ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ ಮತ್ತು ಸಾಧಕನಿಗೆ ಆದ ಅವರ ಗುಣದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ (ಗುರುದೇವರ) ಸತ್ಸಂಗದಲ್ಲಿ ನನಗೆ ಬಹಳ ಕಲಿಯಲು ಸಿಕ್ಕಿತು. ಈ ಸತ್ಸಂಗದಲ್ಲಿ ಸಾಧಕರು ಕೇಳಿದ ಪ್ರಶ್ನೆಗಳು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಉತ್ತರಗಳನ್ನು ಮುಂದೆ ಕೊಡಲಾಗಿದೆ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ದೇವರ ಜೊತೆಗೆ ಮಾತನಾಡಲು ಹೇಳುವುದು

ಸಾಧಕ : ನನಗೆ ಸಾಧಕರು, ಹಾಗೆಯೇ, ಮನೆಯ ವ್ಯಕ್ತಿಗಳ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡಲು ಬರುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಿಮಗೆ ಯಾರೊಂದಿಗೂ ಮಾತನಾಡಲು ಆಗದಿದ್ದರೂ, ದೇವರ ಜೊತೆಗೆ ಮಾತನಾಡಬಹುದು. ಹಾಗಾಗಿ ದೇವರ ಜೊತೆಗಾದರೂ ಮಾತನಾಡಿ !

ಸಾಧಕ : ನಾನು ಬಹಳ ಕಡಿಮೆ ಮಾತನಾಡುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮಾಯೆಯಲ್ಲಿ ಕಡಿಮೆ ಮಾತನಾಡಿದರೂ ನಡೆಯುತ್ತದೆ; ಆದರೆ ದೇವರ ಜೊತೆಗಾದರೂ ಎಲ್ಲವನ್ನೂ ಮಾತನಾಡಬೇಕು !

೨. ಸಾಧಕನು ‘ನಿಮ್ಮಿಂದಾಗಿ ನನ್ನ ತೊಂದರೆಗಳು ದೂರವಾದವು’, ಎಂದು ಹೇಳಿದಾಗ ‘ತೊಂದರೆ ದೂರವಾಗಲು ತಳಮಳದಿಂದ ಪ್ರಯತ್ನಿಸಿದುದರ ಫಲವಾಗಿದೆ’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಹೇಳುವುದು

ಸಾಧಕ : ಗುರುದೇವರೇ, ತಮ್ಮ ಕೃಪೆಯಿಂದಲೇ ನನ್ನ ಜೀವನ ದಲ್ಲಿನ ತೊಂದರೆಗಳು ದೂರವಾದವು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನನ್ನ ಕೃಪೆಯಿಂದ ಏನೂ ಸಾಧ್ಯವಿಲ್ಲ, ಆದರೆ ನೀವು ತಳಮಳದಿಂದ ಪ್ರಯತ್ನಿಸಿದ್ದರ ಫಲವಾಗಿದೆ.

(ಇದರಿಂದ ‘ಸಾಧಕನಲ್ಲಿ ತಳಮಳ ಇರುವುದು ಎಷ್ಟು ಮಹತ್ವದ್ದಾಗಿದೆ’, ಎಂದು ನನ್ನ ಗಮನಕ್ಕೆ ಬಂದಿತು ಮತ್ತು ಎಲ್ಲವನ್ನೂ ಮಾಡಿ ‘ಸ್ವತಃ ಏನೂ ಮಾಡದಂತೆ ಇರುವುದು ಮತ್ತು ಯಾವಾಗಲೂ ಇತರರಿಗೆ ಶ್ರೇಯಸ್ಸನ್ನು ನೀಡುವುದು’, ಇದು ಗುರುದೇವರಲ್ಲಿರುವ ಗುಣಗಳ ದರ್ಶನ ಸಹ ಆಯಿತು !’)

– ಶ್ರೀ. ಪ್ರಣವ ಅರುಣ ಮಣೇರಿಕರ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೪೪ ವರ್ಷಗಳು), ಮಥುರಾ ಸೇವಾಕೇಂದ್ರ, ಮಥುರಾ. (೧೪.೯.೨೦೨೪)