ಸುಖ-ದುಃಖದ ಪ್ರಸಂಗಗಳಲ್ಲಿ ಅವನ ಸ್ಥಿರವಾಗಿರಲು ಪ್ರಯತ್ನಿಸುತ್ತಾನೆ. ಇದರಿಂದ ಅವನಿಗೆ ಶಾರೀರಿಕ, ಮಾನಸಿಕ, ಕೌಟುಂಬಿಕ, ಸಾಮಾಜಿಕ ಇಂತಹ ಅನೇಕ ಸ್ತರಗಳಲ್ಲಿ ಲಾಭವಾಗುತ್ತದೆ, ಹಾಗೆಯೇ ಅವರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆದುದರಿಂದ ಗ್ರಹದೋಷಗಳಿಂದ ಮನುಷ್ಯನ ಜೀವನದ ಮೇಲಾಗುವ ದುಷ್ಪರಿಣಾಮಗಳನ್ನು ಸುಸಹ್ಯಗೊಳಿಸಲು ‘ಸಾಧನೆಯನ್ನು ಮಾಡುವುದೇ ಸರ್ವೋತ್ತಮ ಉಪಾಯವಾಗಿದೆ !
– ಶ್ರೀ. ರಾಜ ಧನಂಜಯ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.(೨೦.೧೦.೨೦೧೯)