ಬ್ರಿಟನ್ನಿನ ಒಂದು ಚರ್ಚಾಕೂಟದಲ್ಲಿ ಭಾರತೀಯ ಸಂಜಾತೆ ಮಹಿಳಾ ಪತ್ರಕರ್ತೆಯಿಂದ ಕೌರ್ ಇವರ ತೀಕ್ಷ್ಣ ವಾದ !
ಲಂಡನ್ (ಇಂಗ್ಲೆಂಡ) – ಸ್ವಾತಂತ್ರ್ಯದ ನಂತರ ಅನೇಕ ಬಾರಿ ಕೊಹಿನೂರು ವಜ್ರ ಬ್ರಿಟನ್ ನಿಂದ ಭಾರತಕ್ಕೆ ಹಿಂತರಲು ಒತ್ತಾಯಿಸಲಾಗಿತ್ತು. ಈಗ ಇದೇ ಅಂಶ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಬ್ರಿಟನ್ ನ ರಾಜ ಚಾರ್ಲ್ಸ್ ಇವರ ರಾಜ್ಯಾಭಿಷೇಕದ ಸಮಯದಲ್ಲಿ ಅವರ ಪತ್ನಿ ಮತ್ತು ರಾಣಿ ಕ್ಯಾಮಿಲಾ ಇವರು ರಾಣಿ ಎಲಿಜಬೆತ್ ನಿಂದ ಸಿಕ್ಕಿದ್ದ ಕೊಹಿನೂರು ವಜ್ರ ಜಡಿತ ಮುಕುಟ ಧರಿಸದಿರುವ ನಿರ್ಣಯ ತೆಗೆದುಕೊಂಡಿದ್ದರು. ಈ ಬಗ್ಗೆ ಆಯೋಜಿಸಿದ್ದ ಒಂದು ಪ್ರಸಿದ್ಧ ಟಿವಿ ಕಾರ್ಯಕ್ರಮದಲ್ಲಿ ಈ ಅಂಶಗಳ ಚರ್ಚೆ ನಡೆಯಿತು. ಆ ಸಮಯದಲ್ಲಿ ಲೇಖಕಿ ಮತ್ತು ನಿರೂಪಕಿ ಎಮ್ಮಾ ವೆಬ್ ಮತ್ತು ಭಾರತೀಯ ಸಂಜಾತೆ ಪತ್ರಕರ್ತ ನರಿಂದರ್ ಕೌರ್ ಇವರಲ್ಲಿ ವಾದ ವಿವಾದ ನಡೆಯಿತು. ಚರ್ಚೆಯ ಸಮಯದಲ್ಲಿ ಎಮ್ಮಾ ವೆಬ್ ಇವರು, ವಜ್ರದ ಮಾಲೀಕತ್ವದ ಬಗ್ಗೆ ಗೊಂದಲ ಆಗಬಹುದು ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸುತ್ತಾ ನರಿಂದರ್ ಕೌರ್ ಇವರು ಇತಿಹಾಸದ ಪಾಠ ಓದುವ ಸಲಹೆ ನೀಡಿದರು.
The kohinoor diamond was founded in Indian soil. It represents to the British their dark brutal colonial history: @narindertweetspic.twitter.com/41kc5dcDxQ
— Shalinder Wangu (@Wangu_News18) February 22, 2023
೨. ಎಮ್ಮಾ ವೇಬ್ ಇವರು ಯುಕ್ತಿವಾದ ಮಂಡಿಸುತ್ತಾ, ಆ ಸಮಯದಲ್ಲಿ ಲಾಹೋರ್ ನಲ್ಲಿ ಸೀಖ ಸಾಮ್ರಾಜ್ಯ ಕೂಡ ಆಡಳಿತದಲ್ಲಿತ್ತು. ಆದ್ದರಿಂದ ಪಾಕಿಸ್ತಾನ ಕೂಡ ಕೊಹಿನೂರು ವಜ್ರದ ಬಗ್ಗೆ ದಾವೆ ಮಾಡುವುದಲ್ಲವೇ ? ಸೀಖ ಸಾಮ್ರಾಜ್ಯದಲ್ಲಿ ಕೊಹಿನೂರ ವಜ್ರ ಇರಾನಿನ ಸಾಮ್ರಾಜ್ಯದಿಂದ ಕಳುವು ಮಾಡಿದ್ದು ಮತ್ತು ಇರಾನಿ ಸಾಮ್ರಾಜ್ಯವು ಮೊಗಲ ಶಾಸಕರ ಮೇಲೆ ದಾಳಿ ನಡೆಸಿ ಅದನ್ನು ಕಸಿದುಕೊಂಡಿತು. ಆದ್ದರಿಂದ ಕೊಹಿನೂರು ವಜ್ರದ ಮಾಲೀಕತ್ವದ ಬಗ್ಗೆ ವಿವಾದವಿದೆ ಎಂದು ಹೇಳಿದರು.
೨. ಈ ಬಗ್ಗೆ ಕೌರ್ ಇವರು, ‘ನಿಮಗೆ ಇತಿಹಾಸ ತಿಳಿದಿಲ್ಲ. ಈ ಕಲ್ಪನೆ ವಸಾಹತು ಶಾಹಿ ಮತ್ತು ರಕ್ತಪಾತ ತೋರಿಸುತ್ತದೆ. ಈ ಕೊಹಿನೂರು ವಜ್ರ ಭಾರತಕ್ಕೆ ಹಿಂತಿರುಗಿಸಿರಿ !’ ಎಂದು ಹೇಳಿದರು.
೩. ಅದರ ನಂತರ ಕೌರ್ ಇವರು ಕೊಹಿನೂರು ವಜ್ರ ಭಾರತದ ಮಣ್ಣಿನಲ್ಲಿ ಸಿಕ್ಕಿರುವುದು. ಈ ವಜ್ರ ಬ್ರಿಟಿಷರ ಕ್ರೂರ ಕರಾಳ ವಸಾಹತಶಾಹಿ ಇತಿಹಾಸವನ್ನು ಪ್ರತಿನಿಧಿಸುತ್ತದೆ. ವಸಾಹತು ಶಾಹಿಯಿಂದ ಸಿಕ್ಕಿರುವ ಈ ವಜ್ರ ಇಟ್ಟುಕೊಳ್ಳುವ ಅಧಿಕಾರ ಅವರಿಗಿಲ್ಲ ಎಂದು ಹೇಳಿದರು !
Queen Consort Camilla will reportedly not wear the Queen Mother’s crown embedded with the Kohinoor diamond for #Britain‘s #KingCharles‘s coronation https://t.co/J6R9Effhv5
— Hindustan Times (@htTweets) February 22, 2023
ಸಂಪಾದಕೀಯ ನಿಲುವುಪತ್ರಕರ್ತೆ ಕೌರ ಇವರು ಕೊಹಿನೂರು ವಜ್ರದ ಬಗ್ಗೆ ಮಂಡಿಸಿರುವ ಸ್ಪಷ್ಟ ಅಭಿಪ್ರಾಯಕ್ಕಾಗಿ ಅವರು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಆರ್ಥಿಕ ದೃಷ್ಟಿಯಿಂದ ಬ್ರಿಟನನ್ನು ಹಿಂದಿಕ್ಕಿರುವ ಭಾರತವು ಈಗ ಕೊಹಿನೂರು ವಜ್ರ ಹಿಂತಿರುಗಿಸಲು ಬ್ರಿಟನಿಗೆ ಅನಿವಾರ್ಯಗೊಳಿಸಬೇಕು ! |