ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮದ ಆವಶ್ಯಕತೆ, ಇದರ ಮಹತ್ವ ಮತ್ತು ಆ ಬಗೆಗಿನ ಸಂದೇಹನಿವಾರಣೆ !
ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ನಿರ್ಮಾಣವಾಗಿದ್ದರೂ, ವ್ಯಾಯಾಮ ಮಾಡುವುದು ಮಾತ್ರ ಸ್ವಲ್ಪ ಪ್ರಮಾಣದಲ್ಲಿಯೇ ಕಂಡುಬರುತ್ತದೆ. ಇನ್ನೂ ಅನೇಕರಿಗೆ ಮನಸ್ಸಿನಲ್ಲಿ ವ್ಯಾಯಾಮ ವಿಷಯದ ಬಗ್ಗೆ ಕೆಲವು ಸಂದೇಹಗಳಿರುವುದು ಕಂಡು ಬರುತ್ತದೆ. ಸದ್ಯ ಆಗುತ್ತಿರುವ ಅನೇಕ ದೈಹಿಕ ಸಮಸ್ಯೆಗಳಿಗೆ ಉದಾ. ಬೆನ್ನುಮೂಳೆಯ ಕಾಯಿಲೆ, ಮಧುಮೇಹ, ಸ್ಥೂಲತೆ ಇತ್ಯಾದಿಗಳಿಗೆ ಉಪಾಯವೆಂದು ಔಷಧೋಪಚಾರ, ಪಥ್ಯ, ಉಪವಾಸ, ಹೀಗೆ ಅನೇಕ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಈ ಅಂಕಣದಿಂದ ನಾವು ವ್ಯಾಯಾಮ ಮಾಡುವ ಬಗ್ಗೆ ಜಾಗರೂಕತೆಯನ್ನು ನಿರ್ಮಾಣ ಮಾಡಲಿದ್ದೇವೆ. ಇದರ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ, ಹಾಗೆಯೇ ವ್ಯಾಯಾಮ ವಿಷಯದಲ್ಲಿನ ಸಂದೇಹ ನಿವಾರಣೆ ಮಾಡಲಿದ್ದೇವೆ.
‘ಸದ್ಯದ ಆಧುನಿಕ ಜಗತ್ತಿನಲ್ಲಿ ನಾವು ಅನೇಕ ಜನರು ಒಂದೇ ರೀತಿಯ ಜೀವನಶೈಲಿಯ ಬಲೆಯಲ್ಲಿ ಸಿಲುಕಿದ್ದೇವೆ. ಆಧುನಿಕ ಜೀವನದಲ್ಲಿನ ಸೌಕರ್ಯಗಳು, ಸಂಚಾರವಾಣಿಯ ಮೇಲಿಂದ ಲಭ್ಯವಾಗಿರುವ ‘ಆನ್‌ಲೈನ್’ ಸೌಲಭ್ಯ ಇತ್ಯಾದಿಗಳನ್ನು ನೋಡಿದರೆ ಜಗತ್ತು ಒಂದು ಹೊಸ ಯುಗದಲ್ಲಿ ಪ್ರವೇಶ ಮಾಡಿದೆ, ಇದು ನಿಜ !
ದೇವರು ನಮಗೆ ನೀಡಿರುವ ದೇಹದ ಚಟುವಟಿಕೆಯಾಗುವುದು ಆವಶ್ಯಕವಾಗಿದೆ. ಯಾವಾಗ ನಾವು ಈ ಮೂಲಭೂತ ಆವಶ್ಯಕತೆಯ ಕಡೆಗೆ ನಿರ್ಲಕ್ಷಿಸುತ್ತೇವೆಯೋ, ಆಗ ನಮಗೆ ನಮ್ಮ ಆರೋಗ್ಯದ ಬೆಲೆ ತೆರಬೇಕಾಗುತ್ತದೆ. ನಿಷ್ಕ್ರಿಯ ಮತ್ತು ಒಂದೇ ರೀತಿ ಜೀವನಶೈಲಿಯಿಂದ ದೈಹಿಕ ಶ್ರಮ ಕಡಮೆಯಾಗುತ್ತಿದೆ. ‘ಅನೇಕ ಗಂಟೆಗಳ ವರೆಗೆ ಕುಳಿತು ಗಣಕಯಂತ್ರದಲ್ಲಿ ಕೆಲಸ ಮಾಡುವುದು, ಹಾಗೆಯೇ ಹೆಚ್ಚು ಪ್ರಮಾಣದಲ್ಲಿ ಸಂಚಾರವಾಣಿಯನ್ನು ಬಳಸುವುದು’, ಇವುಗಳಿಂದ ನಮ್ಮ ಶರೀರದ ರಚನೆ ಹಾಳಾಗಿ ಕೀಲುಗಳು ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ತೊಂದರೆಗಳು ಹೆಚ್ಚಾಗತೊಡಗಿವೆ, ಹಾಗೆಯೇ ಹೆಚ್ಚಿನ ಜನರಿಗೆ ಸ್ಥೂಲತೆ, ಹೃದ್ರೋಗ, ಮಧುಮೇಹ ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ.
ಜಡ ಜೀವನಶೈಲಿಯಿಂದ ನಿರ್ಮಾಣವಾಗುವ ದೈಹಿಕ ರೋಗಗಳ ಸರಪಳಿಯಿಂದ ಮುಕ್ತರಾಗಿರಿ ಮತ್ತು ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಲು ಇಂದಿನಿಂದಲೇ ಪ್ರತಿದಿನ ವ್ಯಾಯಾಮಕ್ಕಾಗಿ ಕನಿಷ್ಠ ೩೦ ನಿಮಿಷಗಳಷ್ಟು ಸಮಯವನ್ನು ಕೊಡಿ !’
– ಸೌ. ಅಕ್ಷತಾ ರೂಪೇಶ ರೆಡಕರ, ಭೌತಿಕೋಪಚಾರ ತಜ್ಞರು (ಫಿಜಿಯೋಥೆರಪಿಸ್ಟ್), ಫೋಂಡಾ, ಗೋವಾ. (೧೧.೮.೨೦೨೪)