ಸನಾತನದ ಕಿರುಗ್ರಂಥ : ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ

‘ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತ ದೃಷ್ಟಿಕೋನ’ಗಳು ಈ ಗ್ರಂಥದ ಬಗ್ಗೆ ೨೬/೯ ನೇ ಸಂಚಿಕೆಯಲ್ಲಿ ನೋಡಿದೆವು. ಈಗ ಮುಂದಿನ ಭಾಗ ನೋಡೋಣ.

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/129757.html
(ಪೂ.) ಶ್ರೀ. ಸಂದೀಪ ಆಳಶಿ

೭.  ಆಧ್ಯಾತ್ಮಿಕ ಉಪಾಯಗಳ ಬಗ್ಗೆ ಉಪಯುಕ್ತ ದೃಷ್ಟಿಕೋನ

೭ ಎ. ನಾಮಜಪ ಹೆಚ್ಚು ಪರಿಣಾಮಕಾರಿಯಾಗಲು ಮಾಡಬೇಕಾದ ಪ್ರಯತ್ನಗಳು

೭ ಎ ೧. ನಾಮಜಪವನ್ನು ವೇಗವಾಗಿ ಮಾಡುವುದರ ಮಹತ್ವ : ಕೆಲವೊಮ್ಮೆ ತೊಂದರೆಯ ತೀವ್ರತೆ ತುಂಬಾ ಹೆಚ್ಚಾಗಿದ್ದರೆ ನಾಮಜಪ ಮಾಡುವಾಗ ಸತತವಾಗಿ ಗಮನ ವಿಚಲಿತವಾಗುತ್ತದೆ ಮತ್ತು ಅದನ್ನು ಭಾವಪೂರ್ಣವಾಗಿ ಮಾಡಲು ಎಷ್ಟೇ ಪ್ರಯತ್ನಿಸಿದರೂ ಭಾವಪೂರ್ಣವಾಗಿ ಆಗುವುದಿಲ್ಲ. ಇಂತಹ ಸಮಯದಲ್ಲಿ ನಾಮಜಪ ಅಥವಾ ಮಂತ್ರ ಜಪವನ್ನು ಶೀಘ್ರಗತಿಯಲ್ಲಿ ಮಾಡಬೇಕು, ಇದರಿಂದ ಗಮನ ಹೆಚ್ಚು ವಿಚಲಿತವಾಗುವುದಿಲ್ಲ.

೭ ಎ ೩. ನಾಮಜಪ ಅಖಂಡವಾಗಿ ಆಗಲು ಮಾಡಬೇಕಾದ ಪ್ರಯತ್ನಗಳು

ಅ. ಕರಮಾಲೆ ಅಥವಾ ‘ಕೌಂಟರ್‌’ನ ಸಹಾಯದಿಂದ ಸತತವಾಗಿ ನಾಮಜಪ ಮಾಡಲು ಪ್ರಯತ್ನಿಸಬೇಕು.

ಆ. ಅಖಂಡವಾಗಿ ನಾಮಜಪವಾಗಲು ನಡುನಡುವೆ ಪ್ರಾರ್ಥನೆ ಮಾಡಬೇಕು.

ಇ. ಅಖಂಡವಾಗಿ ನಾಮಜಪವಾಗಲು ಸ್ವಯಂಸೂಚನೆಗಳನ್ನು ಕೊಡಬೇಕು – ‘ನಾನು ಯಾರೊಂದಿಗೂ ಮಾತನಾಡದಿರುವಾಗ ಅಥವಾ ನನ್ನ ಮನಸ್ಸಿನಲ್ಲಿ ಉಪಯುಕ್ತ ವಿಚಾರಗಳು ಇಲ್ಲದಿರುವಾಗ, ಕೂಡಲೇ ನನ್ನ ನಾಮಜಪ ಆರಂಭವಾಗುವುದು.’ (ಸ್ವಯಂಸೂಚನೆಗಳ ಬಗ್ಗೆ ವಿವರವಾದ ವಿವೇಚನೆಯನ್ನು ಸನಾತನದ ಗ್ರಂಥ ‘ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ ನಿರ್ಮೂಲನೆ’ಯಲ್ಲಿ ಮಾಡಲಾಗಿದೆ.)’ – (ಪೂ.) ಶ್ರೀ. ಸಂದೀಪ ಆಳಶಿ (೨೦.೮.೨೦೧೬)

೭ ಏ. ಉಪಾಯ ಮಾಡಲು ಆವಶ್ಯಕವಿರುವ ಮನಸ್ಸಿನ ಶಕ್ತಿಯು ಸಕಾರಾತ್ಮಕ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ : ‘ಒಂದು ಸಲ ನಾನು ಉಪಾಯ ಮಾಡಲು ಕುಳಿತಿದ್ದೆ. ಅತಿಯಾದ ಆಯಾಸ ಮತ್ತು ವೇದನೆಗಳಿಂದ ಉಪಾಯದ ಮೇಲೆ ಗಮನವಿರುತ್ತಿರಲಿಲ್ಲ. ಆ ಸಮಯದಲ್ಲಿ ದೇವರ ಕೃಪೆಯಿಂದ ಮನಸ್ಸಿನಲ್ಲಿ ಒಂದು ಸಕಾರಾತ್ಮಕ ವಿಚಾರ ಬಂದಿತು. ಅನಂತರ ಮನಸ್ಸಿನ ಶಕ್ತಿ ಸ್ವಲ್ಪ ಹೆಚ್ಚಾಯಿತು. ಇದರಿಂದ ಉಪಾಯಗಳಲ್ಲಿ ಸ್ವಲ್ಪ ಗಮನ ಹೋಗತೊಡಗಿತು. ಇದರಿಂದ ಮನಸ್ಸಿನಶಕ್ತಿ ಇನ್ನೂ ಸ್ವಲ್ಪ ಹೆಚ್ಚಾಯಿತು. ಇದರಿಂದ ಉಪಾಯ ಇನ್ನೂ ಚೆನ್ನಾಗಿ ಆಗತೊಡಗಿತು. ಹೀಗೆ ಆಗುತ್ತಾ ಆಗುತ್ತಾ ಮುಂದೆ ಒಂದು ಗಂಟೆಯ ವರೆಗೆ ಉಪಾಯ ಚೆನ್ನಾಗಿ ಆಯಿತು. ಇದರಿಂದ ಮನಸ್ಸಿನ ಶಕ್ತಿ ಹೆಚ್ಚಾಗಲು ಸಕಾರಾತ್ಮಕ ವಿಚಾರಗಳು ಎಷ್ಟು ಆವಶ್ಯಕವಾಗಿವೆ ಎಂಬುದು ತಿಳಿಯಿತು. ಇದರಿಂದ ಜೀವನದಲ್ಲಿ ಸತತವಾಗಿ ಸಕಾರಾತ್ಮಕ ದೃಷ್ಟಿಕೋನವಿಡುವ ಮಹತ್ವ ಗಮನಕ್ಕೆ ಬರುತ್ತದೆ.

‘ಇಂತಹ ಒಂದು ವಿಷಯ ನನಗೆ ಮಾಡಲು ಆಗುವುದೇ ಇಲ್ಲ’ ಎಂಬ ನಕಾರಾತ್ಮಕ ವಿಚಾರವನ್ನು ಮಾಡಿದರೆ, ಆ ವಿಷಯ ಎಷ್ಟೇ ಸುಲಭವಾಗಿದ್ದರೂ, ಆಗುವುದೇ ಇಲ್ಲ. ಇದಕ್ಕೆ ವಿರುದ್ಧ ‘ಇಂತಹ ಒಂದು ವಿಷಯ ನನಗೆ ಮಾಡಲು ಆಗಿಯೇ ಆಗುತ್ತದೆ’ ಎಂಬ ಸಕಾರಾತ್ಮಕ ವಿಚಾರ ಮಾಡಿದರೆ, ಆ ವಿಷಯ ಎಷ್ಟೇ ಕಠಿಣವಾಗಿದ್ದರೂ ಮಾಡಲು ಸಾಧ್ಯವಾಗುತ್ತದೆ !’ – (ಪೂ.) ಶ್ರೀ. ಸಂದೀಪ ಆಳಶಿ (೧೬.೧೦.೨೦೨೦)

೭ ಐ. ಉಪಾಯಗಳನ್ನು ಪರಿಣಾಮಕಾರಿಯಾಗಿ ಮಾಡಲು ಸಾತತ್ಯವಿರುವುದು ಆವಶ್ಯಕ ! : ನಾವು ಉಪಾಯಗಳನ್ನು ಮಾಡುತ್ತಿರುವಾಗ ಅದರಲ್ಲಿ ಕೆಲವೊಮ್ಮೆ ಕೆಟ್ಟ ಶಕ್ತಿಗಳು ಅಡಚಣೆಗಳನ್ನೂ ತರುತ್ತವೆ. ಇದರಿಂದ ಉಪಾಯ ಮಾಡಲು ಬೇಸರ ಬರುವುದು, ನಾಮಜಪ ಏಕಾಗ್ರತೆಯಿಂದ ಆಗದಿರುವುದು ಇವುಗಳಂತಹ ತೊಂದರೆಗಳಾಗುತ್ತವೆ. ಇದರ ಪರಿಣಾಮದಿಂದ ಉಪಾಯಗಳನ್ನು ಮಾಡುವುದರಲ್ಲಿನ ಅಭಿರುಚಿ ಕಡಿಮೆಯಾಗುತ್ತದೆ. ಇದರಿಂದ ಉಪಾಯಗಳು ಪರಿಣಾಮಕಾರಿಯಾಗಿ ಆಗುವುದಿಲ್ಲ. ಹೀಗಾಗಬಾರದೆಂದು ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಬೇಕು – ‘ಯಾವುದಾದರೊಂದು ಉತ್ತುಂಗ ಯಶಸ್ಸನ್ನು ಪಡೆಯುವಾಗ ನಡುನಡುವೆ ನಮಗೆ ಪ್ರಯತ್ನಗಳ ಬಲ ಕಡಿಮೆಯಾಗುವುದರಿಂದ ಅಥವಾ ಮಾರ್ಗದಲ್ಲಿನ ಅಡಚಣೆಗಳಿಂದ ಸ್ವಲ್ಪ ಅಪಯಶಸ್ಸು ಬರಬಹುದು’ ಎಂಬುದನ್ನು ನಾವು ಮನಗಾಣಬೇಕು. ಆ ಅಪಯಶಸ್ಸು ಕೂಡ ಮಹತ್ವದ್ದಾಗಿರುತ್ತದೆ, ಏಕೆಂದರೆ ಅದರಿಂದ ಕಲಿತು ನಾವು ಯಶಸ್ಸನ್ನು ಪಡೆಯಬಹುದು. ‘ಪ್ರಯತ್ನಗಳನ್ನು ಮಾಡುವಾಗ ಅಪಯಶಸ್ಸು ಬಂದರೂ ಸೋಲೊಪ್ಪದೇ ಹುರುಪಿನಿಂದ ಪ್ರಯತ್ನಗಳನ್ನು ಮಾಡುತ್ತಿರುವುದೇ’ ಪ್ರಯತ್ನಗಳಲ್ಲಿನ ನಿಜವಾದ ಸಾತತ್ಯವಾಗಿದೆ.

೮. ತೊಂದರೆಗಳನ್ನು ಜಯಿಸಲು ಸಾಧನೆ ಮತ್ತು ಭಕ್ತಿಯನ್ನು ಹೆಚ್ಚಿಸಿ !

೮ ಅ. ಸಾಧನೆಯ ತಳಮಳವನ್ನು ಹೆಚ್ಚಿಸುವುದು : ಮಧ್ಯಮ ಮತ್ತು ತೀವ್ರ ತೊಂದರೆಯಿರುವ ಅನೇಕ ಸಾಧಕರಿಗೆ, ಸಾಧನೆಯ ಪ್ರಯತ್ನಗಳನ್ನು ಚೆನ್ನಾಗಿ ಮಾಡುತ್ತಿದ್ದರೆ ೩-೪ ದಿನಗಳಲ್ಲಿ ಅವುಗಳಲ್ಲಿ ಏನಾದರೊಂದು ಕಾರಣದಿಂದ ಅಡಚಣೆ ಬಂದು ಪ್ರಯತ್ನ ನಿಂತುಹೋಗುತ್ತದೆ ಎಂಬ ಅನುಭವ ಬರುತ್ತದೆ. ಹೀಗಾಗಲು ಸಾಮಾನ್ಯವಾಗಿ ೬೦ ಪ್ರತಿಶತ ಭಾಗವು ‘ಕೆಟ್ಟ ಶಕ್ತಿಗಳಿಂದ ಸಾಧನೆಗಾಗುವ ವಿರೋಧ’ ಮತ್ತು ೪೦ ಪ್ರತಿಶತ ಭಾಗವು ‘ಸಾಧಕರಲ್ಲಿ ಸಾಧನೆಯ ತಳಮಳ ಕಡಿಮೆಯಿರುವುದು’ ಕಾರಣವಾಗಿರುತ್ತವೆ. ಸಾಧಕರು ಸ್ವಲ್ಪ ಚೆನ್ನಾಗಿ ಪ್ರಯತ್ನ ಮಾಡತೊಡಗಿದರೆ ಕೆಟ್ಟ ಶಕ್ತಿಗಳು ಕೂಡಲೇ ಅವರ ಕಾಲು ಹಿಡಿದೆಳೆಯುತ್ತವೆ. ಈ ರೀತಿ ಪದೇ ಪದೇ ಘಟಿಸಿದರೆ ‘ನಮ್ಮಿಂದ ಸಾಧನೆಯ ಪ್ರಯತ್ನ ಸರಿಯಾಗಿ ಆಗುವುದಿಲ್ಲ’ ಎಂಬ ವಿಚಾರದಿಂದ ಸಾಧಕರು ನಿರಾಶೆಗೆ ಹೋಗುತ್ತಾರೆ ಮತ್ತು ಇದರಿಂದ ಮುಂದೆ ಪ್ರಯತ್ನಗಳನ್ನು ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಇದರ ಬಗ್ಗೆ ಸಾಧಕರು ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಬೇಕು.

ಅಂಡಮಾನಿನಂತಹ ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ವೀರ ಸಾವರಕರರಿಗೆ ಏನು ಮಾಡಲು ಸಾಧ್ಯವಾಯಿತೋ, ಅದು ಸಾಧಕರಿಗೆ ಅಷ್ಟೊಂದು ಪ್ರತಿಕೂಲ ಪರಿಸ್ಥಿತಿ ಇಲ್ಲದಿರುವಾಗ ಏಕೆ ಸಾಧ್ಯವಾಗುವುದಿಲ್ಲ ? ಸಾಧಕರು ಕೆಟ್ಟ ಶಕ್ತಿಗಳಿಂದಾಗುವ ವಿರೋಧದೆದುರು ಮಣಿಯದೇ ಸಾಧನೆಯ ಪ್ರಯತ್ನವನ್ನು ರೋಷದಿಂದ, ಭಾವದ ಸ್ತರದಲ್ಲಿ ಮತ್ತು ಜಿಗುಟುತನದಿಂದ ಮಾಡಬೇಕು. ನಂತರ ವಿಜಯ ಸಾಧಕರದ್ದೇ ಆಗುವುದು !

೮ ಆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳನ್ನು ಹೆಚ್ಚಿಸುವುದು : ಸ್ವಭಾವದೋಷಗಳಿಂದ ವ್ಯಕ್ತಿಯ ಮನೋದೇಹದಲ್ಲಿ ಸೂಕ್ಷ್ಮ ಗಾಯಗಳು ನಿರ್ಮಾಣವಾಗುತ್ತವೆ. ಸೂಕ್ಷ್ಮ ಗಾಯಗಳಿಂದ ರಜ-ತಮಾತ್ಮಕ ಸ್ಪಂದನಗಳು ನಿರ್ಮಾಣವಾಗುತ್ತವೆ. ರಜ-ತಮಾತ್ಮಕ ಸ್ಪಂದನಗಳಿಂದ ಕೆಟ್ಟ ಶಕ್ತಿಗಳು ಕೂಡಲೇ ಆ ವ್ಯಕ್ತಿಯ ಕಡೆ ಆಕರ್ಷಿತವಾಗುತ್ತವೆ. ಇದರಿಂದ ಇಂತಹ ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳ ತೊಂದರೆ ಬೇಗನೇ ಆಗುತ್ತದೆ. ಸ್ವಭಾವದೋಷಗಳು ಹೆಚ್ಚಿದ್ದರೆ ಕೆಟ್ಟ ಶಕ್ತಿಗಳ ತೊಂದರೆಯೂ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. ಸ್ವಭಾವದೋಷಗಳು ಹೆಚ್ಚು ಪ್ರಮಾಣದಲ್ಲಿರುವ ವ್ಯಕ್ತಿಗಳಿಗಾಗುವ ಕೆಟ್ಟ ಶಕ್ತಿಗಳ ತೊಂದರೆ ಬೇಗನೇ ಕಡಿಮೆಯಾಗುವುದಿಲ್ಲ, ಹಾಗೆಯೇ ಸ್ವಭಾವದೋಷಗಳಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಮಾಡಿದ ಆಧ್ಯಾತ್ಮಿಕ ಉಪಾಯಗಳ ಪರಿಣಾಮವೂ ಕಡಿಮೆಯಾಗುತ್ತದೆ. ಅಹಂ ಅನೇಕ ಸ್ವಭಾವ ದೋಷಗಳ ಮೂಲವಾಗಿದೆ, ಆದ್ದರಿಂದ ಸ್ವಭಾವದೋಷಗಳಂತೆಯೇ ಅಹಂನಿಂದಾಗಿಯೂ ವ್ಯಕ್ತಿಯು ಕೆಟ್ಟ ಶಕ್ತಿಗಳ ಆಕ್ರಮಣಗಳಿಗೆ ಬೇಗನೇ ಬಲಿಯಾಗುತ್ತಾನೆ.

ಇದಕ್ಕಾಗಿ ಸಾಧಕರು ತಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳ ಚಿಂತನೆ ಮಾಡಿ ಅವುಗಳನ್ನು ದೂರಗೊಳಿಸಲು ಸತತವಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ (೭ ಖಂಡ)’ ಎಂಬ ಸನಾತನದ ಗ್ರಂಥಮಾಲಿಕೆಯ ಲಾಭ ಪಡೆಯಿರಿ  !

೮ ಇ. ಆಧ್ಯಾತ್ಮಿಕ ಉಪಾಯ ಮತ್ತು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಯ ಪ್ರಕ್ರಿಯೆ ತಳಮಳದಿಂದ ಆಗಲು ಏನು ಮಾಡಬೇಕು ?

೮ ಇ ೧. ‘ಪರಾಕಾಷ್ಠೆಯ ಪ್ರಯತ್ನಗಳನ್ನು ಮಾಡುವ ಆವಶ್ಯಕತೆ ಇದೆ ಎಂದು ನಮಗೆ ಅನಿಸಬೇಕು : ಆಧ್ಯಾತ್ಮಿಕ ಉಪಾಯಗಳನ್ನು ತಳಮಳದಿಂದ ಮಾಡದಿದ್ದರೆ, ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗದೇ ಜೀವನವಿಡೀ ತೊಂದರೆಗಳನ್ನು ಮತ್ತು ದುಃಖವನ್ನು ಭೋಗಿಸಬೇಕಾಗುತ್ತದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ನಡೆಸದಿದ್ದರೆ, ಈ ಜನ್ಮದಲ್ಲಿ ಅಪೇಕ್ಷಿತ ಪ್ರಗತಿಯಂತೂ ಆಗುವುದೇ ಇಲ್ಲ, ಅಲ್ಲದೇ ಮುಂದಿನ ಜನ್ಮಗಳಲ್ಲೂ ಆ ಸ್ವಭಾವದೋಷಗಳು ಮತ್ತು ಅಹಂ ನಮ್ಮ ಜೊತೆಗೆ ಬರುತ್ತವೆ. ಇವುಗಳಂತಹ ವಿಚಾರಗಳನ್ನು ಸತತವಾಗಿ ಮನಸ್ಸಿನ ಮೇಲೆ ಬಿಂಬಿಸಿದರೆ ಪರಮಾವಧಿಯ ಪ್ರಯತ್ನ ಮಾಡುವ ಆವಶ್ಯಕತೆ ಇದೆ ಎಂದು ನಮಗೆ ಅರಿವಾಗುತ್ತದೆ ಮತ್ತು ಆಗ ನಮ್ಮಿಂದ ತಳಮಳದಿಂದ ಪ್ರಯತ್ನಗಳಾಗತೊಡಗುತ್ತವೆ.

೮ ಈ. ಗುರುಗಳ ಮೇಲಿನ ಶ್ರದ್ಧೆಯನ್ನು ಹೆಚ್ಚಿಸುವುದು : ವಿವಿಧ ಜೀವನಾಡಿಪಟ್ಟಿಗಳ (ನಾಡಿಭವಿಷ್ಯದ) ಮಾಧ್ಯಮದಿಂದ ಮಹರ್ಷಿಗಳು ‘ಪರಾತ್ಪರ ಗುರು ಡಾಕ್ಟರರು ಸಾಕ್ಷಾತ್‌ ಶ್ರೀವಿಷ್ಣು ಸ್ವರೂಪರಾಗಿದ್ದು ಮೋಕ್ಷಗುರುಗಳಾಗಿದ್ದಾರೆ’ ಎಂದು ಹೇಳಿದ್ದಾರೆ. ಇಂತಹ ಪರಾತ್ಪರ ಗುರು ಡಾಕ್ಟರರು ನಮ್ಮ ಬೆನ್ನಿಗಿರುವಾಗ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಗಳ ಬಗ್ಗೆ ಭಯ, ಚಿಂತೆ ಮತ್ತು ಶೋಕ ಏಕೆ ? ಪ.ಪೂ. ಭಕ್ತರಾಜ ಮಹಾರಾಜರ ಭಜನೆಯಲ್ಲಿರುವ ‘ಹಮ್‌ ಹೈ ತುಮರೆ ಚರಣೋಂಕೆ ಸೇವಕ | ತುಮ ಹೋ ಹಮರೇ ದೇಹಕೆ ರಕ್ಷಕ ||’ ಎಂಬಂತೆ ಪರಾತ್ಪರ ಗುರು ಡಾಕ್ಟರರು ಇಂದಿನವರೆಗೆ ಸಾಧಕರನ್ನು ಎಲ್ಲ ದೃಷ್ಟಿಯಿಂದ ಸಂಭಾಳಿಸಿದ್ದಾರೆ. ‘ಇನ್ನು ಮುಂದೆಯೂ ಅವರು ನಮ್ಮನ್ನು ಸಂಭಾಳಿಸಿಕೊಳ್ಳುತ್ತಾರೆ’ ಎಂಬ ದೃಢ ಶ್ರದ್ಧೆಯನ್ನಿಟ್ಟು ಸಾಧಕರು ಸಾಧನೆಯಲ್ಲಿ ಮಾರ್ಗಕ್ರಮಣ ಮಾಡಬೇಕು.’

೮ ಉ. ಸಾಧನೆ ಮತ್ತು ಭಕ್ತಿಯನ್ನು ಹೆಚ್ಚಿಸುವುದೇ ತೊಂದರೆಗಳ ಮೇಲಿನ ಶಾಶ್ವತವಾದ ಉಪಾಯ ! : ‘ಸದ್ಯ ಕಾಲವು ಪ್ರತಿಕೂಲವಾಗಿರುವುದರಿಂದ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಗಳನ್ನು ಹೆಚ್ಚು ಪ್ರಮಾಣದಲ್ಲಿ ಭೋಗಿಸಬೇಕಾಗುತ್ತಿದೆ. ಒಂದು ಸಲ ಪರಾತ್ಪರ ಗುರು ಡಾಕ್ಟರರು ‘ಸನಾತನ ಪ್ರಭಾತ’ ನಿಯತಕಾಲಿಕೆಯಲ್ಲಿ ಒಂದು ಚೌಕಟ್ಟಿನಲ್ಲಿ ‘ಕಾಗದದ ಮೇಲೆ ಬಿಡಿಸಿದ ಒಂದು ಗೆರೆಯನ್ನು ಚಿಕ್ಕದು ಮಾಡಬೇಕಾಗಿದ್ದರೆ ಅದರ ಪಕ್ಕದಲ್ಲಿ ಇನ್ನೊಂದು ದೊಡ್ಡ ಗೆರೆಯನ್ನು ಬಿಡಿಸಿದರೆ, ಮೊದಲನೆಯದು ತಾನಾಗಿಯೇ ಚಿಕ್ಕದಾಗುತ್ತದೆ’ ಎಂದು ಬರೆದಿದ್ದರು. ಈ ತತ್ತ್ವಕ್ಕನುಸಾರ ಕೆಟ್ಟ ಶಕ್ತಿಗಳ ತೊಂದರೆಗಳನ್ನು ದೂರಗೊಳಿಸಲು ಉಪಾಯಗಳನ್ನು ಮಾಡುವುದಕ್ಕಿಂತ ‘ನಮ್ಮ ಸಾಧನೆ ಮತ್ತು ಭಕ್ತಿಯನ್ನು ಹೆಚ್ಚಿಸಿ ಈಶ್ವರನನ್ನು ಪ್ರಸನ್ನಗೊಳಿಸುವುದೇ’ ಹೆಚ್ಚು ಮಹತ್ವದ್ದಾಗಿದೆ. ಒಂದು ಸಲ ಈಶ್ವರನು ಪ್ರಸನ್ನನಾದನೆಂದರೆ ಕೆಟ್ಟ ಶಕ್ತಿಗಳಿಗೆ ನಮಗೆ ತೊಂದರೆಗಳನ್ನು ಕೊಡುವ ಧೈರ್ಯವಾದರೂ ಎಲ್ಲಿಂದ ಬರುವುದು ? ‘ಭೂತ ಪಿಸಾಚ ನಿಕಟ ನಹಿಂ ಆವೈ | ಮಹಾಬೀರ ಜಬ ನಾಮ ಸುನಾವೈ ||’ ಎಂದು ಸಂತಶ್ರೇಷ್ಠ ತುಲಸೀದಾಸರು ಹೇಳಿದ್ದಾರೆ. ಮಹಾಬೀರ ಎಂದರೆ ಹನುಮಂತ. ಸಂತವಚನಗಳು ಎಂದಿಗೂ ಸುಳ್ಳಾಗುವುದಿಲ್ಲ. ನಮ್ಮ ನಾಮಜಪದಲ್ಲಿ ಮತ್ತು ಭಕ್ತಿಯಲ್ಲಿ ಎಷ್ಟೊಂದು ಶಕ್ತಿಯಿರಬೇಕೆಂದರೆ, ಅದರಿಂದ ದೇವರಿಗೆ ನಮಗಾಗಿ ಬರಲೇಬೇಕಾಗುವಷ್ಟಿರಬೇಕು.

ಸಾಧಕರೇ, ನಮಗೆ ಪರಾಕಾಷ್ಠೆಯ ಸಾಧನೆ ಮತ್ತು ಭಕ್ತಿಯನ್ನು ಮಾಡಲು ವಿಧಿಯೇ ಕರೆ ನೀಡಿದೆ ಎಂದು ತಿಳಿದು ಶ್ರೀ ಗುರುಗಳ ಸ್ಮರಣೆ ಮಾಡಿ ಆ ಕರೆಯನ್ನು ಸ್ವೀಕರಿಸೋಣ ! ನಂತರ ನೋಡಿ… ಕೊನೆಗೆ ವಿಜಯ ನಮ್ಮದೇ ಆಗಿರುವುದು !’

೯. ಆಧ್ಯಾತ್ಮಿಕ ತೊಂದರೆಗಳಿರುವವರನ್ನು ಪ್ರೀತಿಯಿಂದ ಅರಿತುಕೊಳ್ಳುವುದು ಇತರರ ಸಾಧನೆಯೇ ಆಗಿದೆ !

ಅ. ‘ಆಧ್ಯಾತ್ಮಿಕ ತೊಂದರೆಯಿರುವವರ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಕ್ಷಮತೆಯನ್ನು ಅರಿತುಕೊಂಡು ಅವರನ್ನು ಪ್ರೀತಿಯಿಂದ ಸಂಭಾಳಿಸಿಕೊಳ್ಳುವುದು’ ನಮ್ಮ ಸಾಧನೆಯೇ ಆಗಿದೆ.

ಆ. ತೊಂದರೆಗಳಿರುವವರಿಗೆ ಸತತವಾಗಿ ಪ್ರೋತ್ಸಾಹ ನೀಡುತ್ತಿರಬೇಕು. ಇದರಿಂದ ಅವರಲ್ಲಿ ಉತ್ಸಾಹ ಸ್ಥಿರವಾಗಿದ್ದು, ತೊಂದರೆಗಳನ್ನು ಜಯಿಸಲು ಪ್ರಯತ್ನಿಸುವ ಕ್ಷಮತೆ ಹೆಚ್ಚಾಗುವುದು.

ಇ. ತೊಂದರೆಗಳಿರುವ ಹೆಚ್ಚಿನ ಜನರಲ್ಲಿ ಒಂಟಿತನ ಅಥವಾ ನಿರಾಶೆ ಇರುತ್ತದೆ. ಅವರನ್ನು ಸಮಷ್ಟಿಯಲ್ಲಿ ಸೇರಿಸಿಕೊಳ್ಳುವುದರಿಂದ ಮತ್ತು ನಿರಪೇಕ್ಷ ಪ್ರೇಮ ನೀಡಿ (ಪ್ರೀತಿಯನ್ನು) ಅವರ ಒಂಟಿತನ ಮತ್ತು ನಿರಾಶೆಯನ್ನು ಕಡಿಮೆ ಮಾಡಬಹುದು.

– (ಪೂ.) ಶ್ರೀ. ಸಂದೀಪ ಆಳಶಿ            (ಮುಕ್ತಾಯ)