ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ

ರಾತ್ರಿ ಜಾಗರಣೆ ಮಾಡದೇ ಬೆಳಗ್ಗೆ ಬೇಗ ಏಳುವಾಭ್ಯಾಸ ಮಾಡಬೇಕು !

‘ಕೆಲವು ಸಾಧಕರು ದೇವರ ನಾಮಜಪ ಮಾಡಲು ಅಥವಾ ಸ್ವಭಾವದೋಷ ನಿರ್ಮೂಲನೆಯ ಪಟ್ಟಿಯನ್ನು ಬರೆಯಲು ರಾತ್ರಿ ಜಾಗರಣೆಯನ್ನು ಮಾಡುತ್ತಾರೆ. ಹಾಗೆ ಮಾಡುವ ಬದಲು ರಾತ್ರಿ ಬೇಗ ಮಲಗಬೇಕು. ಬೆಳಗ್ಗೆ ಬೇಗ ಎದ್ದು ಅಷ್ಟು ಸಮಯದಲ್ಲಿ ವ್ಯಷ್ಟಿ ಸಾಧನೆಯನ್ನು ಮಾಡಬೇಕು.

ಕೆಲವು ಸೇವೆಗಳು ಪರಸ್ಪರರನ್ನು ಅವಲಂಬಿಸಿರುವುದರಿಂದ ಕೆಲವರಿಗೆ ರಾತ್ರಿ ಜಾಗರಣೆ ಮಾಡಲೇ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಸಾಧ್ಯವಿದ್ದರೆ ಎಲ್ಲರೂ ಒಟ್ಟಿಗೆ ‘ರಾತ್ರಿ ಜಾಗರಣೆ ಮಾಡುವ ಬದಲು ಅದೇ ಸೇವೆಯನ್ನು ಬೆಳಗ್ಗೆ ಬೇಗ ಎದ್ದು ಮಾಡಬಹುದೇ ?’ ಎಂಬ ಕುರಿತು ಸಕಾರಾತ್ಮಕ ಚಿಂತನೆಯನ್ನು ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ಒಮ್ಮಿಂದೊಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆ ಮಾಡುವುದರಿಂದ ಕೆಲವೊಮ್ಮೆ ‘ನಿದ್ರೆ ಪೂರ್ಣವಾಗುವುದಿಲ್ಲ.’ ಆದುದರಿಂದ ಒಮ್ಮಿಂದೊಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ಹಂತಹಂತವಾಗಿ ಹಿಂದೆ ತರಬೇಕು.’ (೧.೧.೨೦೨೩)

ಪ್ರತಿದಿನ ಹಲ್ಲುಗಳ ಕಾಳಜಿ ತೆಗೆದುಕೊಳ್ಳಬೇಕು !

ನಾವು ದಂತವೈದ್ಯರಲ್ಲಿ ಹೋದಾಗಲೇ ‘ಇಷ್ಟೊಂದು ಚಿಕ್ಕ ಹಲ್ಲುಗಳ ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ ಮತ್ತು ನೋವಾಗುತ್ತದೆ’, ಎಂಬುದು ತಿಳಿಯುತ್ತದೆ. ‘ನಮಗೆ ಅಂತಹ ಪ್ರಮೇಯ ಬರಬಾರದು’, ಎಂದು ಪ್ರತಿದಿನ ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಗಳನ್ನು ಸ್ವಚ್ಛವಾಗಿ ಉಜ್ಜಬೇಕು. ಏನೇ ಸೇವಿಸಿದರೂ ಅನಂತರ ೨-೩ ಬಾರಿ ಮುಕ್ಕಳಿಸಬೇಕು. ಹಾಗೆಯೇ ಬೆರಳುಗಳಿಂದ ಹಲ್ಲುಗಳನ್ನು ಸರಿಯಾಗಿ ಸ್ವಚ್ಛ ಮಾಡಬೇಕು. ಹಲ್ಲುಗಳ ಸಂದಿಯಲ್ಲಿ ಏನಾದರೂ ಸಿಕ್ಕಿಕೊಂಡಿದ್ದರೆ ಅದನ್ನು ‘ಬ್ರಶ್‌’ನಿಂದ ಆಯಾ ಸಮಯದಲ್ಲಿ ತೆಗೆಯಬೇಕು.’ (೩೧.೧೨.೨೦೨೨)

‘ರಾತ್ರಿ ಊಟವು ಜೀರ್ಣವಾಗದಿರುವಾಗಬೆಳಗ್ಗೆ ಆಗುವ ಹಸಿವು’ ಇದು ‘ಹುಸಿಹಸಿವು’ಎಂದು ಸುಶ್ರುತ ಋಷಿಗಳು ಹೇಳುವುದು

ಸ್ವಲ್ಪಂ ಯದಾ ದೋಷವಿಬದ್ಧಮ್‌ ಆಮಂ ಲೀನಂ ನ ತೇಜಃಪಥಮ್‌ ಆವೃಣೋತಿ |

ಭವತ್ಯಜೀರ್ಣೇಽಪಿ ತದಾ ಬುಭುಕ್ಷಾ ಯಾ ಮನ್ದಬುದ್ಧಿಂ ವಿಷವತ್‌ ನಿಹನ್ತಿ ||

– ಸುಶ್ರುತಸಂಹಿತೆ, ಸೂತ್ರಸ್ಥಾನ, ಅಧ್ಯಾಯ ೪೬, ಶ್ಲೋಕ ೫೧೩

ಅರ್ಥ : ‘ವಾತ, ಪಿತ್ತ ಮತ್ತು ಕಫಗಳಿಂದ ಯುಕ್ತ ಮತ್ತು ಪೂರ್ಣ ಜೀರ್ಣವಾಗದ ಸ್ವಲ್ಪ ಆಹಾರವು ಹೊಟ್ಟೆಯಲ್ಲಿ ಉಳಿ ದಿರುವಾಗ ಅದು ತೇಜದ ಮೇಲೆ (ಜಠರಾಗ್ನಿಯ ಮೇಲೆ) ಆವರಣ ಹಾಕಲು ಸಾಧ್ಯವಿಲ್ಲ. ಆದುದರಿಂದ ಊಟವು ಪೂರ್ಣ ಜೀರ್ಣವಾಗದಿರುವಾಗಲೂ ಹಸಿವಾಗುತ್ತದೆ. ಮಂದ ಬುದ್ಧಿಯ ಮನುಷ್ಯನಿಗೆ ಈ ಹಸಿವು ‘ಹುಸಿ ಹಸಿವು’ ಎಂದು ಗೊತ್ತಾಗುವುದಿಲ್ಲ. ಅವನು ಹಸಿವಾಗಿದೆ ಎಂದು ತಿನ್ನುತ್ತಾನೆ ಮತ್ತು ಅದು ಅವನಿಗೆ ವಿಷದಂತೆ ಮಾರಕವಾಗುತ್ತದೆ.

‘ನಾವು ನಿತ್ಯ ಉಪಾಹಾರ ಸೇವಿಸುತ್ತೇವೆ. ನಮಗೆ ಯಾವತ್ತೂ ಏನೂ ಆಗಲಿಲ್ಲ. ನೀವ್ಯಾರು ನಮಗೆ ಹೇಳುವವರು ?’, ಎಂಬ ವೃತ್ತಿಯ ಜನರು ಆಚಾರ್ಯ ಸುಶ್ರುತರ ಕಾಲದಲ್ಲಿಯೂ ಇದ್ದಿರಬಹುದು. ಅವರು ‘ರಾತ್ರಿಯ ಊಟವು ಪೂರ್ಣ ಜೀರ್ಣವಾಗದೇ ಬೆಳಗ್ಗೆ ತಿನ್ನಬಾರದು’, ಎಂಬುದನ್ನು ಅಂದಿನ ಜನರಿಗೆ ಹೇಳಲು ತುಂಬಾ ಪ್ರಯತ್ನಿಸಿರಬೇಕು. ಇಂದಿನಂತೆ ಆಗಲೂ ಜನರು ಕೇಳಿರಲಿಕ್ಕಿಲ್ಲ, ಆದುದರಿಂದ ಕೊನೆಗೆ ಅವರು ಮೇಲಿನ ಶ್ಲೋಕದಲ್ಲಿ ‘ಮಂದಬುದ್ಧಿ’ ಎಂಬ ವಿಶೇಷಣವನ್ನು ಬಳಸಿ ‘ಮಂದಬುದ್ಧಿಗಳೇ (ಹುಚ್ಚರೇ), ನಿಮಗೆ ಇದು ವಿಷದಂತೆ ಮಾರಕವಾಗಬಹುದು’, ಎಂದು ಹೇಳಬೇಕಾಗಿ ಬಂದಿರಬಹುದು.

ಸಾಮಾನ್ಯ ಮನುಷ್ಯನಿಗೆ ಉಪಾಹಾರವನ್ನು ಬಿಡುವುದು ಕಠಿಣವೆನಿಸುತ್ತದೆ; ಆದರೆ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವ ಸಾಧಕರಲ್ಲಿ ಆತ್ಮಬಲವಿರುವುದರಿಂದ ಅವರು ಸಹಜವಾಗಿ ಉಪಾಹಾರವನ್ನು ಬಿಡುತ್ತಾರೆ. ಎಷ್ಟೋ ಸಾಧಕರು ಉಪಹಾರವನ್ನು ಬಿಟ್ಟಿರುವುದನ್ನು ತಿಳಿಸಿದರು. ಈ ಎಲ್ಲ ಸಾಧಕರ ಬಗ್ಗೆ ನಾನು ಕೃತಜ್ಞನಾಗಿದ್ದೇನೆ.’

ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೧೨.೨೦೨೨)

ಸನಾತನದ ಆಯುರ್ವೇದ ಔಷಧಗಳು

ಕೆಮ್ಮಿಗೆ ಅತ್ಯಂತ ಉಪಯುಕ್ತ ‘ಸನಾತನ ಶುಂಠಿ ಚೂರ್ಣ’

ಒಣ ಅಥವಾ ಕಫಯುಕ್ತ, ಯಾವುದೇ ಕೆಮ್ಮು ಇರಲಿ, ಮೊದಲಿಗೆ ನೆನಪಾಗುವ ಔಷಧಿಯೆಂದರೆ ‘ಶುಂಠಿ’. ಯಾವುದೇ ರೀತಿಯ ಕೆಮ್ಮುಗಳಿಗೆ ಚಹಾದ ಕಾಲು ಚಮಚ ದಷ್ಟು ಶುಂಠಿ ಚೂರ್ಣಕ್ಕೆ ಅಷ್ಟೇ ಅಳತೆಯ ಜೇನುತುಪ್ಪವನ್ನು ಸೇರಿಸಿ ೪-೫ ದಿನಗಳು ದಿನಕ್ಕೆ ೪ ಬಾರಿ ನೆಕ್ಕಬೇಕು. ಜೇನುತುಪ್ಪವು ಲಭ್ಯವಿಲ್ಲದಿದ್ದರೆ ೧ ಚಮಚ ನೀರಿನಲ್ಲಿ ಕಲಿಸಿ ನೆಕ್ಕಬೇಕು. ಕೆಮ್ಮಿಗಾಗಿ ಈ ಔಷಧಿ ಪ್ರಸಿದ್ಧವಾಗಿದೆ.

ಶುಂಠಿ ಚೂರ್ಣದಲ್ಲಿ ಅನೇಕ ಬಾರಿ ಹಿಟ್ಟನ್ನು ಸೇರಿಸಿ ಕಲಬೆರಕೆ ಮಾಡಲಾಗುತ್ತದೆ. ಆದ್ದರಿಂದ ಶುಂಠಿಯ ಖಾರವು ಕಡಿಮೆಯಾಗುತ್ತದೆ ಮತ್ತು ಅಷ್ಟು ಗುಣವಾಗುವುದಿಲ್ಲ. ‘ಸನಾತನ ಶುಂಠಿ ಚೂರ್ಣ’ ಶುದ್ಧವಾಗಿರುವುದರಿಂದ ಅತ್ಯಂತ ಗುಣಕಾರಿಯಾಗಿದೆ.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೨೨)