೧. ಪರಾತ್ಪರ ಗುರು ಡಾಕ್ಟರರನ್ನು ೨೩ ವರ್ಷಗಳ ನಂತರ ಭೇಟಿಯಾಗುವ ಕುರ್ಡೆಕರ ಕಾಕಾರವರು ‘ನೀವು ಸೂಕ್ಷ್ಮದಿಂದ ೨೪ ಗಂಟೆ ನನ್ನ ಜೊತೆಯಲ್ಲಿದ್ದೀರಿ’, ಎಂದು ನನಗೆ ಅರಿವಾಗುತ್ತಿರುವುದರಿಂದ ಪ್ರತ್ಯಕ್ಷ ಭೇಟಿಯಾಗಲು ಬರಲಿಲ್ಲ’, ಎಂದು ಗುರುಗಳಿಗೆ ಹೇಳುವುದು
‘ಒಮ್ಮೆ ನಾನು ಒಂದು ಕೆಲಸದ ನಿಮಿತ್ತ ಕಾರವಾರಕ್ಕೆ ಹೋಗಿದ್ದೆನು. ಅಲ್ಲಿ ನನಗೆ ಶ್ರೀ. ಸಾಗರ ಕುರ್ಡೆಕರ (ವಯಸ್ಸು ೬೫ ವರ್ಷ) ಇವರ ಭೇಟಿಯಾಯಿತು. ಅವರು ನನಗೆ, ”೨೩ ವರ್ಷಗಳ ಹಿಂದೆ ನನಗೆ ಪರಾತ್ಪರ ಗುರು ಡಾ. ಆಠವಲೆ ಯವರೊಂದಿಗೆ ಮೊದಲನೇ ಭೇಟಿಯಾಗಿತ್ತು. ಅನಂತರ ನಾನು ಅವರನ್ನು ಎಂದಿಗೂ ಭೇಟಿಯಾಗಿಲ್ಲ. ಈಗ ಕೆಲವು ತಿಂಗಳ ಹಿಂದೆ ನಾನು ಪರಾತ್ಪರ ಗುರು ಡಾಕ್ಟರರನ್ನು ಪುನಃ ಭೇಟಿಯಾದೆನು. ಆಗ ಪರಾತ್ಪರ ಗುರುಗಳು ನನಗೆ, ”ನೀವು ೨೩ ವರ್ಷಗಳಲ್ಲಿ ಒಮ್ಮೆಯೂ ನನ್ನನ್ನು ಭೇಟಿಯಾಗಲು ಏಕೆ ಬರಲಿಲ್ಲ ?’’ ಎಂದು ಕೇಳಿದರು. ನಾನು ಅವರಿಗೆ, ”ನೀವು ಸೂಕ್ಷ್ಮದಿಂದ ೨೪ ಗಂಟೆ ನನ್ನ ಜೊತೆಯಲ್ಲಿಯೇ ಇದ್ದೀರಿ, ಎಂದು ನನಗೆ ಅರಿವಾಗುತ್ತದೆ. ಆದ್ದರಿಂದ ನಾನು ನಿಮ್ಮನ್ನು ಭೇಟಿಯಾಗಲು ಬರಲಿಲ್ಲ’’ ಎಂದು ಹೇಳಿದೆನು. ಪರಾತ್ಪರ ಗುರು ಡಾಕ್ಟರರಿಗೆ ಈ ಉತ್ತರ ಇಷ್ಟವಾಯಿತು.
೨. ಪರಾತ್ಪರ ಗುರು ಡಾಕ್ಟರರ ‘ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ’ ಎಂಬ ಬೋಧನೆಯನ್ನು ಕೃತಿಯಲ್ಲಿ ತರುವ ಕುರ್ಡೆಕರ ಕಾಕಾರವರಲ್ಲಿ ‘ಗುರುಗಳ ಬಗೆಗಿನ ಭಾವವು ಉಚ್ಚ ಕೋಟಿಯದ್ದಾಗಿದೆ’, ಎಂಬುದು ಗಮನಕ್ಕೆ ಬರುವುದು
ಈ ಪ್ರಸಂಗದಿಂದ ನನ್ನ ಮನಸ್ಸಿನಲ್ಲಿ ‘ಸನಾತನ ಸಂಸ್ಥೆಯ ಸ್ಥಾಪನೆಯಾದಾಗಿನಿಂದ ಪರಾತ್ಪರ ಡಾಕ್ಟರರು ಸಾಧಕರಿಗೆ ‘ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ !’ ಎಂಬುದನ್ನು ಕಲಿಸಿದ್ದಾರೆ. ಈ ಬೋಧನೆಯನ್ನು ಕುರ್ಡೆಕರಕಾಕಾರವರು ಪ್ರತ್ಯಕ್ಷ ಕೃತಿಯಲ್ಲಿ ತಂದರು ಮತ್ತು ಗುರುಗಳನ್ನು ಸೂಕ್ಷ್ಮದಿಂದ ಅನುಭವಿಸುತ್ತ ನಿರಂತರ ಸಾಧನೆಯನ್ನು ಮಾಡಿದರು. ಈಗಿನ ಘೋರ ಕಲಿಯುಗದಲ್ಲಿ ಗುರುಗಳನ್ನು ಪ್ರತ್ಯಕ್ಷ ಭೇಟಿಯಾಗದಿದ್ದರೂ ಸತತವಾಗಿ ೨೩ ವರ್ಷಗಳ ವರೆಗೆ ಸಾಧನೆಯಲ್ಲಿರುವುದು ಎಷ್ಟು ಕಠಿಣವಾಗಿದೆ ! ಹೀಗಿದ್ದರೂ ಕಾಕಾರವರು ಅದನ್ನು ಸಾಧಿಸಿ ತೋರಿಸಿದ್ದಾರೆ. ಇದರಿಂದ ‘ಕಾಕಾರವರ ಪರಾತ್ಪರ ಗುರು ಡಾಕ್ಟರರ ಬಗೆಗಿನ ಶ್ರದ್ಧೆ ಮತ್ತು ಭಾವವು ಎಷ್ಟು ಉಚ್ಚ ಕೋಟಿಯದ್ದಾಗಿದೆ’, ಎಂಬುದು ಗಮನಕ್ಕೆ ಬರುತ್ತದೆ.
೩. ಕಾಕಾರವರ ಒಡನಾಟದಲ್ಲಿ ನಾಮಜಪ ಚೆನ್ನಾಗಿ ಆಗುವುದು
ಕಾಕಾರವರ ಭೇಟಿಯಲ್ಲಿ ನನಗೆ ‘ಅವರು ಅಂತರ್ಮುಖರಾಗಿದ್ದು ನಮ್ರರಾಗಿದ್ದಾರೆ’, ಎಂಬುದು ಅರಿವಾಯಿತು. ಅವರ ಒಡನಾಟದಲ್ಲಿ ನನ್ನ ನಾಮಜಪವು ಒಳ್ಳೆಯ ರೀತಿಯಲ್ಲಿ ಆಗತೊಡಗಿತು ಮತ್ತು ನನ್ನ ಮನಸ್ಸಿಗೆ ಈಶ್ವರೀ ಆನಂದದ ಅರಿವಾಯಿತು.’
– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.