ಬೆನ್ನು ಅಥವಾ ಸೊಂಟದ ಸೆಳೆತಕ್ಕೆ ಇನ್ನೊಂದು ಕಾರಣ !

ವೈದ್ಯೆ ಸ್ವರಾಲಿ ಶೆಂಡ್ಯೆ

ಪ್ರತಿಬಾರಿ ಬೆನ್ನು ಅಥವಾ ಸೊಂಟದ ಸೆಳೆತ (ಸಳಕ) ಅಥವಾ ತಕ್ಷಣ ಬರುವ ‘ಸೆಳೆತ’ (ಕ್ರ್ಯಾಮ್ಪ) ಇದು ವಾತದ್ದೇ ಲಕ್ಷಣವಾಗಿರುತ್ತದೆ ಎಂದೇನಿಲ್ಲ. ತದ್ವಿರುದ್ಧ ಅನೇಕಬಾರಿ ಇಂತಹ ರೋಗಿಗಳಲ್ಲಿ ಆಮ್ಲಪಿತ್ತದ ಇತಿಹಾಸ ಇರುತ್ತದೆ. ೩-೪ ದಿನಗಳಲ್ಲಿ ಹುಳಿಪದಾರ್ಥ ಅಥವಾ ಚೈನಿಜ್‌ ಅಥವಾ ಪಾಣಿಪುರಿ ಇಂತಹ ಹುಳಿ-ಉಪ್ಪು ಪದಾರ್ಥಗಳು ಮತ್ತು ವ್ಯಾಯಾಮದ ಅಭಾವ ಇವು ಮುಖ್ಯ ಕಾರಣಗಳಾಗಿರುತ್ತವೆ.

ವಿಶೇಷವಾಗಿ ಮಳೆಗಾಲದಲ್ಲಿ ವಾತ-ಪಿತ್ತ ಹೆಚ್ಚಾಗಿರುವ ರೋಗಿಗಳು ಹೆಚ್ಚು ಕಂಡುಬರುತ್ತಾರೆ. ಇಂತಹವರಿಗೆ ಬೆನ್ನಿಗೆ ಕೇವಲ ಎಣ್ಣೆ ಹಚ್ಚುವುದರಿಂದ ಲಾಭವಾಗುವುದಿಲ್ಲ. ನೋವು ನಿವಾರಕ ಔಷಧಿಗಳ ಜೊತೆಗೆ ಆಹಾರ ಜೀರ್ಣವಾಗಲು, ಹುಳಿ-ಉಪ್ಪು- ಖಾರ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಮತ್ತು ಯೋಗಾಸನಗಳಂತಹ ವ್ಯಾಯಾಮಗಳು ದೀರ್ಘಕಾಲದ ವರೆಗೆ ಉಪಯುಕ್ತವಾಗಿದೆ.

– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೨೦.೭.೨೦೨೪)