‘ಡಾಕ್ಟರ, ಜೀವನದಲ್ಲಿ ಎಂದಿಗೂ ನನ್ನ ಮೊಣಕಾಲುಗಳು ನೋಯುತ್ತಿರಲಿಲ್ಲ. ಮಗುವಿಗೆ ಕೇವಲ ೩ ತಿಂಗಳಾಗಿದೆ, ಆದರೂ ಈಗ ಮೊಣಕಾಲುಗಳನ್ನು ನೇರ ಮಾಡಲು ಕೈಗಳ ಆಧಾರ ಬೇಕಾಗುತ್ತದೆ’, ಎಂದು ಹೊಸದಾಗಿ ತಾಯಿಯಾದ ೪೦ ವಯಸ್ಸಿಗೆ ಸಮೀಪದಲ್ಲಿರುವ ರೋಗಿಯೊಬ್ಬಳು ಹೇಳುತ್ತಿದ್ದಳು. ಅವಳ ಮಾತಿನಲ್ಲಿ ನಿರಾಶೆ, ಆಶ್ಚರ್ಯ ಮತ್ತು ದುಃಖ ಈ ಮೂರು ಕಾಣಿಸುತ್ತಿದ್ದವು. ಅವಳು ‘ಬೇಗ ಮದುವೆಯಾಗಿ ಬೇಗ ಮಗುವಾಗಲು ಅವಕಾಶ ಕೊಟ್ಟಿದ್ದರೆ ಚೆನ್ನಾಗಿತ್ತು’, ಎಂದು ಪುನಃ ಪುನಃ ಹೇಳುತ್ತಿದ್ದಳು.
೧. ಮಕ್ಕಳನ್ನು ಹೆರುವ ವಿಷಯದಲ್ಲಿ ಇಂದಿನ ಹೆಣ್ಣುಮಕ್ಕಳ ವಿಚಾರಪ್ರಕ್ತಿಯೆ ಮತ್ತು ಅದರಿಂದ ಉದ್ಭವಿಸುವ ದೈಹಿಕ ಸಮಸ್ಯೆಗಳು
ತಾಯಿಯಾಗುವುದು ಮತ್ತು ಹೆರಿಗೆ ನಿಭಾಯಿಸುವುದು ಇವೆರಡೂ ತುಂಬಾ ಜವಾಬ್ದಾರಿಯ ಮತ್ತು ವಿಶೇಷವಾಗಿ ಸ್ತ್ರೀಯ ಶರೀರದಿಂದ ಅನೇಕ ಅಪೇಕ್ಷೆಗಳನ್ನು ಇಡುವಂತಹ ವಿಷಯಗಳಾಗಿವೆ. ಅನೇಕ ಬಾರಿ ಯಾವ ವಯಸ್ಸಿನಲ್ಲಿ ಯಾವುದಕ್ಕೆ ಆದ್ಯತೆಯನ್ನು ನೀಡಬೇಕು, ಎಂಬ ವಿಚಾರ ಅವರಲ್ಲಿ ಇರುವುದಿಲ್ಲ. ೨೫ ರಿಂದ ೩೦ ರ ಹರೆಯದ ಹೆಣ್ಣು ಮಕ್ಕಳು ತಮ್ಮ ಉದ್ಯೋಗದಲ್ಲಿ ನೆಲೆಯೂರಿದ್ದರೂ ಇನ್ನೂ ‘ಜೀವನದ ಆನಂದವನ್ನು ಪಡೆಯಲಿಕ್ಕಿದೆ, ಸ್ವಲ್ಪ ಸಮಯ ಬೇಕು ಎಂದು ಸದ್ಯ ಮದುವೆಯ ವಿಚಾರವಿಲ್ಲ ಅಥವಾ ವಿಚಾರ ನಿಲ್ಲಿಸಿದ್ದೇವೆ’, ಎಂದು ಹೇಳುತ್ತಾರೆ, ಆಗ ಆಶ್ಚರ್ಯವೆನಿಸುತ್ತದೆ. ಆಗ ಮುಂದೆ ಬರುವ ನೈಸರ್ಗಿಕ ಸಮಸ್ಯೆ (ಮಾಸಿಕ ಸರದಿಗೆ ಸಂಬಂಧಿಸಿದ ಸಮಸ್ಯೆ, ಗರ್ಭಾವಸ್ಥೆಯ ಸಮಸ್ಯೆ, ‘ಹಾರ್ಮೋನ್ಸ್’ ಗಳ ಅಸಮತೋಲನ)ಗಳನ್ನು ಅವರಿಗೆ ಯೋಗ್ಯ ಸಮಯದಲ್ಲಿ ಸರಿಯಾಗಿ ಹೇಳುತ್ತಿರಬೇಕು.
ಶಿಕ್ಷಣ ಮುಗಿದನಂತರ ತಕ್ಷಣ ಮದುವೆಯನ್ನು ಯಾರು ಮಾಡಿಕೊಳ್ಳುತ್ತಾರೆ ? ಅಥವಾ ಮದುವೆಯಾದ ನಂತರ ತಕ್ಷಣ ಮಗುವಿಗೆ ಜನ್ಮ ನೀಡುವುದು ಹೇಗೆ ? ಈ ಎರಡು ವಿಚಾರಗಳು ಆಯಾ ಪರಿಸ್ಥಿತಿಯಲ್ಲಿ ಯೋಗ್ಯವೆನಿಸುತ್ತಿದ್ದರೂ ನಂತರ ಶಾರೀರಿಕ ದೃಷ್ಟಿಯಿಂದ ಎಲ್ಲರಿಗೂ ಅಷ್ಟು ಸುಲಭವಾಗುವುದಿಲ್ಲ. ಕೆಲಸ, ಮದುವೆ, ಮಗು ಮತ್ತು ಆರೋಗ್ಯ ಇವುಗಳ ಸಮನ್ವಯ ಅವಶ್ಯಕವಾಗಿರುತ್ತದೆ ಮತ್ತು ಯೋಗ್ಯ ವಯಸ್ಸಿನಲ್ಲಿ ಇವುಗಳ ವಿಚಾರವಾದರೆ, ಸುಲಭವಾಗುತ್ತದೆ. ಅವಿಭಕ್ತ ಕೌಟುಂಬಿಕ ವ್ಯವಸ್ಥೆ ಕಡಿಮೆಯಾಗುತ್ತಿರುವುದರಿಂದ ಏಕಾಂಗಿ ಪಾಲಕರಿಗೆ ಅನೇಕ ಒತ್ತಡಗಳೂ ಬರುತ್ತವೆ. ಈ ಎಲ್ಲ ವಿಷಯಗಳನ್ನು ತಲೆಯಲ್ಲಿಟ್ಟು ಸದ್ಯ ಎಲ್ಲ ಡಾಕ್ಟರರು ‘ಮಗು ಬೇಕಾದರೆ, ಸಾಧ್ಯವಾದಷ್ಟು ತಡೆಗಟ್ಟಬೇಡಿರಿ’, ಎಂಬ ಸಲಹೆಯನ್ನು ನೀಡುತ್ತಾರೆ. ಮದುವೆಗೆ ಮೊದಲು ಪ್ರಕೃತಿಯ ಕಡೆಗೆ ಪೂರ್ಣ ಗಮನ ಕೊಟ್ಟು ಅದನ್ನು ಸರಿಯಾಗಿ ನಿಯಂತ್ರಣದಲ್ಲಿಟ್ಟಿದ್ದರೆ ಮಾತ್ರ ತಡವಾಗಿ ಮಗುವಾದರೂ ಕೆಲವು ಸ್ತ್ರೀಯರು ಅದನ್ನು ಸಹಜವಾಗಿ ನಿಭಾಯಿಸುತ್ತಾರೆ; ಆದರೆ ಇಂತಹ ಉದಾಹರಣೆಗಳು ತುಂಬಾ ಕಡಿಮೆ. ಮೊದಲೇ ವಯಸ್ಸು ಹೆಚ್ಚಾಗಿರುವಾಗ ಅಂತಹದರಲ್ಲಿ ಮಗುವಿನ ಆರೈಕೆಯಿಂದ ದಣಿದಿರುವಾಗ, ಹಾಗೆಯೇ ಕೆಲಸವನ್ನು ಆರಂಭಿಸಿರುವುದರಿಂದ ವಾತ ಹೆಚ್ಚಳವಾಗಿರುವುದು ಕಂಡುಬರುತ್ತದೆ. ಅದರಲ್ಲಿ ಮೈ ನೋವು, ಜಡತ್ವ, ಕೀಲು ನೋವು, ಕೂದಲು ಉದುರುವಿಕೆ, ತೂಕ ನಿಯಂತ್ರಣದಲ್ಲಿ ಇರದಿರುವುದು ಮತ್ತು ಅದರಿಂದಾಗುವ ನಿರಾಶೆ, ಬೇಸರ ಮತ್ತು ಸಿಡಿಮಿಡಿ ಹೀಗೆ ವಿವಿಧ ತೊಂದರೆಗಳಾಗುವುದು ಕಂಡುಬರುತ್ತವೆ.
೨. ಮಹಿಳೆಯರು ಹೆರಿಗೆಯ ಮೊದಲು ಮತ್ತು ನಂತರ ತೆಗೆದುಕೊಳ್ಳಬೇಕಾದ ಕಾಳಜಿ
ಈ ಎಲ್ಲ ಸಮಸ್ಯೆಗಳು ಉಂಟಾಗದಿರಲು ಆದ್ಯತೆಯಿಂದ ವಿಚಾರ ಮತ್ತು ಆಗದಿದ್ದರೆ ಆಯುರ್ವೇದದಲ್ಲಿ ಹೇಳಿದಂತೆ ಅತ್ಯಂತ ಉತ್ತಮವಾಗಿರುವ ಕಷಾಯಗಳು ಮತ್ತು ಕೆಲವು ಸುಲಭ ಔಷಧಿಗಳ ವಿಚಾರವನ್ನು ಮಾಡಬೇಕು. ಈ ಉಪಚಾರಗಳ ಮೂಲ ಉದ್ದೇಶವೆಂದರೆ ‘ವಾತವನ್ನು ಹೊರಗೆ ತೆಗೆಯುವುದು ಮತ್ತು ಹೊಟ್ಟೆಯನ್ನು ಅದರ ಸ್ಥಾನಕ್ಕೆ ತಂದು ತಾಯಿಗೆ ಆದಷ್ಟು ಬೇಗನೇ ಉತ್ತಮ ಶಕ್ತಿಯನ್ನು ನೀಡುವುದಾಗಿದೆ.’,
ಅ. ಮದುವೆಯಾದ ನಂತರ ಮಗು ಹುಟ್ಟುವ ಮೊದಲು ಪಂಚಕರ್ಮವನ್ನು ಮಾಡಿಸಿಕೊಳ್ಳುವುದು.
ಆ. ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು.
ಇ. ಗುಪ್ತ ರೋಗಗಳನ್ನು ಕಂಡುಹಿಡಿಯಲು ವರ್ಷಕ್ಕೊಮ್ಮೆ ವೈದ್ಯಕೀಯ ಪರೀಕ್ಷಣೆಗಳನ್ನು ಮಾಡಿಸಿಕೊಳ್ಳುವುದು.
ಈ. ಹೆರಿಗೆಯ ನಂತರ ವೈದ್ಯಕೀಯ ಸಲಹೆಯಿಂದ ಕೆಲವು ಔಷಧಗಳನ್ನು ಮತ್ತು ಕಷಾಯಗಳನ್ನು ತೆಗೆದುಕೊಳ್ಳುವುದು.
ಉ. ಕನಿಷ್ಠ ೪೫ ದಿನಗಳವರೆಗೆ ತಣ್ಣೀರು, ಹವಾನಿಯಂತ್ರಣ ಯಂತ್ರದ ಕೆಳಗೆ, ಮಳೆಯಲ್ಲಿ ಮತ್ತು ಶೀತಲ ಪ್ರದೇಶಗಳಲ್ಲಿ ಸುತ್ತಾಡಲು ಹೋಗುವುದನ್ನು ತಪ್ಪಿಸುವುದು.
ಊ. ಮೈಗೆ ಎಣ್ಣೆಯನ್ನು ಹಚ್ಚಿಕೊಂಡು ವಿಶೇಷವಾಗಿ ಕೀಲುಗಳು ಮತ್ತು ಬೆನ್ನುಮೂಳೆಗಳಿಗೆ ಶಾಖ ನೀಡುವುದು
ಎ. ಮೂಳೆಗಳಿಗಾಗಿ ಪೂರಕವಾಗಿರುವ ಆಹಾರ – ವಿಹಾರ – ಇದರಲ್ಲಿ ಅಂಟು, ಆಳ್ವಿ, ಒಣಕೊಬ್ಬರಿ, ಕಾಳುಗಳು, ತುಪ್ಪ, ಹಾಲು ಇತ್ಯಾದಿಗಳನ್ನು ತೆಗೆದುಕೊಳ್ಳುವುದು.
ಐ. ಶುಂಠಿ, ಅಜ್ವಾನ, ಬಡೇಸೋಪು, ಸಬ್ಬಸಿಗೆ ಬೀಜ, ಇಂಗು ಈ ಔಷಧಿಗಳನ್ನು ಸರಿಯಾಗಿ ಬಳಸಬೇಕು.
ಓ. ಕಾಲುಚೀಲ ಮತ್ತು ಕಿವಿಯಲ್ಲಿ ಹತ್ತಿಯ ಉಂಡೆಗಳನ್ನು ವಿಶೇಷವಾಗಿ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಬಳಸಬೇಕು.
ಔ. ಮಗು ಹುಟ್ಟಿದ ನಂತರ ವಾರ್ಷಿಕ ಪಂಚಕರ್ಮ ಮಾಡಿಸುವುದು.
ಈ ಕೆಲವು ಅಂಶಗಳನ್ನು ಪಾಲಿಸಿದರೆ ದೇಹವು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಪರಿಸ್ಥಿತಿಗೆ ತಕ್ಕಂತೆ ಮಗು ಯಾವ ವಯಸ್ಸಿನಲ್ಲಿ ಹುಟ್ಟುತ್ತದೆಯೋ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ದೂರಗಾಮಿ ದುಷ್ಪರಿಣಾಮಗಳು ಖಂಡಿತ ತಪ್ಪುತ್ತವೆ.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.