ಸನಾತನದ ಇತಿಹಾಸದಲ್ಲಿ ಒಂದೇ ಜಿಲ್ಲೆಯ ಮೂವರನ್ನು ಸಂತರೆಂದು ಘೋಷಿಸಿದ ಅಭೂತಪೂರ್ವ ಘಟನೆ

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ. ಸಾಂತಪ್ಪ ಗೌಡ (ವಯಸ್ಸು ೮೧ ವರ್ಷ), ಶ್ರೀಮತಿ ಕಮಲಮ್ಮ (ವಯಸ್ಸು ೮೧ ವರ್ಷ) ಮತ್ತು ಸೌ. ಶಶಿಕಲಾ ಕಿಣಿ (ವಯಸ್ಸು ೭೮ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನ !

(ಎಡದಿಂದ) ಪೂ. ಸಾಂತಪ್ಪ ಗೌಡ, ಪೂ. (ಶ್ರೀಮತಿ) ಕಮಲಮ್ಮ, ಪೂ. (ಸೌ.) ಶಶಿಕಲಾ ಕಿಣಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕರ್ನಾಟಕ ಸಾಧಕರ ಅಹೋಭಾಗ್ಯವೆಂದರೆ, ಈಶ್ವರನು ಒಂದೇ ದಿನ ಮೂವರು ಸಂತ ರತ್ನಗಳ ರೂಪದಲ್ಲಿ ಅವರಿಗೆ ಅಮೂಲ್ಯ ಉಡುಗೊರೆ ನೀಡಿದ್ದಾನೆ. ‘ದಕ್ಷಿಣ ಕನ್ನಡ ಜಿಲ್ಲೆಯ ೩ ಸಾಧಕರು ಒಂದೇ ದಿನದಂದು ಸಂತ ಪದವಿಯನ್ನು ಪ್ರಾಪ್ತಮಾಡಿ ಕೊಳ್ಳುವುದು’, ಇದು ಸನಾತನದ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆಯಾಗಿದೆ. ಕರ್ನಾಟಕದ ಸಾಧಕರಲ್ಲಿನ ‘ಪ್ರೇಮಭಾವ ಮತ್ತು ಸೇವಾವೃತ್ತಿ’ಯನ್ನು ನೋಡಿ ಈಶ್ವರನು ಅವರ ಮೇಲೆ ಕೃಪೆ ಮಾಡಿದ್ದಾನೆ. ಸಾಧಕರೇ, ಸಂತರ ಸತ್ಸಂಗದ ಲಾಭ ಪಡೆದು ತಮ್ಮ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಿ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೮.೧೧.೨೦೨೪)

ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಸನಾತನದ ಸಾಧಕರಾದ ಶ್ರೀ. ಸಾಂತಪ್ಪ ಗೌಡ (ವಯಸ್ಸು ೮೧ ವರ್ಷ) ಇವರು ೧೨೯ ನೇ ಸಮಷ್ಟಿ ಸಂತರು, ಶ್ರೀಮತಿ ಕಮಲಮ್ಮ (ವಯಸ್ಸು ೮೧ ವರ್ಷ) ಇವರು ೧೩೦ ನೇ ವ್ಯಷ್ಟಿ ಸಂತರು ಮತ್ತು ಸೌ. ಶಶಿಕಲಾ ಕಿಣಿ (ವಯಸ್ಸು ೭೮ ವರ್ಷ) ಇವರು ೧೩೧ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರೆಂದು ಸನಾತನದ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಸಾಧಕರಿಗೆ ಆನಂದ ವಾರ್ತೆ ನೀಡಿದರು.

ಮಂಗಳೂರಿನ ಕುಳಾಯಿಯಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಗೃಹದಲ್ಲಿ ೧೮.೧೧.೨೦೨೪ ರಂದು ಒಂದು ಅನೌಪಚಾರಿಕ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಈ ಸಮಯದಲ್ಲಿ ಉಪಸ್ಥಿತ ಸಾಧಕರಿಗೆ ಭಾವಜಾಗೃತಿಯಾಯಿತು.

ಪೂ. ರಮಾನಂದ ಗೌಡ ಇವರ ಮಾರ್ಗದರ್ಶನ

ಈ ಸಮಯದಲ್ಲಿ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿ ಗುರುಗಳು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಕರ್ನಾಟಕದ ಎಲ್ಲಾ ಸಾಧಕರಿಗೆ ಆನಂದ ಮಾತ್ರವಲ್ಲ; ಚೈತನ್ಯವನ್ನು ನೀಡುವಂತಹ ಆನಂದದ ವಾರ್ತೆ ನೀಡಿದ್ದಾರೆ. ನಾವೆಲ್ಲರೂ ಗುರುಗಳ ಪಾವನ ಚರಣಗಳಲ್ಲಿ ಮತ್ತು ಈ ಮೂವರು ಸಂತರ ಚರಣಗಳಲ್ಲಿ ಅನಂತ ಅನಂತ ಕೃತಜ್ಞತೆಗಳನ್ನು ಸಲ್ಲಿಸೋಣ’, ಎಂದು ಹೇಳಿದರು,

ಈ ವೇಳೆ ಪೂ. ಸಾಂತಪ್ಪ ಗೌಡ ಇವರನ್ನು ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರು ಅದೇ ರೀತಿ ಪೂ. (ಶ್ರೀಮತಿ) ಕಮಲಮ್ಮ ಹಾಗೂ ಪೂ. (ಸೌ.) ಶಶಿಕಲಾ ಕಿಣಿ ಇವರಿಗೆ ಧರ್ಮಪ್ರಸಾರ ಸೇವಕಿ ಸೌ. ಮಂಜುಳಾ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೭) ಇವರು ಹಾರ ಹಾಕಿದರು ಮತ್ತು ಪೂಜ್ಯ ರಮಾನಂದ ಗೌಡ ಇವರು ಉಡುಗೊರೆ ನೀಡಿ ಸನ್ಮಾನಿಸಿದರು. ಸಂತರ ಕುಟುಂಬದವರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಸಾಧಕರು ಉಪಸ್ಥಿತರಿದ್ದರು. ಸೌ. ಸಂಗೀತಾ ಆಚಾರ್ಯ ಇವರು ಈ ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಮಾಡಿದರು. ಅನೇಕ ಗಣ್ಯರು ಧರ್ಮಾಭಿಮಾನಿಗಳು ಹಾಗೂ ಹಿತಚಿಂತಕರು ಈ ಕಾರ್ಯಕ್ರಮದ ಲಾಭ ಪಡೆದರು.